ಯಾರದ್ದೋ ಧೈರ್ಯದ ಮೇಲೆ ಪಾಕಿಗಳಿಗೆ ಜಿಂದಾಬಾದ್ ಹೇಳುವವರು ಇದನ್ನು ನೋಡಬೇಕು!

ಈ ಮೇಲಿನ ಫೊಟೋಗಳನ್ನು ನೋಡಿದ ಬಳಿಕ ನಿಮಗೆ ಏನಿಸುತ್ತದೆ. ಸಾಮಾನ್ಯವಾಗಿ ಸೈನಿಕರು ಗಡಿಯಲ್ಲಿ ಅಯುಧಗಳನ್ನು ಹಿಡಿದು ನಿಂತಿರುವುದನ್ನು ಮಾತ್ರ ನಾವು ಟಿವಿಗಳಲ್ಲೊ, ಪತ್ರಿಕೆಗಳಲ್ಲಿಯೊ ನೋಡಿರುತ್ತೇವೆ. ಅವರ ತೀಕ್ಣ ನೋಟ, ಮಿಸುಕಾಡದೆ ನೋಡುತ್ತಿರುವ ಭಂಗಿ, ಕೈಯಲ್ಲಿ ಅತ್ಯಾಧುನಿಕ ರೈಫಲ್ ಗಳನ್ನು ಹಿಡಿದ ನಿಂತ ಶೈಲಿಯ ಫೋಟೊಗಳು ನಮಗೆ ನೋಡಲು ಸಿಕ್ಕಿರುತ್ತವೆ. ಹಾಗೆ ಇತ್ತೀಚೆಗೆ ಸಿಯಾಚಿನ್ ನಲ್ಲಿ ಸೈನಿಕರು ಗಸ್ತು ಕಾಯುವ ದೃಶ್ಯಗಳನ್ನು ಕೂಡ ನೀವು ರಾಷ್ಟ್ರೀಯ ವಾಹಿನಿಗಳಲ್ಲಿ ಕಂಡಿರಬಹುದು. ಸೈನಿಕರು ಒಬ್ಬರ ಹಿಂದೆ ಒಬ್ಬರು ನಡೆದು ಹೋಗುತ್ತಿರುವುದನ್ನು ಕೂಡ ನೋಡಿರಬಹುದು. ಅವರು ಆ ರೀತಿಯಲ್ಲಿ ಏಕಪ್ರಕಾರವಾಗಿ ಯಾಕೆ ಹೋಗುತ್ತಿದ್ದಾರೆ ಎನ್ನುವುದು ನಮಗೆ ಸಾಮಾನ್ಯವಾಗಿ ಗೊತ್ತಿರುವುದಿಲ್ಲ. ಅದಕ್ಕೆ ನನಗೆ ಓರ್ವ ನಿವೃತ್ತ ಯೋಧರೊಬ್ಬರು ಹೇಳಿದ ಮಾಹಿತಿಗಳನ್ನು ಕೇಳಿದ ಬಳಿಕ ಆ ನಮ್ಮ ಸೈನಿಕರ ವೀರಗಾಥೆ ಇಷ್ಟು ಡೆಂಜರ್ ಆಗಿ ಇರುತ್ತದೆ ಎಂದು ತಿಳಿದು ಮನಸ್ಸು ತುಂಬಾ ಮರುಕಪಟ್ಟಿತ್ತು. ವಿಷಯ ಏನೆಂದರೆ ಹತ್ತು ಸೈನಿಕರು ಒಬ್ಬರ ಹಿಂದೆ ಇನ್ನೊಬ್ಬರ ಹಿಂದೆ ಹೋಗುವಾಗ ಮೊದಲ ಯೋಧನಿಂದ ಕೊನೆಯ ಯೋಧನ ತನಕ ಪ್ರತಿಯೊಬ್ಬರ ಸೊಂಟಕ್ಕೆ ಪರಸ್ಪರ ಹಗ್ಗ ಬಿಗಿದಿರುತ್ತದೆ. ಯಾಕೆಂದರೆ ಸಿಯಾಚಿನ್ ನಲ್ಲಿ ಎಲ್ಲಿ ನೆಲ ಟೋಲ್ಲು ಇದೆ, ಎಲ್ಲಿ ಗಟ್ಟಿ ಇದೆ ಎಂದು ಹೇಳಲು ಸಾಧ್ಯವಿಲ್ಲ.
ಆದ್ದರಿಂದ ಮೊದಲ ಯೋಧ ತನ್ನ ಕೈಯಲ್ಲಿ ಒಂದು ಕೋಲು ತರಹದ್ದು ಒಂದು ಇಟ್ಟು ಕೊಂಡು ನಡೆಯುತ್ತಾ ಹೋಗುತ್ತಾನೆ. ಸಿಯಾಚಿನ್ ನಲ್ಲಿ ನಡೆಯುತ್ತಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಾಗ ಅಕಸ್ಮಾತ್ ಆಗಿ ವಿಪತ್ತು ಯಾವಾಗ ಎದುರಾಗುತ್ತೆ ಎಂದು ಹೇಳಲು ಆಗುವುದಿಲ್ಲ. ಆಗ ಅಲ್ಲಿನ ನೆಲದ ಅಡಿಯಲ್ಲಿ ಟೊಲ್ಲು ಇದ್ದದ್ದು ಗೊತ್ತಾಗದೆ ಮೊದಲಿನ ಯೋಧ ಆಳವಾದ ಗುಂಡಿಯ ಒಳಗೆ ಜಾರಿ ಬಿದ್ದರೆ ಈ ಪರಸ್ಪರ ಕಟ್ಟಿಕೊಂಡ ಹಗ್ಗದಿಂದ ಅವನನ್ನು ಮೇಲಕ್ಕೆ ಎತ್ತಲು ಇತರ ಸೈನಿಕರಿಗೆ ಅನುಕೂಲವಾಗುತ್ತದೆ. ಇಂತಹ ಜೀವನವನ್ನು ನಮ್ಮ ಸೈನಿಕರು ಅಲ್ಲಿ ಕನಿಷ್ಟ ಮೂರು ತಿಂಗಳ ತನಕ ಅನುದಿನವೂ ಕಳೆಯಬೇಕಾಗುತ್ತದೆ.
ಅದೇ ಗಡಿಯಲ್ಲಿ ಕಾವಲಿಗೆ ಕಾಯುವ ನಮ್ಮ ಸೈನಿಕರ ಪರಿಸ್ಥಿತಿಯನ್ನು ಈ ಮೇಲಿನ ಚಿತ್ರಗಳು ಇಂಚಿಂಚಾಗಿ ಹೇಳುತ್ತವೆ. ಯಾವ ಸೈನಿಕ ಕೂಡ ಕೇವಲ ಹೊಟ್ಟೆ ತುಂಬಿಸಲು ಒಂದು ಉದ್ಯೋಗ ಬೇಕು ಎನ್ನುವ ಕಾರಣಕ್ಕೆ ಸೈನ್ಯಕ್ಕೆ ಸೇರುವುದಿಲ್ಲ. ಒಂದು ವೇಳೆ ಅಷ್ಟೇ ಆಗಿದ್ದರೆ ಅವನು ಇಂತಹ ರಣಭಯಂಕರ ಸವಾಲಿನಲ್ಲಿ ಒಂದು ತಿಂಗಳು ಕೂಡ ಕೆಲಸ ಮಾಡಲು ಆಗುವುದಿಲ್ಲ. ನಮ್ಮಲ್ಲಿ ಹೆಚ್ಚಿನವರು ಉದ್ಯೋಗದ ಸ್ಥಳದಲ್ಲಿ ಬಾಸ್ ಕೇಳದಿದ್ದರೆ ಶಿಸ್ತನ್ನು ಮರೆಯುತ್ತೇವೆ. ಯಾವುದೊ ಹೊತ್ತಿಗೆ ಕೆಲಸಕ್ಕೆ ಹೋಗುವುದು, ಊಟಕ್ಕೆಂದು ಹೊರಗೆ ಹೋದವರು ಒಂದೆರಡು ಗಂಟೆ ಹಾಗೆ ಸುತ್ತಾಡುವುದು, ಸಂಜೆ ಬೇಗ ಹೋಗುವುದು, ಕೆಲಸ ಮಾಡಿದಂತೆ ನಾಟಕ ಮಾಡುವುದು ಹೀಗೆ ಮಾಡುತ್ತಾ ಇರುತ್ತೆವೆ. ಸರಕಾರಿ ಉದ್ಯೋಗದ ಸ್ಥಳಗಳಲ್ಲಿ ಇದು ಮಾಮೂಲು. ಆದರೆ ಸೈನಿಕನೊಬ್ಬ ಯಾವತ್ತೂ ತನ್ನ ಜೀವಮಾನದಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಹಾಗೆ ಮಾಡುವುದಿಲ್ಲ. ಅವನದ್ದೂ ಕೂಡ ಸರಕಾರಿ ಉದ್ಯೋಗವೇ. ಆದರೆ ಅವನದ್ದು ತಾಯಿ ಭಾರತಾಂಬೆಗೆ ಮಾಡುವ ಸೇವೆ. ನಾವು ಇವತ್ತು ತುಂಬಾ ಸೆಕೆ ಆದರೆ ಹತಾಶರಾಗುತ್ತೇವೆ. ಸ್ವಲ್ಪ ಚಳಿ ಆದರೆ ಜ್ವರ ಎಂದು ಮಲಗಿಬಿಡುತ್ತೇವೆ. ನೆಲದಲ್ಲಿ ಮಲಗುವುದು ಬಿಡಿ, ಹಾಸಿಗೆ ಒಂದಿಷ್ಟು ತೆಳು ಆದರೂ ಬೆನ್ನು ನೋವು ಬರುತ್ತದೆ ಎಂದು ನೆಪ ಹುಡುಕುತ್ತೇವೆ. ಊಟ, ತಿಂಡಿಯಲ್ಲಿ ಯಾವ ಐಟಮ್ ತಿನ್ನಬೇಕು ಎನ್ನುವುದು ಹಲವು ಬಾರಿ ನಮ್ಮ ಚಿಂತನೆಯ ಏಜೆಂಡಾ ಆಗಿರುತ್ತದೆ. ಆದರೆ ನಾವು ಇಷ್ಟೆಲ್ಲಾ ಖುಷಿಯಿಂದ, ನೆಮ್ಮದಿಯಿಂದ ಎಲ್ಲಕ್ಕಿಂತ ಹೆಚ್ಚಾಗಿ ಧೈರ್ಯದಿಂದ ಹೀಗೆ ವಾಸಿಸುವುದಕ್ಕೆ ನಮ್ಮ ಗಡಿಯನ್ನು ತಮ್ಮ ಕಣ್ಣ ರೆಪ್ಪೆಯಲ್ಲಿ ಕಾಯುವ ಸೈನಿಕರೇ ಕಾರಣ ಎನ್ನುವುದನ್ನು ಮರೆತು ಬಿಡುತ್ತೆವೆ. ಒಂದು ವೇಳೆ ನಮ್ಮ ದೇಶದಲ್ಲಿ ಸೈನಿಕರೇ ಇಲ್ಲದಿದ್ದರೆ ಏನಾಗುತ್ತಿತ್ತು ಎಂದು ಊಹಿಸಿ. ಪಾಕಿಸ್ತಾನದ ದುರುಳರು ನಮ್ಮ ದೇಶದ ಮೇಲೆ ದಾಳಿ ಮಾಡುತ್ತಿದ್ದರು. ಅಲ್ಲಿನ ವಿಕೃತ ಕಾಮಿಗಳು ನಮ್ಮ ದೇಶದ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡುತ್ತಿದ್ದರು. ನಮ್ಮ ದೇಶದ ಬಂಗಾರ, ವಜ್ರ, ವೈಡೂರ್ಯ ಅವರನ್ನು ಕೊಳ್ಳೆ ಹೊಡೆದು ತಮ್ಮ ಮೈಮೇಲೆ ಧರಿಸುತ್ತಿದ್ದರು. ನಮ್ಮ ದೇಶದ ಪುರುಷರು ಅವರ ಗುಲಾಮರಾಗುತ್ತಿದ್ದರು. ನಾವು ಅವರ ಜೀತದಾಳುಗಳಂತೆ ಇರಬೇಕಿತ್ತು. ನಂತರ ಏನು ಉಳಿದಿರುತ್ತೆ. ಈ ಕಾಂಗ್ರೆಸ್, ಬಿಜೆಪಿ, ಆಮ್ ಆದ್ಮಿ . ಕಮ್ಯೂನಿಸ್ಟ್ ಏನು ಇಲ್ಲ. ಎಲ್ಲ ಆ ಪಾಕಿಗಳ ಕೈಯ ಕೂಲಿಯಾಳುಗಳು.
ಇವತ್ತು ನಾವು ನಮ್ಮ ಸೈನಿಕರ ಬಲ ನಂಬಿಕೊಂಡು ಜೆಎನ್ ಯುವಿನಲ್ಲಿ,ಸಿ ಎ ಎ ವಿರೋದಿ ಸಭೆಗಳಲ್ಲಿ ಕೆಲವರು ಪಾಕಿಸ್ತಾನದ ಬಗ್ಗೆ ಜೈಕಾರ ಹಾಕುತ್ತಾರೆ. ನಮ್ಮದೇ ಕಾಶ್ಮೀರ ಸ್ವತಂತ್ರವಾಗಬೇಕು ಎಂದು ಕಿರುಚುತ್ತಾರೆ. ಅಫ್ಜಲ್ ಗುರು ಮತ್ತೆ ಹುಟ್ಟಿ ಬಾ ಎನ್ನುತ್ತಾರೆ. ನಿಜಕ್ಕೂ ನಮ್ಮ ಸೈನಿಕರಿಗೆ ಇದೆಲ್ಲಾ ಕೇಳಿದರೆ ಅವರಿಗೆ ಹೇಗೆ ಆಗಬೇಡಾ? ಮಣ್ಣಿನಲ್ಲಿ ಮಲಗಿ ಒಂದಿಷ್ಟು ಕಣ್ಣು ಮುಚ್ಚಿ, ರೆಸ್ಟ್ ತೆಗೆದುಕೊಂಡ ಆ ಸೈನಿಕ ಮತ್ತೆ ಕೆಲವು ಗಂಟೆಗಳ ತನಕ ರೆಪ್ಪೆ ಮುಚ್ಚದೆ ದೇಶ ಕಾಯಲು ಸಿದ್ಧನಾಗುತ್ತಾನೆ. ಆ ಪಾಕಿಸ್ತಾನಕ್ಕೆ ಗೊತ್ತಿದೆ, ನಮ್ಮ ದೇಶದ ಸೈನಿಕರನ್ನು ಸೋಲಿಸಿ ಈ ದೇಶವನ್ನು ತನ್ನ ವಶ ಮಾಡಲು ಸಾಧ್ಯವಿಲ್ಲ. ಆದರೆ ಈ ದೇಶದ ಒಳಗಿರುವ ಯುವ ಮನಸ್ಸುಗಳನ್ನು ತಮ್ಮ ಷಡ್ಯಂತ್ರದಿಂದ ಸೋಲಿಸಿ, ದೇಶವನ್ನು ನಮ್ಮ ವಶ ಮಾಡಬಹುದು. ಈ ಚಿಂತನೆಯಿಂದ ಅಫ್ಜಲ್ ಗುರುವಿನಂತವರು ಪ್ರಾಧ್ಯಾಪಕ, ರಿಸರ್ಚ ಸ್ಕಾಲರ್, ಪತ್ರಕರ್ತ, ಭೋದಕ ಹೀಗೆ ಬೇರೆ ಬೇರೆ ರೀತಿಯ ವೇಷದಲ್ಲಿ ಇಲ್ಲಿ ಪ್ರವೇಶ ಮಾಡಿ ಇಲ್ಲಿನ ಮನಸ್ಸುಗಳನ್ನು ಕೆಡಿಸುತ್ತವೆ. ಅಂತಹ ವಿಕಟ ವೇಷಧಾರಿಗಳಿಗೆ ಒಂದು ವಿಷಯ ಗೊತ್ತಿದೆ. ನಮ್ಮ ಭಾರತದಲ್ಲಿ ಮಾತ್ರ ದೇಶಕ್ಕೆ ಅಪಮಾನವಾಗುವ ವಿಷಯ ಬಂದಾಗಲೂ ಇಲ್ಲಿನ ರಾಜಕೀಯ ಪಕ್ಷಗಳು ಒಟ್ಟಾಗುವುದಿಲ್ಲ. ದೇಶಪ್ರೇಮ ವಿಷಯದಲ್ಲಿಯೂ ಭಾರತದಲ್ಲಿ ರಾಜಕೀಯ ಮಾಡುವ ‘ಗಂಧಿಗಳು’, ಕುಜ್ರೀವಾಲ್ ಇರುವ ತನಕ ನಾವು ಜೆ ಎನ್ ಯುಗೆ ಬೇಕಾದರೂ ನುಗ್ಗಬಹುದು, ಮಂಗಳೂರು ವಿಶ್ವವಿದ್ಯಾನಿಲಯಕ್ಕೂ ನುಗ್ಗಬಹುದು!!
Leave A Reply