• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ತನ್ನನ್ನು ಕಾಡುತ್ತಿದ್ದ ಕಾಂಗ್ರೆಸ್ಸಿಗರಿಗೆ ತಿರುಗೇಟು ಕೊಟ್ಟ ದಿಟ್ಟ ಹೆಣ್ಣುಮಗಳು!!

Tulunadu News Posted On May 23, 2018


  • Share On Facebook
  • Tweet It

ಆಕೆಯಲ್ಲಿ ಛಲವಿತ್ತು. ತಾನು ನಂಬಿದ್ದ ಸಿದ್ಧಾಂತದಲ್ಲಿ ನಂಬಿಕೆಯಿತ್ತು. ಹೆಚ್ಚಾಗಿ ದೇಶ ಕಟ್ಟುವ ಸ್ಪಷ್ಟ ಗುರಿ ಇತ್ತು. ಅದನ್ನು ಸಾಧಿಸುವ ದಾರಿಯಲ್ಲಿ ಪ್ರಯಾಣ ಮಾಡಲು ಸಿದ್ಧರಾಗಿದ್ದ ಶಾರದಾ ಡೈಮಂಡ್ ಅವರಿಗೆ ಕಾಂಗ್ರೆಸ್ಸಿಗರು ಕಾಡಲು ಶುರು ಮಾಡಿದರು. ಅದು ಯಾವ ಮಟ್ಟದಲ್ಲಿ ಇತ್ತು ಎನ್ನುವುದನ್ನು ಅವರ ಮಾತುಗಳಲ್ಲಿ ಕೇಳಿ.

ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದರು.

ಆರು ತಿಂಗಳ ಹಳೇ ಕಥೆ- 15-11-2017ರಂದು ವಾಟ್ಸಾಪ್ ಅಲ್ಲಿ ರಾಹುಲ್ ಗಾಂಧಿ ಬಗ್ಗೆ ಬಂದಿದ್ದ ಜೋಕೊಂದನ್ನು ನನ್ನ ವಾಲ್ ಅಲ್ಲಿ ಶೇರ್ ಮಾಡಿದ್ದೆ . Anand Ramanna ನನ್ನ ಪೋಸ್ಟ್ ಸ್ಕ್ರೀನ್ ಶಾಟ್ ಹಾಕಿ ಅವರ ವಾಲ್ ಅಲ್ಲಿ ಇನ್ನೊಂದು ಪೋಸ್ಟ್ ಹಾಕಿದ್ದರು . ತುಂಬಾ ಪ್ರಬುದ್ಧವಾಗಿ, ಮರ್ಯಾದೆಯಿಂದ ಅವರು ಕೇಳಿದ್ದ ಪ್ರಶ್ನೆಗೆ ಉತ್ತರ ಕೊಟ್ಟಿದ್ದರೂ ಕೂಡ , ಆನಂದ್ ರಮಣ ಅದನ್ನು ಅಲ್ಲಿಗೇ ನಿಲ್ಲಿಸದೇ ಅವರ ಗುಂಪಿನವರೊಂದಿಗೆ ಮುಖ್ಯವಾಗಿ Shreyas Maralligowda Patel Gowda ಇನ್ನೊಂದು ನಾಲ್ಕು ಜನರು ಒಟ್ಟಾಗಿ ಅಸಭ್ಯ, ಅಶ್ಲೀಲವಾದ ಕಾಮೆಂಟ್ಸ್ ಹಾಕ್ತಾನೆ ಹೋಗಿದ್ದಾರೆ. ಇದೇ ಮೊದಲಲ್ಲ, ಸುಮಾರು ಬಾರಿ ಒಂದು ಪಕ್ಷ ಮತ್ತು ಸಿದ್ದಾಂತಕ್ಕೆ ಬದ್ದವಾಗಿರುವ ಒಂದೇ ಗುಂಪಿನ ಈ ವ್ಯಕ್ತಿಗಳು ಹೆಣ್ಮಕ್ಕಳು ವೇದಿಕೆಯಲ್ಲಿ ಬರಲೇ ಬಾರದು , ಹೇಗಾದರೂ ಬಾಯಿ ಮುಚ್ಚಿಸಲೇಬೇಕು ಎಂಬ ಯೋಚನೆಯಿಂದ ವ್ಯವಸ್ಥಿತವಾಗಿ ದಾಳಿ ನಡೆಸಿದ್ದಾರೆ !!

ನನ್ನ ಬಗ್ಗೆ ಮತ್ತು ನನ್ನ ಹುಟ್ಟಿನ ಬಗ್ಗೆ ಬಹಳ ಕೆಟ್ಟದ್ದಾಗಿ ಮಾತನಾಡಿದ್ದಷ್ಟೇ ಅಲ್ಲದೇ , ನನ್ನ ವ್ಯಕ್ತಿತ್ವವನ್ನು ಶಂಖಿಸುವ ರೀತಿಯಲ್ಲಿ ಪರ ಪುರುಷರ ಜೊತೆ ಸಂಬಂಧ ಕಟ್ಟಿ ನನ್ನ ಆತ್ಮ ಗೌರವಕ್ಕೆ ಧಕ್ಕೆ ತಂದಿದ್ದಷ್ಟೇ ಅಲ್ಲದೇ ನನ್ನ ಮಾನಸಿಕ ಸ್ವಾಸ್ಥ್ಯ ಹಾಳು ಮಾಡಿದ್ದಾರೆ .ನಕಲಿ ಖಾತೆಗಳಲ್ಲಿ ಅವಹೇಳನಾಕಾರಿ ಮಾತುಗಳನ್ನಾಡಿ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯನ್ನುಂಟು ಮಾಡುತ್ತಾ ಮಹಿಳೆಯಂದೂ ನೋಡದೇ ನೀಚ ಭಾಷೆಯನ್ನು ಬಳಸಿ ನಿಂದಿಸಿದ್ದಾರೆ.ಆ ಪೋಸ್ಟ್ ಅಲ್ಲಿ ಕಾಮೆಂಟ್ಸ್ ಮಾಡಿದ್ದು ಸಾಲದೂ ಅಂತ ಅದಾಗಿ ನಾಲ್ಕು ದಿನ ಆದ ಮೇಲೆ ಕೂಡ #ಶ್ರೇಯಸ್_ಮಾರಳ್ಳಿಗೌಡ ಟಿಕೆಟ್ ಬುಕ್ ಮಾಡ್ತೀನಿ , ಸಿನಿಮಾಕ್ಕೆ ಹೋಗೋಣ ಬಾ ಅಂತ ಬೇರೆಯವರ ಪೋಸ್ಟ್ ಅಲ್ಲಿ ನನ್ನ ಟ್ಯಾಗ್ ಮಾಡಿ ಕರೆದಿದ್ದಾನೆ. ಅದಕ್ಕೆ ಆನಂದ್ ರಾಮಣ್ಣ ಮತ್ತು ಪಟೇಲ್ ಗೌಡ ಇಬ್ಬರೂ ಬೆಂಬಲಿಸಿ ಕಾಮೆಂಟ್ ಮಾಡಿದ್ದರು !!

ಆರೋಪಿಗಳು

ಬುದ್ದಿ ಕಲಿಸಲೇಬೇಕು ಅಂತ ತೀರ್ಮಾನ ಮಾಡಿ ಸ್ಟೇಷನ್ ಹೋಗಿ ರಾತ್ರಿ 10 ಗಂಟೆ ತನಕ ಇದ್ದು ಎಫ್.ಐ.ಆರ್. ಮಾಡಿಸಿಕೊಂಡು ಬಂದ ಮೇಲೆ ಕೆಲವೇ ಸ್ನೇಹಿತರಿಗೆ ಕಂಪ್ಲೇಂಟ್ ಕೊಟ್ಟ ವಿಚಾರವನ್ನು ಹೇಳಿದ್ದೆ . ಒಳಗಡೆ ಹೋಗೋವರೆಗೂ ಎಲ್ಲವೂ ಅನಿಶ್ಚಿತ ಅಂತ ಯಾರಿಗೂ ಹೇಳಿರಲಿಲ್ಲ . ಯಾವ ರಾಜಕೀಯ ಬೆಂಬಲವೂ ನನಗಿರಲಿಲ್ಲ , ಶ್ರೀಮಂತರೂ ನಾವಲ್ಲ , ಏಳು ತಿಂಗಳ ಏಕಾಂಗಿ ಹೋರಾಟ. ಅದೆಷ್ಟು ಸಾರಿ ಸ್ಟೇಷನ್ ಹೋಗಿದ್ನೋ ಲೆಕ್ಕವೇ ಇಲ್ಲ . ಬಿಡದೇ ಪೋಲೀಸರ ಬೆನ್ನು ಹತ್ತಿದ್ದಕ್ಕೆ ಆನಂದ್ ರಾಮಣ್ಣ ಮತ್ತು ಪಟೇಲ್‌ ಗೌಡ ಇಬ್ಬರನ್ನು ನಿನ್ನೆ ಬಂಧಿಸಿದ್ದಾರೆ . ಶ್ರೇಯಸ್ ಮಾರಳ್ಳಿಗೌಡ ಮತ್ತೆ ಇನ್ನೂ ಮೂರು ಜನರನ್ನು ಹುಡುಕ್ತಾ ಇದ್ದಾರೆ . ಕೆಲವೇ ನಿಮಿಷಗಳಲ್ಲಿ ಹೊರಗೆ ಕರೆದುಕೊಂಡು ಬರ್ತೀವಿ ಅಂತ ಕೆಲವರು ಪೋಸ್ಟ್ ಹಾಕಿದ್ದರು, ದೈವ ಕೃಪೆ ಅವರಿಗೆ ನಿನ್ನೆ ಬೇಲ್‌ ಸಿಕ್ಕಿಲ್ಲ !!

ಬಹಳಷ್ಟು ಜನ ಅವರ ಕಡೆಯವರು ಬಂದಿದ್ದರು. ಕೆಪಿಸಿಸಿ ಸೈಬರ್ ಸೆಲ್ ಶ್ರೀವತ್ಸ ಅವರು ಕೇಸ್ ವಾಪಾಸ್ ತೆಗೆದುಕೊಳ್ಳಿ , ಕ್ಷಮೆ ಕೇಳಿಸ್ತೀನಿ ಅಂತ ಸಂಧಾನ ಮಾಡೋ ಪ್ರಯತ್ನ ಮಾಡಿದ್ದರು . ಅವರು ಹೇಳಿದ್ದ ಮಾತುಗಳನ್ನು ಆಡಿಯೋ ರೆಕಾರ್ಡಿಂಗ್ ಮಾಡಿದ್ದೀನಿ .ಪೋಲೀಸಿನವರು ಅವರದ್ದೇ ಜೀಪಿನಲ್ಲಿ ಜಡ್ಜ್ ಹತ್ತಿರ ನಿನ್ನೆ ರಾತ್ರಿ ಕರೆದುಕೊಂಡು ಹೋಗಿದ್ದಾರೆ . ಬೇಲ್ ತಗೋಬೇಕು ಅನ್ನೋ‌ ಅವರ ಪ್ರಯತ್ನ ನಿನ್ನೆ ಕೈಗೂಡಿಲ್ಲ . ಅವರೆಲ್ಲಾ ಆ ರೀತಿ ನಡೆದುಕೊಂಡಿದ್ದಕ್ಕೆ ಒಂದು ಪಾಠ ಕಲಿಸಬೇಕಿತ್ತು . ಭಗವಂತನ ಅನುಗ್ರಹ , ಸ್ನೇಹಿತರ ಹಾರೈಕೆಗಳಿಂದ ಸಾಧ್ಯವಾಗಿದೆ . ಎಷ್ಟೇ ಸಿದ್ದಾಂತಗಳ ಭಿನ್ನಾಭಿಪ್ರಾಯಗಳಿದ್ದರೂ ಮನುಷ್ಯ ಮನುಷ್ಯನನ್ನು ಗೌರವಿಸುವುದನ್ನು ಮರೆಯಬಾರದು . ಸ್ವಾಸ್ಥ್ಯ ಸಮಾಜ ನಮ್ಮೆಲ್ಲರ ಹೊಣೆ. ನನ್ನ ಹೋರಾಟ ಇಲ್ಲಿಗೇ ನಿಲ್ಲಲ್ಲ . ನಾನಾಗಿ‌ ನಾನೇ ಯಾರ ಸುದ್ದಿಗೂ ಹೋಗೋಲ್ಲ , ನನ್ನ ಸುದ್ದಿಗೆ ಬಂದವರನ್ನು ನಾನು ಬಿಡೋಲ್ಲ ‌. ಪಕ್ಷ , ಜಾತಿ ಮರೆತು ಹೆಣ್ಮಕ್ಕಳ ಬಗ್ಗೆ ಅಶ್ಲೀಲವಾಗಿ ಮಾತಾನಾಡುವವರನ್ನು ಗುರುತಿಸಿ ಶಿಕ್ಷೆ ಕೊಡಿಸೋ ಪ್ರಯತ್ನ ನಿರಂತರವಾಗಿ ಮುಂದುವರೆಯುತ್ತೆ.

ಕೊಟ್ಟಿರುವ ಏಟು ಮುಟ್ಟಿ ನೋಡಬೇಕು ಹಾಗಿದೆ

ಶಾರದ ಅವರ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ಒರ್ವ ಹೆಣ್ಣುಮಗಳು ಒಂದು ಸಿದ್ಧಾಂತಕ್ಕೆ ಬದ್ಧವಾಗಿ ತನ್ನ ಅಭಿಪ್ರಾಯಗಳನ್ನು ಫೇಸ್ ಬುಕ್ ನಲ್ಲಿ ವ್ಯಕ್ತಪಡಿಸುವಾಗ ಅದಕ್ಕೆ ಯೋಗ್ಯ ರೀತಿಯಲ್ಲಿ ಪ್ರತಿಕ್ರಿಯೆ ಬಂದಾಗ ಸ್ವಾಗತ. ಆದರೆ ಆಕೆಯನ್ನು ಅಶ್ಲೀಲವಾಗಿ ಹೀಯಾಳಿಸಿ ಅವಳ ಧ್ವನಿ ಅಡಗಿಸಿ ವಿಕೃತ ಖುಷಿ ಪಡುವ ಕೆಲಸವನ್ನು ಕಾಂಗಿಗಳು ಮಾಡುತ್ತಾರೆ ಎಂದರೆ ಅವುಗಳ ಮನಸ್ಥಿತಿ ಹೇಗಿರಬೇಡಾ. ಇಂತಹ ಕಾಂಗಿಗಳಿಗೆ ಸಾಮಾಜಿಕ ತಾಣಗಳ ಮುಖ್ಯಸ್ಥೆಯಾಗಿ ಇರುವವಳು ಕೂಡ ಒಬ್ಬಳು ಹೆಣ್ಣು. ಬಿಜೆಪಿ ಯುವಕರು ಕಾಂಗ್ರೆಸ್ಸಿಗರ ಲೆವೆಲ್ಲಿಗೆ ಇಳಿದೇ ಉತ್ತರ ಕೊಡುವುದಾದರೆ ಎಐಸಿಸಿ ಸೋಶಿಯಲ್ ಮೀಡಿಯಾ ಹೆಡ್ ರಮ್ಯಾ ಬಗ್ಗೆ ಹೇಳಲು ಪುಟಗಳು ಸಾಲುವುದಿಲ್ಲ. ಶಾರದಕ್ಕನ ಪಾದದಧೂಳಿನ ವ್ಯಕ್ತಿತ್ವವೂ ಇಲ್ಲದವರನ್ನು ಮುಖ್ಯಸ್ಥರನ್ನಾಗಿ ಮಾಡಿಕೊಂಡಿರುವ ಕಾಂಗಿಗಳು ಬೇರೆ ಹೆಣ್ಣುಮಗಳನ್ನು ನಡೆಸಿಕೊಂಡ ರೀತಿ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಅಷ್ಟಕ್ಕೂ ಇದೇ ಕಾಂಗಿಗಳಿಗೆ ಇತ್ತೀಚಿನ ತನಕ ರಾಷ್ಟ್ರಮಟ್ಟದಲ್ಲಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿಯವರು ರಾಜೀವ್ ಗಾಂಧಿಯವರನ್ನು ಮದುವೆಯಾಗುವ ಮೊದಲು ಏನು ಮಾಡುತ್ತಿದ್ದರು ಎನ್ನುವುದು ಕೂಡ ಹಲವರಿಗೆ ಗೊತ್ತು. ಆದರೆ ಸಭ್ಯ ಸಮಾಜ ಆ ಬಗ್ಗೆ ಏನು ಕೀಳಾಗಿ ಮಾತನಾಡಿಲ್ಲ. ಯಾಕೆಂದರೆ ಯಾವುದೇ ದೇಶದ ಹೆಣ್ಣುಮಗಳು ಮದುವೆಯಾಗಿ ನಮ್ಮ ದೇಶಕ್ಕೆ ಬಂದಾಗ ಆಕೆ ನಮ್ಮ ದೇಶದ ನಾರಿ. ಸೋನಿಯಾ ಗಾಂಧಿಯವರಿಗೆ ಇವತ್ತಿಗೂ ತವರು ಇಟಲಿ ಮೇಲೆ ಇಲ್ಲಿಗಿಂತ ಹೆಚ್ಚು ಪ್ರೀತಿ ಇರಬಹುದು. ಆದರೆ ನಮ್ಮ ದೇಶದಲ್ಲಿ ಅವರು ಇರುವ ತನಕ ಅವರನ್ನು ನಾವು ಭಾರತೀಯರು ಎಂದೇ ಗೌರವ ಕೊಡುತ್ತಿದ್ದೇವೆ.

ಆದರೆ ಇಟಲಿ ಶೂನ ವಾಸನೆ ಮೂಗಿಗೆ ಬಡಿಸಿಕೊಂಡಿರುವ ಕಾಂಗಿಗಳು ತಮ್ಮ ಸಿದ್ಧಾಂತದ ವಿರುದ್ಧ ಮಾತನಾಡುವ ಯಾವುದೇ ವ್ಯಕ್ತಿಯ ಬಗ್ಗೆ ಕೀಳಾಗಿ ಮಾತನಾಡಲು ಹಿಂಜರಿಯುವುದಿಲ್ಲ. ಕಳೆದ ಬಾರಿ ನರೇಂದ್ರ ಮೋದಿಯವರು ಮಂಗಳೂರಿಗೆ ಬಂದಾಗ ವೇದಿಕೆಯಲ್ಲಿ ಹೇಳಿದ್ದು ಇವತ್ತು ಮತ್ತೆ ಜ್ಞಾಪಕಕ್ಕೆ ಬರುತ್ತಿದೆ. ಕಾಂಗ್ರೆಸ್ ಪಕ್ಷವನ್ನು ನೆಹರೂ ಕುಟುಂಬ ತನ್ನ ಹದ್ದಿಬಸ್ತಿನಲ್ಲಿ ಇಡಲು ದೇಶದ ಯಾವುದೇ ರಾಜ್ಯದಲ್ಲಿ ಒಬ್ಬ ನಾಯಕ ನೆಹರೂ ಕುಟುಂಬಕ್ಕೆ ಪರ್ಯಾಯವಾಗಿ ಬೆಳೆಯುತ್ತಿದ್ದಾನೆ ಎಂದರೆ ಅವನನ್ನು ಏನಾದರೂ ಮಾಡಿ ಮುಗಿಸುತ್ತಾರೆ ಎಂದಿದ್ದರು. ಅದಕ್ಕೆ ಹಲವಾರು ಉದಾಹರಣೆ ಕೂಡ ಕೊಟ್ಟಿದ್ದರು. ಇವತ್ತು ನೆಹರೂ, ಇಂದಿರಾ, ರಾಜೀವ್ ಯಾರೂ ಇಲ್ಲ. ಇನ್ನು ಆವತ್ತಿನಷ್ಟು ತಂತ್ರಜ್ಞಾನ ಹಿಂದೆ ಬಿದ್ದಿಲ್ಲ. ಈಗ ಯಾರೂ ಕೂಡ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹರಡಲು ಸಾಮಾಜಿಕ ತಾಣಗಳಿವೆ. ಅದರಿಂದಾಗಿ ಇಡೀ ರಾಷ್ಟ್ರದಲ್ಲಿ ಬಾಹುಬಲಿಯಂತೆ ಮೈಚಾಚಿ ಇದ್ದ ಕಾಂಗ್ರೆಸ್ ಬಾಹುಬಲಿಯಿಂದ ಬರಿಇಲಿಗೆ ಬಂದು ತಲುಪಿದೆ. ಅದಕ್ಕಾಗಿ ಅರೆಬೆಂದ ಕಾಂಗಿಗಳು ತಮ್ಮ ಪಕ್ಷವನ್ನು ಐಸಿಯುನಿಂದ ಮೇಲೆತ್ತಲು ಒದ್ದಾಡುತ್ತಿವೆ. ತಮ್ಮ ವಿರುದ್ಧ ಯಾವುದಾದರೂ ಸ್ವರ ಎಲ್ಲಿಯಾದರೂ ಗಟ್ಟಿಯಾಗುತ್ತಿದೆ ಎಂದ ಕೂಡಲೇ ಒಟ್ಟಾಗಿ ಹುಚ್ಚುನಾಯಿಯಂತೆ ದಾಳಿ ಮಾಡುತ್ತವೆ. ಅದಕ್ಕೆ ಶಾರದಾ ಡೈಮಂಡ್ ಅವರು ಏಳು ತಿಂಗಳ ಹೋರಾಟದಲ್ಲಿ ಸರಿಯಾದ ಚುಚ್ಚುಮದ್ದು ಕೊಟ್ಟಿದ್ದಾರೆ. ಅವರ ಈ ಹೋರಾಟದಲ್ಲಿ ನಾವು ಅವರೊಂದಿಗೆ ಇದ್ದೇವೆ. ಹೆಣ್ಣುಮಗಳೊಬ್ಬಳು ಮಧ್ಯರಾತ್ರಿಯಲ್ಲಿ ನಿರ್ಭಿತಿಯಿಂದ ರಸ್ತೆಯಲ್ಲಿ ನಡೆದರೆ ಆವತ್ತೆ ಸ್ವಾತಂತ್ರ್ಯ ಎಂದಿದ್ದರು ಮಹಾತ್ಮ ಗಾಂಧೀಜಿ. ಆದರೆ ಗಾಂಧಿಯವರ ಸರ್ ನೇಮ್ ಮಾತ್ರ ಇಟ್ಟುಕೊಂಡಿರುವ ನಾಯಕರು ಮಧ್ಯರಾತ್ರಿಯಲ್ಲಿ ಮನೆಯ ಒಳಗೆ ಕುಳಿತ ಹೆಣ್ಣುಜೀವವೊಂದನ್ನು ಹೀನಾಯವಾಗಿ ಕಮೆಂಟ್ ಮಾಡುವ ಮೂಲಕ ತಮ್ಮ ಲೆವೆಲ್ ತೋರಿಸಿದ್ದರು. ಶಾರದಕ್ಕ ಕೊಟ್ಟಿರುವ ಇಂಜೆಕ್ಷನ್ ನಾಟಿದಂತೆ ಕಾಣಿಸುತ್ತಿದೆ. ಆಲ್ ದಿ ಬೆಸ್ಟ್ ಶಾರದಾ ಡೈಮಂಡ್!

 

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search