18 ಸಾವಿರ ಅಡಿ ಎತ್ತರ ಹಿಮಗಡ್ಡೆಯ ಮೇಲೆ ಯೋಧ ಮಾಡಿ ಸ್ಫೂರ್ತಿ ಸಾರಿದ ಯೋಧರಿಗೊಂದು ನಮನ!
ಭಾರತೀಯ ಯೋಧರೆಂದರೇನೇ ಹಾಗೆ. ಅವರು ದೇಶಕ್ಕಾಗಿ ಯೋರಾಡುವ ಮೂಲಕ ನಮ್ಮೆಲ್ಲರನ್ನು ಹೆಮ್ಮೆಪಡಿಸುವ ಜತೆಗೆ, ದೇಶದ ಗೌರವವನ್ನು ಆಗಸದೆತ್ತರಕ್ಕೆ ಹಾರಿಸಲು ಎಂದಿಗೂ ಮುಂದಾಗುತ್ತಾರೆ. ಆ ಮೂಲಕ ಅವರು ನಮ್ಮ ಮನದಲ್ಲಿ ಅಚ್ಚಳಿಯದೆ ಅಮರರಾಗುತ್ತಾರೆ.
ಇಂತಹ ಹೆಮ್ಮೆಯ ಯೋಧರು ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲೂ ಪಾಲ್ಗೊಳ್ಳುವ ಮೂಲಕ ಸ್ಫೂರ್ತಿ ಸಾರಿದ್ದಾರೆ. ಆ ಮೂಲಕ ದೇಶ ಹಾಗೂ ದೇಶದ ಘನತೆಯ ವಿಷಯ ಬಂದಾಗ ಯೋಧರು ಏನು ಮಾಡಲು ಸಹ ಸಿದ್ಧರು ಎಂಬುದನ್ನು ಸಾರಿ ತೋರಿಸಿದ್ದಾರೆ.
ಹೌದು, ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಪಡೆಯ ಹಿಮವೀರರು ಲಢಾಕ್ ನ 18 ಸಾವಿರ ಅಡಿ ಎತ್ತರದ ಹಿಮಗುಡ್ಡದ ಮೇಲೆ ನಿಂತು ಸೂರ್ಯ ನಮಸ್ಕಾರ ಮಾಡುವ ಮೂಲಕ ಇಡೀ ದೇಶದ ಜನರಿಗೆ ಯೋಗ ಮಾಡಲು ಸ್ಫೂರ್ತಿ, ಉತ್ಸಾಹ ತುಂಬಿದ್ದಾರೆ.
ಅಲ್ಲದೆ ಇದೇ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸರು ಅರುಣಾಚಲ ಪ್ರದೇಶದ ಲೋಹಿತ್ ಪುರದ ದಿಗಾರು ನದಿಯಲ್ಲಿ ಅರ್ಧ ಮುಳುಗಿ ನದಿಯೋಗ ಮಾಡುವ ಮೂಲಕ ಯೋಗದ ಮಹತ್ವದ ಸಾರಿದ್ದಾರೆ. ಮೈ ಕೊರೆಯುವ ಚಳಿ ಇದ್ದರೂ ಮೈ ಮುರಿದು ಯೋಗ ಮಾಡಿ ನಮಗೆಲ್ಲ ಸ್ಫೂರ್ತಿ ತುಂಬಿದ್ದಾರೆ.
ಅಷ್ಟೇ ಭಾರತೀಯ ನೌಕಾಪಡೆಯೂ ಯೋಗ ದಿನಾಚರಣೆಗೆ ಬೆಂಬಲ ಸೂಚಿಸಿದ್ದು, ವಿಶಾಖಪಟ್ಟಣದ ಸಮುದ್ರದಲ್ಲಿ ಭಾರತೀಯ ಯುದ್ಧನೌಕೆ ಐಎನ್ಎಸ್ ಜ್ಯೋಗಿ ಹಡಗಿನಲ್ಲಿ ಪೂರ್ವ ನೌಕಾಪಡೆಯ ಕಮಾಂಡೋಗಳು ಯೋಗ ಮಾಡುವ ಮೂಲಕ ಯೋಗದ ಮಹತ್ವ ಸಾರಿದ್ದಾರೆ. ಒಟ್ಟಿನಲ್ಲಿ ನರೇಂದ್ರ ಮೋದಿ ಅವರು ನೀಡಿದ ಕರೆಗೆ ಇಡೀ ವಿಶ್ವವೇ ಯೋಗ ದಿನ ಆರಿಸುತ್ತಿದ್ದು, ಇದಕ್ಕೆ ಯೋಧರು ಸಹ ಬೆಂಬಲ ನೀಡಿದ್ದು ಶ್ಲಾಘನೀಯವಾಗಿದೆ. ಇವರಿಗೊಂದು ಸೆಲ್ಯೂಟ್ ಇರಲಿ.
Leave A Reply