ನಕ್ಸಲ ಪೀಡಿತ ಪ್ರದೇಶದವರಲ್ಲಿ ಮೂಡಿದ ಭರವಸೆ, ನಾವು ಮುಖ್ಯವಾಹಿನಿಗೆ ಬರಲು ಸಿದ್ಧ ಎಂದ ಯುವಕರು
ಬಸ್ತಾರ್(ಛತ್ತಿಸಗಡ್): ನಕ್ಸಲ ಹಿಡಿತ ಹೊಂದಿರುವ ಪ್ರದೇಶಗಳಲ್ಲಿ ಅಭಿವೃದ್ಧಿಯ ಮಾತನಾಡಿದವರಿಗೆ ನಕ್ಸಲರು ಹತ್ಯೆ ಮಾಡುವುದು, ಹಿಂಸೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದರು. ಆದ್ದರಿಂದ ನಕ್ಸಲ ಪೀಡಿತ ಪ್ರದೇಶದ ಜನ ನಕ್ಸಲರ ವಿರುದ್ಧ ಮಾತನಾಡುವುದು ಬಿಡಿ, ಸರ್ಕಾರದ ಪರ ಮಾತಾಡುವುದು, ಮುಖ್ಯವಾಹಿನಿಗೆ ಬರುವುದನ್ನೇ ನಿಲ್ಲಿಸಿದ್ದರು. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ನಕ್ಸಲರ ವಿರುದ್ಧ ಕೈಗೊಂಡ ಭರ್ಜರಿ ಕಾರ್ಯಾಚರಣೆ, ನಕ್ಸಲರನ್ನು ಯಶಸ್ವಿಯಾಗಿ ಹತ್ತಿಕ್ಕಿದ್ದು, ನಕ್ಸಲ ಪೀಡಿತ ಪ್ರದೇಶದ ಯುವಕರು ನಕ್ಸಲರ ವಿರುದ್ಧ ತಿರುಗಿಬಿದ್ದಿದ್ದಾರೆ. ನಮಗೂ ಅಭಿವೃದ್ಧಿ ಬೇಕು, ನಾವು ಮುಖ್ಯವಾಹಿನಿಗೆ ಬರಲು ಸಿದ್ಧರಾಗಿದ್ದೇವೆ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ.
ತೀವ್ರ ನಕ್ಸಲ ಪೀಡಿತ ಛತ್ತಿಸಗಡ್ ದ ಬಸ್ತಾರ್ ಜಿಲ್ಲಯ ಬದ್ರಿಮಾಹು ಗ್ರಾಮದ ಯುವಕರು ಇದುವರೆಗೆ ನಕ್ಸಲರಿಂದ ನಿತ್ಯ ಕಿರಿಕಿರಿಗೆ ಒಳಗಾಗಿದ್ದರು. ನಕ್ಸಲರ ಹಿಂಸಾ ಪವೃತ್ತಿಯಿಂದ ಹೊರ ಬಂದಿರುವ ಅವರು ಇದೀಗ ನಮಗೂ ಉತ್ತಮ ರಸ್ತೆ, ಶಾಲೆ, ವಿದ್ಯುತ್, ಆಸ್ಪತ್ರೆಗಳು ಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ದರ್ಭಾ ಪೊಲೀಸ್ ಠಾಣೆ ವ್ಯಾಪ್ತಿ ಯ ಜಿರಾಮ್ ಅರಣ್ಯ ಪ್ರದೇಶದ ಈ ಗ್ರಾಮದ ಯುವಕರು ನಕ್ಸಲರ ಪ್ರಭಾವದಿಂದ ಹೊರ ಬಂದಿದ್ದು, ನಮಗೆ ಸೂಕ್ತ ಸೌಲಭ್ಯ ಒದಗಿಸಿದ್ದರೇ ನಕ್ಸಲರ ಜೊತೆ ಕೈಜೋಡಿಸಿರುವ ಇನ್ನುಳಿದವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.
ನಕ್ಸಲರ ಜೊತೆ ಕೈಜೋಡಿಸಿ, ಹೋರಾಟದಲ್ಲಿ ಭಾಗಿಯಾಗಿದ್ದೇ. ಆದರೆ ನಂತರ ಜ್ಞಾನೋದಯವಾಗಿ ಮುಖ್ಯವಾಹಿನಿಗೆ ಬಂದಿದ್ದೆ. ನನ್ನ ಸಹೋದರ ಗ್ರಾಮಕ್ಕೆ ಮುಖ್ಯಸ್ಥನಾಗಿದ್ದ, ಗ್ರಾಮದ ಅಭಿವೃದ್ಧಿ ಸರ್ಕಾರದ ಸಹಾಯ ಕೇಳಿದ್ದ. ಆದರೆ ಅಭಿವೃದ್ಧಿ ಸಹಿಸದ ನಕ್ಸಲರು ನನ್ನ ಸಹೋದರನನ್ನು ನಮ್ಮ ಮನೆಯಲ್ಲೇ ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ಗ್ರಾಮದ ಯುವಕನೊಬ್ಬ ತಿಳಿಸಿದ್ದಾನೆ.
2013ರಲ್ಲಿ ಇದೇ ಜಿರಾಮ್ ಘಾಟಿ ಪ್ರದೇಶದಲ್ಲಿ ಕಾಂಗ್ರೆಸ್ ರ್ಯಾಲಿಗೆ ಹೋಗುತ್ತಿದ್ದ ವಾಹನಗಳ ಮೇಲೆ ನಕ್ಸಲರು ದಾಳಿ ನಡೆಸಿದ್ದರಿಂದ ಸಚಿವರಾದಿಯಾಗಿ ಹಲವರು ಮೃತಪಟ್ಟಿದ್ದರು. ಸಚಿವರಾಗಿದ್ದ ಮಹೇಂದ್ರ ಕುಮಾರ ಮತ್ತು ಛತ್ತಿಸಗಡ್ ಕಾಂಗ್ರೆಸ್ ಅಧ್ಯಕ್ಷ ನಂದಕುಮಾರ ಪಟೇಲ್ ಸೇರಿ 27 ಜನರು ಮೃತಪಟ್ಟಿದ್ದರು. ಇಂತಹ ಪರಿಣಾಮಕಾರಿ ನಕ್ಸಲರ ಗುಂಪು ಹೊಂದಿರುವ ಪ್ರದೇಶದ ಜನರೇ ಮುಖ್ಯವಾಹಿನಿಗೆ ಬರಲು ಮುಂದಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಬಸ್ತಾರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹೇಳುವ ಪ್ರಕಾರ ‘ನಕ್ಸಲರ ಪ್ರಭಾವ ಕಡಿಮೆಯಾಗುತ್ತಿದ್ದು, ಜನ ಅಭಿವೃದ್ಧಿಯ ಚಿಂತನೆ ನಡೆಸುತ್ತಿದ್ದಾರೆ. ಕೆಲವೆಡೆ ಸೂಕ್ತ ಸೌಲಭ್ಯ ಮತ್ತು ರಕ್ಷಣೆ ಒದಗಿಸಲಾಗುತ್ತಿದೆ. ಮುಖ್ಯವಾಹಿನಿಗೆ ಬಂದವರಲ್ಲಿ ಭರವಸೆ ತುಂಬಲಾಗುತ್ತಿದೆ. ನಮ್ಮ ಎಲ್ಲ ದಳದ ನಿರಂತರ ಶ್ರಮದಿಂದ ಹೊಸ ಬದಲಾವಣೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
Leave A Reply