ಭಾರತ ತೇರೆ ತುಕಡೇ ಹೋಂಗೇ ಗ್ಯಾಂಗ್ ನ ಉಮರ್ ಖಲೀದ್ ಗೆ ಜೆಎನ್ ಯು ಪ್ರವೇಶ ನಿಷೇಧ, ಕನ್ನಯ್ಯಗೆ 10 ಸಾವಿರ ದಂಡ
ದೆಹಲಿ: ದೇಶದ ಅನ್ನ ತಿಂದು ಭಾರತದ ಪ್ರತಿಷ್ಠಿತ ವಿಶ್ವವಿದ್ಯಾಲಯವಾದ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕಾಶ್ಮೀರ ಪ್ರತ್ಯೇಕತೆಗೆ ಪ್ರೋತ್ಸಾಹಿಸುವ ಹಾಗೂ ಭಯೋತ್ಪಾದಕ ಅಫ್ಜಲ್ ಗುರುಗೆ ನೀಡಿರುವ ಗಲ್ಲು ಶಿಕ್ಷೆ ವಿರೋಧಿ ಸೇರಿ ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದ ವಿದ್ಯಾರ್ಥಿ ಮುಖಂಡ ಉಮರ್ ಖಲೀದ್ ಗೆ ಜೆಎನ್ ಯು ಉನ್ನತ ಮಟ್ಟದ ಸಮಿತಿ ಜೆಎನ್ ಯು ಪ್ರವೇಶವನ್ನು ನಿಷೇಧಿಸಿದೆ. ಅಲ್ಲದೇ ಅಫ್ಜಲ್ ಗುರುಗೆ ಬೆಂಬಲಿಸಿ ಘೋಷಣೆ ಕೂಗುವ ಆರೋಪದಲ್ಲಿ ಭಾಗಿಯಾಗಿರುವ ಕನ್ನಯ್ಯ ಕುಮಾರ್ ಗೆ 10,000 ರೂಪಾಯಿ ದಂಡವನ್ನು ವಿಧಿಸುವ ಮೂಲಕ ಜೆಎನ್ ಯು ದೇಶವಿರೋಧಿಗಳಿಗೆ ಸ್ಪಷ್ಟ ಸಂದೇಶವನ್ನು ನೀಡಿದೆ.
2016ರಲ್ಲಿ ಜೆಎನ್ ಯು ದಲ್ಲಿ ಕನ್ನಯ್ಯ ಕುಮಾರ ವಿಶ್ವವಿದ್ಯಾಲಯದ ನಿಯಮಗಳನ್ನು ಉಲ್ಲಂಘಿಸಿದ್ದ. ಅಲ್ಲದೇ ಭಯೋತ್ಪಾದಕ ಅಫ್ಜಲ್ ಗುರು ಪರ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಘೋಷಣೆಗಳನ್ನು ಕೂಗಿದ್ದ. ಕನ್ನಯ್ಯಕುಮಾರ ಮತ್ತು ಉಮರ್ ಖಲೀದ್ ಇಬ್ಬರೂ ಜೆಎನ್ ಯು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಗಳಾಗಿ ಅಧ್ಯಯನ ಮಾಡುತ್ತಿದ್ದಾರೆ. ಉಮರ್ ಖಲೀದ್ ಗೆ ವಿವಿ 20,000 ದಂಢ ವಿಧಿಸಿದೆ.
ಕನ್ನಯ್ಯ ಮತ್ತು ಖಲೀದ್ ಜೊತೆಗೆ ಇನ್ನು ಇಬ್ಬರು ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದ ವಿದ್ಯಾರ್ಥಿಗಳನ್ನು ಜೆಎನ್ ಯು ವಿಶ್ವವಿದ್ಯಾಲಯ ಪ್ರವೇಶಕ್ಕೆ ನಿಷೇಧವನ್ನು ಹೇರಲಾಗಿದೆ. ಇವರ ಸಹಪಾಠಿಗಳಾದ ಮುಜೇಬ್ ಬುಟ್ಟೋ ಮತ್ತು ಅನಿರ್ಬನ್ ಭಟ್ಟಾಚಾರ್ಯ ಎಂಬುವವರನ್ನು ಎರಡು ಸೆಮೆಸ್ಟರ್ ಗೆ ನಿಷೇಧ ಹೇರಲಾಗಿದೆ. ಈ ಮೂಲಕ ಜೆಎನ್ ಯ ಸೇರಿ ದೇಶದ ಯಾವುದೇ ವಿಶ್ವವಿದ್ಯಾಲಯದಲ್ಲಿ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸೂಕ್ತ ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಜೆಎನ್ ಯು ರವಾನಿಸಿದೆ.
Leave A Reply