ಮಂಜುನಾಥ್ ಎದುರೇ ಪಾಕಿಸ್ತಾನಕ್ಕೆ ಬಾಯಿಗೆ ಬಂದ ಹಾಗೆ ಬೈಯಲು ನಾವು ತಯಾರಿದ್ದೇವೆ. ಅವರು ನಿಲ್ಲಿಸಲಿ!!
ಅಲ್ಲಿ ಭಾರತದ ಗಡಿಯಲ್ಲಿ ನಲ್ವತ್ತೈದು ವೀರಯೋಧರು ವೀರಮರಣ ಅಪ್ಪಿದ್ದಾರೆ. ಅವರ ಕುಟುಂಬದವರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ವಯಸ್ಸಾದ ಹಿರಿಯರು ತಮ್ಮ ಕೈಯಲ್ಲಿ ಒಂದು ಪೊರಕೆ ಎತ್ತಲು ಆಗದಿದ್ದರೂ ಮಿಶಿನ್ ಗನ್ ಹಿಡಿದು ಪಾಕಿಸ್ತಾನಿ ಭಯೋತ್ಪಾದಕರನ್ನು ಮಟ್ಟ ಹಾಕಿ ಬಿಡ್ತೇವೆ ಎಂದು ಶೌರ್ಯ ಪ್ರದರ್ಶಿಸುತ್ತಿದ್ದಾರೆ. ಕಾಲೇಜಿನ ತರುಣ ತರುಣಿಯರು ಗಡಿಯಲ್ಲಿ ನಿಂತಿರುವ್ನಮ್ಮ ಸೈನಿಕರಿಗೆ ಜಯಕಾರ ಕೂಗುತ್ತಾ ನೈತಿಕ ಬೆಂಬಲ ಹೆಚ್ಚಿಸುತ್ತಿದ್ದಾರೆ. ಮನೆಯೊಳಗೆ ಕುಳಿತ ಗೃಹಿಣಿಯರು ಏನೇ ಆದರೂ ಪಾಪಿ ಪಾಕಿಗಳಿಗೆ ಮಣ್ಣು ತಿನ್ನಿಸಬೇಕು ಎಂದು ತಮ್ಮೊಳಗೆ ಹೇಳಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಆದರೂ ನಮ್ಮ ಸುಳ್ಯದ ಪೊಲೀಸ್ ಸಬ್ ಇನ್ಸಪೆಕ್ಟರ್ ಒಬ್ಬರು ಪಾಪಿ ಪಾಕಿಸ್ತಾನದ ಭಯೋತ್ಪಾದಕರ ಮೇಲೆ ಬಾಂಬ್ ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ದೇಶವೇ ಒಂದಾಗಿರುವಾಗ ಇವನ್ಯಾವನೋ…
ನಮಗೆ ಅವಕಾಶ ಕೊಡಿ, ನಾವು ಗಡಿಗೆ ಹೋಗಿ ಶತ್ರುಗಳನ್ನು ಸಂಹರಿಸಿ ಅಗತ್ಯಬಿದ್ದರೆ ಪ್ರಾಣ ಕೊಡಲು ಸಿದ್ಧ ಎಂದು ರಾಜ್ಯ ಪೊಲೀಸ್ ಮಾಜಿ ಮಹಾನಿರ್ದೇಶಕ ಶಂಕರ್ ಬಿದರಿಯಂತವರೇ ತಮ್ಮ ಟ್ವೀಟರ್ ನಲ್ಲಿ ಬರೆದು ತಮ್ಮ ಬೆಂಬಲವನ್ನು ಘೋಷಿಸಿದ್ದರೆ, ಆದರೆ ಇಲ್ಲಿ ಅದ್ಯಾವುದೋ ಪೊಲೀಸ್ ಠಾಣೆಯ ಇದ್ಯಾವನೋ ಒಬ್ಬ ಎಸ್ ಐ “ಭಾರತದ ಮೇಲೆ ಹೂ ಹಾಕಿ, ಪಾಕಿಸ್ತಾನದ ಮೇಲೆ ಬಾಂಬ್ ಹಾಕಿ” ಎಂದು ಯುವಕರು ಘೋಷಣೆ ಕೂಗಿದ್ದಕ್ಕೆ ಎಚ್ಚರಿಕೆ ಕೊಟ್ಟು ತಪ್ಪೊಪ್ಪಿಗೆ ಬರೆಸಿದ್ದಾನೆ. ಹಾಗೆ ಒತ್ತಾಯಪೂರ್ವಕವಾಗಿ ಬರೆದು ಬೀಗಿರುವ ಸುಳ್ಯ ಎಸ್ ಐ ಹೆಸರು ಮಂಜುನಾಥ. ಹೆಸರು ಮಂಜುನಾಥ ಎಂದು ಇಟ್ಟುಕೊಂಡು ಮಾಡಿದ್ದು ಮಾತ್ರ ಅಪ್ಪಟ ಹೊಲಸು ತಿನ್ನುವ ಕೆಲಸ. ಒಬ್ಬ ತರುಣ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಮಣ್ಣಿನ ಮೇಲೆ ನಿಂತು ಪಾಕಿಸ್ತಾನದ ಮೇಲೆ ಬಾಂಬ್ ಹಾಕಬೇಕು ಎಂದು ಹೇಳುತ್ತಿದ್ದರೆ ಯಾರಿಗಾದರೂ ಯಾಕೆ ಅದು ತಪ್ಪು ಎಂದು ಅನಿಸಬೇಕು. ಅಷ್ಟಕ್ಕೂ ಪಾಪಿ ಪಾಕಿಗಳ ಮೇಲೆ ಬಾಂಬ್ ಹಾಕದೇ ಅವರಿಗೆ ಭೂರಿ ಭೋಜನ ಮಾಡಿ ವೀಳ್ಯದೆಲೆ ಕೊಡಬೇಕಾ? ಅದನ್ನು ಮಂಜುನಾಥ ಅವರು ಬಯಸುತ್ತಿದ್ದಾರಾ. ಸರಿಯಾಗಿ ಹೇಳಬೇಕೆಂದರೆ “ತಾನು ಭಾರತೀಯರನ್ನು ಕೊಂದು ಸ್ವರ್ಗಕ್ಕೆ ಹೋಗುತ್ತೀದ್ದೇನೆ” ಎಂದು ಫೂಲ್ವಾಮಾದಲ್ಲಿ ಸತ್ತ ಉಗ್ರ ಹೇಳಿದ್ದರೆ ಅದನ್ನು ಎಷ್ಟೋ ಮುಸ್ಲಿಂ ಮುಖಂಡರೇ ಖಂಡಿಸಿದ್ದಾರೆ. ಭಾರತೀಯ ಸೈನಿಕರನ್ನು ಕೊಂದು ಸ್ವರ್ಗ ಸಿಗುತ್ತದೆ ಎಂದು ಅಂದುಕೊಂಡಿರುವ ಕೆಲವು ಮೂಲಭೂತವಾದಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ಝಾಡಿಸಿದ್ದಾರೆ. ಎಷ್ಟೋ ಮಸೀದಿಗಳಲ್ಲಿ ಹುತಾತ್ಮ ಯೋಧರ ಬಗ್ಗೆ ಶ್ರದ್ಧಾಂಜಲಿ ಕೂಡ ಸಲ್ಲಿಸಲಾಗಿದೆ. ಹೀಗೆ ಭಾರತಕ್ಕೆ ಭಾರತವೇ ಪಾಕಿಸ್ತಾನವನ್ನು ವಿಶ್ವಭೂಪಟದಲ್ಲಿ ಇಲ್ಲದಂತೆ ಮಾಡಲು ನರೇಂದ್ರ ಮೋದಿಯವರಿಗೆ ಬೆಂಬಲವಾಗಿ ನಿಂತಿದ್ದರೆ ಮಂಜುನಾಥ ಎಂಬುವವರು ಪಾಕಿಸ್ತಾನದ ಮೇಲೆ ಬಾಂಬ್ ಹಾಕುವುದು ತಪ್ಪು ಎಂದು ಕಿರಿಕ್ ಮಾಡುತ್ತಿದ್ದಾರೆ. ಭಗವಾನ್ ಎಂದು ಹೆಸರಿಟ್ಟುಕೊಂಡವನು, ಮಂಜುನಾಥ ಎಂದು ಹೆಸರನ್ನು ಇಟ್ಟುಕೊಂಡವರು ತಮ್ಮ ಹೆಸರಿನಂತೆ ಇರಲ್ಲ ಎನ್ನುವುದು ಮತ್ತೇ ಸಾಬೀತಾಗಿದೆ.
ಇನ್ನೂ ಹೀಗೆ ಮಾಡುತ್ತೀರಾ…
ಸದ್ಯ ಮಂಜುನಾಥ ಅವರನ್ನು ಕರೆಸಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರು ಮಂಗಳಾರತಿ ಮಾಡಿದ್ದಾರೆ. ಮಂಜುನಾಥ ಮಾಡಿದ ಕೆಲಸದಿಂದ ಮಹಾಪೂಜೆ ಮಾಡದೇ ಬೇರೆ ಏನೂ ಮಾಡಬೇಕಾಗಿಲ್ಲ. ಮೊನ್ನೆ ಯುವ ಬ್ರಿಗೇಡಿನ ಯುವಕನಿಂದ ತಪ್ಪೊಪ್ಪಿಗೆ ಬರೆಸಿದ ಮಂಜುನಾಥ ಕೈಯಿಂದ ಕ್ಷಮಾಪತ್ರ ಬರೆಸುವ ಕೆಲಸ ಪೊಲೀಸ್ ಅಧಿಕಾರಿಗಳು ಮಾಡಬೇಕು. ಪಾಕಿಗಳ ವಿರುದ್ಧ ಇನ್ನೊಂದು ಬೃಹತ್ ಪ್ರತಿಭಟನೆ ಮಾಡಲು ಅನುಮತಿ ಕೊಡಬೇಕು. ಅಲ್ಲಿ ಮಂಜುನಾಥ ಅವರ ಎದುರೇ ಮತ್ತೊಮ್ಮೆ ಪಾಕಿಸ್ತಾನಕ್ಕೆ ಹಿಗ್ಗಾಮುಗ್ಗ ಬೈಯಲು ನಮ್ಮ ತರುಣರು ತಯಾರಾಗಬೇಕು. ಮಂಜುನಾಥ ಅವರ ಸಂಬಂಧಿಗಳು ಪಾಕಿಸ್ತಾನದಲ್ಲಿ ಇಲ್ಲ ಎಂದಾದರೆ ಇನ್ನು ಮುಂದೆ ಇಂತಹ ಕೆಲಸ ಮಾಡಲು ಮಂಜುನಾಥ ಮುಂದಾಗಬಾರದು!
Leave A Reply