5 ವರ್ಷ ಮಾತ್ರವಲ್ಲ, ಇನ್ನೂ ಹಲವು ಬಾರಿ ಮೋದಿಯವರೇ ಪಿಎಂ ಆಗಬೇಕೆಂದ ಕರ್ನಾಟಕದ ಅರಸ ಯಾರು ಗೊತ್ತಾ?
ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜಕಾರಣಿಗಳಂತಲ್ಲ ಎಂಬುದು ಇಡೀ ವಿಶ್ವಕ್ಕೇ ಗೊತ್ತಿರುವ ಸಂಗತಿ. ಅದೇ ಕಾರಣಕ್ಕೆ ಪ್ರಸ್ತುತ ನರೇಂದ್ರ ಮೋದಿಯವರು ಯಾವುದೇ ದೇಶಕ್ಕೆ ಹೋದರೂ, ಅಲ್ಲಿ ಕೆಂಪುಹಾಸು ಹಾಸಿ ಸ್ವಾಗತಿಸುತ್ತಾರೆ. ಭಾರತದ ಯಾವುದೇ ಮೂಲೆಗೆ ಹೋದರೂ ಲಕ್ಷಾಂತರ ಜನ ಸೇರುತ್ತಾರೆ.
ನರೇಂದ್ರ ಮೋದಿ ಅವರೂ ಅಷ್ಟೇ, ಕಳೆದ ನಾಲ್ಕು ವರ್ಷದಿಂದ ಪ್ರಧಾನಿಯಾಗಿರುವ ಅವರು ಒಂದು ದಿನವೂ ರಜೆ ತೆಗೆದುಕೊಳ್ಳದೆ ದೇಶಕ್ಕಾಗಿ ದುಡಿಯುತ್ತಿದ್ದಾರೆ. ನಾನಾ ಯೋಜನೆಗಳ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸುತ್ತಾರೆ. ಈ ನಾಲ್ಕು ವರ್ಷದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಹಗರಣ ಮಾಡದ ಹಾಗೆ ನೋಡಿಕೊಂಡು, ತಾವೂ ತಿನ್ನದೆ, ಬೇರೆಯವರಿಗೂ ತಿನ್ನಲು ಬಿಡದೆ ಉತ್ತಮ ಆಡಳಿತ ನೀಡುತ್ತಿದ್ದಾರೆ.
ಪ್ರಾಯಶಃ, ಇದೇ ಕಾರಣಕ್ಕೇ ಇರಬೇಕು, ಮೈಸೂರಿನ ಅರಸ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿಕೊಂಡಿದ್ದು, ಈಗ ನೀಡುತ್ತಿರುವ ಐದು ವರ್ಷದ ಆಡಳಿತದ ಜತೆಗೆ, ಇನ್ನೂ ಹಲವು ಬಾರಿ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಬೇಕು ಎಂದಿದ್ದಾರೆ.
ಹೌದು, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಆಡಳಿತ ನೀಡಿದ್ದಾರೆ. ನಾವು ಎಂದಿಗೂ ಉತ್ತಮ ಕೆಲಸಕ್ಕೆ ಬೆಂಬಲ ನೀಡಲಿದ್ದು, ಕಳೆದ ನಾಲ್ಕು ವರ್ಷದಿಂದ ಮೋದಿ ಆಡಳಿತ ನಡೆಸುತ್ತಿರುವುದು ಸಂತಸದ ಸಂಗತಿ. ಐದು ವರ್ಷಕ್ಕೆ ಎಲ್ಲವೂ ಬದಲಾಗಲು ಸಾಧ್ಯವಿಲ್ಲ, ಅವರು ಮತ್ತಷ್ಟು ಅವಧಿಗೆ ಪ್ರಧಾನಿಯಾಗಬೇಕು ಎಂದು ಮಹಾರಾಜರು ತಿಳಿಸಿದ್ದಾರೆ. ಮಹಾರಾಜರ ಮಾತು ಸತ್ಯವಾಗಲಿ, ಮೋದಿ ಅವರಿಂದ ದೇಶದ ಪ್ರಭೆ ಮತ್ತಷ್ಟು ಎತ್ತರಕ್ಕೆ ಹೋಗಲಿ.
Leave A Reply