ಹೃದಯ ಸದಾ ನಗುತಿರಲಿ, ಹೃದಯಾಘಾತ ಆಗದಿರಲಿ!
ಹೃದಯ ದೇಹದ ಅತಿ ಮುಖ್ಯ ಭಾಗ.ಒಂದು ವೇಳೆ ಇದರ ಲಬ್ ಡಬ್ ಬಡಿತ ನಿಂತಲ್ಲಿ ಅದೇ ಜೀವನದ ಕಡೆ ಸಮಯ.ಹೃದಯಾಘಾತ ಇತ್ತೀಚಿಗೆ ಹೆಚ್ಚುತ್ತಿರುವ ಸಮಸ್ಯೆಯಾಗಿದೆ .ಹೆಚ್ಚಿದ ರಕ್ತದ ಒತ್ತಡವೇ ಇದಕ್ಕೆ ಕಾರಣ.ಹಿಂದೆ ವಯಸ್ಸಾದವರಿಗೆ ಮಾತ್ರ ಈ ತೊಂದರೆ ಅಂತ ಇತ್ತು ,ಆದ್ರೆ ಈಗ ವಯೋಮಿತಿಯಿಲ್ಲದೆ ,ದಪ್ಪ -ತೆಳ್ಳಗಿನ ಭೇದ ಭಾವವಿಲ್ಲದೆ ಹೃದಯಾಘಾತ ಜೀವನಕ್ಕೆ ಘಾಸಿಯನ್ನು ಉಂಟು ಮಾಡುತ್ತಿದೆ. ಇದನ್ನು ಮೊಳಕೆಯಿಂದಲೇ ತಡೆಯುವುದಕ್ಕೆ ಆರೋಗ್ಯಕರ ಜೀವನ ಶೈಲಿ ಅಗತ್ಯ .
ಹೃದಯಾಘಾತಕ್ಕೆ ಕಾರಣಗಳು
೧.ವಂಶಪಾರಂಪರ್ಯವಾಗಿ ಬರುವ ಸಾಧ್ಯತೆಗಳಿವೆ
೨.ಹೆಚ್ಚಿನ ಕೊಲೆಸ್ಟ್ರಾಲ್
೩ .ದೇಹಕ್ಕೆ ವ್ಯಾಯಾಮ ಇಲ್ಲದಿರುವುದು
೪.ಹಸಿರು ತರಕಾರಿ ,ಹಣ್ಣುಗಳ ಕಡಿಮೆ ಸೇವನೆ
jogging ಹೃದಯಾಘಾತವನ್ನು ತಡೆಯುವ ವಿಧಾನ
೧.ಕೊಬ್ಬು ಪದಾರ್ಥಗಳನ್ನು ಕಡಿಮೆ ಸೇವಿಸಬೇಕು
೨.ದಿನಕ್ಕೆ ಅರ್ಧ ಗಂಟೆ ವ್ಯಾಯಾಮ ಮಾಡಬೇಕು
೩.ಕುಟುಂಬದಲ್ಲಿ ಹೃದ್ರೋಗಿಗಳಿದ್ದಲ್ಲಿ ತಿಂಗಳಿಗೊಮ್ಮೆ ಬಿಪಿ ,ಡಯಾಬಿಟಿಸ್,ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಕೊಳ್ಳಬೇಕು
೪.ವಾರಕ್ಕೊಮ್ಮೆ ಮೀನು ಸೇವಿಸಬೇಕು
೫.ವಿಟಮಿನ್ ಸಿ ,ಇ ಇರುವ ಆಹಾರಗಳಾದ ಹಸಿ ಈರುಳ್ಳಿ ,ಬೆಳ್ಳುಳ್ಳಿ ತಿನ್ನಬೇಕು .
ಇದೆಲ್ಲದರೊಂದಿಗೆ ಹೃದಯದ ಆರೋಗ್ಯಕ್ಕೆ ಮಾನಸಿಕವಾಗಿ ಬಲಿಷ್ಠವಾಗಿರುವುದು ಮತ್ತು ಖುಷಿಯಾಗಿರುವುದು ಬಹಳ ಅಗತ್ಯ ಉದ್ಯೋಗ, ಸಂಸಾರ ,ಹಣ ಸಂಪಾದನೆ ಇದರೊಂದಿಗೆ ಬದಲಾಗುತ್ತಿರುವ ಜೀವನ ಶೈಲಿ ಹೀಗಿರುವಾಗ ಒತ್ತಡಗಳು ಸಹಜ .ಇದನ್ನು ಕಡಿಮೆ ಮಾಡಿಕೊಳ್ಳುವುದರಿಂದ ಹೃದಯದ ಆರೋಗ್ಯವು ಚೆನ್ನಾಗಿರುತ್ತದೆ .ಧ್ಯಾನ ಮಾಡುವುದು ಒಂದು ಒಳ್ಳೆಯ ಹವ್ಯಾಸವಾಗಿದೆ.ಇದನ್ನು ನುರಿತ ತಜ್ಞರಿಂದ ಕಲಿತುಕೊಳ್ಳಬೇಕು .ಇದರಿಂದ ಮನಸ್ಸು ಕೇಂದ್ರೀಕೃತವಾಗಲು ,ಖುಷಿಯಾಗಿರಲು ಸಹಾಯಕಾರಿಯಾಗುತ್ತದೆ.ಬೆಳಗ್ಗಿನ ಜಾವದ ನಡೆಯುವಿಕೆ (ವಾಕಿಂಗ್ ) ಇದು ಮನಸ್ಸನ್ನು ಆಹ್ಲಾದಕಾರಿಯಾಗಿ ಇರಿಸುತ್ತದೆ .ಇದರೊಂದಿಗೆ ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಸಮವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳುವುದು ಒಳ್ಳೆಯದು .ಇದರಿಂದ ಸೋಲು ಇನ್ನು ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸಿದರೆ ,ಗೆಲುವು ಇನ್ನು ಹುಮ್ಮಸ್ಸನ್ನು ನೀಡುತ್ತದೆ .ಸಮಚಿತ್ತದಿಂದ ಸ್ವೀಕರಿಸಿದರೆ ಎಲ್ಲವೂ ಸುಂದರವಾಗಿರುತ್ತದೆ .
ಜೊತೆಗೆ ಗೆಳೆಯ ಗೆಳತಿಯರೊಡನೆ ಹರಟೆ ,ಕುಟುಂಬದವರೊಂದಿಗೆ ಪ್ರೀತಿಯ ಮಾತು ,ಜೀವನ ಸಂಗಾತಿಯೊಡನೆ ಮುದವಾದ ಮಾತು, ಮಕ್ಕಳೊಂದಿಗೆ ಆಟ ಇವೆಲ್ಲವೂ ಆರೋಗ್ಯವಂತ ಹೃದಯಕ್ಕೆ ಒಳ್ಳೆಯದು. ತಿಂಗಳಿಗೊಮ್ಮೆಯಾದರೂ ಅಜ್ಜ ಅಜ್ಜಿಯರ ಭೇಟಿ, ಹಳೆ ತಲೆಗಳೊಂದಿಗೆ ಸಂವಾದ ತೋಟ ಗದ್ದೆಗಳಲ್ಲಿ ಪಯಣ, ಹಳ್ಳ ಕೊಳ್ಳಗಳಲ್ಲಿ ಈಜು ಕಾಡು ಮೇಡುಗಳಲ್ಲಿ ಅಲೆದಾಟ ಇವೆಲ್ಲವೂ ಮುಖ್ಯ. ಹೃದಯ ದೇಹದ ಅತಿಮುಖ್ಯ ಭಾಗ. ಇದು ನಗುತ್ತಿದ್ದರೆ ಜೀವನ ಸುಲಭ ಇಲ್ಲವೇ ದುರ್ಲಭ. ಆರೋಗ್ಯಕರ ಹೃದಯಕ್ಕೆ ಮಾನಸಿಕ ನೆಮ್ಮದಿಗಿಂತ ದೊಡ್ಡ ಮಿತ್ರನಿಲ್ಲ. ಅದರೊಂದಿಗೆ ೪೦ ವರ್ಷ ದಾಟಿದ ಮೇಲೆ ತಿನ್ನುವ ಆಹಾರದಲ್ಲಿ ಗಮನಾರ್ಹ ಬದಲಾವಣೆಗಳನ್ನೂ ಮಾಡಿಕೊಳ್ಳಬೇಕು. ಪ್ರತಿದಿನ ಬೆಳಗ್ಗೆ ಧನಾತ್ಮಕ ಯೋಚೆನೆಗಳಿಂದ ಶುರುವಾಗಲಿ, ಪ್ರತಿರಾತ್ರಿ ನಿದ್ರಿಸುವ ಮುನ್ನ ಧನಾತ್ಮಕವಾಗಿರಿ. ಇದು ಹೃದಯವನ್ನು ಸದಾಕಾಲ ರಕ್ಷಿಸುತ್ತದೆ .
ನಗುತಿರುವ ಹೃದಯ ನಿಮ್ಮದಾಗಲಿ
Leave A Reply