ತುಳುನಾಡಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ಡಬಲ್ ಧಮಾಕ….!!!!
ಮಲ್ಪೆ: ಉಡುಪಿ -ಮಲ್ಪೆ- ಕರಾವಳಿ ಪ್ರವಾಸಿಗರ ಪಾಲಿನ ಸ್ವರ್ಗ, ದೇವಾಲಯಗಳು,ಬೀಚ್ ಗಳು ಹೀಗೆ ಹತ್ತು ಹಲವು.ರಜಾ ದಿನಗಳು ಬಂದ್ರೆ ಸಾಕು ಉಡುಪಿಗೆ ದೇಶ, ವಿದೇಶದ ಮೂಲೆ ಮೂಲೆಗಳಿಂದ ಜನ ಬರುವುದು ಸಮಾನ್ಯ. ಕೃಷ್ಣ ನಗರಿಗೆ ಕೃಷ್ಣ ದರುಶಕ್ಕಾಗಿ ಬರುವ ಮಂದಿ ಸಮುದ್ರ ತೀರದ ಅಂದ ಕಣ್ಮನ ತುಂಬಿ ಕೊಳ್ಳದೆ ಹೋಗಲ್ಲ. ಬೀಚ್, ದೇವಸ್ಥಾನ ಮಾತ್ರವಲ್ಲದೆ ಇದೀಗ ಬೋಟ್ ಹೌಸ್ ಸೇರ್ಪಡೆಯಾಗಿದ್ದು .ಪ್ರವಾಸಿಗರಿಗೆ ಈಗ ಡಬಲ್ ಧಮಾಕ.
ಹೌದು ಕೇರಳದಲ್ಲಿ ಪ್ರವಾಸಿಗರಿಗೆ ಲಭ್ಯವಾಗುತ್ತಿದ್ದ ಹಿನ್ನೀರ ಬೋಟ್ ಹೌಸ್ ಗಳು ಇದೀಗ ಉಡುಪಿ ಜಿಲ್ಲೆಯ ಪಡುತೋನ್ಸೆ, ಕೋಡಿಬೆಂಗ್ರೆ ಸ್ವರ್ಣನದಿಯಲ್ಲೂ ಶುರುವಾಗಿದೆ. ವರ್ಷದ ಹಿಂದೆ ಇಲ್ಲಿ ಪಾಂಚಜನ್ಯ ಬೋಟ್‌ಹೌಸ್ ಆರಂಭಗೊಂಡಿದ್ದು, ಈಗ ರಾಜ್ಯದಲ್ಲೇ ದೊಡ್ಡ ಗಾತ್ರದ ತಿರುಮಲ ಕ್ರೂಸ್ ಬೋಟ್‌ಹೌಸ್ ಕೋಡಿಬೆಂಗ್ರೆ ದುರ್ಗಾಪರಮೇಶ್ವರೀ ದೇವಸ್ಥಾನದ ಸಮೀಪ ಪ್ರವಾಸಿಗರಿಗೆ ತೆರೆದುಕೊಂಡಿದೆ.
ಏನಿದೆ ದೋಣಿಮನೆಯಲ್ಲಿ..?
ಸುಮಾರು 200 ಮಂದಿಯನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಈ ಅತ್ಯಾಧುನಿಕ ಶೈಲಿಯ ದೋಣಿ ಮನೆ 120 ಅಡಿ ಉದ್ದ, 20 ಅಡಿ ಅಗಲವಿದೆ. 16 x 11 ಚದರಡಿಯ ಹವಾನಿಯಂತ್ರಿತ ಐಷಾರಾಮಿ ಅಟ್ಯಾಚ್‌ಡ್ 5 ಬೆಡ್ ರೂಮುಗಳು, ಅಡುಗೆ ಕೋಣೆ, ಲಿವಿಂಗ್ ರೂಮ್ ಇದೆ. ಮೇಲ್ಭಾಗದಲ್ಲಿ ಸುಮಾರು 80 ಮಂದಿಗೆ ಕುಳಿತುಕೊಳ್ಳಲು ಅವಕಾಶವಿರುವ 95×20 ಚದರ ಅಡಿಯ ಹಾಲ್ ಇದ್ದು, ಪಾರ್ಟಿಗಳನ್ನು ಆಯೋಜಿಸಬಹುದು. ಬೋಟಿನಲ್ಲಿ 100 ಲೈಫ್ ಜಾಕೆಟ್ ಇರಿಸಲಾಗಿದೆ. ಡೇ ಕ್ರೂಸ್ ಬೆಳಗ್ಗೆ 10ರಿಂದ ಸಂಜೆ 4ರವರೆಗೆ, ನೈಟ್‌ಕ್ರೂಸ್ ಸಂಜೆ 5ರಿಂದ ರಾತ್ರಿ 9.30, ಓವರ್‌ನೈಟ್ ಕ್ರೂಸ್ ಸಂಜೆ 5ರಿಂದ ಮರುದಿನ ಬೆಳಗ್ಗೆ 8.30ರವರೆಗೆ ಪ್ರವಾಸಿಗರಿಗೆ ಅವಕಾಶ ಇದೆ.
ಬಗೆ ಬಗೆಯ ಖಾಧ್ಯಗಳು…
ದೋಣಿಮನೆಯಲ್ಲಿ ಉತ್ತರ, ದಕ್ಷಿಣ ಭಾರತದ ಶೈಲಿಯ ಆಹಾರ ಪದಾರ್ಥಗಳು, ತುಳುನಾಡಿನ ಖಾದ್ಯ ಪದಾರ್ಥಗಳು, ಎಲ್ಲ ರೀತಿಯ ಮೀನಿನ ಖಾದ್ಯ ಆಕರ್ಷಣೆಯಾಗಿರಲಿದೆ. ಜತೆಗೆ ಪ್ರವಾಸಿಗರು ಬಯಸಿದ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ.
14ಕಿ. ಮೀ. ಸುತ್ತಾಟ
ಬೋಟ್‌ಹೌಸ್‌ನಲ್ಲಿ ಕುಳಿತು ಸುವರ್ಣ ನದಿ, ಸೀತಾನದಿ, ಎಣ್ಣೆಹೊಳೆ ನದಿಗಳ ಸಂಗಮ ಸ್ಥಾನ ಡೆಲ್ಟ ಬೀಚ್, ಹಂಗಾರ ಕಟ್ಟೆ, ಬೆಂಗ್ರೆ, ಹೂಡೆ, ಮೂಡುಕುದ್ರು, ಕಲ್ಯಾಣಪುರ ಸಂತೆಕಟ್ಟೆ ಬ್ರಿಜ್ ಸೇರಿದಂತೆ ಸುಮಾರು 14 ಕಿ.ಮೀ. ದೂರ ಸುತ್ತಾಡಬಹುದಾಗಿದೆ. ಈ ಮಧ್ಯೆ ಮೂರ್‍ನಾಲ್ಕು ಕುದ್ರುಗಳನ್ನು ವೀಕ್ಷಿಸಬಹುದಾಗಿದೆ. ಉಡುಪಿಗೆ ಭೇಟಿ ಕೊಟ್ರೆ ಇಲ್ಲಿಗೂ ಒಮ್ಮೆ ಭೇಟಿ ಕೊಡಿ..
Leave A Reply