• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಇಲಿಯ ಬಾಲವೂ ಮತ್ತು ಅದಕ್ಕೆ ಬಾಂಬ್ ಕಟ್ಟಿದ್ದ ದೊರೆಸ್ವಾಮಿಯವರ ಕಥೆಯೂ!!

Hanumantha Kamath Posted On March 3, 2020
0


0
Shares
  • Share On Facebook
  • Tweet It

ದೊರೆಸ್ವಾಮಿಯವರು ಸ್ವಾತಂತ್ರ್ಯ ಹೋರಾಟಗಾರರು ಎನ್ನುವ ವಿಷಯದ ಮೇಲೆ ಪ್ರಸ್ತುತ ರಾಜ್ಯದಲ್ಲಿ ಚರ್ಚೆಯಾಗುತ್ತಿದೆ. ಅವರಿಗ 101 ವರ್ಷ ಆಗಿರುವುದರಿಂದ ಸ್ವಾತಂತ್ರ್ಯ ಸಿಗುವ 28 ವರ್ಷ ಮೊದಲೇ ಹುಟ್ಟಿದ ಕಾರಣದಿಂದ ಮಾತ್ರ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು ಎನ್ನುವುದೇ ಆದರೆ ಒಕೆ, ಅದನ್ನು ಒಪ್ಪಿಕೊಳ್ಳುವುದು ತಪ್ಪಿಲ್ಲ. ಆದರೆ ಮಹಾತ್ಮಾ ಗಾಂಧಿಯವರೊಂದಿಗೆ ಸ್ವಾತಂತ್ರ್ಯಕ್ಕೆ ಹೋರಾಡಿದರು ಎನ್ನುವುದೇ ಆದರೆ ಅದಕ್ಕೆ ಸಾಕ್ಷ್ಯಗಳು ಬೇಕು. ಮಹಾತ್ಮಾ ಗಾಂಧಿಯವರ ಸಾವಿರಾರು ಅನುಯಾಯಿಗಳಲ್ಲಿ ಒಬ್ಬರಾಗಿದ್ದರು ಎನ್ನುವುದಾದರೆ ಓಕೆ. ಆದರೆ ಗಾಂಧಿಜಿ ಅವರೊಂದಿಗೆ ಇದ್ದರು ಮತ್ತು ಅದಕ್ಕಾಗಿ ದೊರೆಸ್ವಾಮಿ ಅವರಿಗೆ ಸಿಕ್ಕಾಪಟ್ಟೆ ಗೌರವ ಕೊಡಬೇಕು ಮತ್ತು ಅವರು ಹೇಳಿದ್ದನ್ನು ವೇದವಾಕ್ಯದಂತೆ ಒಪ್ಪಿಕೊಳ್ಳಬೇಕು ಎನ್ನುವುದಾದರೆ ಅದು ಕಷ್ಟ. ಯಾಕೆಂದರೆ ದೊರೆಸ್ವಾಮಿ ಪ್ರಶ್ನಾತೀತರಲ್ಲ. ಅವರು ಹೇಗೆ ಸಾವರ್ಕರ್ ಮತ್ತು ನರೇಂದ್ರ ಮೋದಿಯನ್ನು ಬೈಯುತ್ತಾರೋ ಹಾಗೆ ಅವರು ಸ್ವಾತಂತ್ರ್ಯ ಹೋರಾಟಗಾರರು ಎನ್ನುವ ಒಂದೇ ಕಾರಣಕ್ಕೆ ಅವರು ಹೇಳಿದ್ದೇ ಸರಿ ಎನ್ನಲು ಆಗುವುದಿಲ್ಲ. ತಾವು ಇಲಿಯ ಬಾಲಕ್ಕೆ ಬಾಂಬ್ ಕಟ್ಟಿ ಬ್ರಿಟಿಷರ ಮೇಲೆ ಬಿಸಾಡುತ್ತಿದ್ದೇವು ಎಂದು ದೊರೆಸ್ವಾಮಿ ಹೇಳುತ್ತಾರೆ. ಅಂತಹ ಟೆಕ್ನಾಲಜಿಯ ಬಗ್ಗೆ ಸಂಶಯವಿದೆ. ಹಾಗಂತ ದೊರೆಸ್ವಾಮಿಯವರ ಇಲಿಬಾಲದ ಬಾಂಬಿಗೆ ಮಹಾತ್ಮಾ ಗಾಂಧಿಯವರು ಸಮ್ಮತಿಸಿದ್ದಿರಾ ಎನ್ನುವ ಪ್ರಶ್ನೆ ನನ್ನನ್ನು ಕಾಣುತ್ತದೆ. ಯಾಕೆಂದರೆ ಗಾಂಧಿಜಿ ಅಹಿಂಸಾ ತತ್ವದ ಮೇಲೆ ನಂಬಿಕೆ ಇಟ್ಟವರು. ಅವರಿಗೆ ಬಾಂಬ್ ಮತ್ತು ಇಲಿ ಕಾನ್ಸೆಪ್ಟು ಎರಡೂ ಒಪ್ಪಿಗೆಯಾಗಲಿಕ್ಕಿಲ್ಲ. ಅದೇ ಸಮಯಕ್ಕೆ ದೊರೆಸ್ವಾಮಿ ಅವರಿಗೆ ಗಾಂಧಿಜಿಯವರ ಅಹಿಂಸಾತ್ಮಕ ನಿಲುವುಗಳು ಇಷ್ಟವಾಗದೇ ಅವರು ಕ್ರಾಂತಿಕಾರಿಗಳ ಗುಂಪಿನಲ್ಲಿದ್ದರಾ? ಹಾಗಾದರೆ ದೊರೆಸ್ವಾಮಿಯವರು ಮೊದಲು ತಾವು ಮಹಾತ್ಮಾ ಗಾಂಧಿಜಿಯವರ ಹೋರಾಟದ ರೀತಿಯ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಬೇಕು. ತಾವು ಬಾಂಬ್ ಇಟ್ಟು ಬ್ರಿಟಷರ ವಿರುದ್ಧ ಹೋರಾಡಲು ತಯಾರಾಗಿದ್ದಲ್ಲಿ ಅದಕ್ಕೆ ಗಾಂಧಿಜಿ ಏನು ಹೇಳಿದ್ದರು ಎನ್ನುವುದನ್ನು ತಿಳಿಸಬೇಕು.
ಇನ್ನು ದೊರೆಸ್ವಾಮಿ ಸಿಎಎ, ಎನ್ ಆರ್ ಸಿ, ಎನ್ ಪಿಆರ್ ವಿರೋಧಿಸಿ ಹೇಳಿಕೆ ಕೊಡುತ್ತಾರೆ. ಇಲ್ಲಿ ಅವರಿಗೆ ಈ ಮೂರು ವಿಷಯಗಳ ಬಗ್ಗೆ ತಪ್ಪು ಮಾಹಿತಿ ಕೊಡಲಾಗಿದೆ ಅಥವಾ ಅವರು ಮೋದಿ ಅದನ್ನು ಜಾರಿಗೆ ತರುತ್ತಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಅದನ್ನು ವಿರೋಧಿಸುತ್ತಿದ್ದಾರೆ. ಮೋದಿಯನ್ನು ವಿರೋಧಿಸಬಾರದು ಎಂದು ನಾನು ಹೇಳುವುದಿಲ್ಲ. ಆದರೆ ಮೋದಿ ಒಬ್ಬ ಗ್ರಾಮ ಪಂಚಾಯತ್ ಸದಸ್ಯ ಅಲ್ಲ. ಅವರು ದೇಶದ ಕೋಟ್ಯಾಂತರ ಜನರಿಂದ ಆಯ್ಕೆಯಾಗಿರುವ ದೇಶದ ಪ್ರಧಾನಿ. ಅದಲ್ಲದೇ ಅವರು ಸಿಎಎ ತರುತ್ತಿರುವುದು ದೇಶದ ಹಿತಾಸಕ್ತಿಯಿಂದ. ಅಷ್ಟಕ್ಕೂ ಒಂದು ವೇಳೆ ಗಾಂಧಿಜಿಯವರೇ ಈಗ ಬದುಕಿದ್ದರೆ ಮೋದಿಯವರನ್ನು ಬೆಂಬಲಿಸುತ್ತಿದ್ದರು. ಯಾಕೆಂದರೆ ಪಾಕಿಸ್ತಾನ, ಬಾಂಗ್ಲಾ ಸಹಿತ ಆ ಮನಸ್ಥಿತಿಯ ರಾಷ್ಟ್ರಗಳಲ್ಲಿ ಮುಸ್ಲಿಮರನ್ನು ಬಿಟ್ಟು ಬೇರೆಯವರ ಪರಿಸ್ಥಿತಿ ಹೇಗಿದೆ ಎಂದು ಗೊತ್ತಾದರೆ ಸ್ವತ: ಗಾಂಧಿಜಿಯವರೇ ದೊರೆಸ್ವಾಮಿಯವರನ್ನು ಕರೆಸಿ ವಿರೋಧಿಸಬೇಡಿ ಎನ್ನುತ್ತಿದ್ದರು. ಅಷ್ಟೇ ಅಲ್ಲ, 1973 ರಲ್ಲಿ ಪಾಕ್ ಸರಕಾರ ಪಾಕಿಸ್ತಾನದ ಸಂವಿಧಾನದಲ್ಲಿ ಒಂದು ಬದಲಾವಣೆ ಮಾಡಿ ತಮ್ಮ ದೇಶದ ಯಾವುದೇ ಅಲ್ಪಸಂಖ್ಯಾತ ವ್ಯಕ್ತಿ (ಹಿಂದೂ, ಕ್ರಿಶ್ಚಿಯನ್, ಜ್ಯೂ ಮತ್ತು ಇತರ) ದೇಶದ ಪ್ರಧಾನಿ ಅಥವಾ ರಾಷ್ಟ್ರಪತಿ ಆಗುವಂತಿಲ್ಲ ಎನ್ನುವ ಕಾನೂನು ರೂಪಿಸಿದೆ. ಒಂದು ದೇಶ ತನ್ನ ನೆಲದಲ್ಲಿ ವಾಸಿಸುವ ಅಲ್ಪಸಂಖ್ಯಾತ ಸಮುದಾಯಗಳನ್ನು ತನ್ನ ಪ್ರಜೆ ಎಂದು ಒಪ್ಪಿಕೊಳ್ಳದ ಪರಿಸ್ಥಿತಿ ಇರುವಾಗ ಅಂತಹ ಕಡೆ ನೆಮ್ಮದಿಯಾಗಿ ಬದುಕುವ ಸ್ವಾತಂತ್ರ್ಯ ಸಿಗುತ್ತದೆ ಎಂದು ನಿರೀಕ್ಷಿಸುವುದು ಹೇಗೆ ಸಾಧ್ಯ ದೊರೆಸ್ವಾಮಿಯವರೇ?
ಇಂತಹ ದುಸ್ತರ ಜೀವನವನ್ನು ಪಾಕಿಸ್ತಾನದಲ್ಲಿ ವಾಸಿಸಿದ ಪ್ರತಿಯೊಬ್ಬ ಹಿಂದೂ ಅನುಭವಿಸಿದ್ದಾನೆ. ಅದರಿಂದ ಹೊರಬರಲಾಗದೇ ಹೆಚ್ಚಿನವರು ಮತಾಂತರ ಹೊಂದಿದರು ಮತ್ತು ಉಳಿದವರು ಭಾರತಕ್ಕೆ ವಲಸೆ ಬರಲು ತೀರ್ಮಾನಿಸಿದರು. ಈ ಮೂಲಕ ಸ್ವಾತಂತ್ರ್ಯದ ನಂತರ ದೇಶ ವಿಭಜನೆಗೊಂಡಾಗ ಪಾಕಿಸ್ತಾನದಲ್ಲಿದ್ದ ಹಿಂದೂಗಳ ಒಟ್ಟು ಶೇಕಡಾ 17% ಇದ್ದರೆ ಅದೇ 2011 ರಲ್ಲಿ ಅದು 2%ಗೆ ಬಂದು ತಲುಪಿದೆ.
ಹೀಗೆ ಅಲ್ಲಿನ ಕಿರುಕುಳ ತಾಳಲಾರದೇ 2014, ಡಿಸೆಂಬರ್ 31 ರ ಮೊದಲು ಭಾರತಕ್ಕೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪಘಾನಿಸ್ತಾನದಿಂದ ಬಂದ ಹಿಂದೂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಪಾರ್ಶಿ ಮತ್ತು ಜೈನ್ ಸಮುದಾಯದವರಿಗೆ ಭಾರತೀಯ ಪೌರತ್ವವನ್ನು ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಹಿಂದೆ 11 ವರ್ಷ ವಾಸ ಮಾಡಿದ ಬಳಿಕ ಅವರು ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದಿತ್ತು. ಇನ್ನು ಮುಂದೆ 5 ವರ್ಷ ವಾಸ ಮಾಡಿದರೂ ಅವರಿಗೆ ಪೌರತ್ವ ನೀಡಲು ಕೇಂದ್ರ ತನ್ನ ಕಾಯ್ದೆಯಲ್ಲಿ ತಿದ್ದುಪಡಿ ತಂದಿದೆ. ಈ ಮೂಲಕ ಕನಿಷ್ಟ ಆರು ಧರ್ಮಗಳ ಅಸಂಖ್ಯಾತ ನಿರಾಶ್ರಿತರಿಗೆ ನೆಮ್ಮದಿಯ ಜೀವನ ಸಿಗಲಿದೆ. ಇಲ್ಲಿಯ ತನಕ ಅವರಿಗೆ ಭಾರತದ ಪೌರತ್ವ ಸಿಗದೆ ಎಲ್ಲಿ ಕೂಡ ವಾಸಿಸಲು ಮನೆ ಸಿಗುವುದು ಕಷ್ಟವಿತ್ತು. ಶಾಲೆಗೆ ಮಕ್ಕಳನ್ನು ದಾಖಲಿಸುವುದು ಕಷ್ಟಸಾಧ್ಯವಿತ್ತು. ಉದ್ಯೋಗ, ವ್ಯವಹಾರಕ್ಕೆ ಸಮಸ್ಯೆ ಉಂಟಾಗುತ್ತಿತ್ತು. ಇನ್ನು ಮುಂದೆ ಅಂತಹ ತೊಂದರೆಗಳು ಆಗುವುದು ತಪ್ಪಲಿವೆ. ಇದೆಲ್ಲಾ ಗೊತ್ತಿಲ್ಲದೇ ದೊರೆಸ್ವಾಮಿ ಕೇಂದ್ರ ಸರಕಾರವನ್ನು ಟೀಕಿಸುತ್ತಿದ್ದಾರೆ. ಹಾಗಿರುವಾಗ ಅವರ “ಸ್ವಾತಂತ್ರ್ಯ ಹೋರಾಟ”ದ ಬಗ್ಗೆ ಪ್ರಶ್ನಿಸುವುದು ಯಾಕೆ ತಪ್ಪಲ್ಲ!
0
Shares
  • Share On Facebook
  • Tweet It




Trending Now
ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
Hanumantha Kamath July 15, 2025
ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
Hanumantha Kamath July 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
  • Popular Posts

    • 1
      ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • 2
      ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • 3
      ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • 4
      ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • 5
      ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!

  • Privacy Policy
  • Contact
© Tulunadu Infomedia.

Press enter/return to begin your search