ರಾಮನಾಥ್ ಕೋವಿಂದ್ ಮಹತ್ವದ ನಿರ್ಧಾರ, ಈ ಬಾರಿ ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟ ಇಲ್ಲ!
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಹತ್ತರ ನಿರ್ಧಾರವೊಂದನ್ನು ಪ್ರಕಟಿಸಿದ್ದು, ರಂಜಾನ್ ಹಿನ್ನೆಲೆಯಲ್ಲಿ ಈ ಬಾರಿ ರಾಷ್ಟ್ರಪತಿ ಭವನದಲ್ಲಿ ಮುಸ್ಲಿಮರಿಗಾಗಿ ಇಫ್ತಾರ್ ಕೂಟ ಆಯೋಜಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಇಲ್ಲೂ ಪ್ರಬುದ್ಧತೆ ಮೆರೆದಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಇಫ್ತಾರ್ ಕೂಟ ಆಯೋಜಿಸುವ ಹಣವನ್ನು ಅನಾಥಾಶ್ರಮಕ್ಕೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಎಲ್ಲ ಇದ್ದವರು ರಾಷ್ಟ್ರಪತಿ ಭವನಕ್ಕೆ ಬಂದು ಊಟ ಮಾಡಿ ಹೋಗುವ ಬದಲು, ಇಲ್ಲದವರು ಚೆನ್ನಾಗಿರಲಿ ಎಂಬ ಮನೋಭಾವನೆಯನ್ನು ಕೋವಿಂದ್ ಅವರು ತಳೆದಿದ್ದಾರೆ.
ಹಾಗಂತ ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟ ನಡೆಸದೇ ಇರುವ ತೀರ್ಮಾನವನ್ನು ರಾಮನಾಥ್ ಕೋವಿಂದ್ ಅವರೊಬ್ಬರೇ ತೆಗೆದುಕೊಂಡಿಲ್ಲ. ಈ ಹಿಂದೆ, ಅಂದರೆ 2002-07ರವರೆಗೆ ರಾಷ್ಟ್ರಪತಿಯಾಗಿದ್ದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆಡಳಿತದ ಒಂದೇ ಒಂದು ವರ್ಷವೂ ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟ ಆಯೋಜಿಸಿರಲಿಲ್ಲ.
ಆದರೆ ಬಳಿಕ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ಪ್ರತಿಭಾ ಪಾಟೀಲ್ ಅವರು ರಾಷ್ಟ್ರಪತಿ ಭವನದಲ್ಲಿ 2012ರವರೆಗೆ ಇಫ್ತಾರ್ ಕೂಟ ಆಯೋಜಿಸಿದ್ದರು. ನಂತರ ಬಂದ ಪ್ರಣಬ್ ಮುಖರ್ಜಿ ಅವರು ಸಹ 2017ರವರೆಗೆ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ಆದರೆ ಈ ಬಾರಿ ರಾಮನಾಥ ಕೋವಿಂದ್ ಅವರು ಆಯೋಜಿಸದೇ ಇರಲು ತೀರ್ಮಾನಿಸಿ, ಆ ಹಣವನ್ನು ಅನಾಥಾಶ್ರಮಕ್ಕೆ ನೀಡಲು ಮುಂದಾಗಿದ್ದಾರೆ. ಆ ಮೂಲಕ ಮಾನವೀಯತೆ ಮೆರೆದಿದ್ದಾರೆ.
Leave A Reply