ಪದೇ ಪದೆ ಸಹನೆ ಕಳೆದುಕೊಳ್ಳುತ್ತಿರುವುದರ ಸಂಕೇತವೇನು ಕುಮಾರಸ್ವಾಮಿಯವರೇ?
ಮನುಷ್ಯನಿಗೆ ಒಂದು ತಾಳ್ಮೆ, ಸಹನೆಗೆ ಒಂದು ಮಿತಿ ಇರುತ್ತದೆ. ಮಿತಿ ಮೀರಿದರೇ ಮನುಷ್ಯ ಕ್ರೋದಗೊಳ್ಳುತ್ತಾನೆ, ಕ್ಷುದ್ರನಾಗುತ್ತಾನೆ, ಕೆಲವು ವಿಚಿತ್ರ ಮನಸ್ಥಿತಿಯವರು ದಾಳಿ ಮಾಡುತ್ತಾರೆ. ಇನ್ನು ಕೆಲವರು ನಿಶ್ಚಿಂತರಾಗಿದ್ದು, ಸಹಿಸಿಕೊಂಡೇ ಮುನ್ನಡೆಯುತ್ತಾರೆ. ಆದರೆ ರಾಜ್ಯದ ಆರು ಕೋಟಿ ಜನರನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪದೇ ಪದೆ ಸಹನೆ ಕಳೆದುಕೊಂಡು ಮಾತನಾಡುತ್ತಿರುವುದು ಸಹಿಸಲು ಆಗದಂತಾಗಿದ್ದು, ಹಲವು ಅನುಮಾನಗಳು ಮೂಡಿಸುತ್ತಿವೆ.
ಒಬ್ಬ ವ್ಯಕ್ತಿ ಸಹನೆ ಕಳೆದುಕೊಳ್ಳಬೇಕಾದರೇ ಒಂದೋ ತನ್ನಿಂದ ಎದುರಿನವರನ್ನು ಎದುರಿಸಲು ಆಗುತ್ತಿಲ್ಲ, ನನ್ನಿಂದ ನಾನು ಅಂದುಕೊಂಡತೆ ಆಗುವುದಿಲ್ಲ ಎಂಬುದು ಮನದಟ್ಟು ಆದಾಗ ಈ ರೀತಿಯ ವರ್ತನೆ ಸಹಜವಾಗಿ ಬರುತ್ತದೆ. ಇದೀಗ ಕುಮಾರಸ್ವಾಮಿಯವರು ಸಹನೆ ಕಳೆದುಕೊಂದು ಮಾಧ್ಯಮದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸಾಲ ಮನ್ನಾಕ್ಕೆ ಆಗ್ರಹಿಸುತ್ತಿರುವ ಪ್ರತಿಪಕ್ಷಗಳ ಆಗ್ರಹಕ್ಕೆ ‘ನಾನೇನು ಗಿಡ ನೆಟ್ಟಿಲ್ಲ ಎಂದು ಸಿಟ್ಟಿನ ಸ್ಪಷ್ಟೀಕರಣ ನೀಡುತ್ತಿರುವುದು, ಉತ್ತರ ಕರ್ನಾಟಕದವರು ನನಗೆ ಮತ ನೀಡಿಲ್ಲ ಪ್ರಶ್ನಿಸುತ್ತಾರೆ, ಮತ್ತೊಂಡೆ ನಾನೇನು ಪಾಪ ಮಾಡಿದ್ದೇನೆ ಎಂದು ಕಣ್ಣೀರು ಇಡುತ್ತಾರೆ. ಹೀಗೆ ಹಲವು ಬಾರಿ ತಮ್ಮ ಮಾತಿನ ಮೇಲೆ ಹಿಡಿತ ಕಳೆದುಕೊಂಡು ನುಡಿಮುತ್ತುಗಳನ್ನು ಉದುರಿಸುತ್ತಿರುವುದು ನಿಜಕ್ಕೂ ಆತಂಕಕಾರಿ.
ಕುಮಾರಸ್ವಾಮಿ ಅವರು ಒಬ್ಬ ಮನುಷ್ಯ ಅವರಿಗೂ ಸಿಟ್ಟು, ಹತಾಶೆ, ಆಕ್ರೋಶಗಳು ಇರುವುದು ಸಾಮಾನ್ಯ. ಆದರೆ ಅದೆಲ್ಲವನ್ನು ಹಿಡಿತದಲ್ಲಿಕೊಂಡು ಜವಾಬ್ದಾರಿಯುತವಾಗಿ ಮಾತನಾಡಬೇಕಾಗಿರುವುದು ಸಿಎಂ ಕುಮಾರಸ್ವಾಮಿ ಅವರ ಕರ್ತವ್ಯ. ಎಲ್ಲವನ್ನು ಬಿಟ್ಟು ಸದಾ ಮಾಧ್ಯಮಗಳ ಮೇಲೆ, ಪ್ರಶ್ನಿಸಿದವರ ಮೇಲೆ ಹರಿಹಾಯುತ್ತಿರುವುದು, ಕಾರ್ಯಕ್ರಮದಲ್ಲಿ ಕಣ್ಣೀರು ಇಡುತ್ತಿರುವುದು ಮುಖ್ಯಮಂತ್ರಿ ಹುದ್ದೆಗೆ ಶೋಭೆ ತರುವಂತದಲ್ಲ. ಮತ್ತೊಂದೆಡೆ ರಾಜ್ಯದ ದೊರೆಯೇ ಮಾನಸಿಕವಾಗಿ ಕ್ಷುದ್ರಗೊಂಡರೇ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ.
ರಾಜ್ಯದ ಜನರು ಸಂಕಷ್ಟದಲ್ಲಿದ್ದಾಗ ಗಟ್ಟಿಯಾಗಿ ಸ್ಪಂದಿಸುವ, ಸಮಸ್ಯೆಗಳನ್ನು ಎದುರಿಸುವ ಛಾತಿಯನ್ನು ಕುಮಾರಸ್ವಾಮಿಯವರು ಹೊಂದಬೇಕೇ ವಿನಾ:, ಸಿಟ್ಟಾಗುವುದು, ಪ್ರಶ್ನಿಸುವುದು, ಕಣ್ಣೀರಿಡುವುದು ಅವರ ಹುದ್ದೆಗೆ ತಕ್ಕುದಲ್ಲ. ಇನ್ನು ಕುಮಾರಸ್ವಾಮಿ ಅವರ ವರ್ತನೆ ಹಲವು ಅನುಮಾನಗಳನ್ನು ಮೂಡಿಸುತ್ತಿದೆ. ಮುಖ್ಯಮಂತ್ರಿ ಪದೇ ಪದೆ ಸಹನೆ ಕಳೆದುಕೊಳ್ಳುತ್ತಿದ್ದಾರೆ ಎಂದರೇ ಒಂದೋ ಅವರಿಗೆ ಜನರಿಗೆ ನೀಡಿರುವ ಭರವಸೆ ಈಡೇರಿಸಲು ಆಗುತ್ತಿಲ್ಲ, ಇಲ್ಲವೇ ಪರ್ಯಾಯ ಮಾರ್ಗ ಹುಡುಕಲು ತಾವು ಸೋತಿರುವುದಾಗಿ ಅವರೇ ಒಪ್ಪಿಕೊಂಡಂತೆ ಕಾಣುತ್ತಿದೆ.
ತಾವೊಂದು ಸಾಂದರ್ಬಿಕ ಶಿಶು ಎಂದು ಹೇಳುವ ಮೂಲಕ ತಮ್ಮ ನೈತಿಕ ಶಕ್ತಿಯನ್ನೇ ಕುಸಿದುಕೊಂಡಿರುವ ಕುಮಾರಸ್ವಾಮಿ, ನಾನು ಆರು ಕೋಟಿ ಜನರ ಮುಲಾಜಿನಲ್ಲಿಲ್ಲ ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎಂಬುದೇ ಇವರ ಕುಸಿದ ಮನಸ್ಥಿತಿಯ ಅನಾವರಣವಾಗಿತ್ತು. ಇದೀಗ ನಾನೇನು ಹಣದ ಮರ ನೆಟ್ಟಿಲ್ಲ ಎಂದು ಕೇಳುತ್ತಿರುವುದು ಹತಾಶ ಮನಸ್ಥಿತಿಯ ಉನ್ನತ ಹಂತವಲ್ಲದೇ ಮತ್ತೇನಲ್ಲ. ಕುಮಾರ ಸ್ವಾಮಿ ಅವರು 6 ಕೋಟಿ ಜನರ ಪ್ರತಿನಿಧಿಯಾಗಿ ಗಟ್ಟಿ ನಿಲುವುಗಳನ್ನು ತೆಗೆದುಕೊಂಡು, ಸಮಸ್ಯೆಗಳಿಗೆ ಪರ್ಯಾಯ ಮಾರ್ಗ ಹುಡುಕಿಕೊಂಡು ಆಡಳಿತ ನಡೆಸಬೇಕೇ ವಿನಾ: ಕಣ್ಣೀರಿಡುವುದು, ಸಿಟ್ಟಾಗುವುದು ಮಾಡಿದರೇ ರಾಜ್ಯದ ಆಡಳಿತದಲ್ಲಿ ದುಷ್ಪರಿಣಾಮ ಬೀರುವುದು ನಿಶ್ಚಿತ.
Leave A Reply