• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನವರಾತ್ರಿಯಲ್ಲಿ ಮೋದಿ ಉಪವಾಸ ಯಾಕೆ ಗೊತ್ತೆ…???

TNN Correspondent Posted On October 11, 2018


  • Share On Facebook
  • Tweet It

ದೆಹಲಿ- ಪ್ರಧಾನಿ ನರೇಂದ್ರ ಮೋದಿ ಅವರು ವರ್ಷಕ್ಕೆ ಎರಡು ಬಾರಿ ನವರಾತ್ರಿ ಉಪವಾಸ ಮಾಡ್ತಾರೆ. ಇದಾದ ಬಳಿಕ ಮಹತ್ವದ ಹೆಜ್ಜೆ ಇಡ್ತಾರೆ. ಈ ಬಾರಿ ಕೂಡ ಅಷ್ಟೇ ಪಂಚ ಸವಾಲುಗಳನ್ನ ಎದುರಿಸೋಕು ಮೊದಲೇ ನವರಾತ್ರಿ ಉಪವಾಸ ನಡೆಸ್ತಿದ್ದಾರೆ.ಈ ವರ್ಷದ ಶರದ್ ನವರಾತ್ರಿ (ಅಕ್ಟೋಬರ್ 10)ರಿಂದ ಆರಂಭವಾಗಿದ್ದು, ಅ.18ರ ವರೆಗೆ ಅಂದರೆ 9 ದಿನಗಳ ಕಾಲ ಮೋದಿಜೀ ಕಟ್ಟುನಿಟ್ಟಿನ ಉಪವಾಸದಲ್ಲಿರಲಿದ್ದಾರೆ. ಇಡೀ ದಿನದಲ್ಲಿ ಬಿಸಿನೀರು, ಸ್ವಲ್ಪ ಫಲಾಹಾರ ಸೇವಿಸುವ ಪ್ರಧಾನಿ, ಸಂಜೆ ಒಂದು ಲೋಟ ನಿಂಬೆಹಣ್ಣಿನ ರಸ ಬೆರೆಸಿದ ನೀರನ್ನು ಮಾತ್ರ ಕುಡಿಯುವರು. ಕಳೆದ 36 ವರ್ಷಗಳಿಂದ ನವರಾತ್ರಿ ವ್ರತವನ್ನು ಆಚರಿಸುತ್ತಿರುವ ಮೋದಿಯವರು ಇದೇ ವರ್ಷ ಚೈತ್ರ ನವರಾತ್ರಿಯನ್ನೂ ಸಹ ಶ್ರದ್ಧೆಯಿಂದ ಆಚರಿಸಿದ್ದರು. ಈಗ ಶರದ್ ನವರಾತ್ರಿ ಆಚರಿಸ್ತಿದ್ದಾರೆ.

ವ್ರತ ಹಿಂದಿನ ರಹಸ್ಯವೇನು?
ಮೋದಿಯವರು ನವರಾತ್ರಿಯನ್ನು ಈ ವಯಸ್ಸಿನಲ್ಲೂ ಕಠಿಣ ರೀತಿಯಲ್ಲಿ ಆಚರಿಸುವುದರ ಹಿಂದೆ ಒಂದು ರಹಸ್ಯವಿದೆ. ನವರಾತ್ರಿ ವ್ರತ ಕೈಗೊಳ್ಳುವುದಕ್ಕೂ ಮುನ್ನ ಮೋದಿಯವರು ಒಂದು ಅತ್ಯಂತ ಪ್ರಮುಖ ನಿರ್ಣಯದ ಸಾಫಲ್ಯತೆಗಾಗಿ ಅಂಬಾದೇವಿಯಲ್ಲಿ ಬೇಡುವರಂತೆ. ನವರಾತ್ರಿಯ ವ್ರತವನ್ನು ಪರಿಪೂರ್ಣವಾಗಿ ನಡೆಸಿ, ತನ್ನ ಬೇಡಿಕೆ ಸಫಲಗೊಳ್ಳುವಂತೆ ಬೇಡಿದ್ರೆ ಆ ದುರ್ಗಾಮಾತೆ ಕರುಣಿಸದೆ ಇರೋದಿಲ್ಲ ಅಂತ ಭಾವಿಸಲಾಗುತ್ತದೆ. ಅಂತೆಯೇ ಚೈತ್ರ ನವರಾತ್ರಿ ವ್ರತದ ಬಳಿಕವೇ ಮೋದಿ ಜಿಎಸ್‍ಟಿ ಜಾರಿಗೆ ತಂದಿದ್ದರು. ಈಗ ಪಂಚ ರಾಜ್ಯಗಳ ಚುನವಾಣೆ ಇದ್ದು ಯಶಸ್ಸಿಗಾಗಿ ಬೇಡಲಿದ್ದಾರೆ.

2014ರಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದಾಗ್ಲೂ ಮೋದಿ ತಮ್ಮ ನವರಾತ್ರಿ ಉಪವಾಸಕ್ಕೆ ಭಂಗ ತಂದುಕೊಳ್ಳಲಿಲ್ಲ. ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮೋದಿಯವ್ರಿಗಾಗಿ ವಿಶೇಷ ಔತಣಕೂಟ ಏರ್ಪಡಿಸಿದ್ದಾಗ್ಲೂ ಮೋದಿ ಕೇವಲ ನಿಂಬೆ ಪಾನೀಯ ಸ್ವೀಕರಿಸಿ ತಮ್ಮ ವ್ರತ ಪಾಲಿಸಿದ್ದರು. ಕಳೆದ ವರ್ಷ ನವರಾತ್ರಿ ಸಂದರ್ಭ ಮೋದಿಯವರು ತಮ್ಮ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ್ದರು. ತಮ್ಮ ಗೆಲುವಿನ ಅಭಿಯಾನಕ್ಕೆ ಪ್ರಥಮ ಭಾಷ್ಯ ಬರೆದ ಪುಣ್ಯಕ್ಷೇತ್ರದಲ್ಲಿ ಸಮಯ ಕಳೆದಿದ್ದರು.

ಈ ಬಾರಿ ಐದು ರಾಜ್ಯಗಳ ಚುನಾವಣೆ ಇರೋದ್ರಿಂದ ನವರಾತ್ರಿ ಉಪವಾಸ ಬಹಳಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಅದರಲ್ಲೂ ನವರಾತ್ರಿಯ 2ನೇ ದಿನ ಮಾತೆ ದುರ್ಗಿಯನ್ನು, ಪ್ರೀತಿ, ನಿಷ್ಠೆ ಮತ್ತು ಜ್ಞಾನದ ಧ್ಯೋತಕವಾದ ಬ್ರಹ್ಮಚಾರಿಣಿ ಸ್ವರೂಪದಲ್ಲಿ ಆರಾಧಿಸಲಾಗುತ್ತದೆ. ತಾಯಿ ಬ್ರಹ್ಮಚಾರಣಿಯು ಅಪಾರ ಭಾವನಾತ್ಮಕ ಶಕ್ತಿಯನ್ನು ಕೊಡುವಳಂತೆ. ಒಬ್ಬ ವ್ಯಕ್ತಿಯ ಬ್ರಹ್ಮಚರ್ಯದ ಕಾಲವನ್ನು ಪ್ರತಿನಿಧಿಸುವ ಆಕೆ ಅತ್ಯಂತ ಕಷ್ಟಕರ ಸನ್ನಿವೇಶಗಳಲ್ಲೂ ಮನೋಸ್ಥೈರ್ಯ ಕುಗ್ಗದಂತೆ ಕಾಪಾಡುತ್ತಾಳೆ ಅನ್ನೋದು ಮೋದಿ ನಂಬಿಕೆ. ಇಂಥ ಬ್ರಹ್ಮಾಚಾರಣಿ ಅವತಾರದ ದುರ್ಗಿಯನ್ನು ಆರಾಧಿಸುವ ತಾಯಿ ಬ್ರಹ್ಮಚಾರಣಿಯ ಕೃಪೆಗೆ ಪಾತ್ರರಾಗಲು ಸಜ್ಜಾಗಿದ್ದಾರೆ. ಪ್ರತಿಸಲ ನವರಾತ್ರಿ ಆಚರಿಸಿದಾಗ್ಲೂ ಮೋದಿಯವ್ರಿಗೆ ಒಳಿತಾಗಿದೆ ಅಂತ ಹೇಳಲಾಗುತ್ತಿದ್ದು, ಈ ಬಾರಿ ಮೋದಿಯವರ ಮುಂದೆ ಅತಿ ಕಠಿಣ ಸವಾಲೇ ಇದೆ.

ಹೀಗೆ ಅತಿದೊಡ್ಡ ಸವಾಲನ್ನ ಇಟ್ಕೊಂಡು ಮೋದಿ ಕಠಿಣ ಉಪವಾಸ ಶುರುಮಾಡ್ತಿದ್ದಾರೆ. ಬುಧವಾರ ಬೆಳಗ್ಗೆಯಿಂದಲೇ ಉಪವಾಸ ಶುರು. ಇನ್ನು ಮುಂದಿನ ಒಂಬತ್ತು ದಿನಗಳ ಕಾಲ ಮೋದಿಯವರದ್ದು ಶುದ್ಧ ಉಪವಾಸ ಕೈಗೊಳ್ತಾರೆ. ವ್ರತಾಚರಣೆ ಮಾಡೊ ಮೊದಲು ಕೆಲವೊಂದು ಸಂಕಲ್ಪಗಳನ್ನೂ ಮಾಡಲಾಗುತ್ತೆ. ಆ ಉದ್ದೇಶ ಈಡೇರಿಸುವಂತೆ ಆದಿಮಾಯೆಯಯಲ್ಲಿ ಬೇಡಿಕೊಳ್ಳೋದು ವಾಡಿಕೆ. ಅದೇ ರೀತಿ ಮೋದಿ ಕೂಡ ಆ ಕೆಲವೊಂದು ಉದ್ದೇಶ ಇಟ್ಕೊಂಡೇ ವ್ರತಾಚರಣೆ ಮಾಡ್ತಿದ್ದಾರೆ.

ಸದ್ಯ ನವರಾತ್ರಿ ಹಬ್ಬ ಆರಂಭವಾಗುತ್ತಿರಬೇಕಾದ್ರೆ ಇಡೀ ದೇಶವೇ ಆದಿಶಕ್ತಿಯ ಆರಾಧನೆಯಲ್ಲಿ ತೊಡಗಿದೆ. ಅದೇ ರೀತಿ ಮೋದಿ ಕೂಡ ವ್ರತಾಚರಣೆಯಲ್ಲಿ ತೊಡಗ್ತಿದ್ದಾರೆ. ಈ ಬಾರಿ ಮಾತ್ರ ತುಂಬಾ ವಿಶೇಷವಾದ ಉದ್ದೇಶ ಇಟ್ಟುಕೊಂಡೇ ಮೋದಿ ತಪ್ಪಸ್ಸು ನಡೆಸಲಿದ್ದಾರೆ. ಯಾಕಂದ್ರೆ ಮುಂಬರುವ ಪಂಚ ಸವಾಲುಗಳನ್ನ ಮೆಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಮೋದಿಗಿದೆ. ಹೀಗಾಗಿ ಇವೆಲ್ಲವನ್ನ ಮನಸ್ಸಲ್ಲಿಟ್ಟುಕೊಂಡೇ ಮೋದಿ ಈ ಬಾರಿ ಆದಿಶಕ್ತಿಯ ಆರಾಧನೆ ನಡೆಸಲಿದ್ದಾರೆ.

  • Share On Facebook
  • Tweet It


- Advertisement -
#PMMODI


Trending Now
ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
Tulunadu News June 25, 2022
ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
Tulunadu News June 24, 2022
You may also like
ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ…!!!!!!
November 3, 2018
ಮತ್ತೆ ಮೇಲಕ್ಕೇರಿದ ಮೋದಿ ಸರ್ಕಾರ….!!! ಹೇಗೆ..?
November 1, 2018
ಮುಂದಿನ ಲೋಕಸಭೆಯಲ್ಲಿ ಎಂಎಸ್ ಧೋನಿ , ಗಂಭೀರ್ ಬಿ.ಜೆ.ಪಿ ಯಿಂದ ಸ್ಪರ್ಧೆ…!!!
October 23, 2018
Leave A Reply

  • Recent Posts

    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
    • ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!
    • ಭಾರತದಲ್ಲಿ ಬಾಲ ಬಿಚ್ಚಿದ ಹಾಗೆ ಕುವೈಟ್ ನಲ್ಲಿ ನಡೆಯಲ್ಲ!!
    • ಪ್ರೀತಿ ಗೆಹ್ಲೋತ್ ಮಾಡಿದ ಕೆಲಸ ಅಕ್ಷಯ್ ಶ್ರೀಧರ್ ಅವರಿಗೆ ಆಗುತ್ತಾ?
    • ಸೋನಿಯಾ ಮೇಲೆ ಇರುವಷ್ಟು ಕನಿಕರ ರಾಹುಲ್ ಮೇಲೆ ಇಲ್ಲ!
  • Popular Posts

    • 1
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • 2
      ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • 3
      ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • 4
      ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • 5
      ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search