• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕಾಯ್ದೆಯ ಪರ ಮಾತನಾಡುವವರನ್ನು ಸ್ಕೆಚ್ ಹಾಕಿ ಕೊಲ್ಲಲು ನಾವಿದ್ದೇವೆ!!

Hanumantha Kamath Posted On January 17, 2020


  • Share On Facebook
  • Tweet It

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಪಾಕಿಸ್ತಾನ, ಬಾಂಗ್ಲಾ, ಅಪಘಾನಿಸ್ತಾನದ ಹಿಂದೂ, ಕ್ರೈಸ್ತ, ಪಾರ್ಸಿ, ಸಿಖ್, ಜೈನರಿಗೆ ಪೌರತ್ವದ ಪ್ರಯೋಜನ ಸಿಗುತ್ತೋ ಇಲ್ವೋ, ಆದರೆ ಆ ಕಾಯ್ದೆಯ ಪರ ಮಾತನಾಡುತ್ತಿರುವ ಚಕ್ರವರ್ತಿ ಸೂಲಿಬೆಲೆ, ತೇಜಸ್ವಿ ಸೂರ್ಯ ಸಹಿತ ಯುವ ನಾಯಕರ ಪ್ರಾಣ ಕಿತ್ತುಕೊಳ್ಳಲು ದೇಶದ್ರೋಹಿಗಳು ಸಂಚು ಹೂಡುತ್ತಿರುವುದು ಸ್ಪಷ್ಟವಾಗಿದೆ. ಅದು ಇವತ್ತು ಪತ್ತೆಯಾಗಿದೆ. ಡಿಸೆಂಬರ್ 22 ರಂದು ಬೆಂಗಳೂರಿನ ಟೌನ್ ಹಾಲ್ ಎದುರು ಸಿಎಎ ಪರ ಜಾಗೃತಿ ಮೂಡಿಸುವ ಕೆಲಸವಾಗಿತ್ತಲ್ಲ, ಆಗ ಚಕ್ರವರ್ತಿ, ತೇಜಸ್ವಿ ಅಲ್ಲಿ ಭಾಷಣ ಮಾಡಿದ್ದರು. ತೇಜಸ್ವಿ ಭಾಷಣ ಒಂದಿಷ್ಟು ವಿವಾದವನ್ನು ಕೂಡ ಉಂಟು ಮಾಡಿತ್ತು. ಆದರೆ ಚಕ್ರವರ್ತಿ ಹಾಗೂ ತೇಜಸ್ವಿಯ ಆಯುಷ್ಯ ಗಟ್ಟಿ ಇತ್ತು. ಇಲ್ಲದಿದ್ದರೆ ಅವರ ಆ ಭಾಷಣವೇ ಅವರ ಪಾಲಿನ ಕೊನೆಯ ಭಾಷಣವಾಗುವ ಎಲ್ಲಾ ಸಾಧ್ಯತೆ ಇತ್ತು. ಯಾಕೆಂದರೆ ಅವರಿಬ್ಬರನ್ನು ಹತ್ಯೆ ಮಾಡಲು ರಾಕ್ಷಸರು ಸಂಚು ಹೂಡಿದ್ದರು. ಪೊಲೀಸರು ಬಂಧಿಸಿದ ಆರು ಜನರು ಕೊಟ್ಟಿರುವ ಹೇಳಿಕೆಯೇ ಅದಕ್ಕೆ ಸಾಕ್ಷಿ. ಹಾಗಾದರೆ ಸಿಎಎ, ಎನ್ ಆರ್ ಸಿ ಪರ ಮಾತನಾಡುವ ಯಾರನ್ನಾದರೂ ಮುಗಿಸಿ ಬಿಡುವುದಕ್ಕೆ ಸಂಚು ನಡೆಯುತ್ತಿರುವುದು ಆತಂಕವನ್ನು ಉಂಟು ಮಾಡಿದೆ. ಯಾಕೆಂದರೆ ಆ ದಿನ ನಮ್ಮ ಗುರಿ ವರುಣ್ ಆಗಿರಲಿಲ್ಲ ಎನ್ನುವುದು ಎನ್ನುವುದು ಬಂಧಿತರ ಹೇಳಿಕೆಯನ್ನು ಆಧರಿಸಿ ಅವರನ್ನು ಇನ್ನಷ್ಟು ತನಿಖೆಗೆ ಗುರಿಪಡಿಸಿದಾಗ ನಿಜವಾದ ಗುರಿ ಯಾರು ಇದ್ರು ಎನ್ನುವುದು ಗೊತ್ತಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ದಮನಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರನ್ನು, ಬಿಜೆಪಿ ನಾಯಕರನ್ನು ಹತ್ಯೆ ಮಾಡಿದರೆ ಸಮಸ್ಯೆ ಪರಿಹಾರವಾಗುತ್ತಾ ಎನ್ನುವುದು ಪ್ರಶ್ನೆ. ಅಷ್ಟಕ್ಕೂ ಭಾರತೀಯ ಮುಸಲ್ಮಾನರಿಗೆ ಸಿಎಎ, ಎನ್ ಆರ್ ಸಿಯಿಂದ ಯಾವ ತೊಂದರೆಯೂ ಇಲ್ಲ ಎಂದು ಈ ಬಗ್ಗೆ ನಿಜವಾಗಿ ಗೊತ್ತಿರುವವರು ಸಾವಿರ ಸಲ ಹೇಳಿದರೂ ದೇಶವನ್ನು ಒಡೆಯಲೇಬೇಕು ಎಂದು ನಿಶ್ಚಯಿಸಿದವರು ಅದನ್ನು ಕೇಳುತ್ತಿಲ್ಲ. ಅದಕ್ಕೆ ಸರಿಯಾಗಿ ಕಾಂಗ್ರೆಸ್ ಮುಖಂಡರಲ್ಲಿ ಜಮೀರ್, ಸಿದ್ದು ಅಂತವರು ನಮ್ಮ ತಂದೆ ಯಾರೆಂದು ಹೇಳುವುದಿಲ್ಲ, ನನ್ನ ತಾಯಿಗೆ ನಾಲ್ಕು ಜನ ತಲಾಕ್ ಕೊಟ್ಟಿದ್ದಾರೆ, ತಂದೆ ಯಾರು ಎಂದು ಹೇಳಲಿ ಎಂದು ಬೊಬ್ಬೆ ಹೊಡೆದು ಅನಗತ್ಯವಾಗಿ ಮುಸ್ಲಿಮರಲ್ಲಿ ಹೆದರಿಕೆ ಹುಟ್ಟಿಸುತ್ತಿದ್ದಾರೆ. ಅವರು ಹಾಗೆ ಮಾತನಾಡುತ್ತಿರುವುದರಿಂದ ಈ ಕಾಯ್ದೆ ತರುವವರನ್ನೇ ಮುಗಿಸಲು ಕೆಲವು ದುಷ್ಟ ಶಕ್ತಿಗಳು ಪ್ರಯತ್ನ ಮಾಡುತ್ತಿವೆ. ಇದಕ್ಕೆ ಬಹುಶ: ಹೊರ ದೇಶದಲ್ಲಿ ಕುಳಿತುಕೊಂಡಿರುವ ಭಾರತ ವಿರೋಧಿಗಳು ಹಣ ಹೊಂದಿಸಿ ಇಲ್ಲಿ ಕಳುಹಿಸಿಕೊಟ್ಟು ಭಾರತದ ಒಳಗೆ ಆಂತರಿಕ ಗಲಭೆಗೆ ಷಡ್ಯಂತ್ರ ಮಾಡುತ್ತಿರಬಹುದು. ವಿದೇಶದಲ್ಲಿ ಕುಳಿತುಕೊಂಡವರು ಕಳುಹಿಸಿಕೊಡುವ ಹಣದಿಂದ ಇಲ್ಲಿ ಗಲಾಟೆ ನಡೆದರೆ ಅದನ್ನು ನೋಡಿ ಖುಷಿ ಪಡುವವರು ಗಲ್ಫ್ ರಾಷ್ಟ್ರದಲ್ಲಿ ತುಂಬಾ ಜನರಿದ್ದಾರೆ. ಒಂದು ವೇಳೆ ಭಾರತದಲ್ಲಿ ಗಲಾಟೆ ಆಗಿ ಸಾವು-ನೋವು ಸಂಭವಿಸಿದರೆ ಅದಕ್ಕೆ ಕಾರಣರಾದವರ ಪರ ಕಾಂಗ್ರೆಸ್ ನಿಲ್ಲುತ್ತದೆಯಾ? ಇನ್ನು ಚಕ್ರವರ್ತಿ, ತೇಜಸ್ವಿಯಂತವರ ಮೇಲೆ ಹಲ್ಲೆ ನಡೆದು ಏನಾದರೂ ಹೆಚ್ಚು ಕಡಿಮೆ ಆದರೆ ಆಗ ಕಾಂಗ್ರೆಸ್ ಯಾರ ಪರವಾಗಿ ನಿಲ್ಲಲಿದೆ.
ನನ್ನ ಪ್ರಕಾರ ನಮ್ಮ ದೇಶದಲ್ಲಿ ಏನಾಗಿದೆ ಎಂದರೆ ಇದು ಜಾತ್ಯಾತೀತ ರಾಷ್ಟ್ರ ಎನ್ನುವ ಕಾರಣಕ್ಕೆ ಇಷ್ಟು ವರ್ಷ ನಮ್ಮನ್ನು ಆಳಿದ ಸರಕಾರಗಳು ಕೆಲವು ಧರ್ಮಗಳನ್ನು ವಿಪರೀತ ಒಲೈಕೆ ಮಾಡಿದ ಕಾರಣಕ್ಕೆ ಅಂತಹ ಧರ್ಮದವರು ಸರಕಾರದ ತಲೆಯ ಮೇಲೆ ಕುಳಿತು ಉಚ್ಚೆ ಹೊಯ್ಯುತ್ತಿದ್ದಾರೆ. ಏಪ್ಪತ್ತು ವರ್ಷಗಳ ಸ್ವತಂತ್ರ್ಯ ಭಾರತದಲ್ಲಿ ತಮ್ಮ ಸ್ವಾರ್ಥಕ್ಕಾಗಿ ಮುಸ್ಲಿಮರನ್ನು ಕಾಂಗ್ರೆಸ್ ಅತೀ ಹೆಚ್ಚು ಒಲೈಕೆ ಕಾರಣದಿಂದ ಇವತ್ತು ಈ ಎಲ್ಲಾ ಸಮಸ್ಯೆಗೂ ಕಾರಣವಾಗಿದೆ. ಬೇಕಾದರೆ ಚೀನಾವನ್ನೇ ತೆಗೆದುಕೊಳ್ಳಿ. ಅಲ್ಲಿ ಉದ್ದನೆಯ ಗಡ್ಡ ಬಿಡುವುದಕ್ಕೆ ಅಲ್ಲಿನ ಸರಕಾರ ವಿರೋಧ ಇದೆ. ಆತ ಮುಸ್ಲಿಮನೇ ಆಗಿರಲಿ, ಬೇರೆ ಯಾರಾದರೂ ಆಗಿರಲಿ. ಗಡ್ಡ ಬಿಡಬಾರದು ಅಂದರೆ ಬಿಡಬಾರದು. ಮುಸ್ಲಿಮರು ನಾವು ಗಡ್ಡ ಬಿಡುತ್ತೇವೆ ಎಂದು ಗಲಾಟೆ ಮಾಡಿದರೆ ಎಲ್ಲಿ ಹೊಡೆಯಬೇಕೋ ಅಲ್ಲಿ ಹೊಡೆದು ಒಳಗೆ ಹಾಕುತ್ತಾರೆ. ಬಾಲ ಮುದುಡಿ ಶೇವ್ ಮಾಡಿಕೊಳ್ಳಬೇಕು. ಹಾಗೆ ಮಾಡಿ ಬಿಡುತ್ತಾರೆ. ಇನ್ನು ಶ್ರೀಲಂಕಾದಲ್ಲಿ ಬುರ್ಖಾ ಹಾಕುವುದಕ್ಕೆ ನಿಷೇಧ ಹೇರಲಾಗಿದೆ. ಮುಸ್ಲಿಮರು ಬುರ್ಖಾ ಹಾಕಲೇಬೇಕು ಎಂದು ಪ್ರತಿಭಟನೆ ಮಾಡಿದರೆ ಪ್ರತಿಭಟನೆ ಮಾಡಿದವರನ್ನು ಪಕ್ಕದ ಕಡಲಿಗೆ ಬಿಸಾಡಿ ಕೈ ಒರೆಸಿಕೊಳ್ಳುತ್ತಾರೆ. ಹಾಗೆ ಅನೇಕ ರಾಷ್ಟ್ರಗಳು ತಮಗೆ ಬೇಕಾದ ರೀತಿಯಲ್ಲಿ ಕಾನೂನು ಮಾಡಿಕೊಂಡಿವೆ. ನಾವು ಮಾತ್ರ ಅವರು ಕೊಲ್ಲಲು ಸ್ಕೆಚ್ ಹಾಕಿದರೂ ಆ ಧರ್ಮದವರಿಗೆ ಬೇಸರವಾಗುತ್ತೆ ಎನ್ನುವ ಕಾರಣಕ್ಕೆ ಆರೋಪಿಗಳ ಧರ್ಮ ಮರೆಮಾಚಿ ಒಳ್ಳೆಯವರಾಗುತ್ತಿದ್ದೇವೆ!!

  • Share On Facebook
  • Tweet It


- Advertisement -


Trending Now
ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
Hanumantha Kamath February 3, 2023
ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
Hanumantha Kamath February 2, 2023
Leave A Reply

  • Recent Posts

    • ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
  • Popular Posts

    • 1
      ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • 2
      ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • 3
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 4
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 5
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search