ನಡುರಸ್ತೆಯಲ್ಲೇ ಹಿರಿಯ ವ್ಯಕ್ತಿಗೆ ಥಳಿಸಿದ ಟ್ರಾಫಿಕ್ ಪೇದೆ!
Posted On August 26, 2018
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಟ್ರಾಫಿಕ್ ಪೊಲೀಸರು ಅಮಾಯಕರ ಮೇಲೆ ಮೃಗಗಳ ರೀತಿಯಂತೆ ಹಲ್ಲೆ ಮಾಡಿ ಗೂಂಡಾಗಿರಿಯನ್ನು ಪ್ರದರ್ಶಿಸಿದ ಆರೋಪ ಕೇಳಿ ಬಂದಿದೆ.
ಚಿಕ್ಕಮಗಳೂರು ನಗರದ ಶೃಂಗಾರ್ ಸರ್ಕಲ್ ನಲ್ಲಿ ಈ ಘಟನೆ ನಡೆದಿದೆ. ದಿನದಿಂದ ದಿನಕ್ಕೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೆಲ್ಮೆಟ್ ಹಾಕದ ಹಿರಿಯ ವ್ಯಕ್ತಿ ಮೇಲೆ ನಡು ರಸ್ತೆಯಲ್ಲಿ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆ.
ನಗರ ಟ್ರಾಫಿಕ್ ಪೊಲೀಸ್ ಠಾಣೆಯ ಪೇದೆ ಸುಭಾಶ್ ಕೃತ್ಯ ಎಸಗಿದ್ದು, ಈ ವೇಳೆ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಹಲ್ಲೆಯ ವಿಡಿಯೋವನ್ನ ಸೆರೆ ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸ್ ಪೇದೆ ಹಲ್ಲೆ ವಿಡಿಯೋವನ್ನು ಡಿಲೀಟ್ ಮಾಡುವಂತೆ ಧಮ್ಕಿ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಪೇದೆ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಪೇದೆ ಅಮಾನತು: ಹೆಲ್ಮೆಟ್ ಹಾಕದ್ದಕ್ಕೆ ಥಳಿಸಿದ್ದ ಪೇದೆ ಸುಭಾಷ್ ಅವರನ್ನು ಚಿಕ್ಕಮಗಳೂರಿನ ಎಸ್‍ಪಿ ಅಮಾನತುಗೊಳಿಸಿ ಆದೇಶ ಪ್ರಕಟಿಸಿದ್ದಾರೆ.
- Advertisement -
Trending Now
ದೇಶದ್ರೋಹಿ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ.
August 30, 2024
Leave A Reply