• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಡಾ|ಕಲ್ಲಡ್ಕ ಭಟ್ ಹೆಸರು ದುರುಪಯೋಗ ಮಾಡಿ ಗೆಲ್ಲುವ ಪ್ರಯತ್ನ ಯಾಕೆ ಸಣ್ಣ ರೈ!!

Tulunadu News Posted On April 2, 2019


  • Share On Facebook
  • Tweet It

ಪ್ರಭಾಕರ ಭಟ್ಟ ನೀನು ಗಂಡು ಮಗ ಆದರೆ ಇಲ್ಲಿ ಬಾ ಎಂದು ಮಿಥುನ್ ರೈ ಹಿಂದೆ ಕಾಂಗ್ರೆಸ್ ನ ಕಾರ್ಯಕ್ರಮವೊಂದರಲ್ಲಿ ಗುಡುಗಿದ್ದರು. ಅದು ಕೈಕಂಬದ ಸಮಾವೇಶ ಇರಬೇಕು. ತುಳುವಿನಲ್ಲಿ ಏಕವಚನದಲ್ಲಿ ಕರೆದಿದ್ದರು. ಭಟ್ಟ ಬರುವುದಿಲ್ಲ, ಬಿಜೆಪಿಯ ಯಾವ ಕಾರ್ಯಕರ್ತ ಕೂಡ ಬರುವುದಿಲ್ಲ ಎಂದು ವಿಕಟ ನಗೆ ನಗುತ್ತಾ ಮಿಥುನ್ ರೈ ಹೇಳುತ್ತಿದ್ದರೆ ಯುವ ಕಾಂಗ್ರೆಸ್ಸಿಗರಲ್ಲಿ ಅದೇನೋ ಹುರುಪು. ಅದೆಲ್ಲ ಆಗಿ ಸುಮಾರು ಸಮಯವಾಗಿದೆ. ಆವತ್ತು ವೇದಿಕೆಯಲ್ಲಿದ್ದ ಮೊಯ್ದೀನ್ ಬಾವ ಈಗ ಮಾಜಿಯಾಗಿದ್ದಾರೆ. ಆವತ್ತು ತಮ್ಮ ತಂದೆ ವಯಸ್ಸಿನವರಾದ ಡಾ|ಪ್ರಭಾಕರ ಭಟ್ ಕಲ್ಲಡ್ಕ ಅವರನ್ನು ಬೈದ ಮಿಥುನ್ ರೈ ಈಗ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ. ವಿಷಯ ಇರುವುದು ಆವತ್ತು ಪ್ರಭಾಕರ ಭಟ್ಟರನ್ನು ಏಕವಚನದಲ್ಲಿ ಬೈದ ಸಣ್ಣ ರೈ ತಮ್ಮ ಗೆಲುವಿನ ತಂತ್ರವಾಗಿ ಪ್ರಭಾಕರ ಭಟ್ ಅವರ ಮೊರೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟರ್ ಹರಿಯಲು ಬಿಟ್ಟ ಮಿಥೂನ್ ರೈ ಬಳಗ ಅದರಿಂದ ಸಂಘಪರಿವಾರದ ಒಳಗೆ ವಿಷದ ಬೀಜ ಬಿತ್ತುವ ಕೆಲಸ ಮಾಡಿದೆ. ಪೋಸ್ಟರ್ ನಲ್ಲಿ ಡಾ|ಪ್ರಭಾಕರ ಭಟ್ ಅವರ ಫೋಟೋ ಹಾಕಿ ಈ ಚುನಾವಣೆಯಲ್ಲಿ ಸೋಲೋ, ಗೆಲುವೋ, ಸೋಮಾರಿ ಕೆಲಸ ಮಾಡದ ಸಂಸದನನ್ನು ನಿದ್ದೆ ಇಲ್ಲದ ಹಾಗೆ ಮಾಡಿದೆ ಈ ಮಿಥುನ್ ರೈ ಅಲೆ ಎಂದು ಬರೆದು ಅದರ ಕೆಳಗೆ ಕಲ್ಲಡ್ಕ ಪ್ರಭಾಕರ್ ಭಟ್ ಎಂದು ಬರೆಯಲಾಗಿದೆ. ಇದರ ಅಗತ್ಯ ಮಿಥುನ್ ರೈಗೆ ಇದೆ ಎಂದಾದರೆ ಅವರು ಮುಳುಗುತ್ತಿರುವ ದೋಣೆಯ ಒಳಗೆ ನಿಂತು ದಡದ ಮೇಲಿರುವವರನ್ನು ಉಳಿಸಿ ಬನ್ನಿ ಎಂದು ಗೋಗರೆಯುತ್ತಿದ್ದಾರೆ ಎಂದೇ ಅರ್ಥ. ಈ ಬಗ್ಗೆ ಈಗಾಗಲೇ ಡಾ|ಭಟ್ ಬಂಟ್ವಾಳ ನಗರ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾರೆ. ಈ ಮೂಲಕ ಸಣ್ಣ ರೈಗೆ ನಿರಾಸೆ ತಂದಿದ್ದಾರೆ. ಇಂತಹ ಕನಿಷ್ಟ ಮಟ್ಟದ ಗಿಮಿಕ್ ಅನ್ನು ಮಿಥುನ್ ಮಾಡಲು ಹೋಗಲೇಬಾರದು. ಯಾಕೆಂದರೆ ಹೀಗೆ ಮಾಡಿಯೂ ಸೋತರೆ ಅದು ರೈಗೆ ಆತ್ಮವಂಚನೆ ಮಾಡಿಯೂ ಸೋತ ಹಾಗೆ ಆಗುತ್ತದೆ. ಒಂದು ವೇಳೆ ಕಲ್ಲಡ್ಕ ಪ್ರಭಾಕರ್ ಭಟ್ ಅವರು ನಳಿನ್ ವಿರುದ್ಧ ಬಹಿರಂಗವಾಗಿ ಹೀಗೆ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟರೆ ಆವಾಗ ಬೇಕಾದರೆ ಮಿಥುನ್ ರೈ ಬಳಗ ಅದನ್ನು ಪ್ರಸರಿಸಿದರೆ ಅದು ಬೇರೆ ವಿಷಯ. ಆದರೆ ಹೇಳದೇ ಇರುವ ವಿಷಯವನ್ನು ಸುಳ್ಳು ಸುದ್ದಿ ಮಾಡುವುದು ಯಾಕೆ ರೈ?

ಪೂಜಾರಿಯವರನ್ನು ಏನು ಮಾಡಲಾಗದೇ ಭಟ್ ಹೆಸರು ಬಳಕೆ…

ಕಾಂಗ್ರೆಸ್ಸಿಗರಿಗೆ ಮುಖ್ಯವಾಗಿ ಇರುವ ಕೋಪ ಏನೆಂದರೆ ಜನಾರ್ಧನ ಪೂಜಾರಿಯವರ ಹೇಳಿಕೆ ಬಗ್ಗೆ. ತಮ್ಮಲ್ಲಿ ಜನಾರ್ಧನ ಪೂಜಾರಿ ಇದ್ದ ಹಾಗೆ ಅತ್ತ ಕಡೆ ಪ್ರಭಾಕರ್ ಭಟ್ ಇದ್ದಾರೆ. ಇಲ್ಲಿ ಬಿಜೆಪಿಯವರು ಜನಾರ್ಧನ ಪೂಜಾರಿಯವರ ಹೇಳಿಕೆಗಳನ್ನು ತೆಗೆದು ಪ್ರಚಾರ ಮಾಡುವುದರಿಂದ ಕಾಂಗ್ರೆಸ್ಸಿಗೆ ಡ್ಯಾಮೇಜ್ ಆಗುತ್ತಿದೆ. ಹಾಗೆ ತಾವು ಪ್ರಭಾಕರ್ ಭಟ್ ಅವರು ಹೇಳಿದ್ದಾರೆ ಎಂದು ಬರೆದು ಅಪಪ್ರಚಾರ ಮಾಡೋಣ ಎಂದು ಅಂದುಕೊಂಡಿದ್ದಾರೆ. ಆದರೆ ವ್ಯತ್ಯಾಸ ಏನೆಂದರೆ ಜನಾರ್ಧನ ಪೂಜಾರಿಯವರು ಬಹಿರಂಗವಾಗಿ ಮಾಧ್ಯಮಗಳಿಗೆ ಹೇಳಿಕೆಗಳನ್ನು ಕೊಡುತ್ತಾರೆ. ಆದ್ದರಿಂದ ಪೂಜಾರಿಯವರ ಹೆಸರನ್ನು ಮಿಸ್ ಯೂಸ್ ಮಾಡುವ ಪ್ರಸಂಗ ಬಿಜೆಪಿಗೆ ಬರುವುದೇ ಇಲ್ಲ. ಅವರು ಹೇಳಿದ್ದನ್ನೇ ಬಿಜೆಪಿಯವರು ಮಾಧ್ಯಮಗಳಿಂದ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿರಬಹುದು. ಅದರಲ್ಲಿ ತಪ್ಪಿಲ್ಲ. ಆದರೆ ಇಲ್ಲಿ ಮಿಥುನ್ ಮಾಡಿರುವುದು ಏನೆಂದರೆ ಪ್ರಭಾಕರ್ ಭಟ್ ಅವರು ಹೇಳದೇ ಇದ್ದ ಮಾತುಗಳನ್ನೇ ಹೇಳಿದ್ದಾರೆ ಎಂದು ಬಿಂಬಿಸಿ ಹರಡಿಸುತ್ತಿರುವುದು.

ಡಾ|ಭಟ್ ಹಿಂದೆ ಕೂಡ ಹೀಗೆ ಮಾಡಬಹುದಿತ್ತು..

ಹಾಗಂತ ಪ್ರಭಾಕರ ಭಟ್ ಹಾಗೂ ನಳಿನ್ ಕುಮಾರ್ ಕಟೀಲ್ ಅವರ ಮಧ್ಯೆ ಎಲ್ಲವೂ ಸರಿಯಿದೆಯಾ, ಇಲ್ಲವಾ ಎನ್ನುವುದು ರಾಜಕೀಯ ಪಂಡಿತರಿಗೆ ಗೊತ್ತಿದೆ. ಅದನ್ನು ಎನ್ ಕ್ಯಾಶ್ ಮಾಡಲು ಕಾಂಗ್ರೆಸ್ ಹಿಂದಿನ ಬಾಗಿಲಿನಿಂದ ಪ್ರಯತ್ನ ಒಂದಿಷ್ಟು ಮಾಡುತ್ತಿದೆ. ಈ ಬಾರಿ ಡಾ|ಪ್ರಭಾಕರ ಭಟ್ ಅವರು ಪೊಲೀಸ್ ಠಾಣೆಯಲ್ಲಿ ತಮ್ಮ ಹೆಸರನ್ನು ದುರುಪಯೋಗ ಮಾಡುತ್ತಿದ್ದಾರೆ ಎಂದು ಹೇಳಿ ಹೇಗೆ ದೂರು ಕೊಟ್ಟರೋ ಹಾಗೆ ಹಿಂದೆ ಒಂದು ವೆಬ್ ಸೈಟ್ ಹೀಗೆ ಬರೆದಿತ್ತು. ಅದೇನೆಂದರೆ ದೇಶದ ಅಭಿವೃದ್ಧಿಗಾಗಿ ಕಳಪೆ ಸಂಸದನನ್ನು ಸಹಿಸಿಕೊಳ್ಳಬೇಕಾಗಿದೆ ಎಂದು ಪ್ರಭಾಕರ ಭಟ್ ಹೆಸರು ಹೇಳಿ ಸುದ್ದಿ ಮಾಡಿತ್ತು. ಒಂದು ವೇಳೆ ಪ್ರಭಾಕರ್ ಭಟ್ ಆ ವೆಬ್ ಸೈಟ್ ಗೆ ಹಾಗೆ ಹೇಳದಿದ್ದರೆ ಆ ವೆಬ್ ಸೈಟ್ ನವರು ಹಾಗೆ ಕಹಳೆ ಊದಿ ಕಾಂಗ್ರೆಸ್ಸಿಗೆ ಹೀಗೆ ಮಾಡಬಹುದು ಎನ್ನುವ ಅವಕಾಶ ಕೊಡಬಾರದಿತ್ತು. ಒಟ್ಟಿನಲ್ಲಿ ಸಂಘ ಪರಿವಾರ ಈ ಬಾರಿ ನಳಿನ್ ಅವರ ಜೊತೆಗೆ ಗಟ್ಟಿಯಾಗಿ ನಿಂತಿರುವುದು ನಳಿನ್ ಗೆಲುವಿಗೆ ಸುಲಭವಾಗಬಹುದು. ಆದರೆ ಎರಡು ಕಡೆ ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಬಳಸುವ ಕೆಲಸ ನಡೆಯುತ್ತಿದೆ. ಬಿಜೆಪಿ ಭತ್ತಳಿಕೆಯಲ್ಲಿ ಪೂಜಾರಿ ಇದ್ದಾರೆ. ಕಾಂಗ್ರೆಸ್ಸ್ ಭತ್ತಳಿಕೆಯಲ್ಲಿ ಪ್ರಭಾಕರ್ ಭಟ್ ಹೆಸರು ದುರುಪಯೋಗಪಡಿಸುವ ಪ್ರಯತ್ನ ನಡೆಯುತ್ತಿದೆ. ಪೂಜಾರಿ ಬಿಜೆಪಿಗೆ ಲಾಭವಾಗುವ ಹಾಗೆ ಹೇಳಿಕೆ ಟಿವಿ ಕ್ಯಾಮೆರಾದೆದುರು ಕೊಡುತ್ತಾರೆ. ಡಾ|ಕಲ್ಲಡ್ಕ ಭಟ್ ಅವರು ಕೊಡುವುದಿಲ್ಲ. ಇಷ್ಟೇ ವ್ಯತ್ಯಾಸ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search