• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸಿಎಎ ಮುಸ್ಲಿಂ ವಿರೋಧಿ ಅಲ್ಲ ಎಂದು ಮಸೀದಿಗಳಲ್ಲಿ ಅರ್ಥ ಮಾಡಿಸಲಿ!!

Hanumantha Kamath Posted On January 5, 2020


  • Share On Facebook
  • Tweet It

ನಾನು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವ ಕಾಂಗ್ರೆಸ್ಸಿಗರ ಬಳಿ ಕೇಳುವುದಿಷ್ಟು. ಒಂದೋ ನೀವು ನಿಮ್ಮ ಸರಕಾರದಲ್ಲಿ 10 ವರ್ಷ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರ ಬಳಿ ಹೋಗಿ ಈ ಕಾಯ್ದೆ ಬಗ್ಗೆ ಕೇಳಿ. ಅವರು ಈ ಕಾಯ್ದೆಯನ್ನು ವಿರೋಧಿಸುವ ಒಂದು ವಿಡಿಯೋ ಕ್ಲಿಪ್ ಮಾಡಲಿ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ. ಅದನ್ನು ನೋಡೋಣ. ಅವರು ನಿಜಕ್ಕೂ ನಿಮ್ಮ ಒತ್ತಡಕ್ಕೆ ಮಣಿದು ಸಿಎಎ ಬಗ್ಗೆ ವಿರೋಧಿ ಹೇಳಿಕೆ ಕೊಟ್ಟರೆ ಅವರು ಪ್ರಧಾನಿಯಾಗಿದ್ದಾಗ ಇದನ್ನು ಜಾರಿ ತರುವ ಬಗ್ಗೆ ಮನಸ್ಸಿನಾಳದಿಂದ ಮಾತನಾಡಿದ್ದರಲ್ಲ, ಆ ವಿಡಿಯೋ ಕೂಡ ಸೇರಿಸಿ ಎರಡನ್ನು ಕೂಡ ನೋಡೋಣ. ಇನ್ನು ಚಿದಂಬರಂ ಈಗ ಮೋದಿ ಮೇಲಿನ ಕೋಪದಿಂದ ಸಿಎಎ ಬಗ್ಗೆ ಏನೇ ವಿರೋಧಿ ಹೇಳಿಕೆ ಕೊಡಲಿ. ಆದರೆ ಇದೇ ಚಿದಂಬರಂ ಇಂತಹ ಒಂದು ಕಾಯ್ದೆ ಬರಬೇಕು ಎಂದು ಸಂಸತ್ತಿನಲ್ಲಿ ಮಾತನಾಡಿದ ದಾಖಲೆ ಇದೆಯಲ್ಲ, ಅದಕ್ಕೆ ಕಾಂಗ್ರೆಸ್ಸಿಗರು ಏನು ಹೇಳ್ತಿರಿ, ಸ್ವಾಮಿ. ಇನ್ನು ಸಿಎಎ ವಿರೋಧಿಸುತ್ತಿರುವ ಇನ್ನೊಬ್ಬ ರಾಜಕಾರಣಿ ಮಮತಾ ಬ್ಯಾನರ್ಜಿ. ಇವರು ಸಿಎಎ ವಿರೋಧಿಸುತ್ತಿರುವುದು ಶುದ್ಧ ನಾಟಕ ಎಂದು ನಾನು ಈಕೆ ಮೊದಲ ಬಾರಿ ಧ್ವನಿ ಎತ್ತಿದ್ದಾಗಲೇ ಬರೆದಿದ್ದೆ. ಕಮ್ಯೂನಿಷ್ಟರು ಪಶ್ಚಿಮ ಬಂಗಾಲವನ್ನು ಆಳುವಾಗ ಇದೇ ಮಮತಾಗೆ ಸಿಎಎ ಬೇಕಿತ್ತು. ಈಗ ಇವರೇ ಅಧಿಕಾರ ನಡೆಸುವಾಗ ಸಿಎಎ ವಿರೋಧ. ಇವತ್ತಿಗೂ ಯಾರಾದರೂ ಮಮತಾಳಿಗೆ ನೀವು ಸಂಸದ ಸ್ಥಾನಕ್ಕೆ ಆವತ್ತು ರಾಜೀನಾಮೆ ಕೊಟ್ಟಿದ್ದು ಯಾಕೆ ಎಂದು ಕೇಳಿ ನೋಡಿ. ಒಟ್ಟಿನಲ್ಲಿ ಎಲ್ಲರಿಗೂ ಮೋದಿಯನ್ನೇ ವಿರೋಧಿಸಬೇಕು.
ಪಾಪ, ವಿಪಕ್ಷದವರಾದರೂ ಏನು ಮಾಡುತ್ತವೆ? ತ್ರಿವಳಿ ತಲಾಖ್ ವಿಷಯದಲ್ಲಿ ಕೇಂದ್ರ ಕಾನೂನು ರೂಪಿಸುವಾಗ ವಿರೋಧಿಗಳಿಗೆ ಏನು ಮಾತನಾಡಲು ಆಗಲಿಲ್ಲ. ಯಾಕೆಂದರೆ ಮಾತನಾಡಿದರೆ ಮುಸ್ಲಿಂ ಹೆಣ್ಣುಮಕ್ಕಳು, ನೊಂದ ಬಡ ಹೆಣ್ಣುಮಕ್ಕಳ ಮನೆಯವರು ಚಪ್ಪಲಿ ಹಿಡಿದು ವಿರೋಧಿಸಿದವರನ್ನು ಅಟ್ಟಿಸಿಕೊಂಡು ಬರುತ್ತಿದ್ದರು. ಅದರ ನಂತರ ಅಯೋಧ್ಯೆ ತೀರ್ಪು ಬಂದಾಗಲೂ ವಿರೋಧಿಸಲಾಗಲಿಲ್ಲ. ಯಾಕೆಂದರೆ ಇಡೀ ರಾಷ್ಟ್ರದಲ್ಲಿ ಅಷ್ಟು ಎಚ್ಚರಿಕೆಯನ್ನು ತೆಗೆದುಕೊಂಡಾಗಿತ್ತು. ಜಿಎಸ್ ಟಿ, ನೋಟ್ ಅಮಾನೀಕರಣದ ಬಗ್ಗೆ ಕಾಂಗ್ರೆಸ್ ಸಹಿತ ಎಡಚರರು ಕೆಮ್ಮಿದರೂ ಅದರಿಂದ ಮೋದಿ ಕೂದಲು ಕೊಂಕಲು ಆಗಲಿಲ್ಲ. ಇನ್ನು ಮೋದಿಯನ್ನು ಹೀಗೆ ಬಿಟ್ಟರೆ ಇವರು ಸಮಾನ ನೀತಿ ಸಂಹಿತೆ ತರುತ್ತಾರೆ ಎಂದು ಹೆದರಿ ಇಟಲಿ ಮೂಲದ ಚಿಂತನೆ ಕಾಂಗ್ರೆಸ್ಸ್ ಕೇಂದ್ರ ಕಚೇರಿಯಲ್ಲಿ ಹರಿದಾಡುತ್ತಿದೆ.
ಇಲ್ಲಿ ಪಂಜಾಬ್ ನಲ್ಲಿ ಸಿಎಂ ಅಮರೀಂದ್ರ ಸಿಂಗ್ ಸಿಎಎ ವಿರೋಧಿ ಹೇಳಿಕೆ ಕೊಡುತ್ತಿದ್ದಾರೆ. ಅದೇ ಪಾಕಿಸ್ತಾನದಲ್ಲಿ ಇತ್ತೀಚೆಗೆ ಒಂದು ಗುರುದ್ವಾರಕ್ಕೆ ಅಲ್ಲಿನ ಮುಸ್ಲಿಂ ಸಮುದಾಯದವರು ಕಲ್ಲು ಬಿಸಾಡಿ ಓಡೆದಿರುವ ದೃಶ್ಯವನ್ನು ಟಿವಿ ವಾಹಿನಿಯವರು ತೋರಿಸುತ್ತಿದ್ದರು. ಈಗ ಅಂತಹ ಎಷ್ಟೋ ಜನ ಸಿಖ್ಖರು ಪಾಕಿಸ್ತಾನದಲ್ಲಿ ಇದ್ದರೆ ಸತ್ತು ಹೋಗ್ತಿವಿ ಎಂದು ಹೆದರಿ ಭಾರತಕ್ಕೆ ಓಡಿ ಬಂದರೆ ಅವರಿಗೆ ಸುಲಭವಾಗಿ ಭಾರತದ ಪೌರತ್ವ ಕೊಡಬೇಕಾ? ಬೇಡ್ವಾ? ಹಾಗಾದರೆ ಅಮರಿಂದ್ರ ಸಿಂಗ್ ತಮ್ಮ ಸಮುದಾಯದವರು ಪಾಕ್ ನಲ್ಲಿ ಹುಚ್ಚು ನಾಯಿಯಂತೆ ಕಲ್ಲು ಹೊಡೆಸಿಕೊಂಡು ಸಾಯಲಿ, ನನಗೆ ಪಕ್ಷ ಮತ್ತು ರಾಜಕೀಯ ಮುಖ್ಯ ಎಂದು ಹೇಳುತ್ತಾರಾ? ಒಂದು ವೇಳೆ ಹೇಳುತ್ತಾರೆ ಎಂದರೆ ಅವರಿಗಿಂತ ಸಮುದಾಯ ವಿರೋಧಿ ಬೇರೆಯವರು ಇದ್ದಾರಾ? ಅಮರಿಂದ್ರ ಸಿಂಗ್ ಅವರೇ, ಅಧಿಕಾರ ಇವತ್ತು ಇರಬಹುದು, ಮುಂದಿನ ಚುನಾವಣೆಯಲ್ಲಿ ಹೋಗಬಹುದು. ಆದರೆ ನಿಮ್ಮ ಸಮುದಾಯದವರು ಪಾಕ್ ನಲ್ಲಿ ಜೀವ ಕೈಯಲ್ಲಿ ಹಿಡಿದು ಬದುಕುತ್ತಿರುವುದನ್ನು ತಾವು ನೋಡಿಯೂ ಅವರು ಇಲ್ಲಿ ಬರುವುದು ಬೇಡಾ ಎಂದು ಬಯಸುವಿರಾದರೆ ನಿಮಗೆ ಇದರ ಶಾಪ ಇವತ್ತಲ್ಲ, ನಾಳೆ ತಟ್ಟಿಯೇ ತಟ್ಟುತ್ತದೆ.
ಒಂದು ಕಾಲಕ್ಕೆ ಇಂಡಿಯಾ ಎಂದರೆ ಅದು ಪಾಕ್, ಬಾಂಗ್ಲಾ ಮತ್ತು ಅಪಘಾನಿಸ್ತಾನವೂ ಸೇರಿ ಅಖಂಡ ಭಾರತ ದೇಶವಾಗಿತ್ತು. ನಂತರ ಆ ದೇಶಗಳು ತಾವು ಇಸ್ಲಾಂ ರಾಷ್ಟ್ರಗಳು ಎಂದು ಘೋಷಿಸಿಕೊಂಡವು. ಅಷ್ಟೇ ಅಲ್ಲ ಅಲ್ಲಿ ವಾಸಿಸುವ ಮುಸ್ಲಿಂಯೇತರರಿಗೆ ಹಿಂಸೆ ಕೊಡಲು ಶುರು ಮಾಡಿದವು. ಹಾಗೇ ಹಿಂಸೆ ಅನುಭವಿಸಿ ಅವರು ಅಲ್ಲಿರುವುದಕ್ಕಿಂತ ಇಲ್ಲಿ ಬಂದರೆ ಅವರಿಗೆ ಒಂದು ಗೌರವ ಸ್ವಾಗತ ಕೊಡಲಾರದಷ್ಟು ನಾವು ದುಷ್ಟರಾ? ಯಾಕೋ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಮುಸ್ಲಿಂ ವಿರೋಧಿ ಎಂದು ಸಾಬೀತು ಪಡಿಸಲು ಹೆಣಗುತ್ತಿದೆ. ಪಾಪ, ಮುಸ್ಲಿಮರು ನಂಬುವಂತೆ ಕಾಣುತ್ತಿದೆ, ಕಾರಣ ಈ ಸೋಮಶೇಖರ್ ರೆಡ್ಡಿಯಂತಹ ಶಾಸಕರು ಸಿಎಎ ಪರ ಮಾತನಾಡುವ ಗಡಿಬಿಡಿಯಲ್ಲಿ ಸಾಧ್ವಿ ಪ್ರಜ್ಙಾ ಸಿಂಗ್ ಮೈಮೇಲೆ ಬಂದಂತೆ ಆಡುತ್ತಾರಲ್ಲ, ಅದೇ ಪ್ಲಾಬಂ!
  • Share On Facebook
  • Tweet It


- Advertisement -


Trending Now
ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
Hanumantha Kamath May 30, 2023
ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
Hanumantha Kamath May 29, 2023
Leave A Reply

  • Recent Posts

    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
    • ಪ್ರಣಾಳಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಮೂರು ಸೂತ್ರ!!
    • ಫೇಕ್ ನ್ಯೂಸ್ ಜಮಾನದಲ್ಲಿ ಸಂತೋಷ್ ವಿರುದ್ಧ ಷಡ್ಯಂತ್ರ!!
    • ಕಾಶ್ಮೀರಿ ಫೈಲ್ಸ್ ಚರಿತ್ರೆ, ಕೇರಳ ಸ್ಟೋರಿ ವರ್ತಮಾನ!!
  • Popular Posts

    • 1
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 2
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • 3
      ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • 4
      ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search