ರೆಹನಾ ಫಾತಿಮಾ ಇರುಮುಡಿಯಲ್ಲಿ ಇತ್ತಂತೆ ರಕ್ತಸಿಕ್ತವಾದ ಸ್ಯಾನಿಟರಿ ಪ್ಯಾಡ್!
ಬೆಂಕಿಯ ಮೇಲೆ ಕೈ ಇಟ್ಟರೆ ಅದು ಸುಡುತ್ತದೆ ಎಂದು ಗೊತ್ತಿದ್ದ ಮೇಲೆಯೂ ಅದರ ಮೇಲೆ ಕೈ ಇಟ್ಟರೆ ಏನಾಗುತ್ತದೆ. ಕೈ ಸುಡುತ್ತದೆ. ಮುಖ ಬೆಂಕಿಯ ಹತ್ತಿರ ತಂದರೆ ಏನಾಗುತ್ತದೆ. ಮುಖ ಸುಡುತ್ತದೆ. ಮುಖ ವಿಕಾರವಾಗುತ್ತದೆ. ಅದು ಗೊತ್ತಿದ್ದೂ ಹಾಗೆ ಮಾಡುವ ಬುದ್ಧಿ”ವಂತೆ”ಯರಿಗೆ ಏನೇನ್ನುತ್ತಾರೆ. ಇಷ್ಟು ಗೊತ್ತಿದ್ದು ಬೆಂಕಿಗೆ ತುಪ್ಪ ಸುರಿಯಲು ಹೋಗುವವರನ್ನು ಏನೆಂದು ಕರೆಯಬೇಕು. ರಾಷ್ಟ್ರೀಯ ಸುದ್ದಿ ವಾಹಿನಿಗಳ ಕೆಲವು ಮಹಿಳಾ ಪತ್ರಕರ್ತರಿಗೆ ಶಬರಿಮಲೆಗೆ ಹೋದರೆ ಒಳ್ಳೆಯ ಫೈಟ್, ಲಾಠಿಚಾರ್ಜ್ ಇರುವ ದೃಶ್ಯಗಳು ಸಿಗುತ್ತವೆ. ಅದರೊಂದಿಗೆ ನಾವು ಮಹಿಳೆಯರಾಗಿರುವುದರಿಂದ ಪಿಣರಾಯಿ ವಿಜಯನ್ ಸಾಹಸ ಸಂಯೋಜನೆಯ ದೃಶ್ಯಗಳಲ್ಲಿ ಪಾಲ್ಗೊಳ್ಳಬಹುದು ಎಂದು ಗೊತ್ತಿದ್ದ ಕಾರಣ ಅಲ್ಲಿಗೆ ಹೋಗಿದ್ದಾರೆ. ಇಂತಹ ದೃಶ್ಯಗಳನ್ನು ಕೆಲವು ರಾಷ್ಟ್ರೀಯ ವಾಹಿನಿಗಳು ಬಿಡುವುದೇ ಇಲ್ಲ. ಕೆಲವು ಪತ್ರಿಕೆಗಳಂತೂ ಮೋದಿಯವರ ಗೂಂಡಾಗಳು ಶಬರಿಮಲೆಗೆ ಮಹಿಳೆಯರು ಹೋಗುವುದಕ್ಕೆ ಅಡ್ಡ ನಿಂತಿದ್ದಾರೆ ಎಂದು ಕೂಡ ಬರೆದರು. ಒಟ್ಟಿನಲ್ಲಿ ಅಲ್ಲಿ ಹೋಗಿಯೇ ಹೋಗುತ್ತೇವೆ ಎಂದು ಹಟ ಹಿಡಿಯುತ್ತಿರುವ ಮಹಿಳೆಯರಿಗೆ ಅಲ್ಲಿ ಗಲಾಟೆ ಆಗಬೇಕೆನ್ನುವ ಉದ್ದೇಶವಲ್ಲದೆ ಬೇರೆ ಏನೂ ಇಲ್ಲ ಎನ್ನುವುದು ನೂರಕ್ಕೆ ನೂರು ಸ್ಪಷ್ಟ. ಒಂದು ವೇಳೆ ನಿಮಗೆ ಅಯ್ಯಪ್ಪ ಸ್ವಾಮಿಯನ್ನು ಪೂಜಿಸಲೇಬೇಕು ಅದು ಕೂಡ ಕೇರಳದಲ್ಲಿಯೇ ಪೂಜಿಸಬೇಕು ಎನ್ನುವುದಿದ್ದರೆ ಕೇರಳದಲ್ಲಿ ಇನ್ನೆರಡು ಅಯ್ಯಪ್ಪ ಸ್ವಾಮಿಯ ದೇವಾಲಯಗಳು ಇವೆಯಲ್ಲ, ಅಲ್ಲಿಗೆ ಯಾಕೆ ಹೋಗಬಾರದು. ಇದರ್ಥ ಇಲ್ಲಿ ಭಕ್ತಿಗಿಂತ ಗಲಾಟೆ, ದೊಂಬಿಗಳಾಗುವುದು ಇವರಿಗೆ ಮೊದಲ ಆದ್ಯತೆ.
ಹಿಂದೂ ದೇವಾಲಯಗಳ ಪಾವಿತ್ರ್ಯ ಕೆಡವಲು ಫಡಿಂಗ್..
ಇದೆಲ್ಲಾ ಒಂದು ಷಡ್ಯಂತ್ರದ ಭಾಗ. ಅಷ್ಟಕ್ಕೂ ರೆಹನಾ ಫಾತಿಮಾ ಎನ್ನುವ ಮುಸ್ಲಿಂ ಮಹಿಳೆಗೆ ನಮ್ಮ ಶಬರಿಮಲೆಯ ಪವಿತ್ರ ಹದಿನೆಂಟು ಮೆಟ್ಟಿಲು ಹತ್ತುವ ಹಟ ಯಾಕೆ? ಅಲ್ಲಿನ ಪಾವಿತ್ರ್ಯತೆಯನ್ನು ಹಾಳುಗೆಡವುಹ ಉದ್ದೇಶವಲ್ಲದೆ ಮತ್ತೇನು? ಅವಳು ಇರಿಮುಡಿ ಕಟ್ಟಿದ್ದೇನೆ ಎಂದು ತಲೆಯಲ್ಲಿ ಇಟ್ಟುಕೊಂಡು ಬಂದ ಗಂಟಿನಲ್ಲಿ ಇದ್ದದ್ದು ರಕ್ತದಿಂದ ತುಂಬಿದ ಸ್ಯಾನಿಟರಿ ನ್ಯಾಪಕಿನ್. ಋತುಚಕ್ರ ವಯಸ್ಸಿನ ಹೆಣ್ಣು ಮಕ್ಕಳು ಶಬರಿಮಲೆಯಿಂದ ದೂರ ಇರಬೇಕು ಎನ್ನುವ ಪರಂಪರೆಯ ನಡುವೆ ಋತುಸ್ರಾವ ಆದ ಸ್ಯಾನಿಟರಿ ಪ್ಯಾಡ್ ಅನ್ನು ಇರುಮುಡಿಯಲ್ಲಿ ಇಟ್ಟು ಬಂದಿದ್ದಾಳೆ ಎಂದರೆ ಅವಳಿಗೆ ಅಲ್ಲಿ ಭಕ್ತಿ ಇತ್ತಾ ಅಥವಾ ಬೇರೆ ಉದ್ದೇಶ ಇತ್ತಾ ಎನ್ನುವುದನ್ನು ನೋಡಬೇಕು. ರೆಹನಾ ಫಾತಿಮಾ ಹಿನ್ನಲೆಯನ್ನು ಕೇಳಲೇಬೇಡಿ. ಬಹಿರಂಗವಾಗಿ ಮಹಿಳೆಗೆ ಕಿಸ್ ಕೊಡುವುದು, ಕಲ್ಲಂಗಡಿ ಹಣ್ಣುಗಳನ್ನು ಎದೆಯ ಭಾಗಕ್ಕೆ ಅಡ್ಡ ಇಟ್ಟು ಫೋಟೋ, ಬಿಕಿನಿಯಲ್ಲಿ ಫೋಟೋ, ಅಶ್ಲೀಲ ಬಟ್ಟೆಗಳಲ್ಲಿ ಫೋಟೋ ಹೀಗೆ ರೆಹನಾ ಎಲ್ಲಾ ರೀತಿಯ ವೇಷಗಳನ್ನು ತೊಟ್ಟಿದ್ದಾಳೆ. ಈಗ 31 ವರ್ಷದ ಇವಳಿಗೆ ಪ್ರಚಾರಕ್ಕೆ ಬರಲು ಸಿಕ್ಕಿರುವುದು ಶಬರಿಮಲೆಯ ವಿಷಯ. ಇವಳ ಹಿನ್ನಲೆ ಮತ್ತು ಫೋಟೋಗಳನ್ನು ನೋಡಿದರೆ ಮುಸ್ಲಿಮರೇ ತಲೆತಗ್ಗಿಸುವಂತಿದೆ. ಹೀಗಿರುವಾಗ ಇವಳು ಮಾತ್ರ ಯಾವುದೇ ನಾಚಿಕೆ ಇಲ್ಲದೆ ಬಹಿರಂಗವಾಗಿ ಓರ್ವ ಮಹಿಳೆ ಏನು ಮಾಡಬಾರದೋ ಅದನ್ನು ಮಾಡುತ್ತಾಳೆ. ಇಷ್ಟಿದ್ದರೆ ರೆಹನಾ, ನಿನಗೆ ಧೈರ್ಯ ಇದೆ ಎಂದಾದರೆ ಯಾವುದಾದರೂ ಮಸೀದಿಗೆ ಹೋಗಿ ಅಲ್ಲಿ ಪುರುಷರು ಪ್ರಾರ್ಥನೆ ಮಾಡುವ ಕಡೆಯಲ್ಲಿ ಅವರ ಪಕ್ಕದಲ್ಲಿಯೇ ಕುಳಿತು ಪ್ರಾರ್ಥನೆ ಮಾಡಬಹುದಲ್ಲ. ಅದು ನಿನ್ನ ಕೈಯಲ್ಲಿ ಆಗುತ್ತದಾ? ಏಕೆ ಮಸೀದಿಯಲ್ಲಿ ಹೋಗಿ ನೀನು ಪುರುಷನ ಬಳಿ ಪ್ರಾರ್ಥನೆ ಸಲ್ಲಿಸಲು ನಿನಗೆ ಬಿಡಲ್ಲ. ನಿನ್ನ ಧರ್ಮದಲ್ಲಿ ಇದಕ್ಕೆಲ್ಲ ಆಸ್ಪದ ಇಲ್ಲ ಅಲ್ಲವಾ. ಹಾಗೆ ನಾವು ಶಬರಿಮಲೆಯಲ್ಲಿ ಎಂಟು ನೂರು ವರ್ಷಗಳಿಂದ ಪೂಜಿಸುತ್ತಿರುವ ಅಯ್ಯಪ್ಪ ಸ್ವಾಮಿ ಅಖಂಡ ಬ್ರಹ್ಮಚಾರಿ. ಅಯ್ಯಪ್ಪ ಅಲ್ಲಿ ಹೋಗಿ ನೆಲೆಸಿರುವುದಕ್ಕೆ ಅದರದ್ದೇ ಆಗಿರುವ ಚರಿತ್ರೆ ಇದೆ. ಅಷ್ಟಕ್ಕೂ ರೆಹನಾ ನೀನು ಅಲ್ಲಿ ಹೋಗಿ ಪ್ರಾರ್ಥಿಸುವುದರಿಂದ ಲೋಕ ಉದ್ಧಾರವಾಗುವುದು ಅಷ್ಟರಲ್ಲಿಯೇ ಇದೆ.
ಗಂಡಸರ ಮೇಲಿನ ಕೋಪವೇ ಇದಕ್ಕೆ ಕಾರಣ…
ಅಷ್ಟಕ್ಕೂ ರೆಹನಾ ಹಿನ್ನಲೆ ಏನು ಎಂದು ನೋಡಿದರೆ ದೇವರು, ಧರ್ಮ ಎನ್ನುವ ವಿಷಯಕ್ಕಿಂತ ಅವಳು ಪುರುಷ ದ್ವೇಷಿ. ಅವಳ ತಂದೆ ತೀರಿಕೊಂಡ ನಂತರ ಆಕೆ ತನ್ನ ತಂಗಿ ಮತ್ತು ತಾಯಿಯೊಂದಿಗೆ ವಾಸಿಸುತ್ತಿದ್ದಳು. ಮನೆಯಲ್ಲಿ ಯಾವುದೇ ಗಂಡಸರಿಲ್ಲದೇ ಇರುವುದರಿಂದ ಊರಿನ ಕೆಲವು ಕುಡುಕರು ಕಂಠಪೂರ್ತಿ ಕುಡಿದು ಇವಳ ಮನೆಯ ಬಳಿ ಬಂದು ಕೆಟ್ಟದಾಗಿ ಇವರನ್ನು ಕರೆಯುತ್ತಿದ್ದರು. ಕೆಲವರು ಕತ್ತಲಾಗುತ್ತಿದ್ದಂತೆ ಮನೆಯ ಒಳಗೆ ನುಗ್ಗುತ್ತಿದ್ದರು. ರೆಹನಾ ಎಷ್ಟು ಗೋಗರೆದರೂ ಅಕ್ಕಪಕ್ಕದ ಯಾರೂ ಕೂಡ ಇವರ ನೆರವಿಗೆ ಬಂದಿರಲಿಲ್ಲ. ಇದರಿಂದ ರೆಹನಾ ಕ್ರಮೇಣ ಪುರುಷರನ್ನು ದ್ವೇಷಿಸಲು ಶುರು ಮಾಡಿದಳು. ಇದು ಈಗ ಇಲ್ಲಿಯ ತನಕ ಬಂದು ತಲುಪಿದೆ. ಇನ್ನು ಶಬರಿಮಲೆಯ ಮೆಟ್ಟಿಲು ಹತ್ತಲೇಬೇಕು ಎಂದು ಬೊಬ್ಬೆ ಹೊಡೆಯುತ್ತಿರುವ ಇಬ್ಬರು ಕ್ರಿಶ್ಚಿಯನ್ ಹೆಂಗಸೆಂದರೆ ಕವಿತಾ ಕೋಶಿ ಹಾಗೂ ಮೇರಿ ಸ್ವೀಟ್. ಕೈಯಲ್ಲಿ ಬೀರ್ ಬಾಟಲ್ ಹಿಡಿದು ಫೋಟೋಗೆ ಫೋಸ್ ಕೊಡುವ ಇವರಿಗೆ ದೇವಸ್ಥಾನ ಯಾಕೆ ಬೇಕು? ಇಂತಹ ತಲೆಗೆಟ್ಟಿರುವ ಹೆಂಗಸರನ್ನು ಕಳುಹಿಸಲು ಪಿಣರಾಯಿ ಸರಕಾರ ಮಿಲಿಟರಿ ಸಮವಸ್ತ್ರ ಕಳುಹಿಸಿಕೊಟ್ಟಿದೆ. ಅದನ್ನು ತೊಟ್ಟು ಹೆಲ್ಮೆಟ್ ಧರಿಸಿ ಇವರು ರಕ್ಷಣೆಯಲ್ಲಿ ಹೋಗಿದ್ದಾರೆ. ದೇವರನ್ನು ಏಕಾಗ್ರತೆಯಲ್ಲಿ ಪ್ರಾರ್ಥಿಸಬೇಕು ಎನ್ನುತ್ತಾರೆ. ಇಷ್ಟು ಗಲಾಟೆ, ದೊಂಬಿ ಮಾಡಿ ಹೋಗುವ ಅಗತ್ಯ ಇದೆಯಾ? ನಿಜ ಹೇಳಬೇಕೆಂದರೆ ಅಯ್ಯಪ್ಪ ಸ್ವಾಮಿ ತುಂಬಾ ಶಕ್ತಿವಂತ. ಸರಿಯಾಗಿ ವ್ರತ ಮಾಡದೇ ಅಲ್ಲಿ ಹೋಗಿ ಬಂದ ಪುರುಷರೇ ನಂತರ ಜೀವನದಲ್ಲಿ ಅನುಭವಿಸಬಾರದ್ದೇಲ್ಲ ಅನುಭವಿಸಿದ್ದಾರೆ, ಇನ್ನೂ ಅನುಭವಿಸುತ್ತಿದ್ದಾರೆ. ಅದು ಇವರಿಗೆ ಗೊತ್ತಿಲ್ಲ ಅಷ್ಟೇ!
Leave A Reply