ಮಸಾಜ್ ಪಾರ್ಲರ್ ಮೇಲೆ ದಾಳಿ:ಶಾಕಿಂಗ್ ಹೇಳಿಕೆ?
ಇತ್ತೀಚಿಗಷ್ಟೆ ಮಂಗಳೂರಿನ ಮೇಯರ್ ಕವಿತಾ ಸನಿಲ್ ನೇತೃತ್ವದಲ್ಲಿ ನಗರದ ವಿವಿಧೆಡೆ ಮಸಾಜ್ ಪಾರ್ಲರ್ ಹಾಗೂ ಸ್ಕಿಲ್ ಗೇಮ್ ಅಡ್ಡೆಗಳ ಮೇಲೆ ದಾಳಿ ನಡೆಯಿತು. ದಾಳಿ ವೇಳೆ ಅಲ್ಲಿ ನಡೆದಂತಹ ಮಾತಿನ ಚಕಮಕಿ, ಮಸಾಜ್ ಮಾಡಿಸಿಕೊಳ್ಳುತಿದ್ದ ಯುವಕರು ಏರಾಬಿರಿ ತಪ್ಪಿಸಿಕೊಳ್ಳಲು ಓಡಿದ್ದು, ಅಲ್ಲಿ ಕೆಲಸ ಮಾಡುತಿದ್ದ ಯುವತಿಯರು ತಮ್ಮ ಮುಖ ಮುಚ್ಚಿಕೊಳ್ಳಲು ಯತ್ನಿಸಿದ ಘಟನೆ ಕೂಡ ನಡೆದಿತ್ತು. ಈ ದೃಶ್ಯಗಳು ಮಾದ್ಯಮಗಳಲ್ಲಿ ಪ್ರಸಾರ ಮಾಡಿ ರುಬ್ಬಿದಾಯ್ತು. ಆದರೆ ಅದಕ್ಕೂ ಮೀರಿ ಅನೇಕ ವಿಚಾರಗಳ ಬಗ್ಗೆ ವಿಷ್ಲೇಷಣೆ ಕೂಡ ನಡಿತ ಇದೆ. ಸಾಮನ್ಯ ಜನರು ಕೂಡ ಯೋಚಿಸ ಬೇಕಾದ ವಿಚಾರ ಕೂಡ ಇಲ್ಲಿದೆ.
ಅಂದು ಏಕಾಏಕಿ ರೈಡ್ ನಡೆದ ಸಮಯದಲ್ಲಿ ಒರ್ವ ಮಹಿಳೆ ಬಿಚ್ಚಿಟ್ಟ ನೈಜ ಸತ್ಯ ಬೆಚ್ಚಿಬೀಳಿಸುವಂತಿತ್ತು.ಒಂದು ಪಕ್ಷ ಆ ಮಹಿಳೆ ಹೇಳಿದ ವಿಚಾರ ಇಲ್ಲಿನ ಅಧಿಕಾರಿಗಳಿಗೆ ಗೊತ್ತಿರಬಹುದು ಅನ್ಕೋಳ್ತೀನಿ. ಯಾಕೆಂದರೆ ಆ ಮಹಿಳೆಯ ಹೇಳಿಕೆ ಹೇಗೆತ್ತು ಅಂತಾಹೇಳಿದರೆ,ಇಲ್ಲಿನ ಅನೇಕ ಅಧಿಕಾರಿಗಳನ್ನು ಈ ಧಂದೆ ಮಾಡುವವರು ಕಬ್ಬಿಣದ ಬೇಡಿಯಿಂದ ಬಂಧಿಸಿದ್ದರೆ ಇನ್ನು ಕೆಲವು ಅಧಿಕಾರಿಗಳನ್ನ ಚಿನ್ನದ ಬೇಡಿಯಿಂದ ಬಂಧಿಸಲಾಗಿದೆ ಅನ್ನೋದು ಅವರ ಮಾತಿನಲ್ಲೆ ಸ್ಪಷ್ಟವಾಗಿತ್ತು.
ಅಷ್ಟಕ್ಕೂ ಆ ಮಹಿಳೆ ಹೇಳಿದ ಸತ್ಯ ಏನು ಗೊತ್ತಾ?
- ನಗರದಲ್ಲಿ ಧಂಧೆಗಳು ನಡೆಯೋ ಅನೇಕ ಪಾರ್ಲರ್, ಹೊಟೇಲ್, ಲಾಡ್ಜ್ಗಳಿವೆ ಅದಕ್ಕೆಲ್ಲಾ ಯಾಕೆ ರೈಡ್ ಮಾಡಿಲ್ಲ ಅನ್ನೋದು? ಇದು ನಿಜಾ ಅಂತಾ ಬುದ್ದಿವಂತ ನಾಗರಿಕಾದ ಮಂಗಳೂರಿಗರಿಗೆ ಗೊತ್ತೆ ಇದೆ. ಈ ಧಂಧೆಗಳು ನಡೆಯೋದು ಇಲ್ಲಿನ ಅಧಿಕಾರಿಗಳಿಗೆ ಗೊತ್ತಿದೆ
- ಆದ್ರೆ ಅವರು ಕೈ ಕಟ್ಟಿ ಕುಳಿತಿದ್ದಾರೆ ಅನ್ನೋ ವಿಚಾರವನ್ನ ಆ ಮಹಿಳೆ ಬಿಚ್ಚಿಡುತ್ತಾರೆ. ನಾವು ತಿಂಗಳಿಗೆ ಮಾಮುಲಿಯನ್ನ ಕೊಡುತ್ತೇವೆ ಅಂತ ಧೈರ್ಯವಾಗಿ ಆ ಮಹಿಳೆ ಹೇಳುತ್ತಾರೆ.
- ಮಾದ್ಯಮದವರ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸುತಿದ್ದ ಮಹಿಳೆ ತನಿಗೆ ಗೊತ್ತಿಲ್ಲದೇ ಅನೇಕ ಸತ್ಯಗಳನ್ನ ಬಿಚ್ಚಿಟ್ಟರು. ಇಲ್ಲಿಂದ ಅನೆಕ ಕ್ಲಬ್ ಗಳಿಗೆ ಹಣ ಹೋಗುತ್ತೆ.
ಇದೆಲ್ಲಾ ಕೇಳಿದಾಗ ಎಲ್ಲರ ಮನದಲ್ಲೂ ಪ್ರಶ್ನೆಗಳು ಉದ್ಭವವಾಗೋದು ಸಹಜ ಯಾಕೆಂದರೆ, ಯಾಕೆ ಈ ರೀತಿಯ ಧಂಧೆಗಳು ನಡೆಯುತ್ತಿದ್ದರೂ ಅಧಿಕಾರಿಗಳಿಗೆ ಗೊತ್ತಾಗುತ್ತಿಲ್ಲ, ಅನೇಕ ದೊಡ್ಡ ಮಟ್ಟದಲ್ಲೂ ನಡೆಯುತ್ತಿರುವ ಈ ಧಂದೆಗೆ ಯಾಕೆ ಅಧಿಕಾರಿಗಳು ಕಡಿವಾಣ ಹಾಕುತ್ತಿಲ್ಲ,ಆ ಮಹಿಳೆ ಹೇಳಿದ ಹಾಗೆ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಕ್ಲಬ್ಗಳಿಗೆ ಮಾಮೂಲಿ ನೀಡುತ್ತೇವೆ ಎಂದು, ಹಾಗಾದರೆ ಯಾವ ಪೊಲೀಸ್ ಅಧಿಕಾರಿಗಳಿಗೆ? ಯಾವ ಕ್ಲಬ್ಗೆ ಮಾಮೂಲಿ ಹೋಗುತ್ತಿವೆ ಅನ್ನೋ ವಿಚಾರ ಕೂಡ ಬೆಳಕಿಗೆ ಬಂದಿಲ್ಲ
ಆದರೆ ದಾಳಿ ನಡಿತು ಕ್ಲಬ್,ಪಾರ್ಲರ್ಗೆ ಬೀಗ ಜಡಿದಾಯ್ತು ಆದರೆ ಅದರ ಹಿಂದೆ ಇದ್ದ ಕರಿ ನೆರಳಿನ ಬಗ್ಗೆ ಎಲ್ಲರೂ ಮರೆತು ಹೋಗಿದ್ದಾರೆ
ಕಿರಣ್ ದೊಂಡೋಲೆ
Leave A Reply