ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗದ ಸರಕಾರ!

ಈ ನಾಡಿನ ನಿಯಮಗಳಿಗೆ ತಲೆಬಾಗಿ ಇರುತ್ತೀರಿ ಎಂದರೆ ಇದ್ದುಬಿಡಿ, ಇಲ್ಲದಿದ್ದರೆ ಏನು ಮಾಡಬೇಕು ಎಂದು ಗೊತ್ತಿದೆ ಎಂದು ಲಕ್ನೊದಲ್ಲಿ ಕುಳಿತು ಯೋಗಿ ಆದಿತ್ಯನಾಥ ಗುಡುಗಿದ ನಂತರ ಒಂದೇ ಒಂದು ಸಾರ್ವಜನಿಕ ಸೊತ್ತಿಗೆ ಕೈ ಹಾಕಲು ಯಾರೂ ಧೈರ್ಯ ಮಾಡಿಲ್ಲ. ಅದು ಸಿಎಂ ಪವರ್. ಅದು ಬಿಟ್ಟು ಮಾತುಕತೆ ನಡೆಸಿದ್ದೇನೆ. ಮುಸ್ಲಿಂ ಶಾಸಕರನ್ನು ಕರೆಸಿ ಮಾತನಾಡಿದ್ದೇನೆ. ಎಲ್ಲರೂ ಒಪ್ಪಿದ್ದಾರೆ. ಇನ್ನು ಯಾರೂ ಕೂಡ “ಅವರ” ವಿರುದ್ಧ ಬರಹ, ಟೀಕೆ ಮಾಡಬಾರದು. ಮಾಡಿದರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಕೈಲಾಗದ ಒಬ್ಬ ಸಿಎಂ ಹೇಳುತ್ತಿದ್ದರು ಎನ್ನುವುದನ್ನು ಇತಿಹಾಸ ಯಾವತ್ತೂ ನೆನಪಿಸಿಕೊಳ್ಳಲಿದೆ. ಹಿಂದೂತ್ವದ ತಳಹಾದಿಯ ಮೇಲೆ ಗೋಪುರ ಕಟ್ಟಿ ದಂತ ಸಿಂಹಾಸನದ ಮೇಲೆ ಕುಳಿತ ರಾಜ ತನ್ನ ರಾಜ್ಯದಲ್ಲಿ ದಂಗೆ ಮಾಡುತ್ತಿರುವವರಿಗೆ ಎಲ್ಲಿ ಬಾರಿಸಬೇಕು ಎಂದು ಗೊತ್ತಿಲ್ಲದೆ ಮುದಿಭ್ರಾಂತಿಯಂತೆ ಮಾತನಾಡುತ್ತಿದ್ದರೆ ಅವರ ಆಸ್ಥಾನದಲ್ಲಿ ಕೈಲಾಗದ ಮಂತ್ರಿಗಳು ಮೈಪರಚಿಕೊಳ್ಳುತ್ತಿದ್ದಾರೆ. ವಿಷಯ ಏನೆಂದರೆ ಬೆಂಗಳೂರಿನಲ್ಲಿ ಪಾದರಾಯನಪುರ ಎನ್ನುವ ಪ್ರದೇಶವಿದೆ.
ಪಾದರಾಯನಪುರದಲ್ಲಿ 58 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಆ ಏರಿಯಾವನ್ನು ಸೀಲ್ ಡೌನ್ ಕೂಡ ಮಾಡಲಾಗಿತ್ತು. 14 ದಿನಗಳ ಬಳಿಕ 58 ಜನರನ್ನು ಪರೀಕ್ಷೆ ಮಾಡಿ ನೋಡಬೇಕಲ್ಲ ಎನ್ನುವ ಕಾರಣಕ್ಕೆ ಸರಕಾರ ಅಲ್ಲಿ ಟೆಂಟ್ ತರಹ ಹಾಕಿ ವ್ಯವಸ್ಥೆ ಮಾಡಲಾಗಿತ್ತು. 17 ಜನ ಮಾತ್ರ ಬಂದು ಪರೀಕ್ಷೆ ಮಾಡಿಸಿಕೊಂಡಿದ್ದರು. ಉಳಿದವರು ಟೆಂಟ್ ಕಡೆ ತಲೆ ಹಾಕಿ ಕೂಡ ಮಲಗಲಿಲ್ಲ. ಅವರು ಬರಲಿಲ್ಲ ಎಂದು ಇವರು ಬಿಡೋಕೆ ಆಗುತ್ತಾ? ಸತ್ತರೆ ಸಾಯಲಿ ಎಂದು ಹೇಳಬಹುದಿತ್ತು. ಆದರೆ ಅವರು ಮಾತ್ರ ಸತ್ತರೆ ಪರವಾಗಿಲ್ಲ, ಉಳಿದವರಿಗೂ ಅಂಟಿಸಿ ಸತ್ತರೆ ಅಮಾಯಕರ ಕಥೆ ಏನು? ಅದಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ಮತ್ತು ಆರೋಗ್ಯಾಧಿಕಾರಿಗಳು ಆಶಾ ಕಾರ್ಯಕರ್ತೆಯರ ಜೊತೆ ಅಲ್ಲಿಗೆ ತೆರಳಿದ್ದರು. ಹೋಂ ಕ್ವಾರಂಟೈನ್ ನಲ್ಲಿದವರನ್ನು ಗುರುತಿಸಿ ಪರೀಕ್ಷೆ ಮಾಡಲು ಮುಂದಾಗಿದ್ದರು. ಆದರೆ ಪಾದರಾಯನಪುರ ಒಂದು ಘಳಿಗೆ ಮಿನಿ ಪಾಕಿಸ್ತಾನದ ಸ್ವರೂಪವನ್ನು ಪಡೆದುಕೊಂಡುಬಿಟ್ಟಿತ್ತು. ಒಂದು ಪಕ್ಕಾ ಪ್ಲ್ಯಾನ್ ಮಾಡಿ ಪೊಲೀಸರ ಮೇಲೆ, ವೈದ್ಯರ ಮೇಲೆ, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದು ಸಾರ್ವಜನಿಕ ಸೊತ್ತುಗಳನ್ನು ನಾಶಪಡಿಸಲಾಗಿದೆ. ಸುಮಾರು 200 ಜನರ ಗುಂಪು ತಮ್ಮಲ್ಲಿಯೇ ನಾಲ್ಕು ಭಾಗ ಮಾಡಿಕೊಂಡಿದೆ. ಬೀದಿಬದಿ ಲೈಟ್ ಆರಿಸಲಾಗಿದೆ. ಪುಂಡರು ಎಂದು ನಿಮಗೆ ಗೊಂದಲ ಮಾಡುವುದು ಯಾಕೆ, ಮುಸ್ಲಿಮರ ಒಂದು ಗುಂಪು ಮುಖ್ಯರಸ್ತೆಯನ್ನು ಬಂದ್ ಮಾಡಿ ಅಲ್ಲಿ ಕಾವಲು ನಿಂತಿದೆ. ಒಂದು ವೇಳೆ ವಿಷಯ ತಿಳಿದು ಹೆಚ್ಚುವರಿ ಪೊಲೀಸರು ಬಂದರೆ ಅಲ್ಲಿ ದಾಳಿ ಮಾಡುವ ಉದ್ದೇಶ. ಇನ್ನೊಂದು ಗುಂಪು ಆಶಾ ಕಾರ್ಯಕರ್ತೆಯರ, ಅಧಿಕಾರಿಗಳ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡುವಲ್ಲಿ ನಿರತವಾಗಿತ್ತು. ಮೂರನೇ ಗುಂಪು ಟೆಂಟ್ ನಾಶ ಮಾಡುವಲ್ಲಿ ಬಿಝಿಯಾಗಿತ್ತು. ನಾಲ್ಕನೇ ಗುಂಪು ಸಾರ್ವಜನಿಕ ಸೊತ್ತುಗಳನ್ನು ಹಾನಿಗೊಳಿಸುವಲ್ಲಿ ತನ್ನ ಪೂರ್ಣ ಶಕ್ತಿಯನ್ನು ಬಳಸುತ್ತಿತ್ತು. ಇವರೆಲ್ಲರ ಪ್ರಧಾನ ನಾಯಕಿ ಗಾಂಜಾ ವ್ಯಾಪಾರಿ ಫೀರೋಜಾ. ಅವಳನ್ನು ಈಗಾಗಲೇ ಬಂಧಿಸಲಾಗಿದೆ. ಇನ್ನೊಬ್ಬ ಪ್ರಧಾನ ನಾಯಕ ಸದ್ಯ ತಲೆಮರೆಸಿಕೊಂಡಿದ್ದಾನೆ. ಅವನು ಕೂಡ ಶೀಘ್ರ ಬಂಧನಕ್ಕೆ ಒಳಗಾಗಲಿದ್ದಾನೆ.
ಈ ಒಟ್ಟು ಘಟನೆಯನ್ನು ಸಮರ್ಥಿಸಲು ಕಾಂಗ್ರೆಸ್ ನಾಯಕರಲ್ಲಿ ನಾಲಗೆ ಹೊರಳುತ್ತಿಲ್ಲ. ಮಾಜಿ ಸಚಿವ ಸಿಎಂ ಇಬ್ರಾಹಿಂ, ಜಮೀರ್ ಅಹ್ಮದ್ ನಂತವರು ಇದನ್ನು ತಿಪ್ಪೆ ಸಾರಿಸಿ ಮುಗಿಸುವ ಯತ್ನದಲ್ಲಿದ್ದಾರೆ. ಸಿಎಂ ಇಬ್ರಾಹಿಂ ” ನಮ್ಮವರಿಗೆ ಎಜುಕೇಶನ್ ಇಲ್ಲ, ಅರಿವಿಲ್ಲ, ಅದಕ್ಕೆ ಹಿಂಗೆ ಆಡ್ತಾವ್ರೆ” ಎನ್ನುತ್ತಿದ್ದಾರೆ. ವಿದ್ಯಾಭ್ಯಾಸ ಇಲ್ಲದಿದ್ದರೆ ತೆಪ್ಪಗೆ ಸರಕಾರ ಹೇಳಿದ ಹಾಗೆ ಕೇಳಿ ಮನೆಯ ಒಳಗೆ ಮಲಗಬಹುದಲ್ಲ. ತಮ್ಮ ಒಳ್ಳೆಯದಕ್ಕೆ ಬರುವ ಆಶಾ ಕಾರ್ಯಕರ್ತೆಯರು ಕೇಳಿದ ಪ್ರಶ್ನೆಗೆ ಉತ್ತರಿಸಬಹುದಲ್ಲ. ವೈದ್ಯರೊಂದಿಗೆ ಸಹಕರಿಸಬಹುದಲ್ಲ. ಅದು ಬಿಟ್ಟು ಹಲ್ಲೆ ಮಾಡಲು ಬಂದರೆ ಎಜುಕೇಶನ್ ಇಲ್ಲ ಎನ್ನುತ್ತಾರಾ. ಪೊಲೀಸರು ಕರೆದುಕೊಂಡು ಹೋಗಿ ತಮ್ಮ ಭಾಷೆಯಲ್ಲಿ ಪಾಠ ಮಾಡಿದರೆ ಎಲ್ಲಾ ವಿದ್ಯೆ ಬರುತ್ತದೆ. ಈ ನಡುವೆ ಆ ಭಾಗದ ಶಾಸಕರೂ ಆಗಿರುವ ಜಮೀರ್ ಅಹ್ಮದ್ ತಮ್ಮ ಕ್ಷೇತ್ರದಲ್ಲಿ ಕೊರೊನಾದಿಂದ ಒಬ್ಬರು ಸತ್ತರು ಎಂದು ಶವದಹನ ಮಾಡುವ ಸ್ಮಶಾನಕ್ಕೆ ಕೂಡ ಹೋಗಿದ್ದಾರೆ. ಕೊರೊನಾದಿಂದ ಯಾರಾದರೂ ಸತ್ತರೆ ಅವರ ಅಂತ್ಯಕ್ರಿಯೆಗೆ ಬೆರಳೆಣಿಕೆಯ ಆಪ್ತ ಸಂಬಂಧಿಗಳನ್ನು ಬಿಟ್ಟರೆ ಬೇರೆ ಯಾರೂ ಹೋಗುವಂತಿಲ್ಲ. ಹಾಗಿರುವಾಗ ಜಮೀರ್ ಅಂತವರು ನಿಯಮಗಳನ್ನು ಉಲ್ಲಂಘಿಸಿ ಅಲ್ಲಿ ಹೋಗಿ ಫೋಟೋ ತೆಗೆಸಿ ಅದರಲ್ಲಿಯೂ ಪ್ರಚಾರ ತೆಗೆಯುತ್ತಾರಲ್ಲ. ಕೆಲವು ದಿನಗಳ ಹಿಂದೆ ಇದೇ ಜಮೀರ್ ಅಹ್ಮದ್ ಕ್ಷೇತ್ರದಲ್ಲಿ ಕೆಲವು ಮುಸ್ಲಿಮರು ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿ ಚರಂಡಿಗೆ ದೂಡಿದಾಗ ಅಂತವರ ಕೈಕಾಲು ಮುರಿದು ಮಲಗಿಸಿದ್ದರೆ ಇಂತಹ ಘಟನೆ ಮರುಕಳಿಸುತ್ತಿರಲಿಲ್ಲ. ಈಗಲಾದರೂ ಅಂತವರ ವಿರುದ್ಧ ಏನಾದರೂ ಕ್ರಮ ತೆಗೆದುಕೊಳ್ಳುತ್ತೀರಾ ಸಿಎಂ?
Leave A Reply