ರೋಹಿತ್ ವೇಮುಲ ಕುಟುಂಬಕ್ಕೆ ಮನೆ ಕಟ್ಟಿಸಿಕೊಡುತ್ತೇವೆ ಎಂದಿದ್ದ ಮುಸ್ಲಿಂ ಲೀಗ್ ಇನ್ನೂ ಪತ್ತೆಯಿಲ್ಲವಂತೆ!
ಎರಡು ವರ್ಷಗಳ ಹಿಂದೆ, 2016ರಲ್ಲಿ ರೋಹಿತ್ ವೇಮುಲ ದೆಹಲಿ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ ಇಡೀ ದೇಶದಲ್ಲಿ ದೊಡ್ಡ ನಾಟಕ ನಡೆಯಿತು. ರಾಷ್ಟ್ರದಲ್ಲಿ ಅಸಹಿಷ್ಣುತೆ ಮನೆಮಾಡಿದೆ ಎಂದು ಬೊಬ್ಬೆ ಹಾಕಲಾಯಿತು. ಅಲ್ಲಿ ರೋಹಿತ್ ವೇಮುಲ ಏಕೆ ಆತ್ಮಹತ್ಯೆ ಮಾಡಿಕೊಂಡರು, ಇದು ಕೊಲೆಯಾ ಎಂಬುದು ಯಾರಿಗೂ ಬೇಕಾಗಿರಲಿಲ್ಲ. ಎಲ್ಲರದ್ದೂ ಒಂದೇ ಉದ್ದೇಶ, ಅದು ನರೇಂದ್ರ ಮೋದಿ ಅವರನ್ನು ತೆಗಳುವುದು!
ಹೀಗೆ ದೇಶದಲ್ಲಿ ಹಲವರು ಮೋದಿ ಅವರ ವಿರುದ್ಧ ಮಾತನಾಡುತ್ತಿರುವಾಗಲೇ, ದೊಡ್ಡದಾಗಿ ಮಧ್ಯಸ್ಥಿಕೆ ವಹಿಸಿದ್ದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷ, ರೋಹಿತ್ ವೇಮುಲ ಬಡವನಾಗಿದ್ದು, ಆತನೇ ಕುಟುಂಬಕ್ಕೆ ಆಧಾರನಾಗಿದ್ದ. ಹಾಗಾಗಿ ನಾವು ಕುಟುಂಬಸ್ಥರಿಗೆ ಮನೆಯೊಂದನ್ನು ಕಟ್ಟಿಸಿಕೊಡುತ್ತೇವೆ ಎಂದು ಹೇಳಿದ್ದರು.
ಆದರೆ ಭರವಸೆ ನೀಡಿ ಎರಡು ವರ್ಷವಾಗಿದೆ. ಕುಟುಂಬಸ್ಥರು ಇಷ್ಟೊತ್ತಿಗಾಗಲೇ ಮುಸ್ಲಿಂ ಲೀಗ್ ಕಟ್ಟಿಸಿದ ಮನೆಯಲ್ಲಿ ವಾಸಿಸಬೇಕಿತ್ತು. ಆದರೆ ಇದುವರೆಗೆ ಮನೆ ಕಟ್ಟಿಸುವ ಜಾಗವಾಗಲಿ, ಮನೆಯ ಕಾಮಗಾರಿಯಾಗಲಿ ನಡೆದಿಲ್ಲ. ಖುದ್ದು ಈ ಕುರಿತು ರೋಹಿತ್ ವೇಮುಲ ತಾಯಿ ರಾಧಿಕಾ ಅವರೇ ಪ್ರತಿಕ್ರಿಯಿಸಿದ್ದು, ಮುಸ್ಲಿಂ ಲೀಗ್ ಇದುವರೆಗೂ ಯಾವುದೇ ಮನೆ ಕಟ್ಟಿಸಿಕೊಟ್ಟಿಲ್ಲ ಎಂದು ಹೇಳಿದ್ದಾರೆ.
ವೇಮುಲ ಆತ್ಮಹತ್ಯೆ ಮಾಡಿಕೊಂಡ ಬಳಿಕ ಮುಸ್ಲಿಂ ಲೀಗ್ ಪಕ್ಷದವರು ಆಗಮಿಸಿ ನಮಗೆ ಮನೆ ಕಟ್ಟಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾರೂ ಪತ್ತೆ ಇಲ್ಲ. ನಾವು ಇಂದಿಗೂ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದು, ರಾಜಕೀಯ ಲಾಭಕ್ಕೋಸ್ಕರ್ ಮುಸ್ಲಿಂ ಲೀಗ್ ಹೀಗೆ ಮಾಡಿದೆ ಎಂದು ದೂರಿದ್ದಾರೆ.
ಇನ್ನು ರೋಹಿತ್ ವೇಮುಲ ಸತ್ತ ಬಳಿಕ ಕರ್ನಾಟಕದಲ್ಲಿ ಆತ ನನ್ನ ಮಗ ಎಂದರು, ಸಹೋದರ ಎಂದರು. ದೇಶಾದ್ಯಂತ ವೇಮುಲನನ್ನು ಬೆಂಬಲಿಸಿ ಪ್ರತಿಭಟನೆಗಳು ನಡೆದವು. ಆತ ದಲಿತ ಎಂಬ ಕಾರಣಕ್ಕಾಗಿ ಇನ್ನಿಲ್ಲದ ಆರೋಪ ಮಾಡಿದರು. ಆದರೆ ಈಗ ರೋಹಿತ್ ವೇಮುಲ ತಾಯಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೂ ಯಾವ ಬಾಡಿಗೆ ಹೋರಾಟಗಾರನೂ ಬೆಂಬಲಕ್ಕೆ ನಿಂತಿಲ್ಲ ಎಂಬುದು ದುರಂತ.
Leave A Reply