ಮೊಘಲ್ ಅರಸ ಅಕ್ಬರನಿಗಿಂತ ರಾಜ ಮಹಾರಾಣ ಪ್ರತಾಪರೇ ಶ್ರೇಷ್ಠ ಎಂದಿದ್ದು ಯಾರು ಗೊತ್ತೇ?
ಲಖನೌ: ದೇಶದ ಹಿಂದೂ ದೇವಾಲಯಗಳನ್ನು ನಾಶ ಮಾಡಿದ, ಧರ್ಮದ ಹೆಸರಿನಲ್ಲಿ ಅಸಹಿಷ್ಣುತೆ ಮೆರೆದ, ದೇಶದ ಹಲವು ನಗರಗಳ ಹೆಸರುಗಳನ್ನುಇಸ್ಲಾಮೀಕರಣಗೊಳಿಸಿ ಸ್ವಾಭಿಮಾನಕ್ಕೆ ಧಕ್ಕೆ ತಂದ, ದೇಶದ ಸಂಪತ್ತು ಕೊಳ್ಳೆ ಹೊಡೆದ ಮುಸ್ಲಿಂ ಆಡಳಿತಗಾರರು ದೇಶದಲ್ಲಿ ಶ್ರೇಷ್ಠ ಎನ್ನುವ ಬುದ್ಧಿಗೇಡಿಗಳು ನಮ್ಮಲ್ಲಿದ್ದಾರೆ.
ಆದರೆ ಇವರಿಗೆಲ್ಲ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಛಾಟಿಯೇಟು ನೀಡಿದ್ದು, ದೇಶದಲ್ಲಿ ಮೊಘಲ್ ದೊರೆ ಅಕ್ಬರನಿಗಿಂತ ರಜಪೂತ ಅರಸ ಮಹಾರಾಣಾ ಪ್ರತಾಪರೇ ಶ್ರೇಷ್ಠ ಎಂದು ಹೇಳಿಕೆ ನೀಡಿದ್ದಾರೆ.
ಲಖನೌನಲ್ಲಿ ಆಯೋಜಿಸಿದ್ದ ಮಹಾರಾಣ ಪ್ರತಾಪ್ ಜಯಂತಿಯಲ್ಲಿ ಮಾತನಾಡಿದ ಆದಿತ್ಯನಾಥರು, ಮುಘಲ್ ಅರಸ ಅಕ್ಬರ್ ಶ್ರೇಷ್ಠನಲ್ಲ. ಆದರೆ ಮೊಘಲರ ಸೈನ್ಯದ ವಿರುದ್ಧ ದಿಟ್ಟತನದಿಂದ ಹೋರಾಡಿ ಶೌರ್ಯ ಮೆರೆದ ಮಹಾರಾಣಾ ಪ್ರತಾಪರು ಶ್ರೇಷ್ಠ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಲ್ದಿಘಾಟಿ ಯುದ್ಧದಲ್ಲಿ ಯಾರು ಗೆಲುವು ಸಾಧಿಸಿದರು ಎಂಬುದು ಪ್ರಮುಖ ಅಲ್ಲ. ಹಲವು ವರ್ಷಗಳವರೆಗೆ ಹೋರಾಡಿ ಅರವಳ್ಳಿ ಬೆಟ್ಟ ಹಾಗೂ ಕೋಟೆಗಳನ್ನು ವಶಪಡಿಸಿಕೊಳ್ಳುವ ಮೂಲಕ ಮಹಾರಾಣಾ ಪ್ರತಾಪರು ಶೌರ್ಯತನ ಮೆರೆದರು. ನಿಜವಾಗಿಯೂ ಯುದ್ಧದ ಗೆಲುವು ಅಂದರೆ ಇದು. ಇತಿಹಾಸದಲ್ಲಿ ಇಂತಹ ಉದಾಹರಣೆ ವಿರಳವಾಗಿರುವುದರಿಂದ ಪ್ರತಾಪರು ಶ್ರೇಷ್ಠ ಎಂದು ಮಾಹಿತಿ ನೀಡಿದ್ದಾರೆ.
ಮಹಾರಾಣಾ ಪ್ರತಾಪರು ಹೋರಾಡಿದ ಪ್ರತಿ ಯುದ್ಧದಲ್ಲೂ ಶೌರ್ಯತನ ಮೆರೆದಿದ್ದಾರೆ. ಸ್ವಾಭಿಮಾನಕ್ಕೂ ಅವರೂ ಪ್ರತಿರೂಪವಾಗಿದ್ದಾರೆ. ಹಾಗಾಗಿ ಇಂತಹ ಮಹಾರಾಣಾ ಪ್ರತಾಪರ ಆದರ್ಶ ರೂಢಿಸಿಕೊಳ್ಳುವುದು ಇಂದಿಗೂ ಪ್ರಸ್ತುತ ಎಂದು ಯೋಗಿ ಆದಿತ್ಯನಾಥರು ತಿಳಿಸಿದ್ದಾರೆ.
Leave A Reply