• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಾಲಿಕೆಗೆ ತಗುಲಿದ ಗ್ರಹಣ ಬಿಡಲು ಶಾಸಕರಿಬ್ಬರು ಪಾಲಿಕೆಯಲ್ಲಿ ಹೋಮ ಮಾಡಿಸಬೇಕೆನೊ??

Hanumantha Kamath Posted On December 30, 2019
0


0
Shares
  • Share On Facebook
  • Tweet It

ಯಾಕೋ ಮಂಗಳೂರು ಮಹಾನಗರ ಪಾಲಿಕೆಗೆ ಗ್ರಹಣ ಹಿಡಿದು ಬಿಟ್ಟಿದೆ. ಕೆಲವು ರಾಶಿಯವರಿಗೆ ಮೊನ್ನೆ ಗ್ರಹಣದ ಎಫೆಕ್ಟ್ ಆಗಿರಬಹುದು. ಆದರೆ ನಮ್ಮ ಪಾಲಿಕೆಗೆ ಗ್ರಹಣ ಹಿಡಿದು ತುಂಬಾ ಸಮಯವಾಗಿದೆ. ಮೊದಲು 5 ವರ್ಷ ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರದ ಗ್ರಹಣ ಹಿಡಿದಿತ್ತು. ಅದರ ನಂತರ ವಾರ್ಡ್ ಮೀಸಲಾತಿಯಲ್ಲಿ ತಾರತಮ್ಯವಾಗಿದೆ ಎಂದು ಕೆಲವರು ನ್ಯಾಯಾಲಯದ ಮೊರೆ ಹೋದರು. ಹಾಗೆ 9 ತಿಂಗಳು ಗ್ರಹಣ ಮುಂದುವರೆಯಿತು. ನಂತರ ಚುನಾವಣೆ ನಡೆದು ರಿಸಲ್ಟ್ ಬಂದು ಇನ್ನೇನೂ ಗ್ರಹಣ ಬಿಡುತ್ತೆ ಎಂದ ಕೂಡಲೇ ರಾಜ್ಯ ಸರಕಾರದ ಅಳಿವು ಉಳಿವಿನ ಉಪಚುನಾವಣೆ ಬಂತು. ಅದು ಮುಗಿದು ಒಂದೂವರೆ ತಿಂಗಳು ಕಳೆದು ಮೇಯರ್ ಮೀಸಲಾತಿ ಹೊರಗೆ ಬಂದು ಮೇಯರ್ ಪಟ್ಟಾಭಿಷೇಕಕ್ಕೆ ರೆಡಿ ಎಂದು ನಾವೆಲ್ಲ ಯೋಚಿಸ್ತಾ ಇರಬೇಕಾದರೆ ಮತ್ತೆ ಸಮಸ್ಯೆ ಮುಂದುವರೆದಿದೆ. ಮೇಯರ್ ಮೀಸಲಾತಿಯಲ್ಲಿ ರಾಜ್ಯ ಸರಕಾರ ಘೋಷಿಸಿದ ಪಟ್ಟಿ ನಮಗೆ ಈ ವರ್ಷ ಅನ್ವಯವಾಗುವುದಿಲ್ಲ ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಅಲ್ಲಿಗೆ ಸದ್ಯ ಗ್ರಹಣ ಮುಗಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.

ಪಾಲಿಕೆಯ ಮೊದಲ ಅವಧಿಗೆ ಜನರಲ್ ಮೇಲ್ ಘೋಷಣೆ ಆಗಿದೆ ಎಂದುಕೊಂಡು ನಾವೆಲ್ಲ ನಿರೀಕ್ಷೆಯಂತೆ ಪಾಲಿಕೆಯ ಬಿಜೆಪಿ ಪಾಳಯದ ಅತ್ಯಂತ ಅನುಭವಿ ಪ್ರೇಮಾನಂದ ಶೆಟ್ಟಿಯವರು ಮೇಯರ್ ಆಗುತ್ತಾರೆ ಎಂದು ಅಂದುಕೊಂಡಿದ್ದೇವು. ಆದರೆ ಈಗ ಅದು ಎರಡನೇ ಅವಧಿಗೆ ಎಂದು ಗೊತ್ತಾಗಿದೆ. ಪ್ರೇಮಾನಂದ ಶೆಟ್ಟಿಯವರು ಮೇಯರ್ ಆದರೆ ಪಾಲಿಕೆ ವ್ಯಾಪ್ತಿಯ ಇಬ್ಬರು ಶಾಸಕರಿಗೆ ಒಂದಿಷ್ಟು ನಿರಾಳತೆ ಸಿಗುತ್ತಿತ್ತು. ಪ್ರೇಮಾನಂದ ಶೆಟ್ಟಿ ಮೇಯರ್ ಆಗಲು ಅರ್ಹ ಮತ್ತು ಅವರು ಮೇಯರ್ ಆಗುವುದಾದರೆ ಯಾವುದೇ ಸ್ಪರ್ಧೆ ಇರಲು ಚಾನ್ಸೆ ಇಲ್ಲ. ಯಾಕೆಂದರೆ ಪಾಲಿಕೆಯ ಒಳಹೊರ ಅವರಿಗೆ ಗೊತ್ತಿದ್ದಷ್ಟು ಹಾಲಿ ಬೇರೆ ಸದಸ್ಯರಿಗೆ ಗೊತ್ತಿರಲು ಸಾಧ್ಯವೇ ಇಲ್ಲ. ಆದರೆ ಈಗ ಆಗಿರುವ ಡೆವಲಪಮೆಂಟ್ ಪ್ರಕಾರ ಮೊದಲ ಅವಧಿ ಹಿಂದುಳಿದ ವರ್ಗ ಎ ಮೇಲ್ ಗೆ ಹೋಗಿರುವ ಸಾಧ್ಯತೆ ಸ್ಪಷ್ಟ. ಹಾಗಾದರೆ ಇರುವುದರಲ್ಲಿ ಒಳ್ಳೆಯ ದಾಳವನ್ನು ಉರುಳಿಸುವ ಅವಶ್ಯಕತೆ ಬಿಜೆಪಿಗೆ ಇದೆ.
ಹಾಗಾದರೆ ಆ ಅದೃಷ್ಟ ಯಾರಿಗೆ ಹೋಗಲಿದೆ. ಸದ್ಯ ಹಿರಿತನವನ್ನೇ ಆಧಾರವಾಗಿ ಇಟ್ಟುಕೊಂಡರೆ ಹಿಂದುಳಿದ ವರ್ಗ ಎ ಪುರುಷರಲ್ಲಿ ದಿವಾಕರ್ ಪಾಂಡೇಶ್ವರ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಮೂರು ಬಾರಿ ಗೆದ್ದಿದ್ದಾರೆ. ಯುವಕರ ಪಡೆ ಇದೆ. ಕಾರ್ಯಕರ್ತರನ್ನು ಒಂದೇ ಕರೆಗೆ ಒಗ್ಗೂಡಿಸುವ ತಾಕತ್ ಇದೆ. ಬಿಜೆಪಿಯಲ್ಲಿ ಪದಾಧಿಕಾರಿ ಸ್ಥಾನಮಾನ ಕೊಡಬೇಕಾದರೆ ಯಾವೆಲ್ಲ ಸಾಮರ್ಥ್ಯ ನೋಡಲಾಗುತ್ತದೆಯೋ ಅದೆಲ್ಲ ಇದೆ. ಸಂಘ ಪರಿವಾರದ ಹಿರಿಯರು ಮೇಯರ್ ಸ್ಥಾನದ ಜವಾಬ್ದಾರಿಯನ್ನು ಇಡೀ ವರ್ಷ 365*24 ಹೇಗೆ ನಿರ್ವಹಿಸಬೇಕಾಗುತ್ತದೆ ಎಂದು ಕಟ್ಟುನಿಟ್ಟಾಗಿ ಹೇಳಿಕೊಟ್ಟು ಅವಕಾಶ ಕೊಟ್ಟರೆ ದಿವಾಕರ್ ಕೂಡ ಉತ್ತಮ ಆಯ್ಕೆ. ಹೇಗೂ ಸಲಹೆ, ಮಾರ್ಗದರ್ಶನ ಬೇಕಾದರೆ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿಯಂತವರ ಬಳಿ ಅಥವಾ ಗಣೇಶ್ ಹೊಸಬೆಟ್ಟು, ರೂಪಾ ಡಿ ಬಂಗೇರಾ ಅವರ ಬಳಿ ಕೇಳಿ ತಿಳಿದುಕೊಂಡರೆ ದಿವಾಕರ್ ಉತ್ತಮ ಕೆಲಸ ಮಾಡಬಲ್ಲರು. ಎಲ್ಲಕ್ಕಿಂತ ಹೆಚ್ಚಾಗಿ ದಕ್ಷಿಣ ಮತ್ತು ಉತ್ತರದ ಶಾಸಕರ ನಿರ್ದೇಶನದಂತೆ ನಡೆದರೆ ದಿವಾಕರ್ ಈ ವರ್ಷ ಪಾಲಿಕೆಯನ್ನು ದಡಮುಟ್ಟಿಸಬಲ್ಲರು. ಹಾಗಂತ ಹಿಂದುಳಿದ ವರ್ಗ ಎ ಯಲ್ಲಿ ಅವರನ್ನು ಬಿಟ್ಟರೆ ಎರಡು ಬಾರಿ ಗೆದ್ದಿರುವ ಇನ್ನಿಬ್ಬರು, ಮೊದಲನೇ ಬಾರಿ ಗೆದ್ದಿರುವ ಕೆಲವು ಯುವ ಮುಖಗಳಿವೆ. ಪಕ್ಷ ಯಾರಿಗೆ ತಯಾರಾಗಲು ಸೂಚನೆ ಕೊಟ್ಟಿದೆ ಎಂದು ಗೊತ್ತಾಗಲು 2019 ಕಳೆಯಬೇಕು. ಅದರೊಂದಿಗೆ ಪಾಲಿಕೆಯ ಗ್ರಹಣ ಮುಂದುವರೆಯದಂತೆ ಇಬ್ಬರು ದಕ್ಷಿಣ ಮತ್ತು ಉತ್ತರದ ಶಾಸಕರು ಪಾಲಿಕೆಯಲ್ಲಿ ಒಂದು ಹೋಮ ಇಟ್ಟುಕೊಂಡರೆ ಒಳ್ಳೆಯದೇನೊ!!

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Hanumantha Kamath November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Hanumantha Kamath October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search