• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮಂಗಳೂರು-ಮೂಡಬಿದ್ರೆ-ಕಾರ್ಕಳ ಸರಕಾರಿ ಬಸ್ಸುಗಳಿಗೆ ಓಡಲು ಮುಹೂರ್ತ?

Hanumantha Kamtha Posted On December 19, 2018
0


0
Shares
  • Share On Facebook
  • Tweet It

ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ನಡೆಯಲಿದೆ. ನನ್ನ ಮಟ್ಟಿಗೆ ಇದು ಪ್ರಮುಖ ಸಭೆ. ಯಾಕೆಂದರೆ ಈ ಸಭೆಯಲ್ಲಿ ಎರಡು ವಿಷಯಗಳು ಅನುಷ್ಟಾನಕ್ಕೆ ಬರಬಹುದು ಎಂಬ ನಿರೀಕ್ಷೆ. ಮೊದಲನೇಯದಾಗಿ ಮಂಗಳೂರು-ಮೂಡಬಿದ್ರೆ- ಕಾರ್ಕಳ ರೂಟಿನಲ್ಲಿ ಇಲ್ಲಿಯ ತನಕ ಯಾವುದೇ ಸರಕಾರಿ ಬಸ್ಸುಗಳು ಇರಲೇ ಇಲ್ಲ. ನೀವು ಮಂಗಳೂರಿನಿಂದ ಮೂಡಬಿದ್ರೆಗೆ ಹೋಗಿ ಬರುವವರಾದರೆ ಖಾಸಗಿ ಬಸ್ಸುಗಳನ್ನೇ ಅವಲಂಬಿಸಬೇಕಾಗಿತ್ತು. ಹಾಗೆ ಮೂಡಬಿದ್ರೆಯಿಂದ ಕಾರ್ಕಳ ಹಾಗೆ ಕಾರ್ಕಳದಿಂದ ಮೂಡಬಿದ್ರೆಯಾಗಿ ಮಂಗಳೂರಿಗೆ ಬರುವವರಿಗೆ ಸರಕಾರಿ ಬಸ್ಸಿನ ವ್ಯವಸ್ಥೆ ಇರಲೇ ಇಲ್ಲ. ಇದಕ್ಕೆ ಬಹುಶ: ನಾಳೆ ಮುಕ್ತಿ ಸಿಗಲಿದೆ. ಆ ರೂಟಿನಲ್ಲಿ ಎಂಟು ಸರಕಾರಿ ಬಸ್ಸುಗಳನ್ನು ಓಡಿಸಲು ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದಕ್ಕೆ ಒಪ್ಪಿಗೆ ಸಿಕ್ಕರೆ ಒಂದು ಹೊಸ ಇತಿಹಾಸ ನಿರ್ಮಾಣವಾಗಬಹುದು. ಆದರೆ ಆಗುತ್ತಾ ಎನ್ನುವುದು ಪ್ರಶ್ನೆ. ಯಾಕೆಂದರೆ ಖಾಸಗಿ ಬಸ್ಸಿನ ಮಾಲೀಕರು ನಾಳೆ ತಮ್ಮ ದಂಡಿನೊಂದಿಗೆ ಬರಲಿದ್ದಾರೆ. ಅವರ ವಕೀಲರು ಫೈಲ್ ಗಳೊಂದಿಗೆ ಆಗಮಿಸಲಿದ್ದಾರೆ. ಸರಕಾರಿ ಬಸ್ಸುಗಳು ಆ ರೂಟಿನಲ್ಲಿ ಹೋಗಲು ಬಿಡಲೇಬಾರದು ಎಂದು ಸಿಂಗಲ್ ಏಜೆಂಡಾದಲ್ಲಿ ಅವರು ಹೋರಾಟ ನಡೆಸಲಿದ್ದಾರೆ. ಏಕೆಂದರೆ ಕಳೆದ ಬಾರಿ ನರ್ಮ್ ಬಸ್ಸುಗಳು ಮಂಗಳೂರಿಗೆ ಮೂವತ್ತೈದು ಮಂಜೂರು ಆಗಿದ್ದವು. ಅದರಲ್ಲಿ ಹದಿನಾಲ್ಕು ಬಸ್ಸುಗಳಿಗೆ ರಸ್ತೆಗಿಳಿಯಲು ಇನ್ನೂ ಕೂಡ ಸಾಧ್ಯವಾಗಿಲ್ಲ. ಕಾರಣ ಈ ಖಾಸಗಿ ಬಸ್ಸು ಮಾಲೀಕರ ಲಾಬಿ. ಆದ್ದರಿಂದ ನಾಳೆಯ ಬಗ್ಗೆ ನಿಮ್ಮ ಹಾಗೆ ನನಗೂ ಕುತೂಹಲವಿದೆ. ಅದರೊಂದಿಗೆ ಇನ್ನೊಂದು ಸಾರಿಗೆ ಇಲಾಖೆಯಿಂದ ಪ್ರಸ್ತಾವನೆ ಏನೆಂದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರಿನ ಅನೇಕ ತಾಣಗಳಿಗೆ ಸರಕಾರಿ ಬಸ್ಸಿನ ವ್ಯವಸ್ಥೆ ಆಗಬೇಕು ಎನ್ನುವ ಆಗ್ರಹ ಕೆಲವು ಸಮಯದಿಂದ ಇದೆ. ಉದಾಹರಣೆಗೆ ಮಂಗಳಾದೇವಿ ದೇವಸ್ಥಾನ, ಸುರತ್ಕಲ್, ಕಿನ್ನಿಗೋಳಿ, ತಲಪಾಡಿ ಸಹಿತ ಕೆಲವು ಸ್ಥಳಗಳಿಗೆ ಬಜ್ಪೆ ವಿಮಾನ ನಿಲ್ದಾಣದಿಂದ ಸರಕಾರಿ ಬಸ್ಸಿನ ವ್ಯವಸ್ಥೆ ಆದರೆ ಅದರಿಂದ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ. ಒಟ್ಟು ಎಂಟು ಬಸ್ಸುಗಳಿಗೆ ಅನುಮತಿಯನ್ನು ಸಾರಿಗೆ ಇಲಾಖೆ ಕೇಳಿದೆ. ಆದರೆ ಸಿಗುತ್ತಾ ಎನ್ನುವುದು ಮತ್ತೆ ಇದೇ ಖಾಸಗಿ ಮಾಲೀಕರ ಲಾಬಿ ಮೇಲೆ ನಿಂತಿದೆ.

ಮಂಗಳೂರು ಬದಲಾಗಿದೆ…

ಪ್ರತಿ ಬಾರಿ ಸರಕಾರಿ ಬಸ್ಸು ಓಡಿಸುವ ವಿಷಯ ಬಂದಾಗ ಖಾಸಗಿ ಬಸ್ ಮಾಲೀಕರು ಹೇಳುವ ಒಂದೇ ವಾದ ಎಂದರೆ ಮಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ. ಆದ್ದರಿಂದ ಹೊಸ ಬಸ್ಸುಗಳಿಗೆ ಅವಕಾಶ ಕೊಡಬಾರದು ಎಂದೇ ಹೇಳುತ್ತಾರೆ. ವಿಷಯ ಏನೆಂದರೆ 1992 ರಲ್ಲಿ ಆಗಿನ ಜಿಲ್ಲಾಧಿಕಾರಿಯವರು ಸ್ಟೇಟ್ ಬ್ಯಾಂಕಿನಿಂದ ಬಸ್ಸುಗಳಿಗೆ ಪರ್ಮಿಟ್ ಕೊಟ್ಟಿರಲಿಲ್ಲ. ಅದು ಇವತ್ತಿನ ತನಕ ಮುಂದುವರೆದುಕೊಂಡು ಬಂದಿದೆ. ಆವತ್ತು ಜಿಲ್ಲಾಧಿಕಾರಿಯವರು ನೋಟಿಫಿಕೇಶನ್ ಮಾಡಿದ್ದಕ್ಕೆ ಇದ್ದ ಮುಖ್ಯ ಕಾರಣ ಆಗ ಮಂಗಳೂರಿನ ಒಳಗೆ ರಸ್ತೆಗಳು ಅಗಲಕಿರಿದಾಗಿದ್ದವು. ಹೆಚ್ಚೆಚ್ಚು ಬಸ್ಸುಗಳಿಗೆ ಪರ್ಮಿಟ್ ಸಿಕ್ಕಿದರೆ ಸಮಸ್ಯೆ ಜಾಸ್ತಿಯಾಗುತ್ತಿತ್ತು. ಆದರೆ ಈಗ ಹಾಗಲ್ಲ. ಅನೇಕ ರಸ್ತೆಗಳು ಅಗಲಗೊಂಡಿವೆ. ಕೆಲವು ಚತುಷ್ಪಥಗೊಂಡಿವೆ. ಇನ್ನು 1992 ರಲ್ಲಿ ಇದ್ದ ಜನಸಂಖ್ಯೆಗಿಂತಲೂ ಈಗ ಸಾಕಷ್ಟು ದುಪ್ಪಟ್ಟಾಗಿದೆ. ಈಗ ಒಂದಿಷ್ಟು ಹೊಸ ಪರ್ಮಿಟ್ ಗಳನ್ನು ಬಸ್ಸುಗಳಿಗೆ ಕೊಟ್ಟರೆ ಅದರಿಂದ ಜನಸಾಮಾನ್ಯರಿಗೆ ಒಳ್ಳೆಯದು ಆಗುತ್ತದೆ ವಿನ: ಯಾರೂ ಕಳೆದುಕೊಳ್ಳುವಂತದ್ದು ಏನೂ ಇಲ್ಲ. ಹೊಸ ಪರ್ಮಿಟ್ ಸರಕಾರಿ ಬಸ್ಸುಗಳಿಗೆ ಕೊಟ್ಟರೆ ಒಳ್ಳೆಯದು. ಇನ್ನೂ ಈಗಲೂ ಮಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಇದೆ. ಹೊಸ ಬಸ್ಸುಗಳಿಗೆ ಪರ್ಮಿಟ್ ಕೊಡಬಾರದು ಎನ್ನುವುದು ಖಾಸಗಿಯವರ ವಾದ. ಇಲ್ಲಿ ವಿಷಯ ಏನೆಂದರೆ ಈಗಲೂ ಟ್ರಾಫಿಕ್ ಬ್ಲಾಕ್ ಆಗಿ ರಸ್ತೆ ಸಂಚಾರಕ್ಕೆ ಅಡಚಣೆ ಆಗಲು ಮುಖ್ಯ ಕಾರಣ ಇದೇ ಬಸ್ಸಿನ ಚಾಲಕರು. ಒಂದು ಬಸ್ಸು ಸ್ಟೇಟ್ ಬ್ಯಾಂಕಿನಿಂದ ಹೊರಟು ನವಭಾರತ್ ಸರ್ಕಲ್ ದಾಟಿ ಪಿವಿಎಸ್ ಬಳಿ ಬರಲು ಎಷ್ಟು ಹೊತ್ತು ಹಿಡಿಯುತ್ತೆ ಎನ್ನುವುದನ್ನು ಈ ಬಸ್ಸಿನ ಮಾಲೀಕರು ಹೇಳಬೇಕು. ಗಂಟೆಗೆ ಐದರಿಂದ ಹತ್ತು ಕಿಲೋ ಮೀಟರ್ ವೇಗದಲ್ಲಿ ಇಲ್ಲಿ ಬಸ್ಸುಗಳು ಸಂಚರಿಸುವುದರಿಂದ ಮತ್ತು ಜನ ಕೈ ತೋರಿಸಿದ ಕಡೆ ಬಸ್ಸನ್ನು ತಟ್ಟಕನೆ ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಎನ್ನುವುದು ನಿತ್ಯ ನಿರಂತರವಾಗಿ ಆಗುತ್ತಿದೆ. ಇದನ್ನು ಖಾಸಗಿ ಬಸ್ಸಿನ ಮಾಲೀಕರು ಸರಿ ಮಾಡಬಹುದಾ?

ಒಂದೇ ಹಟ…

ಆದರೆ ನಾವು ನಷ್ಟದಲ್ಲಿದ್ದೇವೆ. ಬಸ್ಸಿನ ಟಿಕೆಟ್ ದರ ಹೆಚ್ಚಳ ಮಾಡಬೇಕು ಎಂದು ಸಭೆಗಳಲ್ಲಿ ಬೊಬ್ಬೆ ಹೊಡೆಯುವ ಖಾಸಗಿ ಬಸ್ ಮಾಲೀಕರು ಹಾಗಾದರೆ ನಷ್ಟದಲ್ಲಿದ್ದರೆ ಯಾಕೆ ಬೇರೆ ಸರಕಾರಿ ಬಸ್ಸುಗಳಿಗೆ ಅವಕಾಶ ಕೊಡುವುದಿಲ್ಲ ಎನ್ನುವುದನ್ನು ಹೇಳಲಿ. ಯಾವ ಬಸ್ಸಿನ ಮಾಲೀಕ ಕೂಡ ನಷ್ಟಕ್ಕೆ ಒಳಗಾಗಿ ತನ್ನದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿಲ್ಲ. ಎಲ್ಲರೂ ದೊಡ್ಡ ದೊಡ್ಡ ಕಾರುಗಳನ್ನು ಖರೀದಿಸಿದ್ದಾರೆ. ಬಸ್ಸುಗಳು ಆಗಾಗ ನವೀಕರಣಗೊಳ್ಳುತ್ತಿವೆ. ಆದರೆ ಇವರಿಗೆ ಸರಕಾರಿ ಬಸ್ಸುಗಳು ಮಾತ್ರ ರೋಡಿಗೆ ಇಳಿಯಬಾರದು ಎನ್ನುವುದು ಒಂದೇ ಹಟ!!

0
Shares
  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamtha June 18, 2025
ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
Hanumantha Kamtha June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
    • 114 ಮುಸ್ಲಿಮರು ಸೇರಿ ದೇಗುಲದ 167 ಸಿಬ್ಬಂದಿ ವಜಾ ಮಾಡಿ ಆದೇಶ!
  • Popular Posts

    • 1
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 2
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 3
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 4
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • 5
      ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search