ವಿಶ್ವಹಿಂದೂ ಪರಿಷತ್ ಮುಖಂಡನಿಗೆ ತಲವಾರು ದಾಳಿ..! ಎ.ಜೆ. ಆಸ್ಪತ್ರೆಗೆ ಬಿ.ಜೆ.ಪಿ ಶಾಸಕರ ದಂಡು..
Posted On September 25, 2018
0

ಮತ್ತೆ ಝಳಪಿಸಿದ ತಲವಾರು.. !!!!
ಮಂಗಳೂರು: ಮೂಡಬಿದ್ರೆಯಲ್ಲಿ ಬೆಳಿಗ್ಗೆ ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಮೇಲೆ ತಲವಾರು ಬೀಸಿದ ಬೆನ್ನಲ್ಲೇ ಇದೀಗ ಮತ್ತೆ ಹಿಂದೂ ಮುಖಂಡರೊಬ್ಬರಿಗೆ ತಲವಾರು ದಾಳಿ ನಡೆಸಿದ ಘಟನೆ ಮಂಗಳೂರು ಹೊರವಲಯದ ಸೂರಲ್ಪಾಡಿಯಲ್ಲಿ ನಡೆದಿದೆ.ಕೈಕಂಬದ ವಿಶ್ವಹಿಂದೂ ಪರಿಷತ್ ವಲಯಾಧ್ಯಕ್ಷ ಹರೀಶ್ ಶೆಟ್ಟಿ ಪೊಳಲಿ ದಾಳಿಗೆ ಒಳಗಾದವರು. ಸೂರಲ್ಪಾಡಿ ಬಳಿ ದುಷ್ಕರ್ಮಿಗಳ ತಂಡ ದಾಳಿ ನಡೆಸಿ ಪರಾರಿಯಾಗಿದೆ. ಸದ್ಯ ಗಂಭೀರ ಸ್ಥಿತಿಯಲ್ಲಿ ಅವರನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಳಿಗ್ಗೆ ಗಂಟಲ್ ಕಟ್ಟೆಯಲ್ಲಿ ನಡೆದ ತಲವಾರು ದಾಳಿಗೆ ಪ್ರತಿಯಾಗಿ ದಾಳಿ ನಡೆಸಿರೋ ಅನುಮಾನ ವ್ಯಕ್ತವಾಗಿದೆ. ಬಜಪೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದಾಳಿ ಬೆನ್ನಲ್ಲೇ ಎ.ಜೆ. ಆಸ್ಪತ್ರೆಗೆ ಬಿ.ಜೆ.ಪಿ ಶಾಸಕರು ಭೇಟಿ ನೀಡಿದರು.ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್,
ಮಂಗಳೂರು ನಗರ ಉತ್ತರ ಶಾಸಕ ಭರತ್ ಶೆಟ್ಟಿ ,ಮೂಡುಬಿದ್ರೆ ಶಾಸಕ ಉಮನಾಥ ಕೋಟ್ಯಾನ್ ಭೇಟಿ ನೀಡಿದರು.
Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
September 17, 2025