• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪೂಜಾರಿ ಅನುಭವದ ಕಣದಷ್ಟು ಇಲ್ಲದವರು ಕಾಂಗ್ರೆಸ್ಸನ್ನು ಮಂಗಳೂರಿನ ಪಾಲಿಕೆಯಲ್ಲಿ ಮುಳುಗಿಸಿಬಿಟ್ಟರು!!

Hanumantha Kamath Posted On November 22, 2019
0


0
Shares
  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ಬಳಿಕ ಕಾಂಗ್ರೆಸ್ಸಿಗರು ಕಣ್ಣೀರು ಹಾಕಬೇಕಾಗುತ್ತದೆ ಎಂದು ಚುನಾವಣೆಗೆ ನಾಲ್ಕೈದು ದಿನಗಳು ಇರುವಾಗ ಕಾಂಗ್ರೆಸ್ಸಿನ ಒಂದು ಕಾಲದ ಜಿಲ್ಲಾ ಹೈಕಮಾಂಡ್ ಜನಾರ್ದನ ಪೂಜಾರಿ ಪೂಜಾರಿ ಹೇಳಿದ್ದರು. ಕಾಂಗ್ರೆಸ್ಸಿಗರು ಕಣ್ಣೀರು ಹಾಕಿದ್ರಾ, ಬಿಟ್ಟರಾ ನಾನು ನೋಡಿಲ್ಲ. ಆದರೆ ಫಲಿತಾಂಶ ನಿಮ್ಮ ಮುಂದೆ ಇರುವುದರಿಂದ ಸೋತವರು ಕೆಲವರು ಹಾಕಿರಬಹುದು. ಹಿಂದಿನಿಂದ ಚೂರಿ ಹಾಕಿದವರು ಖುಷಿ ಪಟ್ಟಿರಬಹುದು. ಏನೂ ಸಂಬಂಧ ಇಲ್ಲದ ಕಾಂಗ್ರೆಸ್ಸಿಗರು ಹೋಗ್ಲಿ ಒಳ್ಳೆಯದಾಯಿತು ಎಂದು ಕೂಡ ಹೇಳಿರಬಹುದು. ಆದರೆ ಕಾಂಗ್ರೆಸ್ಸನ್ನೇ ಉಸಿರಾಡುವ, ಕಾಂಗ್ರೆಸ್ಸನ್ನೇ ಉಂಡು ಮಲಗುವ, ಇಂದಿರಾಗಾಂಧಿಯ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದ, ಮನಮೋಹನ್ ಸಿಂಗ್ ಜೊತೆ ಸಂಜೆಯ ಚಾ ಒಟ್ಟಿಗೆ ಕುಡಿಯುತ್ತಿದ್ದ, ರಾಜೀವ್ ಗಾಂಧಿಯನ್ನು ದೆಹಲಿಯಿಂದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಕರೆಸುವ ಸಾಮರ್ತ್ಯ ಹೊಂದಿದ್ದ ಒಬ್ಬ ವ್ಯಕ್ತಿಯನ್ನು ಕಾಂಗ್ರೆಸ್ಸಿಗರು ಪಾಲಿಕೆ ಚುನಾವಣೆಯಲ್ಲಿ ನಡೆಸಿಕೊಂಡ ರೀತಿಯಿಂದ ಹಿರಿಯ ಕಾಂಗ್ರೆಸ್ ನಾಯಕರು ಬಿಡಿ, ಪೂಜಾರಿ ಅಭಿಮಾನಿಗಳಿಗೆ ಸಾಕಷ್ಟು ಬೇಸರ ತಂದದ್ದು ನಿಜ.

ಜನಾರ್ದನ ಪೂಜಾರಿಯವರ ಒಟ್ಟು ಅನುಭವದ ನೂರನೇ ಒಂದು ಕಣದಷ್ಟು ಅನುಭವವೂ ಇಲ್ಲದ ಎಳಸುಗಳು ಪಾಲಿಕೆ ಚುನಾವಣೆಯನ್ನು ನಡೆಸಿಕೊಂಡು ಹೋದದ್ದೇ ಸೋಲಿಗೆ ಇರುವ ಮುಖ್ಯ ಕಾರಣಗಳಲ್ಲಿ ಒಂದು. ಈ ಚುನಾವಣೆಯ ಮೊದಲು ಕಾಂಗ್ರೆಸ್ಸನ್ನು ಯಾವ ಮತದಾರ ಕೂಡ ನಂಬುವ ಸ್ಥಿತಿಯಲ್ಲಿರಲಿಲ್ಲ. ಇದೇ ಪರಿಸ್ಥಿತಿ ಇವರಿಗೆ 2013 ರಲ್ಲಿ ಕೂಡ ಇತ್ತು. ಆವಾಗಲೂ ಕೂಡ ಜನ ಕಾಂಗ್ರೆಸ್ಸನ್ನು ತಿರಸ್ಕರಿಸಲು ತಯಾರಾಗಿದ್ದರು. ಆದರೆ ಆಗ ಕಾಂಗ್ರೆಸ್ಸಿನಲ್ಲಿದ್ದ ಒಂದು ಟೀಮು ತಮ್ಮ ಭತ್ತಳಿಕೆಯಲ್ಲಿದ್ದ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ತೀರ್ಮಾನಿಸಿಬಿಟ್ಟಿದ್ದರು. ಆ ಬ್ರಹ್ಮಾಸ್ತ್ರ ಬೇರೆ ಯಾರೂ ಅಲ್ಲ, ಜನಾರ್ದನ ಪೂಜಾರಿ. ಪೂಜಾರಿಯವರ ಮನೆಗೆ ಹೋಗಿ ಅವರ ಕೈ ಕಾಲು ಹಿಡಿದು ನೀವೆ ನಮ್ಮ ದೇವರು, ದಯವಿಟ್ಟು ಕಾಪಾಡಬೇಕು ಎಂದು ಗೋಗರೆದರು. ಪೂಜಾರಿಯವರ ಕೈಯಲ್ಲಿ ಪಕ್ಷದ ಜುಟ್ಟು ನೀಡಿದರು. ಅದರ ನಂತರವೇ ಕಾಂಗ್ರೆಸ್ಸಿಗೆ ನಿಜವಾದ ಜೀವ ಬಂದಿತ್ತು. ಪೂಜಾರಿಯವರ ಬಾಯಿಂದ ಏನೆಲ್ಲಾ ಭರವಸೆ ಕೊಡಿಸಲಾಯಿತು. ನನ್ನನ್ನು ನಂಬಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಎನ್ನುವ ಮಟ್ಟಿಗೆ ಪೂಜಾರಿ ಆಖಾಡಕ್ಕೆ ಇಳಿದುಬಿಟ್ಟಿದ್ದರು. ಅವರ ಅಕ್ಕಪಕ್ಕದಲ್ಲಿ ಆವತ್ತೂ ಜಿಲ್ಲೆಯ ಒಂದಿಷ್ಟು ಪ್ರಬುದ್ಧ ರಾಜಕಾರಣಿಗಳು ಇದ್ದರು. ಪಕ್ಷದ ಬಗ್ಗೆ ಪ್ರೀತಿ ಇದ್ದವರಿದ್ದರು. ಪಕ್ಷ ತಮಗೆ ಕೊಟ್ಟ ಸ್ಥಾನಮಾನದ ಋಣ ಇದ್ದವರು ಇದ್ದರು. ಪೂಜಾರಿ ಕಾಂಗ್ರೆಸ್ಸಿನ ಅಷ್ಟು ಹುಳುಕುಗಳ ಮೇಲೆ ತಮ್ಮ ಶಾಲನ್ನು ಹಾಕಿ ಕಾಂಗ್ರೆಸ್ಸನ್ನು ದಡ ಸೇರಿಸಿಬಿಟ್ಟರು. ಅದು ಪೂಜಾರಿ ಕ್ಯಾಪೆಸಿಟಿ.

ಆದರೆ ಈ ಬಾರಿ ಪಕ್ಷಕ್ಕೆ ಬಂದ ಆರು ತಿಂಗಳೊಳಗೆ ಟಿಕೆಟ್ ಸಿಕ್ಕಿ ಶಾಸಕರಾದವರು, ಹಣದ ಥೈಲಿ ಹಿಡಿದು ಪಕ್ಷದಲ್ಲಿ ಉನ್ನತ ಸ್ಥಾನಮಾನ ಪಡೆದು ನಂತರ ಶಾಸಕರಾದವರು ಕಾಂಗ್ರೆಸ್ಸಿನ ಪಾಲಿಕೆ ಚುನಾವಣೆಯ ಸಾರಥ್ಯ ವಹಿಸಿಕೊಂಡು ಬಿಟ್ಟಿದ್ದರು. ಅವರಿಗೆ ಪಕ್ಷ ಗೆಲ್ಲಬೇಕು ಎನ್ನುವುದಕ್ಕಿಂತ ಕೆಲವರಿಗೆ ಬುದ್ಧಿ ಕಲಿಸಬೇಕು ಎನ್ನುವ ಧೋರಣೆ ಇತ್ತು. ತಮಗೆ ಬೇಕಾದವರಿಗೆ ಟಿಕೆಟ್ ಕೊಟ್ಟರು, ಬೇಡದವರಿಗೆ ನಡುಬೀದಿಯಲ್ಲಿ ನಿಲ್ಲಿಸಿದರು. ಸಿಟಿ ಬಸ್ಸಿನಲ್ಲಿ ರಶ್ ಇದ್ದಾಗ ಕಂಡಕ್ಟರ್ ಟಿಕೆಟ್ ಕೊಡುವ ಶೈಲಿ ಇರುತ್ತಲ್ಲ, ಅದಕ್ಕಿಂತಲೂ ನಿಕೃಷ್ಟವಾಗಿ ಕಾಂಗ್ರೆಸ್ ಟಿಕೆಟ್ ಹಂಚಲಾಯಿತು. ಇವರಿಗೆ ಪೂಜಾರಿಯವರ ಸ್ಥಾನಮಾನ ಗೊತ್ತಿಲ್ಲದಿದ್ದರೆ ಬಿಡಿ, ಅವರ ವಯಸ್ಸಿಗಾದರೂ ಮರ್ಯಾದೆ ಕೊಟ್ಟು ಒಮ್ಮೆ ಕಾಲು ಹಿಡಿದು ಆರ್ಶೀವಾದ ಪಡೆದು ಬರೋಣ ಎಂದು ಅನಿಸಲೇ ಇಲ್ಲ. ಒಂದು ಕಡೆಯಲ್ಲಿ ಕ್ರೈಸ್ತ ಮತಗಳು ಕಾಂಗ್ರೆಸ್ಸಿಗೆ ಬೀಳದ ಹಾಗೆ ನೋಡಿಕೊಳ್ಳಲಾಯಿತು, ಮತ್ತೊಂದೆಡೆ ಪೂಜಾರಿಯವರು ತಾವು ಅಧಿಕಾರದಲ್ಲಿದ್ದಾಗ ಅನೇಕ ಮುಸ್ಲಿಂ ಹುಡುಗರನ್ನು ಬೆಳೆಸಿದ್ದರು, ಅಂತವರನ್ನು ಕೂಡ ಮೂಲೆಗುಂಪು ಮಾಡಲಾಯಿತು. ಹೀಗೆ ಬ್ಯಾನರ್, ಬಟ್ಟಿಂಗ್ ಕಟ್ಟುವುದು ಬಿಡಿ, ಮುಟ್ಟಿ ಕೂಡ ನೋಡಿ ಗೊತ್ತಿಲ್ಲದವರ ಕೈಯಲ್ಲಿ ಪಕ್ಷವನ್ನು ಕೊಟ್ಟ ಕಾರಣ ಕಾಂಗ್ರೆಸ್ ಈ ಬಾರಿ ಐತಿಹಾಸಿಕ ಸೋಲನ್ನು ಕಾಣಬೇಕಾಯಿತು. ಅಲ್ಲಿ ಮಂಗಳೂರು ನಗರ ಉತ್ತರದಲ್ಲಿ ಹಿರಿಯ ಕಾಂಗ್ರೆಸ್ಸಿಗ ವಿಜಯ ಕುಮಾರ್ ಶೆಟ್ಟಿಯವರು ಎರಡು ಬಾರಿ ಶಾಸಕರಾಗಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರನ್ನು ಕೂಡ ಕೇವಲವಾಗಿ ಕಂಡ ಮಾಜಿ ಶಾಸಕರುಗಳು ತಮಗಾಗದವರು ಗೆಲ್ಲಬಾರದು ಎಂದು ಚುನಾವಣೆಗೆ ಹೊರಟರೆ ವಿನ: ಈ ಬಾರಿ ಅಧಿಕಾರಕ್ಕೆ ಬರಬೇಕು ಎನ್ನುವ ಯಾವ ಹಪಾಹಪಿಯೂ ಇರಲಿಲ್ಲ. ಅದರೊಂದಿಗೆ ಇವರಿಗೆ ಬುದ್ಧಿ ಬರಲಿ ಎಂದು ಪೂಜಾರಿಯವರು ಮಾಡಿದ ಎರಡು ಸುದ್ದಿಗೋಷ್ಟಿಗಳು ದಡ ಸೇರಲು ಕೈ ಕಾಲು ಬಿಡುತ್ತಿದ್ದ ಕಾಂಗ್ರೆಸ್ಸಿನ ಸೋಲನ್ನು ಖಚಿತಪಡಿಸಿದವು. ಬಹುಶ: ಈ ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಸದ್ಯಕ್ಕಂತೂ ಜಿಲ್ಲಾ ಕಾಂಗ್ರೆಸ್ಸಿನ ಮುಂದೆ ಇಲ್ಲ. ಆದರೆ ಹಿರಿಯರನ್ನು ಕಡೆಗಣಿಸಿದರೆ ಏನಾಗುತ್ತೆ ಎನ್ನುವ ಪಾಠ ಮರಿ ಕಾಂಗ್ರೆಸ್ಸಿಗರು ಕಲಿತರೆ ಮುಂದೆ ಉಪಯೋಗ ಆಗಬಹುದು!

0
Shares
  • Share On Facebook
  • Tweet It




Trending Now
20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
Hanumantha Kamath July 5, 2025
20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
Hanumantha Kamath July 5, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು
    • ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?
    • ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
  • Popular Posts

    • 1
      20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 2
      20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • 3
      ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • 4
      ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • 5
      ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು

  • Privacy Policy
  • Contact
© Tulunadu Infomedia.

Press enter/return to begin your search