• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸಂದೀಪ್ ಪಾಟೀಲ್ ಕೊಟ್ಟ ಎಚ್ಚರಿಕೆಯಿಂದ ಸದ್ಯ ಅಕ್ರಮ ಗೋಸಾಗಾಟ ಬಂದ್!!

Hanumantha Kamath Posted On July 4, 2019


  • Share On Facebook
  • Tweet It

ಮಂಗಳೂರು ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಅವರಿಗೆ ಹ್ಯಾಟ್ಸಪ್. ಬಹುಶ: ಇತ್ತೀಚಿನ ವರ್ಷಗಳಲ್ಲಿ ಇಷ್ಟು ಪ್ರಾಮಾಣಿಕ, ದಕ್ಷ ಅಧಿಕಾರಿಯನ್ನು ಮಂಗಳೂರು ಪೊಲೀಸ್ ಕಮೀಷನರೇಟ್ ಕಂಡಿಲ್ಲ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ. ಅವರು ಬೆಳಗಾವಿಯಿಂದ ವರ್ಗಾವಣೆಗೊಂಡಾಗ ಅಲ್ಲಿನ ಜನರು ಪ್ರತಿಭಟನೆ ಮಾಡಿದ್ದರು. ನಾವು ಸಂದೀಪ್ ಪಾಟೀಲ್ ಅವರನ್ನು ವರ್ಗಾವಣೆ ಆಗಲು ಬಿಡಲ್ಲ ಎಂದು ಧರಣಿ ಕುಳಿತಿದ್ದರು. ಅಷ್ಟು ಉತ್ತಮ ಕೆಲಸವನ್ನು ಅಲ್ಲಿ ಪಾಟೀಲ್ ಮಾಡಿದ್ದರು. ನಮ್ಮ ಪುಣ್ಯ ನಮಗೆ ಸಂದೀಪ್ ಸಿಕ್ಕಿದ್ದಾರೆ. ಅವರನ್ನು ಎಷ್ಟು ಸಾಧ್ಯವೋ ಅಷ್ಟು ವರ್ಷ ನಮ್ಮ ಮಂಗಳೂರಿನಲ್ಲಿಯೇ ಉಳಿಸುವ ಕೆಲಸ ಆಗಬೇಕು, ಅವಧಿಪೂರ್ವವಾಗಿ ಎಲ್ಲಿಯಾದರೂ ಸಂದೀಪ್ ಪಾಟೀಲ್ ಎತ್ತಂಗಡಿ ಅದರೆ ಅಂತಹ ಜನಪ್ರತಿನಿಧಿಯನ್ನು ಮಂಗಳೂರಿನ ನಾಗರಿಕರು ಕ್ಷಮಿಸಲಾರರು. ಪಾಟೀಲ್ ಹೋಗುತ್ತಿರುವ ಸ್ಪೀಡ್ ನೋಡಿದ್ರೆ ಶೀಘ್ರದಲ್ಲಿ ಬೆಟ್ಟಿಂಗ್ ಜಾಲ ನಡೆಸುವವರು, ಅಕ್ರಮ ಗೋಹತ್ಯೆ ನಡೆಸುವವರು, ದೋನಂಬ್ರ ವ್ಯವಹಾರದವರು ಒಟ್ಟಾಗಿ ಏನಾದ್ರೂ ರಣತಂತ್ರ ನಡೆಸುವ ಸಾಧ್ಯತೆ ಇದೆ. ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಹೇಗಾದರೂ ಮಾಡಿ ಸಂದೀಪ್ ಪಾಟೀಲ್ ಅವರನ್ನು ಇಲ್ಲಿಂದ ಕಳಿಸಿಕೊಡಿ ಎಂದು ಯುಟಿ ಖಾದರ್ ಅವರ ಕೈಕಾಲು ಹಿಡಿಯಬಹುದು. ಖಾದರ್ ಜನರಿಗಾಗಿ ಏನಾದರೂ ಒಂದಿಷ್ಟು ಒಳ್ಳೆಯದು ಮಾಡಲು ಸಾಧ್ಯವಿದ್ದರೆ ಅದು ಸಂದೀಪ್ ಪಾಟೀಲರನ್ನು ಅವಧಿಪೂರ್ತಿ ಮಂಗಳೂರಿನಲ್ಲಿಯೇ ಉಳಿಸುವುದು.

ಗೋಕಳ್ಳರಿಗೆ ಎಚ್ಚರ…

ಇಷ್ಟೆಲ್ಲ ನಾನು ಯಾಕೆ ಬರೆಯುತ್ತಿದ್ದೇನೆ ಎಂದರೆ ಸಂದೀಪ್ ಪಾಟೀಲ್ ಅಕ್ರಮ ಗೋಸಾಗಾಟದಲ್ಲಿ ಭಾಗಿಯಾಗಿರುವವರನ್ನು, ಅಕ್ರಮ ಗೋಹತ್ಯಾ ಕಸಾಯಿ ಖಾನೆ ನಡೆಸುವವರನ್ನು ಎಲ್ಲಾ ಕರೆಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬಾಲ ಬಿಚ್ಚಿದರೆ ಕಟ್ ಮಾಡಿ ಬಿಸಾಡುತ್ತೇನೆ ಎಂಬರ್ಥದ ಮಾತುಗಳನ್ನು ಹೇಳಿದ್ದಾರೆ. ಸಂದೀಪ್ ಪಾಟೀಲ್ ನಿರಂತರವಾಗಿ ಗೋಸಾಗಾಟದಲ್ಲಿ ಇರುವ ಕೆಲವರನ್ನು ಕರೆಸಿ ಸ್ಟ್ರಾಂಗ್ ಆಗಿ ವಾರ್ನಿಂಗ್ ಮಾಡಿದ್ದಾರೆ. ಅಲ್ಲಿಗೆ ಬಹುಶ: ಮಂಗಳೂರಿನಲ್ಲಿ ಸದ್ಯ ಅಕ್ರಮ ಗೋಸಾಗಾಟ, ಗೋಕಳ್ಳತನದಂತಹವುಗಳು ನಡೆಯಲಿಕ್ಕಿಲ್ಲ ಎನ್ನುವುದು ನನ್ನ ಭಾವನೆ. ಯಾಕೆಂದರೆ ಪಾಟೀಲ್ ಹೇಳಿದಂತೆ ಮಾಡಿ ತೋರಿಸುವವರು. ಪೊಲೀಸರೊಂದಿಗೆ ನಮ್ಮ ಸೆಟ್ಟಿಂಗ್ ಇದೆ ಎಂದು ಇಲ್ಲಿಯ ತನಕ ಧೈರ್ಯದಿಂದ ಅಕ್ರಮ ಗೋಸಾಗಾಟ, ಗೋಕಳ್ಳತನ ಮಾಡುತ್ತಿದ್ದವರು, ಯಾವ ಪೊಲೀಸ್ ಕಮೀಷನರ್ ಬಂದರೂ ನಮಗೆ ಹೆದರಿಕೆ ಇಲ್ಲ ಎಂದು ಅಂದುಕೊಳ್ಳುತ್ತಿದ್ದವರು, ಮಾಮೂಲಿ ಕೊಟ್ಟು ಎಡ್ಜಸ್ಟ್ ಆಗಿದ್ದವರಿಗೆ ಇದು ಎಚ್ಚರಿಕೆಯ ಗಂಟೆ ಎಂದು ಅನಿಸುತ್ತದೆ. ಅಲ್ಲಿಗೆ ಪೊಲೀಸ್ ಕಮೀಷನರ್ ಅವರಿಗೆ ಮನವಿ ಕೊಟ್ಟು ಫೋಟೋ ತೆಗೆಸಿ ಬಂದ ಅಷ್ಟೂ ಬಿಜೆಪಿ ನಾಯಕರು ತಮ್ಮ ಮನವಿ ಸಾರ್ಥಕವಾಯಿತು ಎಂದು ನಿಟ್ಟುಸಿರುಬಿಡಬಹುದು. ಇಷ್ಟಾಗಿಯೂ ಯಾವುದಾದರೂ ಗೋಕಳ್ಳ ಲುಂಗಿ ಮೇಲೆತ್ತಿ ಒಂದು ಕೈ ನೋಡಿಬಿಡೋಣ, ನಾನು ತುಂಬಾ ಪೊಲೀಸ್ ಕಮೀಷನರ್ ಗಳನ್ನು ನೋಡಿದ್ದೇನೆ ಎಂದು ಹುಂಬ ಧೈರ್ಯದಿಂದ ರಾತ್ರಿ ಟೆಂಪೋ ಹೊರಗೆ ತೆಗೆದು ಹೊರಟರೆ ಬೆಳಿಗ್ಗೆ ಆಗುವಷ್ಟರಲ್ಲಿ ಆ ಕಳ್ಳನ ಮೂಳೆಗಳನ್ನು ಲೆಕ್ಕ ಮಾಡಲು ಅವನ ಮನೆಯವರು ಹುಡುಕಿ ಹೋಗಬೇಕಾಗಬಹುದು. .

ನಿಮ್ಮ ಹಿಂದೆ ನಾವಿದ್ದೇವೆ…

ಇಲ್ಲಿ ಇನ್ನೊಂದು ವಿಷಯ ಏನೆಂದರೆ ಅಕ್ರಮ ಗೋಸಾಗಾಟ ತಡೆಯಲು ಅಲ್ಲಲ್ಲಿ ಚೆಕ್ ಪೋಸ್ಟ್ ಗಳು ಆಕ್ಟಿವ್ ಆಗಿ ಕಾರ್ಯನಿರ್ವಹಿಸಬೇಕು. ಒಂದು ವೇಳೆ ಒಂದು ಚೆಕ್ ಪೋಸ್ಟಿನಲ್ಲಿ ಅಕ್ರಮ ಗೋಸಾಗಾಟದ ವಾಹನ ಪತ್ತೆಯಾದರೆ ಆಗ ಅದು ಯಾವ ಚೆಕ್ ಪೋಸ್ಟ್ ದಾಟಿ ಬಂದಿದೆ ಎನ್ನುವುದನ್ನು ಪತ್ತೆ ಹಚ್ಚಿ ಅಲ್ಲಿನ ಪೊಲೀಸ್ ಸಿಬ್ಬಂದಿಗಳು ಯಾಕೆ ಬಿಟ್ಟರು ಎನ್ನುವುದನ್ನು ತಿಳಿದುಕೊಳ್ಳಬೇಕು. ಆಗ ಇದು ಇನ್ನಷ್ಟು ಪರಿಣಾಮಕಾರಿಯಾಗಿ ಬಿಡುತ್ತದೆ. ಇನ್ನು ಅಕ್ರಮ ಸಾಗಾಟ ಪತ್ತೆ ಹಚ್ಚುವ ಪೊಲೀಸ್ ಸಿಬ್ಬಂದಿಗಳನ್ನು ಕರೆಸಿ ಅವರಿಗೆ ಪೊಲೀಸ್ ಕಮೀಷನರ್ ಅಭಿನಂದಿಸಿದರೆ ಅದು ಮಾಧ್ಯಮಗಳಲ್ಲಿ ವರದಿಯಾಗುತ್ತದೆ. ಆಗ ಇನ್ನಷ್ಟು ಪೊಲೀಸರಿಗೆ ಅದು ಸೂರ್ತಿಯಾಗುತ್ತದೆ. ವಿಮಾನ ನಿಲ್ದಾಣಗಳಲ್ಲಿ ಮಾದಕ ದ್ರವ್ಯ ಅಥವಾ ಚಿನ್ನದ ಬಿಸ್ಕಿಟ್ ಹಿಡಿಯುವ ರಾಷ್ಟ್ರೀಯ ಭದ್ರತಾ ಸಿಬ್ಬಂದಿಗಳನ್ನು ಗುರುತಿಸುವ ವಿಧಾನ ಇದೆ. ಅಂತಹುದು ಇಲ್ಲಿ ಕೂಡ ಮಾಡಲಿ ಎನ್ನುವುದು ಹಾರೈಕೆ.

ಇದು ಕೇವಲ ಗೋ ವಿಷಯದಲ್ಲಿ ಮಾತ್ರವಲ್ಲ. ಪ್ರತಿ ಶನಿವಾರ ಪೊಲೀಸ್ ಕಮೀಷನರೇಟ್ ಕಚೇರಿಯಲ್ಲಿ ನಡೆಯುವ ಸಾರ್ವಜನಿಕರೊಂದಿಗಿನ ಫೋನ್ ಇನ್ ಕಾರ್ಯಕ್ರಮ ಕೂಡ ಕೇವಲ ಮಾಡಬೇಕು ಎನ್ನುವ ಕಾರಣಕ್ಕೆ ಸಂದೀಪ್ ಪಾಟೀಲ್ ನಡೆಸುತ್ತಿಲ್ಲ. ಅದು ಉಪಯೋಗವಾಗಬೇಕು ಎನ್ನುವ ತುಡಿತ ಅವರಲ್ಲಿದೆ.!

  • Share On Facebook
  • Tweet It


- Advertisement -


Trending Now
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Hanumantha Kamath January 27, 2023
ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
Hanumantha Kamath January 26, 2023
Leave A Reply

  • Recent Posts

    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
    • ವಕ್ಫ್ ಬೋರ್ಡ್ ಅಧ್ಯಕ್ಷರ ಕ್ಲೈಮ್ಯಾಕ್ಸ್ ಆಟದಿಂದ ಬಿಜೆಪಿಗೆ ಟೆನ್ಷನ್!
  • Popular Posts

    • 1
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 2
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search