ವಿಫಲ ಜಿಲ್ಲಾಧಿಕಾರಿಯ ಕಣ್ಣೇದುರೆ ಹೆಚ್ಚುತ್ತಿದೆ ಕೊರೊನಾ ಸೊಂಕೀತರ ಸಂಖ್ಯೆ!!
ಇವತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಮೂರು ಪ್ರಕರಣಗಳು ಪತ್ತೆಯಾಗಿವೆ. ಮೂರರಲ್ಲಿ ಎರಡು ಬೋಳೂರು ಪರಿಸರದ್ದೇ ಆಗಿದೆ. ಬೋಳೂರಿನ ಒಟ್ಟು ಐದು ಜನ ಕೋವಿಡ್ 19 ಪಾಸಿಟಿವ್ ಸೋಂಕಿತರು ಒಂದೇ ಕುಟುಂಬದವರು. ಮೊದಲಿಗೆ ಹೆಂಡತಿ, ನಂತರ ಗಂಡ, ನಂತರ ಅಳಿಯ, ಕೊನೆಗೆ ಮಗಳು ಮತ್ತು ಮೊಮ್ಮಗಳು ಹೀಗೆ ನಮ್ಮ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ರೋಗಿಗಳ ಸಂಖ್ಯೆ ಜಾಸ್ತಿಯಾಗಲು ಯಾರ ತಪ್ಪು ನಿರ್ಧಾರಗಳು ಎನ್ನುವುದನ್ನು ನಾನು ನಿನ್ನೆ ಹೇಳಿದ್ದೆ. ಬೇಕಾದರೆ ಈಗ ಬೋಳೂರಿನದ್ದೇ ವಿಷಯಕ್ಕೆ ಬರೋಣ. ಬೋಳೂರಿನಲ್ಲಿ ಸೊಂಕಿತ ಮಹಿಳೆಯ ಗಂಟಲದ್ರವ ಪರೀಕ್ಷೆ ಆದ ನಂತರ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರ ಟೇಬಲಿಗೆ ವರದಿ ಬರುತ್ತದೆ. ತಕ್ಷಣ ಪೊಲೀಸ್ ಕಮೀಷನರ್ ಅವರಿಗೆ ಹೇಳಿ ಸೀಲ್ ಡೌನ್ ಮಾಡಿಸುತ್ತಾರೆ. ಸರಿ, ಜಿಲ್ಲಾಧಿಕಾರಿಯವರು ಹೇಳಿದ್ರು ಎಂದು ಪೊಲೀಸರು ಬೋಳೂರು ಸುತ್ತಮುತ್ತಲೂ ಬ್ಯಾರಿಕೇಡ್ ಹಾಕಿಸಿ ಬಂದೋಬಸ್ತು ಮಾಡುತ್ತಾರೆ. ಅದಾಗಿ ಅರ್ಧ ಗಂಟೆ ಕಳೆದಿರುತ್ತದೆ. ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಕೂಡಲೇ ಬ್ಯಾರಿಕೇಡ್ ತೆಗೆಸಲು ಹೇಳುತ್ತಾರೆ. ಹಾಗಿದ್ದರೆ ಮೊದಲು ಹಾಕಲು ಹೇಳಿದ್ದು ಯಾಕೆ? ಒಂದು ವೇಳೆ ಹೊರಗೆ ಹೋಗಿರುವ ಜನರು ಒಳಗೆ ಬರಲು ಬ್ಯಾರಿಕೇಡ್ ತೆಗೆಸಿದ್ದಿರಿ ಎಂದಾದರೆ ಮೊದಲು ಹಾಕಿಸಿದ್ದು ಯಾಕೆ? ಹಾಗಾದರೆ ಸರಕಾರ ನಡೆಸುವುದು ಎಂದರೆ ಸುಮ್ಮನೇನಾ? ಆಟದ ಸಾಮಾನು ಎಂದು ಡಿಸಿ ಅಂದುಕೊಂಡಿದ್ದಾರಾ? ಜಿಲ್ಲಾಧಿಕಾರಿಯವರೇ, ತಾವು ಮಾತನಾಡಿದ್ರೆ ನಾನೇ “ಸರಕಾರ” ಎನ್ನುವ ರೀತಿಯಲ್ಲಿ ಫೋಸು ಕೊಡುತ್ತೀರಿ.
ನಾನೇ “ಸರಕಾರ” ಎಂದರೇ ಇಷ್ಟೇನಾ…
ಸಿಂಧೂ ರೂಪೇಶ್ ಅವರಿಗೆ ತಾವು ಜನಸೇವಕರು ಎನ್ನುವುದು ಮರೆತು ಹೋಗಿದೆ. ಅವರು ಜನಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ಮಾತನಾಡುವಾಗ ತಮ್ಮ ಐಪಿಎಸ್ ಡಿಗ್ರಿಯ ಫೋರ್ಸಿನಲ್ಲಿ ತಾನೇ ಸರಕಾರ ಎಂದೇ ಮಾತನ್ನು ಶುರು ಮಾಡುವುದು. ಅದಕ್ಕೆ ನಾನು ಹೇಳಿದ್ದು- ಸರಕಾರ ನಡೆಸುವುದು ಎಂದರೆ ಇದೇನಾ? ನಿಮ್ಮ ಸಹಾಯಕ ಕಮೀಷನರ್ ಅವರನ್ನು ಪೊಲೀಸ್ ವಾಹನದೊಂದಿಗೆ ಕಳುಹಿಸಿ ಬೋಳೂರಿನಲ್ಲಿ ಸೀಲ್ ಡೌನ್ ಆಗಿದೆ ಎಂದು ಅನೌನ್ಸ್ ಮಾಡಿಸುತ್ತೀರಿ. ಬ್ಯಾರಿಕೇಡ್ ಹಾಕುತ್ತೀರಿ. ನಂತರ ಎಲ್ಲವನ್ನು ತೆಗೆಸುತ್ತೀರಿ ಮತ್ತು ನಿಮ್ಮ ಅಪರ ಜಿಲ್ಲಾಧಿಕಾರಿ ರೂಪಾ ಅವರೊಂದಿಗೆ ಹೆಣ್ಣು ಮಕ್ಕಳು ಹರಟೆ ಹೊಡೆಯಲು ಒಟ್ಟಿಗೆ ಕುಳಿತುಕೊಳ್ಳುವಾಗ ಹಾಗೆ ಕುಳಿತು ಟೈಂಪಾಸ್ ಮಾಡುತ್ತೀರಿ. ಇಂತಹ ಕೊರೊನಾ ಸಮಯದಲ್ಲಿ ನೀವು ಅಪ್ಪಟ ಸೇನಾಧಿಪತಿಯಾಗಬೇಕಿತ್ತು. ಆದರೆ ನೀವು ನೀರಿನಲ್ಲಿ ಬಿದ್ದವರಾಗೆ ಹೇಗೆ ವರ್ತಿಸುತ್ತೀರಿ ಎಂದರೆ ಇವತ್ತು ನಿಮ್ಮ ಟೇಬಲ್ ಮೇಲೆ ಒಂದು ವ್ಯಕ್ತಿಯ ಕೋವಿಡ್ ಪಾಸಿಟಿವ್ ವರದಿ ಬಂತು ಎಂದರೆ ನೀವು ಅದನ್ನು ನೋಡಿ ಬೆಂಗಳೂರಿಗೆ ಕಳುಹಿಸುವುದು ನಾಳೆ ಮಧ್ಯಾಹ್ನವೋ, ಸಂಜೆಯೋ ಆಗುತ್ತದೆ. ನಂತರ ಬೆಂಗಳೂರಿನಿಂದ ವರದಿ ಬಂದು ಅದನ್ನು ನೀವು ನೋಡಿ ನಂತರ ಆ ಸೊಂಕಿತ ವ್ಯಕ್ತಿಯ ಮೊದಲ ಸಂಪರ್ಕ, ಎರಡನೇ ಸಂಪರ್ಕ ಪತ್ತೆ ಹಚ್ಚುವುದರೊಳಗೆ ಆ ವ್ಯಕ್ತಿ ಇನ್ನು ಅದೆಷ್ಟು ಜನರನ್ನು ಸಂಪರ್ಕಿಸಿ ಕೊರೊನಾ ಪಸರಿಸಿರುತ್ತಾನೋ ಎನ್ನುವ ಅಂದಾಜು ನಿಮಗೆ ಇರಬೇಕಿತ್ತು. ಆದರೆ ನೀವು ಅದನ್ನು ಮಾಡುತ್ತಿಲ್ಲ. ಅದರಿಂದ ಬೋಳೂರಿನ ಮನೆಯ ಕೊರೊನಾ ಪಾಸಿಟಿವ್ ಮಹಿಳೆಯ ಅಳಿಯನಿಂದ ತಮಗೆ ಆ ಅಂಟು ತಗುಲಿರಬಹುದಾ ಎನ್ನುವ ಆತಂಕ ಅನೇಕ ಜನರಲ್ಲಿದೆ. ಯಾಕೆಂದರೆ ಆ ಮನುಷ್ಯ ಕೇಬಲ್ ಟಿವಿ ಬಿಲ್ ಕಲೆಕ್ಷನ್ ಮಾಡಲು ಮನೆಮನೆಗೆ ಹೋಗಿದ್ದಾರೆ. ಈಗ ಅವರ ಹೆಂಡತಿ, ಮಗಳಿಗೂ ಬಂದಿದೆ. ಅವರ ಮನೆ ಮರೋಳಿಯಲ್ಲಿ ಆದರೂ ಆ ವ್ಯಕ್ತಿ ರಾತ್ರಿ ಉಳಿಯಲು ಬೋಳೂರಿಗೆ ಬರುತ್ತಿದ್ದರು. ಡಿಸಿಯವರ ನಿಧಾನಗತಿಯ ಧೋರಣೆ ಹೇಗೆ ಇಡೀ ಕುಟುಂಬವನ್ನು ಆತಂಕದ ಅಂಚಿಗೆ ತಂದಿದೆ ಎಂದು ಈ ಉದಾಹರಣೆಯಿಂದಲೇ ಗೊತ್ತಾಗುತ್ತದೆ.
ನಮ್ಮ ಗ್ರಹಚಾರ….
ಒಬ್ಬ ವ್ಯಕ್ತಿ ಕೊರೊನಾ ಸೋಂಕಿತ ಎಂದು ವರದಿ ಬಂದ ನಂತರ ಏನು ಮಾಡಬೇಕು ಎನ್ನುವುದು ಒಂದು ಕಡೆಯಾದರೆ ಒಂದು ಕುಟುಂಬದ ಒಬ್ಬರಿಗೆ ಸೊಂಕು ಬಂತೆಂದರೆ ಅದು ಹರಡದಂತೆ ಮೊದಲೇ ಏನು ಮಾಡಬೇಕು ಎನ್ನುವುದು ಕೂಡ ತೀಕ್ಣ ಬುದ್ಧಿಮತ್ತೆಯ ಲಕ್ಷಣ. ಅದಕ್ಕಾಗಿಯೇ ನೀವು ಐಪಿಎಸ್ ಕಲಿತಿರುವುದು ಮತ್ತು ನಿಮಗೆ ಉನ್ನತ ವೇತನ, ಸೌಲಭ್ಯ, ಕಾರು, ಆಳುಕಾಳು ಕೊಟ್ಟು ಸರಕಾರ ನೋಡುತ್ತಿರುವುದು. ಇಂತಹ ಪರಿಸ್ಥಿತಿಯಲ್ಲಿಯೂ ನೀವು ಸಾದಾರಣ ಹೆಂಗಸಿನಂತೆ ವರ್ತಿಸಿದರೆ ಏನು ಪ್ರಯೋಜನ? ಐ ಎ ಎಸ್ ಖದ್ದರ್ ತೋರಿಸಬೇಕು.
ಇಷ್ಟೇ ಅಲ್ಲ, ಊರೀಡಿ ಮದ್ಯದ ಅಂಗಡಿಗಳನ್ನು ತೆರೆಯಲು ಸೂಚನೆ ಕೊಟ್ಟಿರುವ ನೀವು ಬಟ್ಟೆ ಅಂಗಡಿಗಳನ್ನು, ಜ್ಯುವೆಲ್ಲರ್ಸ್ ಗಳನ್ನು ತೆರೆಯಲು ಹಿಂದೇಟು ಹಾಕುತ್ತಿರುವುದು ಯಾಕೆ? ಒಂದು ವೇಳೆ ಮುಸ್ಲಿಂ ಧರ್ಮ ಗುರುಗಳು ಮನವಿ ಮಾಡಿದ್ದರೆ ಅವರ ಧರ್ಮದ ಅಂಗಡಿಗಳನ್ನು ಮಾತ್ರ ಅವರು ಬೇಕಾದರೆ ಮುಚ್ಚಲಿ. ನೀವು ಸಾರಾಸಗಟಾಗಿ ಎಲ್ಲವನ್ನು ತೆರೆಯದಂತೆ ಸೂಚನೆ ಕೊಡುವುದು ಯಾಕೆ? ಇನ್ನು ಬಂಗಾರದ ಅಂಗಡಿಗಳಲ್ಲಿ ನೂಕುನುಗ್ಗಲು ಎಲ್ಲಿ ಆಗಲಿದೆ. ಅಗತ್ಯ ಇದ್ದವರು ಮಾತ್ರ ಸ್ಯಾನಿಟೈಸರ್ ಬಳಸಿ ಒಳಗೆ ಹೋಗಲಿ. ಇನ್ನು ದೇವಸ್ಥಾನಗಳು ಮದ್ಯದಂಗಡಿಗಿಂತ ಡೇಂಜರಸ್ಸಾ? ನಾವು ಭಕ್ತರು ಕುಡುಕರಿಗಿಂತ ಕೀಳಾ? ನಮಗೆ ನಿಯಮಗಳು ಗೊತ್ತಿಲ್ವಾ? ಏನು ಮಾಡುತ್ತಿದ್ದೀರಿ, ಜಿಲ್ಲಾಧಿಕಾರಿಯವರೇ? ಬಂಟ್ವಾಳದಲ್ಲಿ ಒಬ್ಬರು ವೈದ್ಯರು ಹಲವು ವರ್ಷಗಳಿಂದ ಆ ಮಹಿಳೆಯನ್ನು ಪರೀಕ್ಷೆ ಮಾಡುತ್ತಿದ್ದರು. ನಂತರ ಆ ಮಹಿಳೆಗೆ ಕೊರೊನಾ ಪಾಸಿಟಿವ್ ಎಂದು ಗೊತ್ತಾದ ಕೂಡಲೇ ನೀವು ಆ ವೈದ್ಯರ ಮೇಲೆ ಕೇಸು ದಾಖಲಿಸಿದ್ದಿರಿ. ಅದೇ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಸರಾಸರಿ ದಿನಕ್ಕೆ ಒಬ್ಬರಂತೆ ಕೊರೊನಾ ಪಾಸಿಟಿವ್ ಕೇಸುಗಳು ಬರುತ್ತಿವೆ. ಏನು ಮಾಡಿದ್ರಿ ಡಿಸಿ? ಯಾರೋ ಮನೆಯಲ್ಲಿ ಕುಳಿತು ಕೆಲಸವಿಲ್ಲದವರು ವಾಸ್ತವ ಗೊತ್ತಿಲ್ಲದೆ ನಿಮ್ಮನ್ನು ಅಟ್ಟಕ್ಕೆ ಏರಿಸಿ ಫೇಸ್ ಬುಕ್ಕಿನಲ್ಲಿ ಬರೆದ ಕೂಡಲೇ ವಾಸ್ತವ ಸಂಗತಿ ಮುಚ್ಚಿ ಹೋಗುತ್ತಾ? ಜಿಲ್ಲಾಧಿಕಾರಿ ಕಚೇರಿಯ ನಾಲ್ಕು ಗೋಡೆಯ ಒಳಗೆ ಏನು ಆಗುತ್ತೆ ಎಂದು ಗೊತ್ತಿಲ್ಲದವರು ನಿಮ್ಮ ಬಗ್ಗೆ ಹೊಗಳಿ ಬರೆದ ಕೂಡಲೇ ಎಲ್ಲವೂ ಸರಿಯಾಗುತ್ತಾ? ನಿಮ್ಮ ಕಚೇರಿಯಲ್ಲಿ ಕೆಲಸ ಮಾಡುವ ಜನರೇ ಆ ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಬಗ್ಗೆ ಬಂದ ಹೊಗಳಿಕೆಯನ್ನು ನೋಡಿ ನಗುತ್ತಿದ್ದಾರೆ! !
Leave A Reply