ಡಿಗ್ರಿ ಸರ್ಟಿಫಿಕೇಟ್ ಮನೆಯ ಕಪಾಟಿನಲ್ಲಿ ಎಷ್ಟಿದೆ ಎನ್ನುವುದು ಮುಖ್ಯವಲ್ಲ, ಸಾಮಾನ್ಯ ಜ್ಞಾನ ತಲೆಯಲ್ಲಿ ಇದೆಯಾ ನೋಡಿ ಕಾಂಗ್ರೆಸ್ಸಿಗರೇ!!
ವಿದ್ಯೆ ಮತ್ತು ಜ್ಞಾನ ಎನ್ನುವುದು ಎರಡೂ ಬೇರೆ ಬೇರೆ ವಿಷಯಗಳು. ಹೇಗೆ ಒಂದು ಮನುಷ್ಯ ನೀವು ಹೇಳಿದ್ದು ಕೇಳುತ್ತಿದ್ದಾನಾ ಅಥವಾ ಆಲಿಸುತ್ತಿದ್ದಾನಾ ಎನ್ನುವುದರ ನಡುವಿನ ವ್ಯತ್ಯಾಸದ ಹಾಗೆ ಇದು. ಕಲಿಕೆ ಮತ್ತು ಸರ್ಟಿಫಿಕೇಟ್ ಹೇಗೆ ಬೇರೆ ಬೇರೆಯೋ ಹಾಗೆ ಕಾಲೇಜಿಗೆ ಹೋಗುವುದು ಮತ್ತು ಕಾಲೇಜಿಗೆ ಹೋಗದೇ ಅದಕ್ಕಿಂತ ಹೆಚ್ಚಿನ ಜ್ಞಾನ ಪಡೆಯುವುದು ಕೂಡ ಬೇರೆ ಬೇರೆ. ಕಾಲೇಜಿನ ಪುಸ್ತಕದ ಬದನೆಕಾಯಿ ಮಾತ್ರ ಕಲಿತವ ರಸ್ತೆಯಲ್ಲಿ ಹೋಗುವಾಗ ಕಾಲಿಗೆ ಸೆಗಣಿ ತಾಗಿದರೆ ಏನು ಮಾಡುತ್ತಾನೆ ಮತ್ತು ಸಾಮಾನ್ಯ ಜ್ಞಾನ ಹೊಂದಿದವ ಏನು ಮಾಡುತ್ತಾನೆ ಎನ್ನುವ ಪಾಠವೇ ನಮಗೆ ಚಿಕ್ಕಂದಿನಲ್ಲಿ ಇತ್ತು ಎನ್ನುವುದನ್ನು ನೆನಪಿಸಿಕೊಳ್ಳಿ. ಅಂದರೆ ಜ್ಞಾನಕ್ಕೂ ಸರ್ಟಿಫೀಕೇಟಿಗೂ ಏನೂ ಸಂಬಂಧ ಇಲ್ಲ. ಸರ್ಟಿಫಿಕೇಟ್ ಹಣ ಕೊಟ್ಟರೂ ಸಿಗುತ್ತದೆ. ಪ್ರಿನ್ಸಿಪಾಲರ ಮೇಲೆ ದೌರ್ಜನ್ಯ ಮಾಡಿದರೂ ಸಿಗುತ್ತದೆ. ಆದರೆ ಜ್ಞಾನ ಹಣ ಕೊಟ್ಟರೆ ಸಿಗುತ್ತದೆ. ಇನ್ನು ಪ್ರಾಧ್ಯಾಪಕರನ್ನು ಹೊಡೆಯುವುದನ್ನು ಭಾರತೀಯ ಸಂಸ್ಕೃತಿಯಲ್ಲಿ ಊಹಿಸಿಕೊಳ್ಳುವುದು ಸಾಧ್ಯವಿಲ್ಲ.
ಬೇಕಾದರೆ ಭಾರತದ ನಂಬರ್ ಒನ್ ಶ್ರೀಮಂತರ ಪಟ್ಟಿಯಲ್ಲಿದ್ದ ಧೀರುಬಾಯ್ ಅಂಬಾನಿಯವರ ವಿದ್ಯಾರ್ಹತೆ ಏನು ಎನ್ನುವುದನ್ನು ನೋಡಿ. ಅವರ ಶ್ರೀಮಂತಿಕೆಗೆ ಹೋಲಿಸಿದರೆ ಅವರು ಕಲಿತದ್ದು ತೀರ ಕಡಿಮೆ ಎಂದೇ ಹೇಳಬಹುದು. ಕಾಲೇಜು ಶಿಕ್ಷಣವನ್ನು ಅರ್ಧದಲ್ಲಿಯೇ ಕೈಬಿಟ್ಟ ಅಂಬಾಯಿ ತಮ್ಮ ಬುದ್ಧಿವಂತಿಕೆಯ ಆಧಾರದ ಮೇಲೆಯೇ ರಿಲಯೆನ್ಸ್ ಸಾಮ್ರಾಜ್ಯವನ್ನು ಕಟ್ಟಿದರು. ಅದರ ಅರ್ಥ ಇಷ್ಟೆ, ನೀವು ಎಷ್ಟು ಡಿಗ್ರಿ ಸರ್ಟಿಫಿಕೇಟ್ ಮನೆಯ ಗ್ರೋದೆಜ್ ನಲ್ಲಿ ಇಟ್ಟುಕೊಂಡಿದ್ದಿರಿ ಎನ್ನುವುದು ಮುಖ್ಯವಾಗುವುದೇ ಇಲ್ಲ.
ವಿದೇಶಿಗರಲ್ಲಿ ಹಲವು ಸಾಧಕರಿಗೆ ಡಿಗ್ರಿ ಇಲ್ಲ…
ಬೇಕಾದರೆ ಬುದ್ಧಿವಂತಿಕೆಯ ಪಿತಾಮಹಾ ಎಂದು ಕರೆಸಿಕೊಳ್ಳುವ ಆಲ್ಬರ್ಟ್ ಐನ್ ಸ್ಟೀನ್ ತಮ್ಮ ಕಲಿಕೆಯ ದಿನಗಳಲ್ಲಿ ದಡ್ಡ ವಿದ್ಯಾರ್ಥಿ ಎಂದೇ ಕರೆಸಿಕೊಂಡಿದ್ದರಂತೆ. ಆದರೂ ಅವರು ತಮ್ಮ ಬುದ್ಧಿವಂತಿಕೆಯಿಂದ ಪ್ರಪಂಚದ ಅತೀ ದೊಡ್ಡ ವಿಜ್ಞಾನಿ ಎಂದು ಕರೆಸಿಕೊಂಡಿದ್ದರು. ಇದೇ ಸಾಲಿನಲ್ಲಿ ಉದ್ಯಮಿಗಳಾದ ಗೌತಮ್ ಅದಾನಿ, ಅಜೀಂ ಪ್ರೇಮ್ ಜಿ, ನಟಿ ಐಶ್ವರ್ಯ ರೈ, ಕ್ರೀಡಾ ತಾರೆಯರಾದ ಸಚಿನ್ ತೆಂಡ್ಕೂಲರ್, ಕಪಿಲ್ ದೇವ್, ಮೇರಿ ಕೋಮ್ ಕೂಡ ಸೇರುತ್ತಾರೆ. ಅದೇ ರೀತಿಯಲ್ಲಿ ಹಾಲಿವುಡ್ ಕಲಾವಿದರಾದ ಇಲ್ಲೇನ್ ಡಿಜಿನೆರಸ್, ಟೆಡ್ ಟರ್ನರ್, ಒಂದನೇ ಸೆಮಿಸ್ಟರ್ ಮುಗಿಯುತ್ತಿದ್ದಂತೆ ಕಾಲೇಜಿನಿಂದ ಹೊರಗೆ ಬಿದ್ದ ಕಂಪ್ಯೂಟರ್ ಚಾಣಾಕ್ಯ ಸ್ಟೀವ್ ಜಾಬ್ ಸಹಿತ ಪ್ರಪಂಚದ ಅನೇಕ ಕ್ಷೇತ್ರಗಳ ಅಗ್ರಗಣ್ಯ ನಾಯಕರು ತಮ್ಮ ಜ್ಞಾನದಿಂದ ವಿಶೇಷ ಸಾಧನೆಯನ್ನು ಮಾಡಿದ್ದಾರೆ ವಿನ: ದೊಡ್ಡ ದೊಡ್ಡ ಡಿಗ್ರಿಗಳಿಂದ ಅಲ್ಲ.
ಈ ಬಾರಿಯ ಹೋರಾಟ ಯಾವುದರ ನಡುವೆ ಗೊತ್ತಾ..
ಈ ಬಾರಿಯ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಅಭಿವೃದ್ಧಿ ಮತ್ತು ರೌಡಿಸಂ ನಡುವೆ ನಡೆಯುತ್ತಿದೆ. ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ, ಹಾಲಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ದೊಡ್ಡ ದೊಡ್ಡ ಡಿಗ್ರಿಗಳಿಲ್ಲ ಎನ್ನುವುದನ್ನೇ ಕಾಂಗ್ರೆಸ್ಸಿಗರು ಹೋಗಿ ಬಂದ ಕಡೆಯೆಲ್ಲೆಲ್ಲ ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ನಳಿನ್ ಅವರಿಗೆ ಡಿಗ್ರಿಗಳಿಗಿಂತ ಹೆಚ್ಚು ಸಾಮಾನ್ಯ ಜ್ಞಾನ ಚೆನ್ನಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರವೇ ಅಧಿಕಾರಕ್ಕೆ ಬರುವುದರಿಂದ ಯಾವ ಸಚಿವರನ್ನು ಹಿಡಿದರೆ ಯಾವ ಕೆಲಸ ಆಗುತ್ತದೆ ಎನ್ನುವುದು ನಳಿನ್ ಅವರಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಸಂಸದ ಪ್ರಹ್ಲಾದ್ ಜೋಷಿಯವರು ಬಂಟ್ವಾಳದಲ್ಲಿ ಉಜ್ವಲ ಯೋಜನೆಯ ಜಿಲ್ಲೆಯ ಐವತ್ತು ಸಾವಿರ ಫಲಾನುಭವಿಗಳ ಸಭೆಯಲ್ಲಿ ಹೇಳಿದ್ದು “ನಳಿನ್ ಅವರಿಗೆ ಜನರ ಮನಸ್ಸಿನ ಭಾಷೆ ಚೆನ್ನಾಗಿ ಅರ್ಥ ಆಗುತ್ತದೆ. ಅದರಿಂದ ಅವರು ನಮ್ಮೆಲ್ಲರಿಗಿಂತ ಅತೀ ಹೆಚ್ಚು ಅನುದಾನವನ್ನು ತಮ್ಮ ಕ್ಷೇತ್ರಕ್ಕೆ ತಂದಿದ್ದಾರೆ” ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ರೈಲ್ವೆ ಸಚಿವ ಪಿಯುಷ್ ಗೋಯಲ್, ವಿತ್ತ ಸಚಿವ ಅರುಣ್ ಜೇಟ್ಲಿ ಸಹಿತ ವಿವಿಧ ಸಚಿವರುಗಳೊಂದಿಗೆ ಮಾತನಾಡಿ ನಳಿನ್ ಜಿಲ್ಲೆಗೆ ಅನುದಾನಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಎಂಸಿಎಫ್ ಮುಚ್ಚುಗಡೆ ಆಗುವ ಹಂತದಲ್ಲಿ, ಕುದ್ರೆಮುಖ ಕಾರ್ಮಿಕರ ಸಮಸ್ಯೆ, ನವಮಂಗಳೂರು ಬಂದರು ಕಾರ್ಮಿಕರ ಸಮಸ್ಯೆ, ಎಂಎಸ್ ಸಿಝಡ್ ಸಹಿತ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಲ್ಲಿ, ಮಂಗಳೂರಿನ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ದಕ್ಷಿಣ ಕನ್ನಡ ರೈಲ್ವೆ ಯೋಜನೆಗಳನ್ನು ಅನುಷ್ಟಾನಗೊಳಿಸುವಲ್ಲಿ, ಮೆಡಿಕಲ್ ಟೂರಿಸಂ ಸೃಷ್ಟಿಸುವಲ್ಲಿ, ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ ಸಹಿತ ಕೇಂದ್ರದ ಯೋಜನೆಗಳ ಪಾಲುದಾರಿಕೆಯ ಕಾರ್ಯಗಳಲ್ಲಿ ನಳಿನ್ ಶ್ರಮ ಎಲ್ಲರಿಗೂ ಗೊತ್ತಿದೆ. ಸ್ಮಾರ್ಟ್ ಸಿಟಿ ಯೋಜನೆ, ಅಮೃತ ಯೋಜನೆ, ಮುದ್ರಾ ಯೋಜನೆ, ಉಜ್ವಲ ಯೋಜನೆ, ಆಯುಷ್ಯಮಾನ್ ಭಾರತ್ ಯೋಜನೆ ಅತೀ ಹೆಚ್ಚು ಜನರ ಅನುಕೂಲಕ್ಕೆ ಸಿಗುತ್ತಿದೆ ಎಂದರೆ ಅದಕ್ಕೆ ಕಾರಣ ನಳಿನ್ ಅವರ ಸೇವಾತತ್ಪರತೆ. ಇದೆಲ್ಲವೂ ನಳಿನ್ ಅವರಿಗೆ ಬಂದದ್ದು ಅವರ ಸಾಮಾನ್ಯ ಜ್ಞಾನದ ಪರಿಣಾಮ. ಡಿಗ್ರಿ ಹೊತ್ತುಕೊಂಡವರಿಗೆ ಅಹಂಕಾರವೇ ತಲೆ ತುಂಬಾ ತುಂಬಿಕೊಂಡಿರುವುದರಿಂದ ಅಲ್ಲಿ ಪಾಪ ಸಾಮಾನ್ಯ ಜ್ಞಾನಕ್ಕೆ ಜಾಗ ಇಲ್ಲ! !
Leave A Reply