• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪ್ಲಾಸ್ಟಿಕ್ ತೊಟ್ಟೆ ಹೊರಗೆ, ಹಸಿ ಕಸ ಅಲ್ಲಿಯೇ, ಒಣ ಅದರೊಂದಿಗೆ ಮಿಕ್ಸ್!!

Hanumantha Kamath Posted On November 23, 2019


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ತ್ಯಾಜ್ಯ ಸಂಗ್ರಹಣೆಗಾಗಿ ತಿಂಗಳಿಗೆ ಅಂದಾಜು ಎರಡು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ. ಆ ಗುತ್ತಿಗೆಯನ್ನು ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ನವರಿಗೆ ಕೊಡಲಾಗಿದೆ. ಅವರು ಆರವತ್ತು ವಾರ್ಡುಗಳಿಂದ ವಾರಕ್ಕೆ ಏಳು ದಿನವೂ ತ್ಯಾಜ್ಯ ಸಂಗ್ರಹ ಮಾಡಬೇಕಾಗುತ್ತದೆ. ಅದರಲ್ಲಿ ಒಂದು ದಿನ ಒಣ ಕಸವನ್ನು ಸಂಗ್ರಹ ಮಾಡಬೇಕಾಗುತ್ತದೆ. ಶುಕ್ರವಾರ ಒಣ ಮತ್ತು ಹಸಿಕಸವನ್ನು ಪ್ರತ್ಯೇಕಿಸಿ ಕೊಡಬೇಕಾಗುತ್ತದೆ. ಆದರೆ ಕಳೆದ ಐದು ವರ್ಷಗಳಲ್ಲಿ ಇವರು ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲೇ ಇಲ್ಲ. ಇದರಿಂದ ಪರಿಸರ ಇಲಾಖೆಯಿಂದ ಮಂಗಳೂರು ಮಹಾನಗರ ಪಾಲಿಕೆಗೆ ನೋಟಿಸ್ ಹೋದ ಕಾರಣ ಕೊನೆಗೆ ಆರವತ್ತರಲ್ಲಿ ಆರು ವಾರ್ಡುಗಳನ್ನು ಆಯ್ಕೆ ಮಾಡಿ ಅಲ್ಲಿ ಕಸವನ್ನು ವಿಭಜಿಸಿ ತೆಗೆದುಕೊಂಡು ಹೋಗುವ ಪ್ರಾಯೋಗಿಕ ವ್ಯವಸ್ಥೆ ಜಾರಿ ಮಾಡಲಾಯಿತು. ಅದರ ಫಲಿತಾಂಶವನ್ನು ನಿಮಗೆ ಮತ್ತೆ ಹೇಳುತ್ತೇನೆ.

ಆದರೆ ಇಲ್ಲಿ ಈಗ ವಿಷಯ ಇರುವುದು ಆಸ್ಪತ್ರೆಗಳಿಗೆ ಮತ್ತು ಹೋಟೇಲ್ ಗಳಿಗೆ ಅವರದ್ದೇ ಆದ ತ್ಯಾಜ್ಯ ಸಂಸ್ಕರಣ ಘಟಕವನ್ನು ಅವರ ಜಾಗದಲ್ಲಿಯೇ ನಿರ್ಮಿಸಲು ಸೂಚಿಸಲಾಗಿದೆ. ಅಲ್ಲಿ ತ್ಯಾಜ್ಯದಿಂದ ಉತ್ಪತ್ತಿಯಾದ ಗೊಬ್ಬರವನ್ನು ಆಸ್ಪತ್ರೆಯವರು ತಮ್ಮ ಆಸ್ಪತ್ರೆಯ ಕಟ್ಟಡದ ಸುತ್ತಮುತ್ತ ಗಿಡ, ಮರಗಳನ್ನು ಬೆಳೆಸಿದ್ದರೆ ಅದಕ್ಕೆ ಉಪಯೋಗಿಸಬಹುದಾಗಿರುತ್ತದೆ. ಆದರೆ ಹೋಟೇಲುಗಳ ಆವರಣದಲ್ಲಿ ಗಿಡ, ಮರಗಳು ಇಲ್ಲದೆ ಹೋದಲ್ಲಿ ಅವರು ಗೊಬ್ಬರದಿಂದ ಏನು ಮಾಡುವುದು ಎನ್ನುವ ಕಾರಣಕ್ಕೆ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆಗೆ ಹೋಟೇಲುಗಳ ಮಾಲೀಕರು ಮನಸ್ಸು ಮಾಡುತ್ತಿಲ್ಲ. ಗೊಬ್ಬರ ಹೋಟೇಲಿನವರಿಗೆ ಬೇಡವಾದರೆ ಅವರು ಅದೇ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸಬಹುದಾಗಿದೆ. ಆದರೆ ಹೋಟೇಲಿನವರಾಗಲಿ, ಆಸ್ಪತ್ರೆಯವರಾಗಲಿ ಇಚ್ಚಾಶಕ್ತಿಯ ಕೊರತೆಯಿಂದ ತಮ್ಮ ಆವರಣದಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆಗೆ ಮುಂದೆ ಬರುತ್ತಿಲ್ಲ. ಅದಕ್ಕೇನೂ ತುಂಬಾ ಜಾಗದ ಅವಶ್ಯಕತೆ ಇಲ್ಲ. ಆದರೂ ಅವರಿಗೆ ನೋಟಿಸ್ ಕೊಟ್ಟು ಮಾಡಲೇಬೇಕು ಎನ್ನುವ ಕಡ್ಡಾಯವನ್ನು ಮಾಡಲು ಪಾಲಿಕೆಗೆ ಸಾಧ್ಯವಾಗಿಲ್ಲ.

ಇನ್ನು ಎರಡನೇಯ ಅಂಶವೆಂದರೆ ನಾವು ಸಾಮಾನ್ಯವಾಗಿ ತ್ಯಾಜ್ಯವನ್ನು ಮನೆಯಲ್ಲಿ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಹಾಕಿ ಅದಕ್ಕೆ ಗಂಟು ಕಟ್ಟಿ ಅದನ್ನು ಮನೆಯ ಕಂಪೌಂಡಿನ ಗೇಟ್ ಬಳಿ ಇಟ್ಟ ದೊಡ್ಡ ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಹಾಕುತ್ತೇವೆ. ಆದರೆ ಈ ಆಂಟೋನಿ ವೇಸ್ಟ್ ನವರು ಪ್ಲಾಸ್ಟಿಕ್ ತೊಟ್ಟೆ ನಿಷೇಧವಾಗಿರುವುದರಿಂದ ಅದನ್ನು ತೆಗೆದುಕೊಂಡು ಹೋಗಲು ನಿರಾಕರಿಸಿ ಆ ತ್ಯಾಜ್ಯವನ್ನು ಪ್ಲಾಸ್ಟಿಕ್ ನಿಂದ ತೆಗೆದು ಅದೇ ಬಾಕ್ಸಿನಲ್ಲಿ ಹಾಕಿ ನಂತರ ಬಾಕ್ಸ್ ಕಸವನ್ನು ತಮ್ಮ ಗಾಡಿಯಲ್ಲಿ ಸುರಿದು ಹೋಗುತ್ತಾರೆ. ನಾವು ಪ್ಲಾಸ್ಟಿಕ್ ತೊಟ್ಟೆಯಲ್ಲಿ ಹಾಕಿದ ತ್ಯಾಜ್ಯವನ್ನು ಇವರು ಬಾಕ್ಸಿನಲ್ಲಿ ಸುರಿದು ಆ ತೊಟ್ಟೆಗಳನ್ನು ಹಾಗೆ ನಡುಬೀದಿಯಲ್ಲಿ ಬಿಸಾಡಿ ಹೋಗುತ್ತಾರೆ. ಆ ತೊಟ್ಟೆಗಳು ಹಾಗೆ ಅಸ್ತವಸ್ಯವಾಗಿ ಅಲ್ಲಿ ಬಿದ್ದಿರುತ್ತವೆ ಅಥವಾ ಪಕ್ಕದ ತೋಡಿಗೆ ಸೇರುತ್ತವೆ. ನಾವು ಇನ್ನೊಂದು ಹೆಚ್ಚುವರಿ ಪ್ಲಾಸ್ಟಿಕ್ ಬಕೇಟನ್ನು ಅಲ್ಲಿ ಇಟ್ಟರೂ ಅವರು ಅದರಲ್ಲಿ ಹಾಕದೇ ತೊಟ್ಟೆಯನ್ನು ಎಲ್ಲೆಲ್ಲಿಯೋ ಬಿಸಾಡಿ ತಮ್ಮ ಉದ್ದಟತನ ಮೆರೆಯುತ್ತಾರೆ. ಇನ್ನು ಇವರ ಧೋರಣೆ ಹೇಗಿದೆ ಎಂದರೆ ಇವರು ವಾರದ ಏಳು ದಿನವೂ ಹಸಿ ಕಸ ಮತ್ತು ಶುಕ್ರವಾರ ಒಣಕಸ ತೆಗೆದುಕೊಂಡು ಹೋಗಬೇಕಲ್ಲ. ಇವರು ಈ ಪ್ರಾಯೋಗಿಕ ವಾರ್ಡುಗಳಲ್ಲಿ ಶುಕ್ರವಾರ ಕಸ ಸಂಗ್ರಹ ಮಾಡಲು ಬರುವುದೇ ಇಲ್ಲ. ಇದರಿಂದ ಮನೆಗಳ ಹೊರಗೆ ಇಟ್ಟ ಬಾಕ್ಸಿನಲ್ಲಿ ಕಸದ ತೊಟ್ಟೆಗಳು ಹಾಗೆ ಬಿದ್ದಿರುತ್ತವೆ. ನಂತರ ಇವರು ಶನಿವಾರ ಬಂದು ಏನು ಮಾಡುತ್ತಾರೆ ಎಂದರೆ ನಾವು ವಿಂಗಡಿಸಿಟ್ಟ ಒಣ ಮತ್ತು ಹಸಿ ಕಸಗಳಿರುವ ಪ್ಲಾಸ್ಟಿಕ್ ತೊಟ್ಟೆಯನ್ನು ಬಿಡಿಸಿ ಅವುಗಳನ್ನೆಲ್ಲ ಒಂದೇ ಬಾಕ್ಸಿನಲ್ಲಿ ಹಾಕಿ ತೆಗೆದುಕೊಂಡು ಹೋಗುತ್ತಾರೆ. ಇದರಿಂದ ಇವರು ಏನು ಸಾಧಿಸಿದಂತೆ ಆಯಿತು.

ಇವತ್ತು ನಾನು ಪ್ರಾಯೋಗಿಕ ಆರು ವಾರ್ಡುಗಳಲ್ಲಿ ಬರುವ ವಾರ್ಡ್ 29 ಕಂಬ್ಳ ವಾರ್ಡಿನ ಅಶ್ವಿನಿ ಅಪಾರ್ಟ್ ಮೆಂಟಿನ ಹೊರಗಿನ ಫೋಟೋಗಳನ್ನು ಇಲ್ಲಿ ಪೋಸ್ಟ್ ಮಾಡಿದ್ದೇನೆ. ನಿಮಗೆ ಇದನ್ನು ನೋಡುವಾಗಲೇ ತ್ಯಾಜ್ಯ ಸಂಗ್ರಹದ ಗುತ್ತಿಗೆ ಪಡೆದುಕೊಂಡ ಆಂಟೋನಿ ವೇಸ್ಟ್ ನವರು ಮಾಡುವ ಕರ್ಮ ಗೊತ್ತಾಗುತ್ತದೆ. ಇವರು ಶುಕ್ರವಾರ ತಮಗೆ ಎಲ್ಲಾ ಕಡೆಯಿಂದ ಒಣಕಸ ತುಂಬಾ ಸಂಗ್ರಹ ಮಾಡಲು ಇರುವುದರಿಂದ ಆವತ್ತು ಹಸಿಕಸ ಸಂಗ್ರಹ ಮಾಡಲು ಆಗುವುದಿಲ್ಲ ಎನ್ನುವುದು ತಪ್ಪು. ಯಾಕೆಂದರೆ ಇವರು ಒಣಕಸ ಸಂಗ್ರಹ ಮಾಡುವ ದಿನ ಅದಕ್ಕಾಗಿಯೇ ಪ್ರತ್ಯೇಕ ವಾಹನವನ್ನು ತಯಾರಾಗಿ ಇಟ್ಟುಕೊಳ್ಳಬೇಕು. ಹಾಗೆ ಮಾಡದೇ ಹಸಿಕಸವನ್ನು  ಅಲ್ಲಿಯೇ ಬಿಟ್ಟು ಹೋಗುವುದು ತಪ್ಪು. ಹಾಗೇ ಶನಿವಾರ ಎರಡೂ ಕಸವನ್ನು ಒಟ್ಟಿಗೆ ಮಾಡಿ ತೆಗೆದುಕೊಂಡು ಹೋಗುವುದು ಕೂಡ ಶುದ್ಧ ಅಸಂಬದ್ಧ. ಇವರಿಗೆ ಸರಿಯಾಗಿ ಕೆಲಸ ಮಾಡಲು ಸೂಚಿಸಬೇಕಾದ ಜವಾಬ್ದಾರಿ ಪಾಲಿಕೆ ಮೇಲಿದೆ. ಅದನ್ನು ನೂತನವಾಗಿ ರಚನೆಯಾಗಲಿರುವ ಪಾಲಿಕೆ ಆಡಳಿತ ಯಾವ ರೀತಿಯಲ್ಲಿ ನಿರ್ವಹಿಸಿಕೊಂಡು ಹೋಗುತ್ತದೆ ಎನ್ನುವುದನ್ನು ನಾವು ನೋಡಲಿದ್ದೇವೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search