ಮಂಗಳೂರು ವಿವಿಯಲ್ಲಿ ಖಾನ್ ಕೊನೆಯ ಹೈಡ್ರಾಮಾ!!
Posted On April 27, 2020
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿದ್ದ ಪ್ರೋ.ಎ.ಎಂ.ಖಾನ್ ತಾವು ಅಧಿಕಾರದಲ್ಲಿದಷ್ಟು ದಿನ ಇಡೀ ವಿಶ್ವವಿದ್ಯಾನಿಲಯಕ್ಕೆ ತಲೆನೋವಾಗಿದ್ದು ನಮಗೆ ಗೊತ್ತೆ ಇದೆ. ಭ್ರಷ್ಟಾಚಾರದ ಆರೋಪ ಅವರನ್ನು ಸುತ್ತುವರೆದು ಅದು ವಿಧಾನಸೌಧದ ಮೆಟ್ಟಿಲು ಹತ್ತಿರುವುದು ವಿದ್ಯಾರ್ಥಿ ಸಂಘಟನೆಗಳ ಯಶಸ್ಸು.
ಸಿಂಡಿಕೇಟ್ ಸದಸ್ಯರಿಂದಲೇ ಇವರ ವಿರುದ್ಧ ಸಿಂಡಿಕೇಟ್ ನಿರ್ಣಯವನ್ನು ತಿರುಚಿದ ಆರೋಪ ಕೂಡ ಇರುವುದು ಎಲ್ಲರಿಗೂ ಗೊತ್ತೆ ಇದೆ. ತಮ್ಮ ಅಧಿಕಾರ ಚಲಾಯಿಸಿ ಮಡದಿ ವಾಜಿದ ಬಾನು ಅವರ ಹುದ್ದೆ ಸಹಿತ ವರ್ಗಾವಣೆ ನಡೆಸಿದ್ದು, ವಿವಿ ಸಿಂಡಿಕೇಟ್ ಸಭೆಯಲ್ಲಿ ತನಿಖೆಗೆ ಆದೇಶವಾಗಿತ್ತು. ಆದರೆ ಆ ನಿರ್ಣಯವನ್ನು ಖಾನ್ ತಿರುಚಿದ್ದರು ಎನ್ನುವ ಆರೋಪ ಇದೆ. ರಾಜ್ಯದಲ್ಲಿ ಸರಕಾರ ಬದಲಾಗುತ್ತಿದ್ದಂತೆ ಖಾನ್ ಅದೃಷ್ಟವೂ ಕೊನೆಗೊಂಡಿತ್ತು. ಕೊನೆಗೂ ಅವರನ್ನು ಉಳಿಸಲು ಕಾಂಗ್ರೆಸ್ಸಿನ ಶಾಸಕರುಗಳಿಗೆ ಸಾಧ್ಯವಾಗಿಲ್ಲ. ಖಾನ್ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರ ಹುದ್ದೆಯಿಂದ ಎತ್ತಂಗಡಿಯಾಗುವ ಮುಹೂರ್ತ ಕೊನೆಗೂ ಬಂದಿದೆ. ಆದರೆ ಬಂಗಾರದ ಗಣಿಯಿಂದ ಎದ್ದು ಹೋಗಲು ಖಾನ್ ಅವರಿಗೆ ಮನಸ್ಸಿಲ್ಲ. ಅದಕ್ಕಾಗಿ ಅವರು ಆಡಿದ ಕೊನೆಯಾಟ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಸ್ಥಾನಕ್ಕೆ ತಕ್ಕುದ್ದಲ್ಲ.
ಖಾನ್ ಅವರ ಸ್ಥಾನಕ್ಕೆ ಕೆಎಎಸ್ ಅಧಿಕಾರಿ, ಮಂಗಳೂರು ಮಹಾನಗರ ಪಾಲಿಕೆಯ ಅಸಿಸ್ಟೆಂಟ್ ಕಮೀಷನರ್ ಆಗಿದ್ದ ರಾಜು ಮೊಗವೀರ ಅವರು ನೇಮಕವಾಗಿದ್ದಾರೆ. ಅವರು ಇವತ್ತು ಬೆಳಿಗ್ಗೆ 11 ಗಂಟೆಗೆ ಅಧಿಕಾರ ವಹಿಸಿಕೊಳ್ಳಲು ಕಚೇರಿಗೆ ಹೋಗಿದ್ದಾಗ ಖಾನ್ ಅಲ್ಲಿಂದ ಓಡಿಹೋಗಿದ್ದಾರೆ. ಸೀದಾ ಆಸ್ಪತ್ರೆಗೆ ಹೋಗಿ ಹುಶಾರಿಲ್ಲದ ನಾಟಕ ಆಡಿದ್ದಾರೆ. ಆದಷ್ಟು ದಿನದೂಡಿ ತಮ್ಮ ಸ್ಥಾನ ಉಳಿಸಿಕೊಳ್ಳುವ ಕೊನೆಯ ಪ್ರಯತ್ನ ಮಾಡಿದ್ದಾರೆ. ನಂತರ ಖಾನ್ ಅವರ ಈ ಹೈಡ್ರಾಮದಿಂದ ಬೇಸತ್ತ ಕುಲಪತಿ ಎಡಪಡಿತ್ತಾಯ ಅವರು ತಮ್ಮ ಪರಮಾಧಿಕಾರವನ್ನು ಬಳಸಿ ಸುಗ್ರೀವಾಜ್ಞೆಯ ಮೂಲಕ ನೂತನ ಕುಲಸಚಿವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಈ ಮೂಲಕ ಖಾನ್ ಅವರು ಅಧಿಕಾರದಿಂದ ನಿರ್ಗಮಿಸುವಾಗಲೂ ತಮ್ಮ ವರ್ಚಸ್ಸಿಗೆ ಕಪ್ಪುಚುಕ್ಕೆ ಉಳಿಸಿ ಹೋಗಬೇಕಾಗಿದೆ. ಈ ಪರಿಸ್ಥಿತಿ ಮಂಗಳೂರು ವಿವಿಯಲ್ಲಿ ಯಾರಿಗೂ ಬರಬಾರದು. ಅಸಹ್ಯದ ಪರಾಕಾಷ್ಟೆ ಇದು!
- Advertisement -
Trending Now
ಕೆಆರ್ ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರು ಇಡಲು ಚಿಂತನೆ, ಪರ -ವಿರೋಧ!
December 25, 2024
ರಾಜ್ಯದಲ್ಲಿ ಪ್ರಪ್ರಥಮ ಮೂಳೆ ದಾನ!
December 25, 2024
Leave A Reply