ಬಟಾಟೆ ಮತ್ತು ಮೀನು ಹಾಕಿ ಹೇಗೆ ಪದಾರ್ಧ ಮಾಡುವುದಿಲ್ಲವೋ ಹಾಗೆ ಫರ್ನಿಚರ್ ಮತ್ತು ಜ್ಯೂಸ್ ಅಂಗಡಿ!!
ಟ್ರೇಡ್ ಲೈಸೆನ್ಸ್ ನವೀಕರಣ ಮಾಡುವಲ್ಲಿ ಅತೀ ಬುದ್ಧಿವಂತಿಕೆ ತೋರಿಸಿದ ಹಿಂದಿನ ಕಾಂಗ್ರೆಸ್ ಆಡಳಿತದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮಾರ್ಚ್ ಒಳಗೆ ಮುಗಿಯಬೇಕಿದ್ದ ಟ್ರೇಡ್ ಲೈಸೆನ್ಸ್ ನವೀಕರಣ ಇವತ್ತಿಗೂ ಮುಗಿದಿಲ್ಲ. ಈ ಟ್ರೇಡ್ ಲೈಸೆನ್ಸ್ ವಿಳಂಬದಿಂದ ಉದ್ಯಮಿಗಳು ತೊಂದರೆ ಅನುಭವಿಸಿದ್ದಾರೆ. ಆದರೆ ಟ್ರೇಡ್ ಲೈಸೆನ್ಸ್ ನವೀಕರಣ ನಿಗದಿತ ಅವಧಿಗಿಂತ ತಡವಾಗಿ ಮಾಡಿದ ಅಂಗಡಿಯೊಂದಕ್ಕೆ ಯಾವುದೇ ದಂಡ ಹಾಕಲಿಲ್ಲ ಮಾತ್ರವಲ್ಲ ಒಂದೇ ಟ್ರೇಡ್ ಲೈಸೆನ್ಸ್ ನಲ್ಲಿ ಎರಡು ಬೇರೆ ಬೇರೆ ಉದ್ಯಮಗಳು ಇದ್ದರೂ ಪಾಲಿಕೆ ಮೌನವಾಗಿ ಇರುವುದು ಮತ್ತು ಅನಧಿಕೃತ ಅಂಗಡಿಗೆ ತಾತ್ಕಾಲಿಕ ಡೋರ್ ನಂಬರ್ ಕೊಟ್ಟು ನಾಲ್ಕು ವರ್ಷಗಳಾಗಿರುವುದು ಹಿಂದಿನ ಪಾಲಿಕೆ ಆಡಳಿತ ಎಷ್ಟು ಲಂಚಬಾಕವಾಗಿತ್ತು ಎನ್ನುವುದಕ್ಕೆ ಉದಾಹರಣೆಯಾಗಿವೆ. ಅದಕ್ಕೆ ಒಂದು ತಾಜಾ ಉದಾಹರಣೆ ಹೇಳ್ತೆನೆ, ಕೇಳಿ. ಮಂಗಳೂರಿನ ಕೊಡಿಯಾಲ್ ಬೈಲ್ ನ ಪೋಸ್ಟ್ ಆಫೀಸ್ ಇದೆಯಲ್ಲ. ಅಲ್ಲಿ ಓಶಿಯನ್ ಪರ್ಲ್ ಎದುರಿಗೆ ಜಾಗ ಇದೆಯಲ್ಲ. ಅದು ಬಿಷಪ್ ಅವರಿಗೆ ಸೇರಿದ ಜಾಗ. ಅಲ್ಲಿ 2015 ರಲ್ಲಿ ಫರ್ನಿಚರ್ ಮಾರಾಟದ ಅಕ್ರಮ ಕಟ್ಟಡದ ನಿರ್ಮಾಣ ಆಗಿತ್ತು. ಅದಕ್ಕೆ ಕಾಂಗ್ರೆಸ್ ನವರು ತಾತ್ಕಾಲಿಕ ಡೋರ್ ನಂಬ್ರ ಕೊಟ್ಟಿದ್ದರು. ನಂತರ ಅದರ ಪಕ್ಕದಲ್ಲಿಯೇ ಇನ್ನೊಂದು ಅಂಗಡಿಯ ನಿರ್ಮಾಣ ಆಗಿದೆ. ಅದು ಜ್ಯೂಸ್ ಅಂಗಡಿ. ಅದಕ್ಕೆ ಡೋರ್ ನಂಬ್ರ ಕೊಡಲು ಪಾಲಿಕೆ ಕಡೆಯಿಂದ ಸಿದ್ಧತೆ ನಡೆದಾಗ ನಾನು ವಿರೋಧ ವ್ಯಕ್ತಪಡಿಸಿ ಕಂದಾಯ ವಿಭಾಗಕ್ಕೆ ದೂರು ನೀಡಿದ್ದೆ. ಅದು ಅಕ್ರಮ ಕಟ್ಟಡವಾಗಿದ್ದ ಕಾರಣ ಕಾಂಗ್ರೆಸ್ ನವರು ತಾತ್ಕಾಲಿಕ ಡೋರ್ ನಂಬರ್ ಕೊಡಲು ಮುಂದಾಗಿದ್ದರೂ ಕಂಪ್ಲೇಂಟ್ ಇದ್ದ ಕಾರಣ ಕೊಟ್ಟಿರಲಿಲ್ಲ. ನಂತರ ಮಂಗಳೂರಿನ ಪ್ರಭಾವಿ ರಾಜಕೀಯ ವ್ಯಕ್ತಿಯೊಬ್ಬರ ಶಿಫಾರಸ್ಸಿನಿಂದ ಹೆಲ್ತ್ ಇನ್ಸಪೆಕ್ಟರ್ ಯಶವಂತ್ ಅವರು ಅಲ್ಲಿಗೆ ಭೇಟಿ ನೀಡದೆ ಟ್ರೇಡ್ ಲೈಸೆನ್ಸ್ ನವೀಕರಣ ಮಾಡಿದ್ದಾರೆ.
ಅಲ್ಲಿರುವ ಫರ್ನಿಚರ್ ಅಂಗಡಿಯ ಒಟ್ಟು 1760 ಚದರ ಅಡಿ ಜಾಗದಲ್ಲಿ 400 ಚದರ ಅಡಿ ಜ್ಯೂಸ್ ಅಂಗಡಿ ನಿರ್ಮಾಣವಾಗಿದೆ. ಇದಕ್ಕೆರಡಕ್ಕೂ ಟ್ರೇಡ್ ಲೈಸೆನ್ಸ್ ಒಂದೇ ಕೊಡಲಾಗಿದೆ. ಇದು ನಿಜವಾಗಿಯೂ ತಪ್ಪು. ಯಾಕೆಂದರೆ ಒಂದೇ ಟ್ರೇಡ್ ಲೈಸೆನ್ಸ್ ನಲ್ಲಿ ಎರಡು ಉದ್ಯಮಗಳನ್ನು ನಡೆಸುವ ಹಾಗಿಲ್ಲ. ಆಗ ನೀವು ಕೇಳಬಹುದು. ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಎಂದು ಬೇರೆ ಬೇರೆ ಉದ್ಯಮಗಳಲ್ವಾ ಎಂದು. ಬಾರ್ ಅಂಡ್ ರೆಸ್ಟೋರೆಂಟ್ ಅಥವಾ ಬೋರ್ಡಿಂಗ್ ಅಂಡ್ ಲಾಡ್ಜಿಂಗ್ ತರಹದ ಕೆಲವು ಬಿಟ್ಟರೆ ಒಂದಕ್ಕೊಂದು ಸಂಬಂಧವೇ ಇಲ್ಲದ ಎರಡು ಉದ್ಯಮಿಗಳಿಗೆ ಒಂದೇ ಟ್ರೇಡ್ ಲೈಸೆನ್ಸ್ ಕೊಡಲು ಸಾಧ್ಯವಿಲ್ಲ. ಬಟಾಟೆ ಹಾಕಿ ಮೀನಿನ ಪದಾರ್ಥ ಮಾಡುವುದಿಲ್ಲವೋ ಹಾಗೆ.
ಪರ್ನಿಚರ್ ಅಂಗಡಿಗೆ ಈ ಹಿಂದೆಯೇ ಟ್ರೇಡ್ ಲೈಸೆನ್ಸ್ ಇದ್ದರೂ ಅದನ್ನು ಮಾರ್ಚ್ ಒಳಗೆ ಇದ್ದರೆ ನವೀಕರಣ ಮಾಡದೇ ಮೇ 29 ರಂದು ನವೀಕರಣ ಮಾಡಲಾಗಿತ್ತು. ಆದರೆ ಪಾಲಿಕೆಯಲ್ಲಿ ತಡವಾಗಿ ನವೀಕರಣ ಮಾಡಿದ್ದಕ್ಕೆ ಯಾವುದೇ ದಂಡವನ್ನು ಮಾಲೀಕರ ಮೇಲೆ ಹಾಕಿಲ್ಲ. ಒಟ್ಟಿನಲ್ಲಿ ಅನಧಿಕೃತ ಕಟ್ಟಡದಲ್ಲಿ ಫರ್ನಿಚರ್ ಅಂಗಡಿಯ ಜೊತೆಗೆ ಜ್ಯೂಸ್ ಅಂಗಡಿಯನ್ನು ಸೇರಿಸಿದ್ದು ಮೊದಲ ತಪ್ಪು. ಡೋರ್ ನಂಬರ್ ಇಲ್ಲದೆ ಜ್ಯೂಸ್ ಅಂಗಡಿಯನ್ನು ವ್ಯವಹಾರ ಮಾಡಲು ಬಿಟ್ಟಿದ್ದು ಇನ್ನೊಂದು ತಪ್ಪು. ಟ್ರೇಡ್ ಲೈಸೆನ್ಸ್ ಮಾರ್ಚ್ ನಲ್ಲಿ ಆಗಬೇಕಿದ್ದರೂ ಮೇ ಯಲ್ಲಿ ನವೀಕರಣ ಮಾಡಿದ್ದರೂ ದಂಡ ಹಾಕದೇ ಇದ್ದದ್ದು ತಪ್ಪು. ಹೀಗೆ ಬಿಷಪ್ ಹೆಸರಿನ ಜಾಗದಲ್ಲಿ ಅಕ್ರಮಗಳ ಮೇಲೆ ಅಕ್ರಮಗಳು ನಡೆಯುತ್ತಿದ್ದರೂ ಕಾಂಗ್ರೆಸ್ ಆಡಳಿತ ಹಿಂದೆ ಮೌನವಾಗಿತ್ತು. ಈಗ ಆಡಳಿತ ಬದಲಾಗಿದೆ. ಮುಂದೇನೋ, ಯಾರಿಗೆ ಗೊತ್ತು!
Leave A Reply