• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಉಚಿತ ಬಸ್ ಪಾಸ್ ಕೊಡದಿದ್ದರೆ ಘೋಷಣೆ ಮಾಡುವುದು ಯಾಕಿತ್ತು!

Hanumantha Kamath Posted On June 14, 2018
0


0
Shares
  • Share On Facebook
  • Tweet It

ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿಯಲ್ಲಿ ವಿಷಯ ಇಟ್ಟು ನಂತರ ಈ ಬಗ್ಗೆ ಪರಿಶೀಲಿಸುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಅವರು ಹೇಳಿದ್ದು ಉಚಿತ ಬಸ್ ಪಾಸಿನ ವಿಚಾರ. ಇನ್ನು ಮುಂದೆ ಹೀಗೆ. ಪ್ರತಿಯೊಂದಕ್ಕೂ ಸಮನ್ವಯ ಸಮಿತಿಯೇ ಗತಿ. ಅದರಲ್ಲಿ ಬರುವ ನಿರ್ಧಾರಗಳನ್ನು ಎರಡು ಪಕ್ಷಗಳು ತಮ್ಮ ತಮ್ಮ ಮೈಲೇಜಿಗೆ ಉಪಯೋಗಿಸಿಕೊಳ್ಳಲಿವೆ. ನಿರ್ದಾರ ಜನರ ಪರವಾಗಿ ಬಂದರೆ ಅದನ್ನು ನಾವೇ ಒತ್ತಡ ಹಾಕಿ ಜಾರಿಗೆ ತಂದದ್ದು ಎನ್ನಲಿವೆ. ಜನರ ವಿರುದ್ಧ ಇದ್ದರೆ ಪರಸ್ಪರ ಆರೋಪ ಹಾಕಿ ಅವರು ಬಿಡಲಿಲ್ಲ, ಇವರು ಬಿಡಲಿಲ್ಲ ಎನ್ನುವ ಮೂಲಕ ತಮ್ಮ ಹೊರೆಯನ್ನು ಇಳಿಸಲಿವೆ. ಕಳೆದ ವರ್ಷ ಸಿದ್ಧರಾಮಯ್ಯ ತಮ್ಮ ಕೊನೆಯ ಬಜೆಟ್ ಮಂಡಿಸುವಾಗ ಹೇಳಿದ್ದ ಘೋಷಣೆಗಳೆಲ್ಲ ಈಗ ಜಾರಿಗೆ ಬರಲೇಬೇಕಾದ ಪರ್ವ ಕಾಲ. ಜಾರಿಗೆ ಬರದಿದ್ದರೆ ಒಂದೋ ಕಾಂಗ್ರೆಸ್ ಸುಳ್ಳ ಆಗುತ್ತದೆ. ಎಲ್ಲವನ್ನು ಜಾರಿಗೆ ತಂದರೆ ಕುಮಾರಸ್ವಾಮಿ ಹೈರಾಣಾಗುತ್ತಾರೆ. ಅದಕ್ಕಾಗಿ ಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದು.

ಜನಪ್ರಿಯ ಬಜೆಟಿನ ಅಂಗವಾಗಿತ್ತು…

ಸಿದ್ಧರಾಮಯ್ಯ ಕಳೆದ ಬಾರಿ ಬಜೆಟಿನಲ್ಲಿ ಘೋಷಿಸಿದ್ದ ಹೆಚ್ಚಿನ ಯೋಜನೆಗೆ ಹಣಕಾಸಿನ ಕೊರತೆ ಇದೆ. ಅದಕ್ಕೆ ಉಚಿತ ಬಸ್ ಪಾಸ್ ಕೂಡ ಉದಾಹರಣೆ. ಈಗಿನ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಅವರು ಹೇಳುವ ಪ್ರಕಾರ ಸಾರಿಗೆ ನಿಗಮಗಳು ಈಗಾಗಲೇ 500 ಕೋಟಿ ರೂಪಾಯಿ ನಷ್ಟದಲ್ಲಿವೆ. ಹಾಗಿರುವಾಗ ಉಚಿತ ಬಸ್ ಪಾಸ್ ನಿಂದ 629 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳುತ್ತದೆ. ಆದ್ದರಿಂದ ಪರಿಶೀಲಿಸುವುದಾಗಿ ಹೇಳಿದ್ದಾರೆ. ಇವರು ಸಮನ್ವಯ ಸಮಿತಿಯಲ್ಲಿ ಇಟ್ಟು ಏನು ಪರಿಶೀಲಿಸಿದರೂ ಇವರಿಗೆ ಈ ಯೋಜನೆ ಜಾರಿಗೆ ತರುವ ಉದ್ದೇಶ ಸುಲಭದಲ್ಲಿ ಇಲ್ಲ ಎನ್ನುವುದು ಸ್ಪಷ್ಟ.
ಬಜೆಟ್ ರಚನೆ ಮಾಡುವಾಗ ಆಯಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿಯೇ ಹಣಕಾಸು ಸಚಿವರು ಬಜೆಟ್ ತಯಾರಿಸುತ್ತಾರೆ. ಹಾಗಿರುವಾಗ ನೂರಾರು ಕೋಟಿಯ ಹೊರೆ ಒಂದು ನಿಗಮದ ಮೇಲೆ ಬೀಳುತ್ತೆ ಎಂದಾದರೆ ಆಗ ಅಧಿಕಾರಿಗಳು ಸಚಿವರನ್ನು ಅಥವಾ ಸಿಎಂ ಅವರನ್ನು ಎಚ್ಚರಿಸುತ್ತಾರೆ. ಹೀಗೆ ಮಾಡಿದರೆ ನಷ್ಟವಾಗುತ್ತದೆ ಎನ್ನುತ್ತಾರೆ. ಆದ್ದರಿಂದ ಸಾಮಾನ್ಯವಾಗಿ ನಷ್ಟವಾಗದ ರೀತಿಯಲ್ಲಿ ತೂಗಿಸಿಕೊಂಡು ಹೋಗುವ ಸಲಹೆ ಜನಪ್ರತಿನಿಧಿಗಳು ಕೊಡುತ್ತಾರೆ. ಆದರೆ ಚುನಾವಣಾ ವರ್ಷ ಎಂದ ಕೂಡಲೇ ಆಡಳಿತದಲ್ಲಿರುವ ಪಕ್ಷ ಎಲ್ಲವನ್ನು ಗಾಳಿಗೆ ತೂರಿ ಕೇವಲ ಜನಪ್ರಿಯ ಬಜೆಟ್ ಮಾತ್ರ ಮಂಡಿಸಲು ತಯಾರಾಗುತ್ತದೆ. ಆಗ ಯಾವ ಅಧಿಕಾರಿ ಹೇಳಿದ್ದು ಕೂಡ ಅರ್ಥವಾಗುವುದಿಲ್ಲ. ಸಿದ್ಧರಾಮಯ್ಯ ಮಾಡಿದ್ದು ಕೂಡ ಅದನ್ನೇ. ಮಕ್ಕಳಲ್ಲಿ, ಪೋಷಕರಲ್ಲಿ ಜನಪ್ರಿಯತೆ ಹೆಚ್ಚಿಸುವ ಅಗತ್ಯ ಇದ್ದ ಕಾರಣ ಸುಲಭದಲ್ಲಿ ಜನರನ್ನು ಸೆಳೆಯುವ ಯೋಜನೆಯನ್ನು ಘೋಷಿಸಿದ್ದರು. ಅದು ಎಷ್ಟು ಉಪಯೋಗವಾಯಿತು ಎನ್ನುವುದು ಬೇರೆ ವಿಷಯ. ಆದರೆ ವಿದ್ಯಾರ್ಥಿಗಳ ಮೊಣಕೈಗೆ ಬೆಣ್ಣೆ ಹಚ್ಚುವ ಕಾರ್ಯ ಸಿದ್ಧರಾಮಯ್ಯ ಮಾಡಿದ್ದಾರೆ. ಹಾಗಾದರೆ ಈಗ ಇದನ್ನು ಜಾರಿಗೆ ತರದೇ ಹೋದರೆ ಸರಕಾರಕ್ಕೆ ಆಗುವ ತೊಂದರೆ ಏನು ಎನ್ನುವುದನ್ನು ನೋಡೋಣ.

ಪಾಪದ ಮಕ್ಕಳ ಹಣ ಕಸಿಯುವ ಅಗತ್ಯ…

ಮೊದಲನೇಯದಾಗಿ ಉಚಿತ ಬಸ್ ಪಾಸ್ ಮಾಡದಿದ್ದರೆ ಮಕ್ಕಳು ನೂರಾರು ರೂಪಾಯಿ ಕೊಟ್ಟು ಬಸ್ ಪಾಸ್ ಮಾಡಬೇಕಾಗುತ್ತದೆ. ಸಾರಿಗೆಯನ್ನು ಸರಕಾರಗಳು ಸೇವೆ ಎಂದು ಪರಿಗಣಿಸಿದರೆ ಆಗ ಮಕ್ಕಳ ಉಚಿತ ಬಸ್ ಪಾಸ್ ಕೊಡಲು ಹಿಂಜರಿಯಲೇಬಾರದು. ಯಾಕೆಂದರೆ ಉಚಿತ ಬಸ್ ಪಾಸ್ ಮಾಡುವುದರಿಂದ ರಾಜ್ಯ ಸರಕಾರಕ್ಕೆ ಬರುವ ಆದಾಯ ಕಡಿಮೆಯಾಗಬಹುದು. ಅದರೆ ಬೊಕ್ಕಸಕ್ಕೆ ಹೋಗಿ ಹಣ ತಂದು ಸುರಿಯುವ ಯೋಜನೆ ಇದಲ್ಲ.

ಎಷ್ಟೋ ಜನ ಪೋಷಕರಿಗೆ ರಿಯಾಯಿತಿ ದರದಲ್ಲಿ ಸಿಗುವ ಬಸ್ ಪಾಸ್ ಗೆ ಹಣ ಹೊಂದಿಸುವುದು ಕಷ್ಟ. ಕೆಲವು ನಿರ್ದಿಷ್ಟ ಜಾತಿಯವರಿಗೆ ಸರಕಾರ ಉಚಿತ ಬಸ್ ಪಾಸ್ ಮಾಡಿದೆ. ಆದರೆ ಇಲ್ಲಿ ತಾರತಮ್ಯ ಮಾಡಬಾರದು. ಅನುಕೂಲ ಇದ್ದವರು ಖಂಡಿತ ಬಸ್ಸಿನಲ್ಲಿ ಬರಲ್ಲ. ಆದ್ದರಿಂದ ಉಚಿತ ಬಸ್ ಪಾಸ್ ಜಾರಿಗೆ ತರುವ ಮೂಲಕ ಸರಕಾರ ಧೃಡ ಹೆಜ್ಜೆ ಇಡಬೇಕು. ಒಂದು ವೇಳೆ ಈ ಯೋಜನೆ ಜಾರಿಗೆ ಬರದಿದ್ದರೆ ವಿದ್ಯಾರ್ಥಿಗಳು ತಮ್ಮ ಪೋಷಕರ ಮುಂದೆ ಹಣಕ್ಕೆ ಕೈಚಾಚಬೇಕಾಗುತ್ತದೆ!

0
Shares
  • Share On Facebook
  • Tweet It




Trending Now
ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
Hanumantha Kamath July 9, 2025
ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
Hanumantha Kamath July 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
  • Popular Posts

    • 1
      ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • 2
      ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • 3
      ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • 4
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 5
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!

  • Privacy Policy
  • Contact
© Tulunadu Infomedia.

Press enter/return to begin your search