ಕರಾವಳಿಯಲ್ಲಿ ಕಾಂಗ್ರೆಸ್ ಭತ್ತಳಿಕೆಯಲ್ಲಿದ್ದ ಬಾಣಗಳು ಠುಸ್ ಪಟಾಕಿಯಾದ ಕಥೆಯೇ ರೋಚಕ!!
ಈ ಬಾರಿಯ ನಮ್ಮ ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕರಾವಳಿಯಲ್ಲಿ ಏನು ತಂತ್ರ ಹೂಡಿ ಗೆಲ್ಲಬೇಕು ಎಂದು ಅಂದುಕೊಂಡಿತ್ತೋ ಅದೆಲ್ಲ ಕಾಂಗ್ರೆಸ್ಸಿನ ಹಿತ್ತಲಿನಲ್ಲಿಯೇ ಠುಸ್ ಪಟಾಕಿಯಾಗಿ ಹೋದದ್ದನ್ನು ಕೈ ಮುಖಂಡರಿಗೆ ಅರಗಿಸಿಕೊಳ್ಳಲಾಗಿಲ್ಲ. ಕರಾವಳಿಯ ಕಾಂಗ್ರೆಸ್ಸಿನ ಶಾಸಕರಾಗಿದ್ದು ಹದಿನಾರು ಸಾವಿರ ಮತಗಳಿಗಿಂತಲೂ ಹೆಚ್ಚು ಅಂತರದಿಂದ ಸೋತ ಅಭ್ಯರ್ಥಿಯೊಬ್ಬರು ಚುನಾವಣಾ ಫಲಿತಾಂಶ ಬಂದ ಐದು ದಿನಗಳ ಬಳಿಕ “ಇನ್ನು ಕೂಡ ಸೋಲಿನ ಆಘಾತದಿಂದ ಹೊರಗೆ ಬರಲಾಗಿಲ್ಲ” ಎಂದು ತಮ್ಮ ಸಾಮಾಜಿಕ ತಾಣದಲ್ಲಿ ಬರೆದು ಹಾಕಿದ್ದು ಕಾಂಗ್ರೆಸ್ ಯಾವ ರೀತಿಯಲ್ಲಿ ಕರಾವಳಿಯ ಅವಿಭಜಿತ ಜಿಲ್ಲೆಯಲ್ಲಿ ಸೋಲಿನ ಕರಾಳತೆಯಿಂದ ನರಳುತ್ತಿದೆ ಎಂದು ತೋರಿಸುತ್ತದೆ. ಅಷ್ಟಕ್ಕೂ ಕರಾವಳಿಯ ಕಾಂಗ್ರೆಸ್ಸಿಗರ ಭತ್ತಳಿಕೆಯಿಂದ ಬಾಣಗಳು ಯಾವುದು ಎಂದು ನೋಡೋಣ.
ರಾಷ್ಟ್ರೀಯವಾದಿಗಳಾಗಿರುವ ಬಿಲ್ಲವರು…
ಮೊದಲನೇಯದಾಗಿ ಜಾತಿ, ಜಾತಿಯನ್ನು ಒಡೆಯುವ ಲೆಕ್ಕಾಚಾರ. ರಾಜ್ಯದಲ್ಲಿ ಲಿಂಗಾಯತ, ವೀರಶೈವ ಹೀಗೆ ಜಾತಿಗಳನ್ನು ಒಡೆದು ಪರಿಣತಿ ಹೊಂದಿದ ಪಕ್ಷಕ್ಕೆ ಕರಾವಳಿಯಲ್ಲಿ ಎರಡು ಪ್ರಬಲ ಮತ್ತು ದೊಡ್ಡ ಜಾತಿಗಳಾಗಿರುವ ಬಿಲ್ಲವ ಮತ್ತು ಬಂಟರನ್ನು ಒಡೆದರೆ ಮಾತ್ರ ಕಾಂಗ್ರೆಸ್ಸಿಗೆ ಲಾಭ ಎಂದು ಅನಿಸಿತ್ತು. ಅದರೊಂದಿಗೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯ ಜಾತಿಯನ್ನು ಎತ್ತಿ ಹಿಡಿದು ಅದರ ವಿರುದ್ಧ ಬೇರೆ ಜಾತಿಯವರನ್ನು ಎತ್ತಿಕಟ್ಟುವ ಸಂಚು ನಡೆಸಲಾಯಿತು. ಬಂಟ, ಬಿಲ್ಲವ, ಜಿಎಸ್ ಬಿ, ಕುಲಾಲ್, ಗಾಣಿಗ, ದಲಿತ ಎಂದು ಹಿಂದುಗಳನ್ನು ವಿಂಗಡಿಸುವ ಕೆಲಸ ನಡೆಸಲಾಯಿತು. ಬಿಲ್ಲವ ಯುವಕರ ಕಿವಿಯಲ್ಲಿ ಜಾತಿಯ ವಿಷಬೀಜವನ್ನು ಬಿತ್ತಲಾಯಿತು. ಹಿಂದೂತ್ವಕ್ಕಾಗಿ ಹೋರಾಡಲು ಬಿಲ್ಲವರು ಬೇಕು, ಟಿಕೆಟ್ ಕೊಡುವಾಗ ಬೇಡ್ವಾ ಎಂದು ಕಾಂಗ್ರೆಸ್ ಎಲ್ಲಾ ಕಡೆ ಹೇಳುತ್ತಾ ಬಂತು. ತಮ್ಮ ಪಕ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವರಿಗೆ ಒಂದೇ ಕಡೆ ಟಿಕೇಟ್ ಕೊಟ್ಟರೂ ಬಿಜೆಪಿ ಒಂದು ಕಡೆ ಕೊಟ್ಟಿದ್ದನ್ನು ಮಾತ್ರ ಹೈಲೈಟ್ ಮಾಡಲಾಯಿತು. ಲೇಡಿಹಿಲ್ ಸರ್ಕಲ್ ಅನ್ನು ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡುವುದಕ್ಕೆ ಅಡ್ಡಗಾಲು ಇಟ್ಟ ಕಾಂಗ್ರೆಸ್ ಬಾಹ್ಯ ಪ್ರಪಂಚಕ್ಕೆ ಬಿಲ್ಲವರ ಮುಂದೆ ಮೊಸಳೆ ಕಣ್ಣೀರು ಸುರಿಸಿತು. ದೇಶಕ್ಕಾಗಿ, ಧರ್ಮಕ್ಕಾಗಿ ಜೈಲಿಗೆ ಹೋದ ಬಿಲ್ಲವ ಯುವಕರ ಹೋರಾಟ, ತ್ಯಾಗಮಯ ಬದುಕನ್ನು ಜೈಲಿಗೆ ಹೋಗುವುದು ಎಂದು ನಿಕೃಷ್ಟ ರೀತಿಯಲ್ಲಿ ಕೆಲವು ಕಾಂಗ್ರೆಸ್ಸಿಗರು ಹೀಯಾಳಿಸಿದರು. ಕಾಂಗ್ರೆಸ್ ಉದ್ದೇಶ ಒಂದೇ ಇತ್ತು. ಮುಸ್ಲಿಂ ಮತ್ತು ಕ್ರೈಸ್ತರ ಮತಗಳು ಸಾರಾಸಗಟಾಗಿ ತಮಗೆ ಬರುತ್ತದೆ. ಅದೇ ಹಿಂದೂಗಳನ್ನು ಜಾತಿಗಳ ಲೆಕ್ಕಾಚಾರದಲ್ಲಿ ಒಡೆದರೆ ಆ ಮತಗಳು ವಿಭಜನೆಯಾಗಿ ಬಿಜೆಪಿ ಸೋಲುತ್ತದೆ ಎಂದು ಅಂದಾಜು ಹಾಕಿ ಕಾಂಗ್ರೆಸ್ ಕುಳಿತಿತ್ತು. ಆದರೆ ರಾಷ್ಟ್ರೀಯವಾದಿಗಳಾಗಿರುವ ಬಿಲ್ಲವರು ಕಾಂಗ್ರೆಸ್ಸಿನ ಗುಪ್ತತಂತ್ರವನ್ನು ಅರಿತಾಗಿತ್ತು.
” ನಮ್ಮ ಮನೆಗೆ ಯಾಕೆ ಚೀಟಿ ಕೊಡಲು ಬರಲಿಲ್ಲ”
ಇನ್ನೊಂದು ಕಡೆ ಬಿಜೆಪಿ ಮುಸ್ಲಿಮರ ಮತಗಳು ನಮಗೆ ಬರುವುದಿಲ್ಲ, ಅದೇನಿದ್ದರೂ ಕಾಂಗ್ರೆಸ್ ಪಾಲು ಎಂದು ಅಂದುಕೊಂಡು ಎಷ್ಟೋ ಮುಸ್ಲಿಮರ ಏರಿಯಾಗಳಲ್ಲಿ ಕಾಲಿಟ್ಟಿರಲೇ ಇಲ್ಲ. ಆದರೆ ಚುನಾವಣೆಗೆ ನಾಲ್ಕು ದಿನವಿರುವಾಗ ಬಂದ ಒಂದು ಕರೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯನ್ನು ಬಡಿದೆಬ್ಬಿಸಿತು. ಫೋನ್ ಮಾಡಿದ ವ್ಯಕ್ತಿಯ ಧ್ವನಿಯಲ್ಲಿ ಸ್ಪಷ್ಟತೆ ಇತ್ತು. ಶಬ್ದಗಳಲ್ಲಿ ತೂಕವಿತ್ತು. ಭಾಷೆಯಲ್ಲಿ ಹಿಡಿತವಿತ್ತು. ಭಾವನೆಗಳಲ್ಲಿ ನಿರ್ಧಾವ ಅಚಲವಾಗಿತ್ತು. ಆ ವ್ಯಕ್ತಿ ಹೇಳಿದ್ದು ಒಂದೇ ವಾಕ್ಯ _” ನಮ್ಮ ಮನೆಗೆ ಯಾಕೆ ಚೀಟಿ ಕೊಡಲು ಬರಲಿಲ್ಲ” ಈ ಪ್ರಶ್ನೆ ಬಿಜೆಪಿ ಚುನಾವಣಾ ಕಚೇರಿಗೆ ಬಂದ ಸಾಮಾನ್ಯ ಕರೆಯ ಹಾಗೆನೆ ಇತ್ತು. ಚುನಾವಣೆ ಹತ್ತಿರ ಇರುವಾಗ ಅನೇಕರು ಹೀಗೆ ಕರೆ ಮಾಡಿ ಹೀಗೆ ಕೇಳುವುದುಂಟು. ಇದು ಕೂಡ ಅಂತಹುದೇ ಒಂದು ಕರೆ ಎಂದುಕೊಂಡು ಫೋನ್ ರಿಸೀವ್ ಮಾಡಿದವರು ಮರುಪ್ರಶ್ನೆ ಹಾಕಿದ್ದಾರೆ _” ನಿಮ್ಮದು ಯಾವ ಏರಿಯಾ” ಅತ್ತಲಿಂದ ಪಳ್ನೀರ್ ಎನ್ನುವ ಉತ್ತರ ಬಂದಿದೆ. ಈ ಕಡೆಯಿಂದ ಹೆಸರು ಮತ್ತು ವಿಳಾಸ ಕೇಳಿದ್ದಾರೆ. ಅದರ ನಂತರ ಫೋನ್ ಮಾಡಿದ ವ್ಯಕ್ತಿ ಹೇಳಿದ ಉತ್ತರದ ನಂತರವೇ ಇಡೀ ಚುನಾವಣೆಯ ಕಾವು ಇಮ್ಮಡಿ ಆದದ್ದು. ನಾನು ಮೊಹಮ್ಮದ್. ನಮ್ಮ ಅಪಾರ್ಟ್ ಮೆಂಟಿನಲ್ಲಿ ಹದಿನೆಂಟು ಮನೆಗಳಿವೆ. ಎಲ್ಲರೂ ಮುಸ್ಲಿಮರೇ. ಆದರೆ ನಮಗೆ ಚೀಟಿ ಕೊಡಲು ಬಿಜೆಪಿಯವರು ಯಾರೂ ಬಂದಿಲ್ಲ ಎಂದು ಆ ವ್ಯಕ್ತಿ ಹೇಳಿದ ಬಳಿಕ ಬಿಜೆಪಿಯ ಕಾರ್ಯಕರ್ತರು ಆ ಮನೆಗಳಿಗೆ ಚೀಟಿ ಕೊಡಲು ದೌಡಾಯಿಸಿದ್ದಾರೆ. ಅವರಿಗೆ ಉತ್ತಮ ರೀತಿಯ ಸ್ಪಂದನೆ ಸಿಕ್ಕಿದೆ. ಇಷ್ಟು ದಿನ ಯಾಕೆ ಬರಲಿಲ್ಲ ಎಂದು ಆ ಫ್ಲಾಟ್ ನ ಅನೇಕರು ಕೇಳಿದ್ದಾರೆ.
ನಂತರ ಮೊಹಮ್ಮದ್ ಅವರನ್ನು ಮಾತನಾಡಿಸಿದ ಬಿಜೆಪಿ ಕಾರ್ಯಕರ್ತರಿಗೆ ಗೊತ್ತಾದ ವಿಷಯ ಎಂದರೆ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮುಸ್ಲಿಮ್ ಮಹಿಳೆಯರ ಹಿತರಕ್ಷಣೆ ಕಾಪಾಡಲು ಜಾರಿಗೆ ತರಲು ಯೋಜಿಸಿದ್ದ ತ್ರಿವಳಿ ತಲಾಖ್ ಮುಸ್ಲಿಮರಲ್ಲಿ ಮೋದಿಯವರ ಬಗ್ಗೆ ಹೊಸ ಆಶಾವಾದ ಸೃಷ್ಟಿಸಿದೆ. ಇಲ್ಲಿಯ ತನಕ ಕಾಂಗ್ರೆಸ್ಸಿಗರು ಏನು ಅಂದುಕೊಂಡಿದ್ದರು ಎಂದರೆ ತ್ರಿವಳಿ ತಲಾಖ್ ನಿಷೇಧಿಸಿದರೆ ಮುಸ್ಲಿಮ್ ಗಂಡಸರಲ್ಲಿ ಆಕ್ರೋಶ ಉಂಟಾಗುತ್ತದೆ. ಅದರಿಂದ ಅವರು ಕಾಂಗ್ರೆಸ್ಸಿಗೆ ಮತ ಹಾಕುವುದಿಲ್ಲ. ಈ ಮೂಲಕ ಪಕ್ಷಕ್ಕೆ ನಷ್ಟವಾಗುತ್ತದೆ ಎಂದೇ ಕಾಂಗ್ರೆಸ್ ಊಹಿಸಿತ್ತು. ಮುಸ್ಲಿಂ ಮಹಿಳೆಯರು ಹೇಗೂ ತಮ್ಮ ಗಂಡ, ಅಣ್ಣ, ತಂದೆ ಹೇಳಿದ ವ್ಯಕ್ತಿಗೆನೆ ವೋಟ್ ಹಾಕುತ್ತಾರೆ. ಆದ್ದರಿಂದ ತ್ರಿವಳಿ ತಲಾಖ್ ನಿಷೇಧ ಮಾಡುವುದರಿಂದ ಮುಸ್ಲಿಂ ಮಹಿಳೆಯರಿಗೆ ಅವರ ಆತ್ಮಸ್ವಾಭಿಮಾನ ಕೊಟ್ಟರೆಷ್ಟು, ಬಿಟ್ಟರೆಷ್ಟು ಎಂದೇ ಕೈ ನಾಯಕರು ಅಂದುಕೊಂಡಿದ್ದರು!!
Leave A Reply