ಬಂಟ್ವಾಳದ ಮೃತಳ ಜಾತಿ ಮತ್ತು ಸುಳ್ಳು ಸುದ್ದಿಗಳ ಬಗ್ಗೆ ಸ್ಪಷ್ಟನೆ!!
Posted On April 23, 2020

ಬಿ.ಆರ್. ಭಾಸ್ಕರ್ ಪ್ರಸಾದ್ ಎನ್ನುವ ಮನುಷ್ಯನನ್ನು ಬಂಧಿಸಿ ಪೊಲೀಸ್ ಅಧಿಕಾರಿಗಳು ಒಂದಷ್ಟು ಪಾಠ ಮಾಡಿದರೆ ಮುಂದಿನ ಬಾರಿ ಸುಳ್ಳು ಸುಳ್ಳು ಬರೆಯುವ ಮೊದಲು ನೂರು ಸಲ ಯೋಚಿಸಬೇಕು. ಅಷ್ಟಕ್ಕೂ ಲದ್ದಿಜೀವಿಗಳ ಸಾಲಿಗೆ ಸೇರುವ ಮನುಷ್ಯ ತನ್ನ ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ 19 ಪಾಸಿಟಿವ್ ವರದಿ ಬರುವ ಕೆಲವೆ ಗಂಟೆಗಳ ಮೊದಲು ಮೃತಪಟ್ಟ ಬಂಟ್ವಾಳದ ಮಹಿಳೆಯ ಬಗ್ಗೆ ಕಪೋಲಕಲ್ಪಿತ ವಿಷಯಗಳನ್ನು ಬರೆದಿರುವ ಕಾರಣ ನಾನು ವಾಸ್ತವಾಂಶವನ್ನು ನಾನು ನಿಮ್ಮ ಮುಂದೆ ಇಡಬೇಕಾದ ಅನಿವಾರ್ಯತೆ ಇದೆ.
ಮೊದಲನೇಯದಾಗಿ ಆ ಮೃತಪಟ್ಟ ಮಹಿಳೆ ಜಿಎಸ್ ಬಿ ಅಥವಾ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದವರಲ್ಲ. ಇದು ನೂರಕ್ಕೆ ನೂರರಷ್ಟು ನಿಜ. ಇನ್ನು ಆಕೆಯ ಮೃತದೇಹದ ಅಂತ್ಯಕ್ರಿಯೆ ನಡೆಸಲು ಬಂಟ್ವಾಳದಲ್ಲಿ ಜಿಎಸ್ ಬಿಗಳೇ ಬಿಡಲಿಲ್ಲ ಎನ್ನುವುದನ್ನು ಲದ್ದಿಜೀವಿ ಬರೆದಿದ್ದಾನೆ. ಅರೆಬೆಂದ ಮಾಹಿತಿ ಇರುವ ಅಥವಾ ಒಂದು ಜಾತಿಯನ್ನು ಬೇರೆಯವರ ಕಣ್ಣಿನಲ್ಲಿ ಕೆಟ್ಟದ್ದಾಗಿ ಬಿಂಬಿಸಲೇಬೇಕು ಎಂದು ಹಟತೊಟ್ಟ ಇಂತವರು ಸುಳ್ಳನ್ನೇ ಸತ್ಯವೆಂದು ತಿಳಿದುಕೊಳ್ಳಲಿ ಎನ್ನುವ ಉದ್ದೇಶದಿಂದ ಹಾಗೆ ಬರೆಯುತ್ತಾರೆ. ಇಲ್ಲಿ ಭಾಸ್ಕರ ಪ್ರಸಾದನ ಗಮನಕ್ಕೆ ಒಂದು ವಿಷಯ ತರುತ್ತಿದ್ದೇನೆ. ಆ ಮಹಿಳೆಯ ಅಂತ್ಯಕ್ರಿಯೆ ಮಾಡಿದ್ದು ಬಂಟ್ವಾಳದಲ್ಲಿ ಅಲ್ಲವೇ ಅಲ್ಲ. ಆಕೆಯ ಮೃತದೇಹವನ್ನು ತಂದದ್ದು ಬೋಳೂರು ಚಿತಾಗಾರಕ್ಕೆ. ಅಲ್ಲಿಗೆ ದೇಹವನ್ನು ತಂದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು ಹೌದು. ಆದರೆ ವಿರೋಧ ವ್ಯಕ್ತಪಡಿಸಿದವರಲ್ಲಿ ಜಿಎಸ್ ಬಿಗಳು ಅಥವಾ ಬಂಟರು ಅಥವಾ ಬಿಲ್ಲವರು ಎನ್ನುವುದಕ್ಕಿಂತ ಸ್ಮಶಾನದ ಆಸುಪಾಸಿನಲ್ಲಿ ವಾಸಿಸುವ ನಾಗರಿಕರು ವಿರೋಧ ಮಾಡಿದ್ದರು. ಅದಕ್ಕೆ ಕಾರಣ ಮಾಹಿತಿಯ ಕೊರತೆ. ಅದರ ನಂತರ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಅಲ್ಲಿಗೆ ಧಾವಿಸಿ ವಿದ್ಯುತ್ ಚಿತಾಗಾರದಲ್ಲಿ ಸುಡುವುದರಿಂದ ಏನೂ ತೊಂದರೆ ಇಲ್ಲ ಎಂದು ಅಲ್ಲಿನ ಪ್ರಜ್ಞಾವಂತರಿಗೆ ಮನನ ಮಾಡಿದ ನಂತರ ಎಲ್ಲವೂ ಸರಿಯಾಗಿಯೇ ನಡೆದಿದೆ. ಆದರೆ ಭಾಸ್ಕರ್, ಒಂದು ವಿಷಯ ನೆನಪಿಡಿ. ವಿರೋಧಿಸಿದವರ ಜಾತಿ ಯಾವುದೇ ಇರಲಿ, ನಿಮ್ಮ ಪಾದರಾಯನಪುರದವರ ಹಾಗೆ ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿಲ್ಲ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಉಂಟು ಮಾಡಿಲ್ಲ.

ಇನ್ನು ಮೃತ ಮಹಿಳೆಯ ಮಗ ಮಾರ್ಚ್ 16 ರಂದು ದುಬೈಯಿಂದ ಬಂದಿದ್ದ. ತಮ್ಮ ಪ್ರಭಾವ ಬಳಸಿ ಕ್ವಾರಂಟೈನ್ ನಲ್ಲಿ ಇರಲಿಲ್ಲ, ಸುತ್ತಾಡುತ್ತಿದ್ದ ಎಂದು ಸುದ್ದಿ ಹಬ್ಬಿಸುವವರಿಗೆ ನಿಮ್ಮನ್ನು ಸೇರಿಸಿ ಒಂದು ವಿಷಯವನ್ನು ದಾಖಲೆಯ ಸಹಿತ ಹೇಳುತ್ತೇನೆ. ಮೃತರ ಮಗ ತನ್ನ ಗೆಳೆಯನೊಂದಿಗೆ ಫೆಬ್ರವರಿ 13 ಕ್ಕೆ ದುಬೈಯಿಂದ ಬೆಂಗಳೂರಿಗೆ ಬಂದು ಅಲ್ಲಿಂದ ವಿಮಾನದಲ್ಲಿ ಮಂಗಳೂರಿಗೆ ಬಂದಾಗಿದೆ. ಫ್ರೆಬ್ರವರಿ 13 ಕ್ಕೆ ಎಲ್ಲಿ ಕ್ವಾರಂಟೈನ್ ಇತ್ತು. ವಿಮಾನದ ಟಿಕೆಟ್ ಅನ್ನು ಇವತ್ತು ಪೋಸ್ಟ್ ಮಾಡುತ್ತಿದ್ದೇನೆ. ಬೇಕಾದರೆ ಪೊಲೀಸ್ ಇಲಾಖೆ ಈ ವಿಮಾನದ ದರ ಟಿಕೆಟ್ಟನ್ನು ಪರಿಶೀಲಿಸಿ. ಹಾಗಿದ್ದಾಗ ಪ್ರಭಾವ ಬಳಸುವ ಪ್ರಶ್ನೆ ಎಲ್ಲಿಂದ ಬಂತು? ಇನ್ನು ಆ ಮಹಿಳೆ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿದ್ದು ಆ ಕೆಲಸಕ್ಕೆ 5 ವರ್ಷ ಮೊದಲೇ ರಾಜೀನಾಮೆ ನೀಡಿದ್ದಾರೆ.
ಇನ್ನು ಈತನನ್ನು ಗಲ್ಲಿಗೇರಿಸಿಯೆಂದೊ.. ಹೀಗೆ ಉದ್ದುದ್ದಕ್ಕೆ ಈ ಭಾಸ್ಕರ ಏನೇನೋ ಬರೆದಿದ್ದಾನೆ. ಭಾಸ್ಕರ ಪ್ರಸಾದರೇ, ನೀವು ನಿಮ್ಮ ಸುಳ್ಳನ್ನು ನಿಮ್ಮ ಫೇಸ್ ಬುಕ್ ನಲ್ಲಿ ಬರೆದ ಮಾತ್ರಕ್ಕೆ ಅದನ್ನು ಸತ್ಯ ಎಂದು ನಂಬಿ ಟಿವಿಯಲ್ಲಿ ಚರ್ಚಾ ಕಾರ್ಯಕ್ರಮ ನಡೆಸಲು ಯಾವುದೇ ನಿರೂಪಕ ಅಥವಾ ಟಿವಿ ವಾಹಿನಿ ಮಾಲೀಕರು ಕಿವಿಯಲ್ಲಿ ಹೂ ಇಟ್ಟು ಕುಳಿತಿಲ್ಲ. ನಿಮಗೆ ತಬ್ಲಿಘಿಗಳನ್ನು ಟಿವಿ ನಿರೂಪಕರು ಹಿಗ್ಗಾಮುಗ್ಗಾ ಝಾಡಿಸುವಾಗ ತಬ್ಲಿಘಿಗಳ ಬಗ್ಗೆ ನಿಮ್ಮಲ್ಲಿರುವ ಸಹೋದರ ಪ್ರೇಮ ಜಾಗೃತವಾಗಬಹುದು. ಹಾಗಂತ ನೀವು ನಿಮ್ಮ ಫೇಸ್ ಬುಕ್ಕಿನಲ್ಲಿ ಬರೆದದ್ದಕ್ಕೆ ಸಾಕ್ಷಿ ಇದೆ ಎಂದು ಯಾವುದಾದರೂ ಟಿವಿ ವಾಹಿನಿಯವರಿಗೆ ಹೋಗಿ ದಾಖಲೆ ತೋರಿಸಿ. ಅವರಿಗೆ ಸರಿ ಎಂದೆನಿಸಿದರೆ ನಿಮ್ಮನ್ನು ಕೂರಿಸಿ ಚರ್ಚೆ ಮಾಡಬಹುದು. ಅದನ್ನು ಬಿಟ್ಟು ನೀವು ಕಣ್ಣುಮುಚ್ಚಿ ಮರಳಿನ ದಿಬ್ಬದಲ್ಲಿ ತಲೆ ಇಟ್ಟು ಪ್ರಪಂಚ ಸರಿ ಇಲ್ಲ ಎಂದರೆ ಯಾರೂ ನಂಬುವುದಿಲ್ಲ. ನಿಮ್ಮ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಕ್ಕೆ ಕೆಲವರು ಚಿಂತನೆ ನಡೆಸಿದ್ದಾರೆ. ನಿಮಗೆ ಅಂತಹ ಯೋಗ್ಯತೆ ಇಲ್ಲಬಿಡಿ. ಜಿಎಸ್ ಬಿಗಳ ಅಭಿವೃದ್ಧಿಯಿಂದ ಹೊಟ್ಟೆಕಿಚ್ಚು ಪಡುತ್ತಿರುವವರು ತಮ್ಮ ಶೂ ತೊಳೆದ ನೀರನ್ನು ಕುಡಿಯುವ ನಿಮ್ಮ ಬಗ್ಗೆ ಬರೆಯುವುದೇ ವೇಸ್ಟ್. ಆದರೆ ಜನರಿಗೆ ಸತ್ಯಾಂಶ ಗೊತ್ತಾಗಲಿ ಎನ್ನುವ ಕಾರಣಕ್ಕೆ ಬರೆಯಬೇಕಾಯ್ತು!
- Advertisement -
Leave A Reply