• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನನ್ನಿಂದಲೇ ಸಂಘಟನೆ ಎನ್ನುವ ಅಹಂಕಾರ ಬಂದರೆ ಕೇಶವ ಕೃಪಾ ಗಮನಿಸುತ್ತದೆ!!

hanumantha kamath Posted On December 6, 2018


  • Share On Facebook
  • Tweet It

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿಂದೂ ಪರ ಅಲ್ಲ, ಹಿಂದೂ ಯುವಕರು ಹತ್ಯೆಯಾದರೆ ಆರ್ ಎಸ್ ಎಸ್ ಗೆ ಖುಷಿಯಾಗುತ್ತದೆ ಎಂದು ಮಹೇಂದ್ರ ಕುಮಾರ್ ಎನ್ನುವ ವ್ಯಕ್ತಿ ಮೊನ್ನೆ ಡಿಸೆಂಬರ್ 2 ರಂದು ಮಂಗಳೂರಿನಲ್ಲಿ ಕಮ್ಯೂನಿಸ್ಟರು ಏರ್ಪಡಿಸಿದ ಜನನುಡಿ ಎನ್ನುವ ಕಾರ್ಯಕ್ರಮದಲ್ಲಿ ಬಂದು ಮಾತನಾಡಿ ಹೋಗಿದ್ದಾರೆ.

ಮಹೇಂದ್ರ ಕುಮಾರ್ ಅವರು ಬಜರಂಗದಳದಲ್ಲಿ ಹತ್ತು ವರ್ಷಗಳ ಹಿಂದೆ ರಾಜ್ಯ ಸಂಚಾಲಕರಾಗಿದ್ದರು. ನಂತರ ಅದನ್ನು ಬಿಟ್ಟು ಜಾತ್ಯಾತೀತ ಜನತಾದಳ ಸೇರಿಕೊಂಡರು. ಕೆಲವು ವರ್ಷಗಳಿಂದ ಹೋದ ಕಡೆ ಎಲ್ಲ ಸಂಘವನ್ನು ಮತ್ತು ಅದರ ಪರಿವಾರ ಸಂಘಟನೆಗಳ ಬಗ್ಗೆ ಟೀಕೆ ಮಾಡುತ್ತಾ ಓಡಾಡಿಕೊಂಡಿದ್ದಾರೆ. ಇವರು ಬಜರಂಗದಳದಲ್ಲಿ ರಾಜ್ಯ ಸಂಚಾಲಕರಾಗಿದ್ದ ಕಾರಣ ಇವರನ್ನು ಕರೆಸಿ ಭಾಷಣ ಮಾಡಿಸುವುದು ಈಗ ಕೇಸರಿ ವಿರೋಧಿಗಳಿಗೆ ಖುಷಿಯ ವಿಚಾರ. ಅವರಿಗೂ ಗೊತ್ತು. ಇಂತವರು ಭಾಷಣ ಮಾಡದೇ ಹೋದರೆ ಅವರ ಕಾರ್ಯಕ್ರಮ ಎಲ್ಲಿಯೂ ಸುದ್ದಿಯಾಗುವುದಿಲ್ಲ. ಅದೇ ಇವರು ಬಂದು ಮಾತನಾಡುವುದರಿಂದ ಒಂದಿಷ್ಟು ಮಾಧ್ಯಮಗಳು ಅದನ್ನೇ ಸುದ್ದಿ ಮಾಡುತ್ತವೆ. ಇದರಿಂದ ಎಡಪಂಥಿಯರಿಗೂ ಬಿಟ್ಟಿ ಪ್ರಚಾರ ಸಿಗುತ್ತದೆ. ನಾಲ್ಕು ಜನ ಆ ನ್ಯೂಸ್ ಓದುತ್ತಾರೆ, ನೋಡುತ್ತಾರೆ. ಹೀಗೆಗೆ ಆಯಿತಂತೆ ಎನ್ನುತ್ತಾರೆ. ಮಹೇಂದ್ರ ಕುಮಾರ್ ಮಾತನಾಡಿದರಂತೆ, ಜನನುಡಿಯಲ್ಲಿ ಅಂತೆ ಎಂದು ಪ್ರಚಾರ ಆಗುತ್ತದೆ. ಕಮ್ಯೂನಿಸ್ಟರಿಗೂ ಅಷ್ಟೇ ಬೇಕಾಗಿರುವುದು. ಈ ಮೂಲಕ ಅವರ ಜನಪ್ರಿಯತೆ ಹೆಚ್ಚಾಗುವುದು ಅವರ ಗುರಿ ವಿನ: ಮಹೇಂದ್ರ ಕುಮಾರ್ ಇರಲಿ, ನಿಕೇತ್ ರಾಜ್ ಆಗಲಿ, ಕೊನೆಗೆ ಪ್ರಕಾಶ್ ರಾಜ್ ಮೇಲಾಗಲಿ ಅವರಿಗೆ ಪ್ರೀತಿ ಇಲ್ಲ.

ಹಳಸಿದ ಅಡುಗೆ ತಿನ್ನುವ ಕರ್ಮ ಕಮ್ಯೂನಿಸ್ಟರದ್ದು…

ಅಷ್ಟಕ್ಕೂ ಮಹೇಂದ್ರ ಕುಮಾರ್ ಅವರಿಗೂ ಇದು ತಮ್ಮನ್ನು ಕಮ್ಯೂನಿಸ್ಟರು ಬಳಸುವುದು ಎನ್ನುವುದು ಗೊತ್ತಿದೆ. ಅವರಿಗೆ ಸದ್ಯ ಪ್ರಚಾರದ ಅವಶ್ಯಕತೆ ಇರಬಹುದು. ಅದಕ್ಕಾಗಿ ಇಂತವರು ಕರೆದಾಗ ಓಡಿ ಬಂದು ಬಿಡುತ್ತಾರೆ. ಇಷ್ಟಕ್ಕೂ ಮಹೇಂದ್ರ ಕುಮಾರ್ ಮಾತನಾಡುವುದು ಅಪ್ಪಟ ನಿಜ ವಿಷಯವಾ? ಅಥವಾ ವೈಭವೀಕರಣ ಮಾಡಿ ಹೇಳದೇ ಹೋದರೆ ತಮ್ಮನ್ನು ಯಾರೂ ಕೂಡ ಗಂಭೀರವಾಗಿ ಸ್ವೀಕರಿಸುವುದಿಲ್ಲ ಎಂದು ಅವರಿಗೆ ಗೊತ್ತಿರುವುದರಿಂದ ಅವರು ಅದನ್ನು ಹಾಗೆ ರಸವತ್ತಾಗಿ ಹೇಳುತ್ತಾರಾ ಎನ್ನುವುದನ್ನು ಕಮ್ಯೂನಿಸ್ಟರು ಯೋಚಿಸುವುದೇ ಇಲ್ಲ. ಒಬ್ಬ ವ್ಯಕ್ತಿ ಒಂದು ಸಂಘಟನೆಯಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಒಂದು ತತ್ವ, ಸಿದ್ಧಾಂತದ ರಕ್ಷಣೆಗಾಗಿ ಕೆಲಸ ಮಾಡುತ್ತಾ ಇದ್ದರೆ ಆತ ತನಗೆ ಯಾವತ್ತೋ ಒಂದು ದಿನ ಕೆಲಸ ಮಾಡುವ ಆಸಕ್ತಿ ಕುಂದಿದರೆ ಅಥವಾ ಬೇರೆ ಕಾರಣಕ್ಕೆ ಸಂಘಟನೆಯಿಂದ ಹೊರಗೆ ಬರಬೇಕಾದರೆ ಸಂಘಟನೆಯ ಒಳ್ಳೆಯದು ಬಯಸಿ ತನ್ನ ಪಾಡಿಗೆ ತಾನು ಇರುತ್ತಾನೆ ವಿನ: ಹೋದ ಕಡೆಯಲ್ಲೆಲ್ಲ ತನ್ನ ಹಳಸಿದ ಅಡುಗೆಯನ್ನು ಬಡಿಸುತ್ತಾ ಹೋಗುವುದಿಲ್ಲ.

ಕರ್ಮಣ್ಯೇ ವಾದಿಕಾರಸ್ತೆ..

ಅಷ್ಟಕ್ಕೂ ಒಂದು ಸಂಘಟನೆಯ ಮುಖಂಡ ಯಾಕೆ ಸಂಘಟನೆಯನ್ನು ಬಿಡುತ್ತಾನೆ ಮತ್ತು ಪ್ರಾರಂಭದಲ್ಲಿ ಯಾಕೆ ಸೇರಿರುತ್ತಾನೆ ಎನ್ನುವುದು ಪ್ರಶ್ನೆ. ಬಜರಂಗದಳ, ವಿಶ್ವ ಹಿಂದೂ ಪರಿಷತ್ ಯಾವತ್ತೂ ಕೂಡ ಬಿಜೆಪಿಯಲ್ಲಿ ಶಾಸಕ, ಸಂಸದ ಆಗಲು ಇರುವ ಮೆಟ್ಟಿಲುಗಳಲ್ಲ ಎನ್ನುವುದನ್ನು ಅದಕ್ಕೆ ಸೇರುವ ಮೊದಲೇ ಒಬ್ಬ ಕಾರ್ಯಕರ್ತ ಅಂದುಕೊಳ್ಳಬೇಕು. ಒಂದು ವೇಳೆ ತಾನು ಮಾಡಿದ ಕೆಲಸಕ್ಕೆ ಸರಿಯಾಗಿ ಆತನಿಗೆ ಶಾಸಕ, ಸಂಸದ ಸ್ಥಾನ ಹುಡುಕಿ ಬಂದರೆ ಅದು ಬೇರೆ ವಿಷಯ. ಅದರ ಬದಲು ಮುಂದಿನ ಐದು ವರ್ಷಗಳ ನಂತರ ಆಗುವ ಚುನಾವಣೆಯಲ್ಲಿ ಟಿಕೆಟ್ ಸಿಗಲು ಇವತ್ತು ಒಬ್ಬ ಸಂಘದ ಶಾಖೆಯಲ್ಲಿ ಚಡ್ಡಿ ಧರಿಸಿ ಪ್ರಾರ್ಥನೆಗೆ ನಿಲ್ಲುತ್ತಾನೆ ಎಂದರೆ ಅವನಿಗಿಂತ ಮೂರ್ಖ ಬೇರೆ ಯಾರೂ ಇಲ್ಲ. ಹಾಗಾದರೆ ಕೆಲಸ ಮಾಡುವವರು ಬೇರೆ, ಅಧಿಕಾರ ಅನುಭವಿಸುವವರು ಬೇರೆಯಾ ಎಂದು ಯಾರಾದರೂ ಕೇಳಬಹುದು. ನೀವು ಒಳ್ಳೆಯ ಮನಸ್ಸಿನಿಂದ ದೇಶಸೇವೆ ಮಾಡಿದರೆ ನಿಮಗೆ ಶಾಸಕ, ಸಂಸದ ಸ್ಥಾನಕ್ಕಿಂತ ಉತ್ತಮ ಸ್ಥಾನಮಾನ ಹುಡುಕಿ ಬರಬಹುದು. ಇನ್ನು ಕರ್ಮಣ್ಯೆ ವಾದಿಕಾರಸ್ತೆ ಎನ್ನುವ ಶ್ಲೋಕವನ್ನು ಬದುಕಿನಲ್ಲಿ ಅಳವಡಿಸಿ ಬೆಳೆಯುವ ಸಂಸ್ಕೃತಿ ನಮ್ಮದು. ಮನಸ್ಸಿದ್ದರೆ ಸಂಘಟನೆಯಲ್ಲಿ ಸೇರಿ ಸೇವೆ ಸಲ್ಲಿಸಿ. ಅಧಿಕಾರ ಸಿಗುತ್ತೆ ಎಂದು ಭ್ರಮೆಯಲ್ಲಿ ಬಂದರೆ ನೀವು ನಾಳೆ ಅದು ಸಿಗದಿದ್ದರೆ ನಿರಾಶೆಗೆ ಒಳಗಾಗುತ್ತೀರಿ. ಕೆಲವರು ಬೈಯುತ್ತಾ ತಿರುಗುತ್ತಾರೆ. ಕೆಲವರು ಗೊಣಗುತ್ತಾ ಇದ್ದುಬಿಡುತ್ತಾರೆ. ಆದ್ದರಿಂದ ಅದು ಸರಿಯಲ್ಲ.

ಇನ್ನು ಮಹೇಂದ್ರ ಕುಮಾರ್ ಸಂಘದವರು ಮೈಂಡ್ ವಾಶ್ ಮಾಡುತ್ತಾರೆ ಎನ್ನುವ ಅರ್ಥದ ಮಾತುಗಳನ್ನು ಆಡಿದ್ದಾರೆ. ಹಾಗಾದರೆ ಒಬ್ಬ ಸಾಮಾನ್ಯ ಬಜರಂಗದಳ ಕಾರ್ಯಕರ್ತರಾಗಿ ರಾಜ್ಯ ಸಂಚಾಲಕ ತನಕ ಮಹೇಂದ್ರ ಕುಮಾರ್ ಬೆಳೆದು ಬರುವಾಗ ಅವರ ಬಳಿ ಬಂದಂತಹ ಸಾವಿರಾರು ಯುವಕರನ್ನು ಬಜರಗದಳಕ್ಕೆ ಸೇರುವಂತೆ, ಕೆಲಸ ಮಾಡುವಂತೆ ಪ್ರೇರೆಪಿಸಿದರಲ್ಲ, ಅದು ಮೈಂಡ್ ವಾಶ್ ಅಲ್ವಾ? ಒಬ್ಬ ನಾಯಕ ತನ್ನಿಂದ ಸಂಘ, ತನ್ನಿಂದ ಬಜರಂಗದಳ, ತನ್ನಿಂದ ವಿಶ್ವ ಹಿಂದೂ ಪರಿಷತ್, ನಾನು ಇಲ್ಲದಿದ್ದರೆ ಇವರಿಲ್ಲ ಎಂದು ಯಾವಾಗ ಅಂದುಕೊಳ್ಳುತ್ತಾನೋ ಅದು ಅವನ ಅಹಂಕಾರದ ಮೊದಲ ಹೆಜ್ಜೆ. ಮಹೇಂದ್ರ ಕುಮಾರ್ ಮನಸ್ಸು ಒಂದು ಕಾಲದಲ್ಲಿ ಹೇಗೆ ಇತ್ತು ಎಂದರೆ ನಾನು ಇಲ್ಲದಿದ್ದರೆ ಬಜರಂಗದಳವೇ ಇಲ್ಲ. ಅವರಿಗೆ ಗೊತ್ತಿರಲಿಲ್ಲ. ಕೇಶವ ಕೃಪಾದ ಒಳಗೆ ಕುಳಿತ ಹಿರಿಯರು ಮನಸ್ಸು ಮಾಡಿದರೆ ಒಬ್ಬ ಮುಖ್ಯಮಂತ್ರಿಯನ್ನೇ ಮನೆಗೆ ಕಳುಹಿಸಿಬಿಡಬಲ್ಲರು, ಅವರಿಗೆ ಬಜರಂಗದಳದ ಸಂಚಾಲಕ ಯಾವ ಲೆಕ್ಕ!

  • Share On Facebook
  • Tweet It


- Advertisement -


Trending Now
ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
hanumantha kamath June 24, 2022
ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
hanumantha kamath June 24, 2022
Leave A Reply

  • Recent Posts

    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
    • ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!
    • ಭಾರತದಲ್ಲಿ ಬಾಲ ಬಿಚ್ಚಿದ ಹಾಗೆ ಕುವೈಟ್ ನಲ್ಲಿ ನಡೆಯಲ್ಲ!!
    • ಪ್ರೀತಿ ಗೆಹ್ಲೋತ್ ಮಾಡಿದ ಕೆಲಸ ಅಕ್ಷಯ್ ಶ್ರೀಧರ್ ಅವರಿಗೆ ಆಗುತ್ತಾ?
    • ಸೋನಿಯಾ ಮೇಲೆ ಇರುವಷ್ಟು ಕನಿಕರ ರಾಹುಲ್ ಮೇಲೆ ಇಲ್ಲ!
    • ಪಚ್ಚನಾಡಿಯ ದಲಿತರ ಜಾಗದಲ್ಲಿ ಕಟ್ಟಿದ ಮನೆಗಳಿಗೆ ಯಾರು ಗತಿ!
  • Popular Posts

    • 1
      ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • 2
      ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • 3
      ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • 4
      ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • 5
      ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search