ಮಹಿಳೆ ವಿರುದ್ಧ ಸುಳ್ಳು ದಾಖಲೆ ನೀಡಿದ ಅಲ್ಪೇಶ, ಹಾರ್ದಿಕ್, ಮೇವಾನಿ ವಿರುದ್ಧ ಪ್ರಕರಣ ದಾಖಲು
ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಸದಾ ಹಲ್ಲು ಮಸೆಯುವ ಗುಜರಾತ್ ನ ಮುಖಂಡ ಹಾರ್ದಿಕ್ ಪಟೇಲ್, ಶಾಸಕರಾದ ಅಲ್ಪೇಶ್ ಠಾಕೂರ ಮತ್ತು ಜಿಗ್ನೇಶ್ ಮೇವಾನಿ, ಇದೀಗ ಗುಜರಾತ್ನಲ್ಲಿರುವ ಬಿಜೆಪಿ ಸರ್ಕಾರ ಅಕ್ರಮ ಸಾರಾಯಿ ಮಾರಾಟ ಮಾಡುವಲ್ಲಿ ವಿಫಲವಾಗಿದೆ ಎಂಬುದನ್ನು ಸಾಬೀತು ಪಡಿಸಲು ಸುಳ್ಳು ದಾಖಲೆ ಸೃಷ್ಟಿಸಿರುವುದು ಬಹಿರಂಗವಾಗಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸದಾ ಮಾಧ್ಯಮಗಳಲ್ಲಿ ಮಿಂಚಬೇಕು ಎಂದು ವಿವಾದಗಳನ್ನು ಸೃಷ್ಟಿಸುತ್ತಲೇ ಎಡವಟ್ಟುಗಳನ್ನು ಮಾಡಿಕೊಳ್ಳುವ ಬಿಜೆಪಿಯ ತ್ರಿವಳಿ ವಿರೋಧಿಗಳಾದ ಶಾಸಕ ಅಲ್ಪೇಶ ಠಾಕೂರ, ಜಿಗ್ನೇಶ್ ಮೇವಾನಿ ಮತ್ತು ಹಾರ್ದಿಕ ಪಟೇಲ್ ವಿರುದ್ಧ ದೂರು ದಾಖಲಾಗಿದೆ. ಮಹಿಳೆಯೊಬ್ಬರ ವಿರುದ್ಧ ಅಕ್ರಮವಾಗಿ ಸಾರಾಯಿ ಮಾರುತ್ತಿದ್ದಾರೆ ಎಂದು ಶಾಸಕರಾದ ಅಲ್ಪೇಶ್ ಠಾಕೂರ, ಜಿಗ್ನೇಶ್ ಮೇವಾನಿ ಮತ್ತು ಹಾರ್ದಿಕ್ ಪಟೇಲ್ ಸುಳ್ಳು ದಾಖಲೆಗಳನ್ನು ನೀಡಿ, ರಾಜ್ಯ ಸರ್ಕಾರ ಅಕ್ರಮ ಸಾರಾಯಿ ಮಾರಾಟ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ, ಹೆಸರು ಪಡೆದುಕೊಳ್ಳಲು ಹಪಾಹಪಿಸಿದ್ದರು.
ಇದೀಗ ಮಹಿಳೆ ಮೂವರ ವಿರುದ್ಧ ತಿರುಗಿ ಬಿದ್ದಿದ್ದು, ಯಾವುದೇ ರೀತಿಯಲ್ಲೂ ಅಕ್ರಮವಾಗಿ ಸಾರಾಯಿ ಮಾರಾಟ ಮಾಡಿಲ್ಲ. ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ನನ್ನಗೆ ಕಿರುಕುಳ ನೀಡಿದ್ದಾರೆ. ನನ್ನ ಮನೆಯಲ್ಲಿ ಎರಡು ಲಿಕ್ಕರ್ ಬಾಟಲಿಗಳನ್ನು ತಂದಿಟ್ಟು, ಅದನ್ನೇ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದಾರೆ ಎಂದು ಸುಳ್ಳು ಸೃಷ್ಟಿಸಿದ್ದಾರೆ. ಅಲ್ಲದೇ ನನಗೆ ವಿನಾಕಾರಣ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದರು. ಅಲ್ಲದೇ ಮಹಿಳೆಗೆ ಭಯಹುಟ್ಟಿಸಿದ್ದರು ಎನ್ನಲಾಗಿದೆ. ಈ ಕುರಿತು ತನಿಖೆ ನಡೆಸಿರುವ ಪೊಲೀಸರು ರಾಜಕೀಯ ಮೈಲೇಜ್ ಪಡೆಯಲು ಹಂಬಲಿಸುತ್ತಿರುವ ಮೂವರು ಮುಖಂಡರ ವಿರುದ್ಧ ಸುಳ್ಳು ದಾಖಲೆ ಸೃಷ್ಟಿ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಉದ್ದೇಶ ಪೂರ್ವಕವಾಗಿ ಸುಳ್ಳು ಸೃಷ್ಟಿ, ಮನೆ ಮೇಲೆ ವಿನಾಕಾರಣ ದಾಳಿ ನಡೆಸಿರುವುದು, ಸಮಾಜಕ್ಕೆ ತಪ್ಪು ಸಂದೇಶ ರವಾನಿಸುವುದು ಸೇರಿ ನಾನಾ ಪ್ರಕರಣಗಳು ದಾಖಲಿಸಲಾಗಿದೆ.
Leave A Reply