ಅಜಿತ್ ದೋವಲ್ ಪಾಕಿಸ್ತಾನದಲ್ಲಿದ್ದಾಗ ಅವರಿಗಾದ ಅನುಭವವೇ ರೋಚಕ!!
ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರವನ್ನು ನಮ್ಮ ದೇಶದ ಆಂತರಿಕ ಭದ್ರತೆ ಸಲಹೆಗಾರ ಅಜಿತ್ ದೋವಲ್ ಬಹುತೇಕ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯ ಅಗತ್ಯ ಅಜಿತ್ ದೋವಲ್ ಅವರಿಗೆ ತಿಳಿದಷ್ಟು ನಮ್ಮ ದೇಶದಲ್ಲಿ ಬೇರೆಯವರಿಗೆ ತಿಳಿದಿರುವುದು ಕಡಿಮೆ ಎಂದರೆ ತಪ್ಪಾಗಲಿಕ್ಕಿಲ್ಲ.
ಅಜಿತ್ ದೋವಲ್ ಅವರು ಪಾಕಿಸ್ತಾನದಲ್ಲಿ ಪತ್ತೆದಾರಿಕೆಯಲ್ಲಿ ಇದ್ದಾಗ ತಮಗಾದ ಒಂದು ಘಟನೆಯನ್ನು ವಿವರಿಸಿದ್ದಾರೆ. “ತಾವು ಪಾಕಿಸ್ತಾನದಲ್ಲಿ ಗುಪ್ತಚರರಾಗಿ ಇದ್ದಾಗ ದರ್ಗಾಗಳಿಗೆ ಭೇಟಿ ಕೊಟ್ಟು ಅಲ್ಲಿ ನಡೆಯುತ್ತಿದ್ದ ವಿಚಾರಗಳನ್ನು ಗಮನಿಸುತ್ತಿದ್ದೆ. ಒಂದು ದಿನ ಹಾಗೆ ಹೋಗುವಾಗ ದರ್ಗಾದ ಹೊರಗೆ ನಿಂತಿದ್ದ ಉದ್ದದ ಬಿಳಿ ಗಡ್ಡದ ವ್ಯಕ್ತಿಯೊಬ್ಬ ನನ್ನನ್ನು ಪಕ್ಕಕ್ಕೆ ಕರೆದು ನೀನು ಹಿಂದೂ ಅಲ್ವಾ ಎಂದು ಕೇಳಿದ್ದ. ನಾನು ಇಲ್ಲ ಎಂದೆ. ಆತ ನನ್ನನ್ನು ಪಕ್ಕದ ಒಣಿಯಲ್ಲಿರುವ ತನ್ನ ಕೋಣೆಗೆ ಕರೆದುಕೊಂಡು ಹೋದ. ಅಲ್ಲಿ ನೀನು ಹಿಂದೂ ನನಗೆ ಗೊತ್ತಾಗಿದೆ ಎಂದ. ಅವನ ಬಳಿ ನಾನು ಹಿಂದೂ ಎನ್ನುವುದಕ್ಕೆ ಸಾಕ್ಷ್ಯಗಳಿದ್ದವು. ಅದೇನೆಂದರೆ ನನ್ನ ಕಿವಿ ಚುಚ್ಚಲ್ಪಟ್ಟಿತ್ತು. ಭಾರತದಲ್ಲಿ ಸಣ್ಣ ಮಕ್ಕಳಿಗೆ ಕಿವಿ ಚುಚ್ಚುವ ಶಾಸ್ತ್ರ ಮಾಡುತ್ತಾರೆ. ಅದರಿಂದ ಆತ ನಾನು ಹಿಂದೂ ಎನ್ನುವುದನ್ನು ಗುರುತು ಹಿಡಿದಿದ್ದ ಎನ್ನುತ್ತಾರೆ ಅಜಿತ್ ದೋವಲ್. ನಂತರ ಆತ ತನ್ನ ಕೋಣೆಯ ಕಪಾಟಿನ ಬಾಗಿಲು ತೆರೆದು ಅದರ ಒಳಗೆ ದುರ್ಗಾ ದೇವಿ ಮತ್ತು ಶಿವನ ಮೂರ್ತಿ ತೆಗೆದು ತೋರಿಸಿ “ನಾನು ಕೂಡ ಹಿಂದೂ ಆಗಿದ್ದೆ. ಆದರೆ ನನ್ನ ಕುಟುಂಬವನ್ನು ಕೆಲವು ವರ್ಷಗಳ ಹಿಂದೆ ಭೀಕರವಾಗಿ ಹತ್ಯೆಗೈಯಲಾಗಿತ್ತು. ಆ ಬಳಿಕ ನಾನು ವೇಷ ಮರೆಸಿ ಇಲ್ಲಿ ಮುಸಲ್ಮಾನನಂತೆ ಬದುಕುತ್ತಿದ್ದೇನೆ. ಹಾಗೆ ನನಗೆ ಹಿಂದೂಗಳನ್ನು ನೋಡಿದರೆ ಖುಷಿಯಾಗುತ್ತದೆ” ಎಂದು ಹೇಳಿದ್ದ ಎಂದು ಅಜಿತ್ ತಮ್ಮ ಏಳು ವರ್ಷದ ಪಾಕ್ ಗುಪ್ತಚರದ ಅನುಭವದ ಒಂದು ಸಣ್ಣ ಘಟನೆಯನ್ನು ನೆನಪಿಸುತ್ತಾ ಅಲ್ಲಿನ ಪರಿಸ್ಥಿತಿ ಹೇಗಿದೆ ಎಂದು ವಿವರಿಸುತ್ತಾರೆ.
ಅನೇಕ ಜನ ಹಿಂದೂಗಳು ಪಾಕಿಸ್ತಾನದಿಂದ ಭಾರತಕ್ಕೆ ಇಲ್ಲಿ ನಡೆಯುವ ಕುಂಭಮೇಳದ ಸಮಯದಲ್ಲಿ ಬಂದು ನಂತರ ಹಿಂತಿರುಗಿ ಹೋಗಿಲ್ಲ. ಅವರಲ್ಲಿ ಹೆಚ್ಚಿನವರು ದೆಹಲಿಯ ಬಿಜ್ವಾಸನ್ ಎನ್ನುವ ಹಳ್ಳಿಯಲ್ಲಿ ವಾಸಿಸುತ್ತಿದ್ದು ಹಿರಿಯ ನಾಗರಿಕ ನವರ್ ಸಿಂಗ್ ಎನ್ನುವ ಆಶ್ರಯದಲ್ಲಿದ್ದಾರೆ. ಇನ್ನು ಅನೇಕ ಹಿಂದೂಗಳು ಪಾಕಿಸ್ತಾನದಲ್ಲಿರುವ ತಮ್ಮ ಸ್ವಂತ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಿ ಭಾರತಕ್ಕೆ ಬಂದಿದ್ದಾರೆ. ಹಾಗೆ ಬಂದಿರುವ ಹನುಮಾನ್ ದಾಸ್ ಎನ್ನುವವರು ಹೇಳುವ ಪ್ರಕಾರ ತಮ್ಮ ಅತೀ ದೊಡ್ಡ ಕೋಟಿ ಬೆಲೆಬಾಳುವ ಬಂಗ್ಲೆಯನ್ನು ಕೇವಲ ಎರಡು ಲಕ್ಷಕ್ಕೆ ಮುಸ್ಲಿಮರಿಗೆ ಮಾರಿ ಬಂದಿದ್ದೇವೆ ಎಂದು ಹೇಳುತ್ತಾರೆ. ಎಷ್ಟೇ ಸ್ವಂತ ಜಮೀನು ಇದ್ದರೂ ಅದನ್ನು ಪಾಕಿಗಳು ಅತಿಕ್ರಮಣ ಮಾಡಿ ಅಲ್ಲಿ ಹಿಂದೂಗಳನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಾರೆ. ಎಲ್ಲಿಯ ತನಕ ಎಂದರೆ ಅಲ್ಲಿ ಹಿಂದೂಗಳನ್ನು ಹೂಳುವುದಕ್ಕೂ ಅವಕಾಶವಿಲ್ಲ. ಬೇಕಾದರೆ ಸುಟ್ಟುಬಿಡಬಹುದು ಎನ್ನುವಷ್ಟರ ಮಟ್ಟಿಗೆ ಹಿಂದೂಗಳು ಅಲ್ಲಿ ಪರಕೀಯರಾಗಿದ್ದಾರೆ. ಪಾಕಿಸ್ತಾನದಿಂದ ವಲಸೆ ಬಂದಿರುವ ಹಿಂದೂಗಳಲ್ಲಿ ಹೆಚ್ಚಿನವರು ತಮ್ಮ ಅತೀ ವಯಸ್ಸಾದ ತಂದೆ, ತಾಯಿಯನ್ನು ಕರೆದುಕೊಂಡು ಬರಲಾಗದೇ ಅಲ್ಲಿಯೇ ಬಿಟ್ಟು ಬಂದಿದ್ದಾರೆ. ಇನ್ನು ಆ ವಯಸ್ಸಾದ ಅಪ್ಪ, ಅಮ್ಮ ಬದುಕಿದ್ದಾರಾ ಅಥವಾ ದ್ವೇಷದಿಂದ ಅವರನ್ನು ಮುಗಿಸಲಾಗಿದೆಯಾ ಎನ್ನುವುದು ಇಲ್ಲಿ ವಲಸೆ ಬಂದಿರುವ ಹಿಂದೂಗಳಿಗೆ ಗೊತ್ತಿಲ್ಲ. ಇನ್ನು ಅಂಕಣಕಾರ ಇಫರ್ಾನ್ ಹುಸೇನ್ 2005, ಅಕ್ಟೋಬರ್ ರಂದು “ದಿ ದಾನ್” ಪತ್ರಿಕೆಯಲ್ಲಿ ತಮ್ಮ ಕನ್ವರ್ಶೇನ್ ಲಾಸ್ಸ್ ಎನ್ನುವ ಅಂಕಣದಲ್ಲಿ ಒಂದು ಸಂಗತಿ ಬರೆದಿದ್ದಾರೆ. ಅದರಲ್ಲಿ ಕರಾಚಿಯಲ್ಲಿ ನೆಲೆಸಿದ್ದ ಹಿಂದೂ ಕುಟುಂಬವೊಂದರ ಮೂರು ಹೆಣ್ಣುಮಕ್ಕಳಾದ ರೀನಾ, ಉಷಾ ಮತ್ತು ರಿಮಾ ಅವರನ್ನು ಅಕ್ಟೋಬರ್ 2005 ರಲ್ಲಿ ಹಾಡುಹಗಲೇ ಮನೆಯಿಂದಲೇ ಕಿಡ್ನಾಪ್ ಮಾಡಲಾಗಿತ್ತು. ಕೆಲವು ದಿನಗಳ ಬಳಿಕ ಅವರ ಮನೆಗೆ ಒಂದು ಕೊರಿಯರ್ ಬಂದು ಅದರಲ್ಲಿ ಆ ಮೂರು ಜನ ಹೆಣ್ಣುಮಕ್ಕಳು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿರುವುದು ಅಫಿದಾವಿತ್ ಮೂಲಕ ತಿಳಿಸಲಾಗಿತ್ತು. ಇನ್ನು ಮುಂದೆ ಆ ಯುವತಿಯರು ತಮ್ಮ ಹಿಂದು ಪೋಷಕರ ಜತೆ ವಾಸಿಸುವಂತಿಲ್ಲ ಎಂದು ತಿಳಿಸಲಾಗಿತ್ತು. ಅದರ ನಂತರ ಆ ಅಪ್ಪ, ಅಮ್ಮ ಇವತ್ತಿಗೂ ವರಾಂಡದಲ್ಲಿ ಕುಳಿತು ತಮ್ಮ ಮಕ್ಕಳ ಬರುವಿಕೆಗೆ ಕಾಯುತ್ತಿದ್ದಾರೆ, ಮಕ್ಕಳು ಬರುವುದಿಲ್ಲ ಎಂದು ಗೊತ್ತಿದ್ದೂ ಕೂಡ ಎಂದು ಅಂಕಣಕಾರ ಬರೆಯುತ್ತಾರೆ. ಇದು ಪಾಕಿಸ್ತಾನದ ಹಿಂದೂಗಳ ಪರಿಸ್ಥಿತಿ.
ಪಾಕಿಸ್ತಾನದಲ್ಲಿ ವಾಸಿಸುವ ಹಿಂದೂ ಮಹಿಳೆಯರು ಎದುರಿಸುತ್ತಿದ್ದ ಅತೀ ದೊಡ್ಡ ದೌರ್ಜನ್ಯ ಎಂದರೆ ಕಿಡ್ನಾಪ್. ಯಾವ ಹಿಂದೂ ಮಹಿಳೆಯನ್ನು ಕೂಡ ಯಾವ ಸಮಯದಲ್ಲಿಯೂ ಎಲ್ಲಿಂದ ಬೇಕಾದರೂ ಕಿಡ್ನಾಪ್ ಮಾಡಿ ತೆಗೆದುಕೊಂಡು ಹೋಗಿ ಅತ್ಯಾಚಾರ ಮಾಡಲಾಗುತ್ತಿತ್ತು. ಅವಳನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿತ್ತು ಮತ್ತು ಆ ಬಳಿಕ ಒತ್ತಾಯಪೂರ್ವಕವಾಗಿ ಮದುವೆ ಮಾಡಿಕೊಳ್ಳಲಾಗುತ್ತಿತ್ತು. ಆ ಬಳಿಕ ಆಕೆಯನ್ನು ಯಾರಿಗಾದರೂ ಮಾರಾಟ ಮಾಡಿ ಕಾಮದ ವಸ್ತುವನ್ನಾಗಿ ಬಳಸಲಾಗುತ್ತಿತ್ತು. ಇಷ್ಟೆಲ್ಲಾ ನಿರಂತರವಾಗಿ ನಡೆಯುತ್ತಿದ್ದರೂ ಯಾರೂ ಕೂಡ ಆ ಬಗ್ಗೆ ಧ್ವನಿ ಎತ್ತುತ್ತಿರಲಿಲ್ಲ. ಅಲ್ಲಿರುವ ಇಸ್ಲಾಂ ಧರ್ಮಗುರುಗಳು ಕೂಡ ಹಿಂದೂ ಮಹಿಳೆಯರ ಮೇಲೆ ಆಗುತ್ತಿರುವ ಅನ್ಯಾಯವನ್ನು ತಪ್ಪು ಎಂದು ಖಂಡಿಸದೇ ಮೌನವಾಗಿರುತ್ತಿದ್ದರು. ಅದೇ ಒಬ್ಬ ಹಿಂದೂ ಯುವಕ ಮುಸ್ಲಿಂ ಯುವತಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡರೆ ಆತನನ್ನು ಮತ್ತು ಆತನ ಇಡೀ ಕುಟುಂಬವನ್ನು ಕಠಿಣಶಿಕ್ಷೆಗೆ ಗುರಿಪಡಿಸಲಾಗುತ್ತಿತ್ತು ಎಂದು ಅಲ್ಲಿಂದ ಬಂದಿರುವ ಪ್ರತಿಯೊಬ್ಬ ಹಿಂದೂವಿನ ನೋವಿನ ಮಾತುಗಳು.
Leave A Reply