• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಯಾರನ್ನು ಎಷ್ಟು ಹತ್ತಿರ ಬಿಟ್ಟುಕೊಳ್ಳುತ್ತಾರೆ ಎನ್ನುವ ಮೇಲೆ ಬಿಎಸ್ ವೈ ಅಧಿಕಾರ ಉಳಿಯಲಿದೆ!!

Hanumantha Kamath Posted On July 26, 2019


  • Share On Facebook
  • Tweet It

ಬಿ.ಎಸ್.ಯೂಡಿಯೂರಪ್ಪ ಮತ್ತೊಮ್ಮೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿದ್ದಾರೆ. ಬಹುಶ: ಇದು ಅವರ ಪಾಲಿನ ನಿರ್ಣಾಯಕ ಹೋರಾಟ. ಇದು ಅವರ ಪಾಲಿನ ಕೊನೆಯ ಅವಕಾಶವೂ ಆಗಲಿದೆ. ಕೈಗೆ ಬಂದ ಅಧಿಕಾರವನ್ನು ಬಿಎಸ್ ವೈ ಎಷ್ಟು ದಿನ ತಮ್ಮ ಕೈಯಲ್ಲಿ ಉಳಿಸಿಕೊಳ್ಳಲಿದ್ದಾರೆ ಎನ್ನುವುದು ಅವರ ಮೇಲೆ ಬಿಟ್ಟಿದ್ದು. ಸರಿಯಾಗಿ ನೋಡಿದರೆ ಯಡಿಯೂರಪ್ಪ ನಿಜಕ್ಕೂ ಜನಪರ ಕಾಳಜಿ ಉಳ್ಳ ಆಡಳಿತಾಧಿಕಾರಿ. ಅವರು ಹಿಂದಿನ ಬಾರಿ ಬಿಜೆಪಿಯ ಐದು ವರ್ಷಗಳ ಆಡಳಿತಾವಧಿಯಲ್ಲಿ ಮೂರು ವರ್ಷ ನಾಲ್ಕು ತಿಂಗಳು ಮುಖ್ಯಮಂತ್ರಿಯಾಗಿದ್ದರಲ್ಲ, ಆಗ ನಿಜಕ್ಕೂ ಉತ್ತಮ ಜನವಿಶ್ವಾಸ ಗಳಿಸಿಕೊಂಡಿದ್ದರು. ಮಣ್ಣಿನ ಮಗ, ಅಹಿಂದ ನಾಯಕ ಎಂದು ಯಾರ್ಯಾರೋ ಏನೇನೋ ಬಿರುದು ಬಾವಲಿಗಳನ್ನು ಇಟ್ಟುಕೊಂಡಿದ್ದರೂ ನಿಜವಾದ ಅರ್ಥದಲ್ಲಿ ರೈತರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಆಸರೆಯಾದವರು ಯಡಿಯೂರಪ್ಪ.

ನಿಮಗೆ ನೆನಪಿರಬಹುದು, ಸಂಧ್ಯಾ ಸುರಕ್ಷ ಯೋಜನಾ. ಯಾರಿಗೆ ಗಂಡು ಮಕ್ಕಳಿಲ್ಲ, ಕೇವಲ ಹೆಣ್ಣುಮಕ್ಕಳು ಮಾತ್ರ ಇದ್ದಾರೋ ಅವರಿಗೆ ಇಳಿಗಾಲದಲ್ಲಿ ಅವಶ್ಯಕತೆ ಬರುತ್ತೆ ಎನ್ನುವ ಕಾರಣಕ್ಕೆ ಅಂತಹ ಕುಟುಂಬಕ್ಕೆ ಒಂದು ಸಾವಿರ ರೂಪಾಯಿ ಸರಕಾರದಿಂದ ಕೊಡುವ ಯೋಜನೆ ಯಡಿಯೂರಪ್ಪರದ್ದು. ಅದರ ನಂತರ ವೃದ್ಧಾಪ್ಯ ಯೋಜನೆಯಲ್ಲಿ 60 ವರ್ಷದ ಹಿರಿಯ ನಾಗರಿಕರಿಗೆ 400 ರೂಪಾಯಿ ಇದ್ದದ್ದು ಒಂದು ಸಾವಿರ ರೂಪಾಯಿ ಮಾಡಿದ್ದು ಇದೇ ಯಡಿಯೂರಪ್ಪ. ಹೀಗೆ ಬಿಎಸ್ ವೈ ಹಲವು ಯೋಜನೆಗಳನ್ನು ಜಾರಿಗೆ ತರುವ ಹುಮ್ಮಸ್ಸಿನಲ್ಲಿದ್ದರು. ಒಂದು ಕಡೆ ಕೂತು ಕೆಲಸ ಮಾಡಿದರೆ ಯಡಿಯೂರಪ್ಪ ರಾಷ್ಟ್ರದಲ್ಲಿ ಪ್ರಭಾವಿ ನಾಯಕರಾಗಬಹುದಿತ್ತು. ಅವರಿಗೆ ಆ ಸಾಮರ್ತ್ಯ ಮತ್ತು ಛಲ ಎರಡೂ ಇತ್ತು.

ಆದರೆ ಅಷ್ಟಾಗುವಾಗ ಯಡಿಯೂರಪ್ಪನವರ ವರ್ಚಸ್ಸು ಬಳಸಿಕೊಂಡ ಅವರ ಹಿಂದು ಮುಂದು ಸುತ್ತು ಇರುವವರು ಬಿಎಸ್ ವೈ ದಾರಿ ತಪ್ಪಿಸಿಬಿಟ್ಟರು. ರಾಜಮಾರ್ಗದಲ್ಲಿ ಹೋಗುತ್ತಿದ್ದ ಬಿಎಸ್ ವೈಯವರನ್ನು ಅಡ್ಡದಾರಿಯಲ್ಲಿ ಕರೆದುಕೊಂಡು ಹೋಗಿಬಿಟ್ಟರು. ಕುಟುಂಬ ಪ್ರೀತಿ, ತನ್ನೊಂದಿಗೆ ಕಷ್ಟಪಟ್ಟು ಪಕ್ಷ ಕಟ್ಟಿದವರು ಎನ್ನುವುದಕ್ಕೂ, ಅನೇಕ ಕಾರಣಗಳಿಂದ ಯಡಿಯೂರಪ್ಪನವರು ತಮ್ಮವರು ಮಾಡಿದ್ದ ಎಲ್ಲದಕ್ಕೂ ಸುಮ್ಮನೆ ಕುಳಿತುಬಿಟ್ಟರು. ಅದು ಅವರನ್ನು ಎಲ್ಲಿಗೆ ಕರೆದುಕೊಂಡು ಹೋಗಿತ್ತು ಎಂದರೆ ಯಡಿಯೂರಪ್ಪನವರು ತಮಗೆ ಗೊತ್ತೇ ಆಗದೇ ಜೈಲಿನ ತಳಬಾಗಿನ ತನಕ ಹೋಗಿ ಬರಬೇಕಾಯಿತು. ಅಕ್ಷರಶ: ಜನರ ಮಧ್ಯದಲ್ಲಿ ಇದ್ದ ನಾಯಕನೊಬ್ಬನನ್ನು ಅವರ ಹೊಗಳುಭಟ್ಟರು ತಾವು ತಿಂದು ಬಿಎಸ್ ವೈ ಸಫಾರಿಗೆ ಒರೆಸಿಬಿಟ್ಟಿದ್ದರು. ಯಡ್ಯೂರಪ್ಪ ಎಚ್ಚರಗೊಳ್ಳುವ ಹೊತ್ತಿಗೆ ರಾಜ್ಯ ಬಿಜೆಪಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಜಗದೀಶ್ ಶೆಟ್ಟರ್ ಅವರಿಗೆ ಪಟ್ಟ ಕಟ್ಟಿಬಿಟ್ಟಿತ್ತು. ಆಗಿನ್ನೂ ಅಮಿತ್ ಶಾ-ಮೋದಿ ಮುಷ್ಟಿಗೆ ರಾಷ್ಟ್ರೀಯ ಬಿಜೆಪಿ ಬಂದಿರಲಿಲ್ಲ. ಬಿಜೆಪಿ ಹೈಕಮಾಂಡ್ ಇವತ್ತಿನಷ್ಟು ಬಲಶಾಲಿಯಾಗಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಎಷ್ಟು ಸ್ಟ್ರಾಂಗ್ ಇತ್ತು ಎಂದರೆ ಸೋನಿಯಾ ಗಾಂಧಿ ಬೆರಳು ತೋರಿಸಿದ ಕಡೆ ಕಾಂಗ್ರೆಸ್ ನಾಯಕರು ಕುಳಿತುಕೊಳ್ಳುವ ಸ್ಥಿತಿಯಲ್ಲಿದ್ದರು.

ಅದೆಲ್ಲ ಆಗಿ ಈಗ ಕಾಲ ಬದಲಾಗಿದೆ. ಕಾವೇರಿಯಿಂದ ನೇತ್ರಾವತಿಯ ತನಕ ಸಾಕಷ್ಟು ನೀರು ಹರಿದುಹೋಗಿದೆ. ಮೇಲೆ ಅಮಿತಾ ಶಾ ಇದ್ದಾರೆ. ಒಮ್ಮೆ ಕೆಮ್ಮಬಹುದಾ ಎಂದು ಅವರನ್ನು ಕೇಳಿಯೇ ಇಲ್ಲಿ ಮುಖ್ಯಮಂತ್ರಿ ಕೆಮ್ಮುವ ಸ್ಥಿತಿಯಿದೆ. ಕುಟುಂಬದ ಸದಸ್ಯರು ಮುಖ್ಯಮಂತ್ರಿ ಕಚೇರಿಯಲ್ಲಿ ಆಗಾಗ ಕಾಣಿಸಿಕೊಂಡರೂ ಅದು ಸಿಎಂಗೆ ಡೆಂಜರ್ ಸಿಗ್ನಲ್. ಭ್ರಷ್ಟಾಚಾರದ ವಾಸನೆ ಬೆಂಗಳೂರಿನ ಗಲ್ಲಿಯಿಂದ ಬಂದರೂ ಸಾಕು, ಅದು ಮುಖ್ಯಮಂತ್ರಿಯ ಪಾಲಿಗೆ ಕಂಟಕವೇ ಆಗಲಿದೆ. ಆದ್ದರಿಂದ ಬಿಎಸ್ ವೈ ಇನ್ನು ಹಿಂದಿಗಿಂತ ಹೆಚ್ಚು ಎಚ್ಚರಿಕೆಯಿಂದ ಈ ಬಾರಿ ಇರಬೇಕಾಗುತ್ತದೆ. ಅವರ ಹೊಗಳುಭಟ್ಟರು, ಕುಟುಂಬ ಸದಸ್ಯರು, ಆಪ್ತರು, ಆಪ್ತೆಯರು ಎಷ್ಟು ದಿನ ಯಡ್ಯೂರಪ್ಪನವರಿಂದ ದೂರ ಇದ್ದು, ಬಿಎಸ್ ವೈಯನ್ನು ಅವರ ಪಾಲಿಗೆ ಆಡಳಿತ ಮಾಡಿಕೊಡಲು ಬಿಟ್ಟಷ್ಟು ರಾಜ್ಯ ಬಿಜೆಪಿಗೂ ಒಳ್ಳೆಯದು. ಇಲ್ಲದೇ ಹೋದರೆ ಯಡಿಯೂರಪ್ಪನವರಿಗೂ ಇದು ಕೊನೆಯ ಮುಖ್ಯಮಂತ್ರಿ ಅವಕಾಶ ಮತ್ತು ಬಿಜೆಪಿಗೂ ಕೊನೆಯ ಅಧಿಕಾರದ ಅವಕಾಶ ಆಗಲಿದೆ. ಒಟ್ಟಿನಲ್ಲಿ ಎಲ್ಲವೂ ಯಡಿಯೂರಪ್ಪನವರು ಯಾರನ್ನು ಎಷ್ಟು ಹತ್ತಿರ ಬಿಟ್ಟುಕೊಡುತ್ತಾರೆ ಎನ್ನುವ ಮೇಲೆ ಅವಲಂಬಿತವಾಗಿದೆ. ಹಿಂದಿನ ತಪ್ಪು ಬಿಎಸ್ ವೈ ಮಾಡಲಿಕ್ಕಿಲ್ಲ, ಯಾಕೆಂದರೆ ಅವರು ನುರಿತ ರಾಜಕಾರಣಿ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search