ಈಡೇರಿದ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧನ ಮಗನ ಶಪಥ, ಸೈನ್ಯ ಸೇರಿದ ಯೋಧನ ಪುತ್ರ
ಮುಜಪ್ಫರ್ ನಗರ: ಜೂನ್ 12, 1999 ರಾತ್ರಿ ಆರು ವರ್ಷದ ಮುಗ್ದ ಕಂದನಿಗೆ ತನ್ನ ತಂದೆ ದೇಶಕ್ಕಾಗಿ ಹೋರಾಡಿ ಮಡಿದ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತು. ಆದರೆ ಆ ಮುಗ್ದ ಕಂದಮ್ಮ ಎದೆಗುಂದಲಿಲ್ಲ. ತಾನೂ ತನ್ನ ತಂದೆಯಂತೇ ಸೈನ್ಯವನ್ನು ಸೇರಿ ವೈರಿ ಪಡೆಯ ಸದ್ದಡಗಿಸಬೇಕು ಎಂದು ಆ ಕಗ್ಗತ್ತಲ ರಾತ್ರಿಯಲ್ಲೇ ನಿರ್ಧರಿಸಿತು. ಇದೀಗ ಹತ್ತೊಂಬತ್ತು ವರ್ಷಗಳ ನಂತರ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧನ ಪುತ್ರನ ಕನಸು ಸಾಕಾರವಾಗಿದೆ. ತಂದೆ ನಾಯಕನಾಗಿದ್ದ ಬೆಟಾಲಿಯನ್ ಸೇರ್ಪಡೆಯಾಗಿದ್ದಾರೆ,
ರಜಪೂತಾನಾ ರೈಫಲ್ಸ್‌ನ 2 ನೇ ಬೆಟಾಲಿಯನ್ ನ ನಾಯಕನಾಗಿದ್ದ ಯೋಧ ಬಚನ್ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದರು. ಇದೀಗ ಬಚನ್ ಅವರ ಮಗ ಹಿತೇಶ್ ತಂದೆ ಹುತಾತ್ಮರಾದ ದಿನ ಕೈಗೊಂಡ ಶಪಥ ಪೂರ್ಣಗೊಳಿಸಿದ್ದು, ಭಾರತೀಯ ಸೈನ್ಯದಲ್ಲಿ ಲೆಪ್ಟಿನೆಂಟ್ ಆಗಿ ನೇಮಕವಾಗಿದ್ದಾರೆ. ತಂದೆ ಹುತಾತ್ಮರಾದ 19 ವರ್ಷಗಳ ನಂತರ ಸೈನ್ಯ ಸೇರಿರುವ ಹಿತೇಶ ಡೆಹರಾಡೂನ್ ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತೇರ್ಗಡೆಯಾಗಿದ್ದು, ಸೈನ್ಯ ಸೇರಿ ತಮ್ಮ ತಂದೆ ಕಾರ್ಯ ನಿರ್ವಹಿಸುತ್ತಿದ್ದ ರಜಪೂತಾನಾ ರೈಫಲ್ಸ್ ನ ಬೆಟಾಲಿಯನ್ ನಲ್ಲಿಯೇ ಕಾರ್ಯ ನಿರ್ವಹಿಸುವ ಮೂಲಕ ಗಮನ ದೇಶ ಸೇವೆಗೆ ಸಜ್ಜಾಗಿದ್ದಾರೆ. ತರಬೇತಿ ಮುಗಿಸಿರುವ ಹಿತೇಶ ಪಾಸಿಂಗ್ ಔಟ್ ಪರೇಡ್ ಬಳಿಕ ಮುಜಪ್ಫರ್ ನಗರದಲ್ಲಿರುವ ತಂದೆ ಬಚ್ಚನ್ ಸಿಂಗ್ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ.
ನಮ್ಮ ಬೆಟಾಲಿಯನ್ ಟೊಲೋಲಿಂಗ್ ನಲ್ಲಿ ದಾಳಿಯಾದಾಗ ಬಚ್ಚನ್ ತಲೆಗೆ ಗುಂಡು ತಗುಲಿ ರಣ ಭೂಮಿಯಲ್ಲೇ ಹುತಾತ್ಮರಾಗಿದ್ದರು. ಡೆಹ್ರಾಡೂನಿನ್ ಮೇಜರ್ ವಿವೇಕ್ ಗುಪ್ತಾ ಸೇರಿ 17 ಯೋಧರು ಅಂದು ನಮ್ಮನ್ನು ಅಗಲಿದ್ದರು. ಇದೀಗ ಬಚ್ಚನ್ ಮಗ ಸೈನ್ಯಕ್ಕೆ ಸೇರುತ್ತಿರುವುದು ಹೆಮ್ಮೆ ಎನಿಸುತಿದೆ ಎಂದು ಬಚ್ಚನ್ ಸೇವೆ ಸಲ್ಲಿಸುತ್ತಿದ್ದ ಬೆಟಾಲಿಯನ್ ನ ಯೋಧ ರಿಷಿಪಾಲ್ ಸಿಂಗ್ ಹರ್ಷ ವ್ಯಕ್ತಪಡಿಸಿದ್ದಾರೆ.
19 ವರ್ಷದ ಹಿಂದೆ ಸೈನ್ಯ ಸೇರುವ ಕನಸು ಕಂಡಿದ್ದೇ. ನನ್ನ ಅಮ್ಮನ ಕನಸು ಅದೇ ಆಗಿತ್ತು. ಇದೀಗ ಘನತೆ ಮತ್ತು ಪ್ರಾಮಾಣಿಕವಾಗಿ ನನ್ನ ದೇಶದ ಸೇವೆ ಮಾಡಲು ಇಚ್ಚೀಸುತ್ತೇನೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಹಿತೇಶ್.
ಬಚ್ಚನ್ ಹುತಾತ್ಮರಾದ ನಂತರ ಜೀವನ ಕಷ್ಟಕರವಾಗಿತ್ತು. ಇಬ್ಬರು ಮಕ್ಕಳನ್ನು ಬೆಳೆಸುವುದಕ್ಕೆ ಬದುಕು ಮೀಸಲಾಗಿಟ್ಟೆ. ಹಿತೇಶ್ ಸೈನ್ಯಕ್ಕೆ ನೇಮಕವಾಗಿರುವುದು ಹೆಮ್ಮೆ ಇದೆ. ಕಿರಿಯ ಸಹೋದರ ಹೇಮಂತ್ ಕೂಡ ಸೈನ್ಯ ಸೇರಲು ಸಿದ್ಧತೆ ನಡೆಸುತ್ತಿದ್ದಾನೆ ಎಂದು ಹಿತೇಶ್ ತಾಯಿ ಕಮಲಾ ಬಾಲಾ ಪತಿಯನ್ನು ನೆನೆದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
Leave A Reply