ನೀವು ಎಂಜಿಲು ಉಗುಳಿದರೆ ನಾವು ನಿಮ್ಮನ್ನೇ ಉಗುಳಿಬಿಡುತ್ತೇವೆ!!
ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಒಂದು ಮಾತನ್ನು ಜನರಿಗೆ ಹೇಳಿದ್ದರು. ಅದೇನೆಂದರೆ ದಯವಿಟ್ಟು ರಸ್ತೆಬದಿ ಅಥವಾ ಸಿಕ್ಕಿದ ಕಡೆಗಳಲ್ಲಿ ಉಗುಳಬೇಡಿ. ಹೀಗೆ ಉಗುಳವ ವ್ಯಕ್ತಿಯಲ್ಲಿ ಕೋವಿಡ್ 19 ವೈರಸ್ ಇದ್ದರೆ ಅದು ಅವನ ದೇಹದಿಂದ ಹೊರಗೆ ಬಂದು ಹಲವಾರು ಗಂಟೆಗಳ ತನಕ ಪ್ರಕೃತಿಯಲ್ಲಿ ಉಳಿಯುತ್ತದೆ. ಯಾಕೆಂದರೆ ಎಂಜಿಲಿನಲ್ಲಿ ತೇವಾಂಶ ಇರುವುದರಿಂದ ಈ ವೈರಾಣುವಿಗೆ ಅಲ್ಲಿ ಬದುಕುವ ಅವಕಾಶ ಜಾಸ್ತಿ ಇರುತ್ತದೆ. ಆ ಉಗುಳು ಜನಸಾಮಾನ್ಯರ ಪಾದರಕ್ಷೆಗೆ ತಗುಲಿ ಸೀದಾ ಅವರ ಮನೆಗೆ ಕಾಲಿಟ್ಟರೆ ಅಲ್ಲಿ ಸುಲಭವಾಗಿ ಅದು ಬೇರೆಯವರಿಗೆ ಶಿಫ್ಟ್ ಆಗುವುದರಲ್ಲಿ ಸಂಶಯವಿಲ್ಲ. ಇನ್ನು ಉಪವಾಸ ಇರುವವರು ಸಾಮಾನ್ಯವಾಗಿ ಉಗುಳು ಸಹ ನುಂಗುವುದಿಲ್ಲ. ಹಾಗಿರುವಾಗ ಬಾಯಿಯಲ್ಲಿ ಉಗುಳು ಹೆಚ್ಚಾದರೆ ಅವರು ಹೊರಗೆ ಥೂ ಎಂದು ಉಗುಳಿಬಿಟ್ಟರೆ ಧರ್ಮಕ್ಕೆ ಅದು ಅದೆಷ್ಟೋ ಮಂದಿಯ ಜೀವಕ್ಕೆ ಉರುಳಾಗಬಹುದು. ಹಾಗಿರುವಾಗ ಎಂಜಲು ನುಂಗಿದರೆ ತಾನು ಉಪವಾಸ ಧರ್ಮಕ್ಕೆ ಮೋಸ ಮಾಡಿದಂತೆ ಆಗಲ್ವಾ ಎಂದು ಯಾರಾದರೂ ಕೇಳಬಹುದು. ಅಂತವರಿಗೆ ನಾನು ಹೇಳುವುದು. ಧರ್ಮ ಮನೆಯ ಒಳಗೆ. ದೇಶ ಎಲ್ಲಾ ಕಡೆ. ದೇಶ ಚೆನ್ನಾಗಿದ್ದರೆ ಮಾತ್ರ ನಾವು ನಮ್ಮ ಧರ್ಮದೊಂದಿಗೆ ಉಳಿಯುತ್ತೇವೆ. ಇಲ್ಲದಿದ್ದರೆ ಧರ್ಮ ನಮ್ಮೊಂದಿಗೆ ಸ್ಮಶಾನದಲ್ಲಿ ಮಲಗುತ್ತದೆ. ಆದರೆ ಕೆಲವರಿಗೆ ದೇಶಕ್ಕಿಂತ ಧರ್ಮ ಮುಖ್ಯ. ಅಂತವರು ಎಲ್ಲಿ ಬೇಕಾದರೂ ಉಗುಳುವ ಸಾಧ್ಯತೆ ಇದೆ. ಅದೇ ಈಗ ಉಳಿದವರಿಗೆ ಹೆದರಿಕೆ ತಂದಿರುವುದು. ನೀವು ಎಲ್ಲೆಂದರಲ್ಲಿ ಉಗುಳುತ್ತೀರಿ. ನಿಮ್ಮ ಬಳಿ ವ್ಯಾಪಾರಕ್ಕೆ ಬಂದ ನಮ್ಮವರು ನಿಮ್ಮ ಉಗುಳಿನ ಮೇಲೆ ಕಾಲಿಟ್ಟರೆ ಮನೆಯಲ್ಲಿ ಕಷ್ಟಪಟ್ಟು ಕುಳಿತವರು ಅನಾವಶ್ಯಕವಾಗಿ ಆಸ್ಪತ್ರೆಯ ಒಳಗೆ ಮಲಗಬೇಕಾಗಬಹುದು. ಉಗುಳಬೇಡಿ ಎಂದರೆ ನೀವು ಕೇಳಲ್ಲ. ನಿಮ್ಮ ಬಳಿ ನಾವು ವ್ಯಾಪಾರ ಮಾಡಲ್ಲ ಎಂದು ಜನ ನಿರ್ಧರಿಸಿದ್ದಾರೆ.
ಸದ್ಯ ಜಾರ್ಖಂಡ್ ನಲ್ಲಿ ಸರಕಾರ ಬದಲಾಗಿದೆ. ಆದರೆ ಆಶ್ಚರ್ಯ ಎಂದರೆ ಇಡೀ ದೇಶದಲ್ಲಿ ಕೊರೊನಾದಿಂದ ಜನರ ಮನಸ್ಥಿತಿ ಕೂಡ ಬದಲಾಗಿದೆ. ಜಾರ್ಖಂಡ್ ನಲ್ಲಿ ಹಣ್ಣುಹಂಪಲು ಮಾರುವ ವ್ಯಾಪಾರಿಗಳು ಅಂಗಡಿಯ ಹೊರಗೆ “ಹಿಂದೂ ಸ್ಟಾಲ್” ಎಂದು ಬರೆದು ವ್ಯಾಪಾರಕ್ಕೆ ಇಳಿದಿದ್ದಾರೆ. ಇಲ್ಲದಿದ್ದರೆ ನಮ್ಮ ವ್ಯಾಪಾರ ಕಡಿಮೆಯಾಗುತ್ತದೆ. ನಾವು ಹಿಂದೂ ವ್ಯಾಪಾರಿಗಳು ಎಂದು ಗ್ಯಾರಂಟಿ ಇದ್ದರೆ ಮಾತ್ರ ಜನ ಹಣ್ಣುಹಂಪಲು ಖರೀದಿಸಲು ಮುಂದೆ ಬರುತ್ತಾರೆ ಎನ್ನುವುದು ಅವರ ಅನುಭವ. ಆದರೆ ಅಲ್ಲಿನ ಪೊಲೀಸ್ ವರಿಷ್ಟಾಧಿಕಾರಿ ಹಾಗೆ ಬರೆದಿರುವ ಹಿಂದೂ ವ್ಯಾಪಾರಿಗಳಿಗೆ ನೋಟಿಸು ನೀಡಿದ್ದಾರೆ. ಅದಕ್ಕೆ ಕೆಲವರು ಹಿಂದೂ ಅಂಗಡಿ ಎಂದು ಬರೆದರೆ ತಾನೆ ಸರಕಾರಕ್ಕೆ ಪ್ರಾಬ್ಲಂ ಆಗುವುದು. ನಾವು ಭಗವಾ ಧ್ವಜ ಇಟ್ಟು ವ್ಯಾಪಾರ ಮಾಡುತ್ತೇವೆ ಎಂದು ಹೊರಟಿದ್ದಾರೆ. ಅದನ್ನು ಗಮನಿಸಿದ ಪೊಲೀಸ್ ಇಲಾಖೆ ಅಂತಹ ಧ್ವಜಗಳನ್ನು ಕೂಡ ತೆಗೆಸಿದ್ದಾರೆ. ಹೀಗಾದರೆ ಹೇಗೆ ಎಂದು ಚಿಂತೆಗೆ ಬಿದ್ದಿರುವ ವ್ಯಾಪಾರಿಗಳು ನೇರವಾಗಿ ಕೇಸರಿ ಶರ್ಟ್ ಧರಿಸಿಯೇ ವ್ಯಾಪಾರಕ್ಕೆ ಇಳಿದುಬಿಟ್ಟಿದ್ದಾರೆ. ಈಗ ಪೊಲೀಸ್ ಅಧಿಕಾರಿಗಳು ಗೊಂದಲಕ್ಕೆ ಬಿದ್ದಿದ್ದಾರೆ. ಶರ್ಟ್ ತೆಗೆಸುವುದು ಹೇಗೆ?
ಇದು ಕೇವಲ ಜಾರ್ಖಂಡ್ ಕಥೆಯಾಗಿ ಉಳಿದಿಲ್ಲ. ಭಾರತದ ಅನೇಕ ಕಡೆಗಳಲ್ಲಿ ನಾಗರಿಕರು ತಾವು ಇನ್ನು ಮುಂದೆ ಯಾರ ಬಳಿ ವ್ಯಾಪಾರಕ್ಕೆ ಹೋಗಬೇಕು ಎಂದು ನಿರ್ಧರಿಸಿದಂತೆ ಭಾಸವಾಗುತ್ತಿದೆ. ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಕೂಡ ಹೊರತಾಗಿಲ್ಲ. ಮೀನು ವ್ಯಾಪಾರಿ ಯಾರೆಂದು ನೋಡಿ ಅವನಿಂದ ಮೀನು ಖರೀದಿಸಲು ಜನ ಮುಂದಾಗುವಂತಹ ಪರಿಸ್ಥಿತಿ ಇದೆ. ಬಹಳ ವರ್ಷಗಳಿಂದ ಒಂದು ಏರಿಯಾದಲ್ಲಿ ನಿರಂತರವಾಗಿ ಅನ್ಯ ಧರ್ಮದ ಮೀನು ವ್ಯಾಪಾರ ಮಾಡುತ್ತಿದ್ದವರು ವ್ಯಾಪಾರ ಕಳೆದುಕೊಳ್ಳುತ್ತಿದ್ದಾರೆ. ಕೆಲವು ಕಡೆ ಎಳ್ಳುನೀರು ವ್ಯಾಪಾರಿಗಳು ಈಶ್ವರ ದೇವರ ಫೋಟೋ ಗಾಡಿಯ ಎದುರಿಗೆ ಇಟ್ಟು ನಂತರ ವ್ಯಾಪಾರಕ್ಕೆ ಇಳಿಯಬೇಕಾದ ಪರಿಸ್ಥಿತಿ ಇದೆ. ಇದಕ್ಕೆಲ್ಲಾ ಮೇರು ಶಿಖರವಾಗಿ ಕೆಲವು ಕಂಪೆನಿಗಳು ತಮ್ಮ ಉತ್ಪನ್ನದ ಹೊರಗೆ “ಹಲಾಲ್ ಸರ್ಟಿಫೈ ಉತ್ಪನ್ನ” ಎಂದು ಬರೆಯಲಾರಂಬಿಸಿದ್ದಾರೆ. ಇದರಿಂದ ಪತಂಜಲಿ ಗೋಧಿಹಿಟ್ಟು ಖರೀದಿಸುವವ ಬೇರೆ, ಹಲಾಲ್ ಚಿಹ್ನೆ ಇರುವ ಗೋಧಿಹಿಟ್ಟು ಪ್ಯಾಕೇಟ್ ಖರೀದಿಸುವ ಬೇರೆಯಾಗಿದ್ದಾನೆ.
ಮಂಗಳೂರಿನ ತರಕಾರಿ ರಖಂ ವ್ಯಾಪಾರಲೋಕದಲ್ಲಿಯೂ ಒಂದೇ ಧರ್ಮದವರ ಏಕಸ್ವಾಮ್ಯ ಇತ್ತು. ಆದರೆ ಯಾವಾಗ ದೇಶಕ್ಕಾಗಿ ಅಂತವರಲ್ಲಿ ಕೆಲವರು ತ್ಯಾಗ ಮಾಡಲು ಮುಂದಾಗಲಿಲ್ಲವೋ ಉಳಿದ ಧರ್ಮದವರಲ್ಲಿ ಕೆಚ್ಚು ಹೆಚ್ಚಿತ್ತು. ಮುಂದಿನ ದಿನಗಳಲ್ಲಿ ತರಕಾರಿ, ಜಿನಸು ರಖಂ, ಮೀನು ವ್ಯಾಪಾರದಲ್ಲಿಯೂ ಹೊಸ ಯುವಕರ ಪೀಳಿಗೆ ಶುರುವಾಗುತ್ತದೆ. ನಾವು ಎದ್ದಾಗ ಎಷ್ಟು ಡೇಂಜರೋ ಮಲಗಿದಾಗ ಇನ್ನು ಹೆಚ್ಚು ಡೇಂಜರ್!!
Leave A Reply