• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಒಂಭತ್ತುಕೆರೆಯಲ್ಲಿ ಕಟ್ಟಲಾಗಿರುವ ಮನೆಗಳಿಗಿಂತ ಖಾದರ್ ಮನೆಯ ಶೌಚಾಲಯ ದೊಡ್ಡದಿರಬಹುದು!

Hanumantha Kamath Posted On February 3, 2020
0


0
Shares
  • Share On Facebook
  • Tweet It

ಪಾಪದವರಿಗಾದರೆ ಹೇಗೆ ಬೇಕಾದರೂ ಮನೆ ಕಟ್ಟಬಹುದು. ಅದು ಹಿಂದಿನ ಕಾಲದಲ್ಲಿ ಇದ್ದಂತಹ ಟೆಲಿಫೋನ್ ಬೂತ್ ನಷ್ಟೇ ದೊಡ್ಡದಾಗಿದ್ದರೂ ಪರವಾಗಿಲ್ಲ ಎಂದು ಯು.ಟಿ.ಖಾದರ್ ಯೋಚಿಸಿದಂತಿದೆ. ಅದಕ್ಕಾಗಿ ಅವರು ತಮ್ಮ ತಂದೆಯ ಕಾಲದಲ್ಲಿ ಕಟ್ಟಿ ಇವತ್ತಿಗೂ ವಿಲೇವಾರಿಯಾಗದ, ಒಂದು ಜೋರು ಮಳೆ ಬಿದ್ದರೆ ದೊಪ್ಪನೆ ತಲೆಯ ಮೇಲೆ ಬೀಳಲು ಅಣಿಯಾಗಿರುವ ಒಂಭತ್ತುಕೆರೆ ಪರ ವಾದವನ್ನು ಮಂಡಿಸುತ್ತಾ ಸುದ್ದಿಗೋಷ್ಟಿ ಮಾಡಿ ಕೈ ತೊಳೆದುಕೊಂಡಿದ್ದಾರೆ. ಒಂಭತ್ತು ಕೆರೆ ಪ್ರದೇಶದಲ್ಲಿದ್ದ ದಟ್ಟವಾದ ಕಾಡುಗಳನ್ನು ಕಡಿದು, ಹಲವಾರು ಔಷಧಿಯ ಸಸ್ಯಗಳನ್ನು ನಾಶ ಮಾಡಿ ಹಂದಿಗೂಡುಗಳಂತಿರುವ ಮನೆಗಳನ್ನು ನಿರ್ಮಿಸಿರುವುದು ನಿಮಗೆ ಗೊತ್ತೆ ಇರಬಹುದು. ಬಡವರಿಗೆ ಮನೆ ಕಟ್ಟಿ ಕೊಡಲು ಯಾರೂ ವಿರೋಧ ಮಾಡುವುದಿಲ್ಲ. ಆದರೆ ಬಡವರು ಎನ್ನುವ ಕಾರಣಕ್ಕೆ ಹೇಗೆ ಬೇಕಾದರೂ ಕಟ್ಟಿ ಕೊಡಬಹುದು. ವಾಸಿಸಲು ಯೋಗ್ಯವಾಗಿದೆಯಾ ಎಂದು ನೋಡುವ ಅವಶ್ಯಕತೆ ಇಲ್ಲ ಎಂದು ಆಗಿನ ಶಾಸಕ ಯುಟಿ ಫರೀದ್ ಅವರು ಅಂದುಕೊಂಡಿದ್ದಾರಾ? ಅವೈಜ್ಞಾನಿಕವಾದ ಕಾಮಗಾರಿ, ಕಳಪೆ ಕಾಮಗಾರಿಯ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯವಿಲ್ಲದೆ ಇರುವ 390 ಮನೆಗಳನ್ನು ನೋಡದೇ ಟ್ರಾಲ್ ಮಾಡುವುದು ಸರಿಯಲ್ಲ ಎಂದು ಶಾಸಕ ಖಾದರ್ ಹೇಳುತ್ತಾರೆ. ಟ್ರಾಲ್ ಮಾಡಿದವರ ಪರವಾಗಿ ನಾನು ಬರೆಯುತ್ತಿಲ್ಲ. ಆದರೆ ಅಂಗೈ ಹುಣ್ಣಿಗೆ ಕನ್ನಡಿ ಬೇಕಾ ಎನ್ನುವಂತೆ ಟ್ರಾಲ್ ನಡೆದಿರುವುದರಿಂದ 19 ವರ್ಷಗಳ ಹಿಂದಿನ ಪ್ರಕರಣ ಮತ್ತು ಪೋಲಾಗಿರುವ ನಮ್ಮ ತೆರಿಗೆಯ ಹಣದ ಬಗ್ಗೆ ನಾವು ಮಾತನಾಡದೆ ಇನ್ಯಾರು ಮಾತನಾಡುವುದು ಖಾದರ್ ಸಾಹೇಬ್ರೆ.

ಇನ್ನೊಂದು ವಿಷಯ ಏನೆಂದರೆ ಅಲ್ಲಿ ಒಳಚರಂಡಿ ನಿರ್ಮಾಣವಾಗದೇ ಮನೆಯನ್ನು ಹಂಚಬಾರದು ಎಂದು ಸ್ಥಳೀಯರು ನ್ಯಾಯಾಲಯದ ಮೊರೆ ಹೋಗಿರುವುದು ನಿಜ. ಅದನ್ನೇ ಪ್ರತಿ ಬಾರಿ ಖಾದರ್ ಅವರು ಪ್ರಕರಣ ನ್ಯಾಯಾಲಯದಲ್ಲಿದೆ. ನಾವೇನೂ ಮಾಡಲು ಆಗುವುದಿಲ್ಲ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ ನ್ಯಾಯಾಲಯಕ್ಕೆ ಪ್ರಕರಣ ಯಾಕೆ ಹೋಯಿತು ಎನ್ನುವುದನ್ನು ಯಾಕೆ ಅವರು ಹೇಳುತ್ತಿಲ್ಲ. ಈ ಒಂಭತ್ತುಕೆರೆಯಲ್ಲಿ ವಸತಿ ಕಾಲೋನಿ ನಿರ್ಮಾಣವಾಗಿರುವ ಪ್ರದೇಶ ಎತ್ತರದಲ್ಲಿದೆ. ಅದರ ಸನಿಹದ ತಗ್ಗುಪ್ರದೇಶದಲ್ಲಿ 50 ಮೀಟರ್ ನಿಂದ 60 ಮೀಟರ್ ಅಂತರದಲ್ಲಿ ಒಂಭತ್ತು ಕೆರೆಗಳು ಇವೆ. ವಸತಿ ಕಾಲೋನಿ ಇರುವ ಪ್ರದೇಶ ಮುರಕಲ್ಲಿನ ಪ್ರದೇಶವಾಗಿದ್ದು ಅದು ರಂಧ್ರಯುಕ್ತವಾಗಿದೆ. ಇದರ ತಳದಲ್ಲಿ ಶೇಡಿ ಇರುವುದರಿಂದ ಜನವಸತಿ ಪ್ರಾರಂಭವಾದ ನಂತರ ಅಲ್ಲಿನ ತ್ಯಾಜ್ಯ ಹರಿದು ಬಂದು ನೇರ ಕೆರೆಗಳಿಗೆ ಸಂಪರ್ಕವಾಗಲಿದೆ. ಇದನ್ನು ಹೇಳುತ್ತಿರುವುದು ಯಾವುದೇ ಸಾಮಾನ್ಯ ವ್ತಕ್ತಿಗಳೂ ಅಲ್ಲ. ಬಿಜೆಪಿ ಮುಖಂಡರೂ ಅಲ್ಲ. ಟ್ರಾಲ್ ಮಾಡುವವರು ಅಲ್ಲ. ಇದನ್ನು ಹೇಳಿರುವುದು ಗಣಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಂತರ್ಜಲ ವಿಭಾಗದ ಹಿರಿಯ ಅಧಿಕಾರಿಗಳು. ಅದು ತಪ್ಪಬೇಕಾದರೆ ವಸತಿ ಕಾಲನಿಗೆ ನೆಲದಡಿಯಲ್ಲಿಯೇ ಒಳಚರಂಡಿಯನ್ನು ನಿರ್ಮಿಸಬೇಕು ಎಂದು ವಿಜ್ಞಾನಿಗಳೇ ಸಲಹೆ ಕೊಟ್ಟಿದ್ದಾರೆ.

ಇನ್ನು ವಸತಿ ಕಾಲೋನಿ ನಿರ್ಮಾಣವಾದ ಪ್ರದೇಶ ದಟ್ಟವಾದ ಅರಣ್ಯ ಪ್ರದೇಶವಾಗಿದ್ದು, ನಾಗದೇವರ ದೈವಗಳ ಬನಗಳು ಇದ್ದ ಪ್ರದೇಶವಾಗಿದೆ.‌ ಅದನ್ನು ನಾಶ ಮಾಡಿದ್ದರಿಂದ ಅದರ ದೋಷಗಳು ಆ ಭಾಗದ ಜನರಿಗೆ ತಗುಲಿವೆ ಎಂದು ಜ್ಯೋತಿಷ್ಯ ತಜ್ಞರು ಹೇಳಿದ್ದಾರೆ. ನೂರಾರು ನಾಗಬನಗಳು ನಾಶವಾಗಿರುವುದರಿಂದ ದೇವರ ಪವಿತ್ರವಾದ ಕೆರೆಗಳಿಗೆ ಬರುತ್ತಿರುವ ನೀರಿನ ಮೂಲ ಕೂಡ ತೊಂದರೆಗೆ ಒಳಗಾಗಿವೆ. ಇಲ್ಲಿ ಕೊಳಚೆಗೇರಿ ನಿರ್ಮಾಣವಾದರೆ ಅದು ಭವಿಷ್ಯದಲ್ಲಿ ಕೆರೆಗಳು ಸಂಪೂರ್ಣ ನಾಶವಾಗಿ ಜನರ ಧಾರ್ಮಿಕ ಭಾವನೆಗಳಿಗೆ ಕೂಡ ದಕ್ಕೆ ತರಬಹುದು. ಅಲ್ಲಿನ ಮಣ್ಣಿನ ಗುಣಮಟ್ಟ, ನೀರಿನ ಝರಿಗಳನ್ನು ಅವಲೋಕಿಸಿದಾಗ ಸದರಿ ವಸತಿ ಕಾಲೋನಿಗಳನ್ನು ಅಲ್ಲಿ ಕಟ್ಟಿದ್ದೇ ತಪ್ಪು ಎನ್ನುವುದು ಎಲ್ಲಾ ಆಯಾಮಗಳಲ್ಲಿ ಗೊತ್ತಾಗುತ್ತಿದೆ!

0
Shares
  • Share On Facebook
  • Tweet It




Trending Now
ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
Hanumantha Kamath July 9, 2025
ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
Hanumantha Kamath July 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
  • Popular Posts

    • 1
      ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • 2
      ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • 3
      ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • 4
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 5
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!

  • Privacy Policy
  • Contact
© Tulunadu Infomedia.

Press enter/return to begin your search