ಇದು ಎಂಥಾ ಲೋಕವಯ್ಯಾ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ
Posted On June 23, 2018

ಮಂಗಳೂರಿನಲ್ಲಿ ಸಂಪೂರ್ಣವಾಗಿ ಚಿತ್ರಿತವಾಗಿರುವ ಮತ್ತು ಇಲ್ಲಿನ ಕಲಾವಿದರೇ ಅಭಿನಯಿಸಿರುವ ಆದರೆ ವಿಭಿನ್ನ ನಿರೂಪಣೆಯೊಂದಿಗೆ ತಯಾರಾಗಿರುವ “ಇದು ಎಂಥಾ ಲೋಕವಯ್ಯಾ” ಸಿನೆಮಾ ಪೋಸ್ಟ್ ಪ್ರೊಡಕ್ಷನ್ ನ ಅಂತಿಮ ಘಟ್ಟ ತಲುಪಿದೆ. ಮಂಗಳೂರಿನ ಉದ್ಯಮಿ ಮಂಗಲ್ಪಾಡಿ ನರೇಶ್ ನಾಮದೇವ್ ಶೆಣೈಯವರ ಕಡ್ಲೆಕಾಯಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಸಿನೆಮಾವನ್ನು ಸಿತೇಶ್ ಗೋವಿಂದ್ ನಿರ್ಧೇಶಿಸಿದ್ದಾರೆ. 

ಸಿನೆಮಾದಲ್ಲಿ ನಾಯಕ, ನಾಯಕಿ ಇರಲೇಬೇಕು ಎನ್ನುವ ಸಂಪ್ರದಾಯವನ್ನು ಬಿಟ್ಟು ಕಲಾವಿದರು ತಮ್ಮ ಪಾತ್ರಗಳ ಮೂಲಕ ಅದನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ. ಇದು ಎಂಥಾ ಲೋಕವಯ್ಯಾ ಸಿನೆಮಾದಲ್ಲಿ ನಮ್ಮ ನಿಮ್ಮ ನಡುವಿರುವ ಜೀವಿಯೊಂದು ಒಂದು ಮನೆಯೊಳಗೆ ಮತ್ತು ಆಸುಪಾಸಿನಲ್ಲಿ ನಡೆಯುವ ಘಟನೆಗಳಿಗೆ ಹೇಗೆ ಸಾಕ್ಷಿಯಾಗುತ್ತದೆ ಎನ್ನುವುದನ್ನು ತೋರಿಸಲಾಗಿದೆ. ಮಾರ್ಜಾಲದ ಕಣ್ಣುಗಳ ಮೂಲಕ ಚಿತ್ರವನ್ನು ಕಟ್ಟಿಕೊಟ್ಟಿರುವ ನಿರ್ಧೇಶಕರು ಹಾಸ್ಯದ ಹಿನ್ನಲೆಯಲ್ಲಿ ಸಿನೆಮಾವನ್ನು ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ವಾಸ್ತವವನ್ನು ಮೂಡನಂಬಿಕೆಯ ಆಯಾಮದಲ್ಲಿ ಮೂಡಿಸಿ ಪಾತ್ರಗಳು ತಮ್ಮ ಗಂಭೀರ ನಟನೆಯಲ್ಲಿ ಹೇಗೆ ಹ್ಯೂಮರ್ ಹೊರಡಿಸಬಹುದು ಎಂದು ತೋರಿಸಿಕೊಡಲಾಗಿದೆ. ಕರಾವಳಿ ಕರ್ನಾಟಕದಲ್ಲಿರುವ ಮರಳು ಮಾಫಿಯಾದಂತಹ ವಿಷಯಗಳ ನಡುವೆ ಅಗೋಚರತೆ ಮಿಶ್ರಣವಾದರೆ ಹೇಗೆ ಚಿತ್ರ ರಸವತ್ತಾಗಿ ಮೂಡಿಬರುತ್ತದೆ ಎನ್ನುವುದನ್ನು ಇದರಲ್ಲಿ ನೋಡಬಹುದು. ಈ ಚಿತ್ರದಲ್ಲಿ ಪ್ರಾಣಿ, ಮರಗಳು ಕೂಡ ಪಾತ್ರವಾಗಿವೆ.

ಒಂದು ಮೊಟ್ಟೆಯ ಕಥೆಗೆ ಸಹನಿರ್ಧೇಶಕರಾಗಿ ಕೆಲಸ ಮಾಡಿದ ಅನುಭವ ಸಿತೇಶ್ ಗೋವಿಂದ್ ಅವರಿಗಿದೆ. ಚಿತ್ರಕ್ಕೆ ಹೊಸ ಲುಕ್ ಬರಲು ಕಾರಣ ಕನ್ನಡದ ಪ್ರಕಾಶ್ ರೈ ಎಂದೇ ಖ್ಯಾತರಾಗಿರುವ ಗೋಪಿನಾಥ್ ಅವರ ಸಹಜ ಅಭಿನಯ. ಮೈಮ್ ರಾಮದಾಸ್, ದೀಪಕ್ ರೈ ಪಾಣಾಜೆ, ಅರ್ಜುನ್ ಕಜೆ, ವಿಶ್ವನಾಥ ಅಸೈಗೋಳಿ, ಚಂದ್ರಹಾಸ್ ಉಳ್ಳಾಲ್, ಪ್ರಕಾಶ್ ತುಮಿನಾಡು, ಅನುರಾಜ್, ಸುಕನ್ಯಾ, ಪ್ರೀತಿ ಮುತ್ತಪ್ಪ, ಮೈತ್ರಿ ಎಂ ಜೆ ಸಹಿತ ಅನೇಕ ಖ್ಯಾತನಾಮರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. 

- Advertisement -
Trending Now
ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
September 28, 2023
ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
September 27, 2023
Leave A Reply