• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಬಿಜೆಪಿ,ಕಾಂಗ್ರೆಸ್ ಎರಡೂ ಒಂದೇ ಎಂದು ಈ ಮಳೆಗಾಲ ಸಾಬೀತುಪಡಿಸಲಿದೆ!!

Hanumantha Kamath Posted On May 14, 2020
0


0
Shares
  • Share On Facebook
  • Tweet It

ಕಾಂಗ್ರೆಸ್ ಗಿಂತ ಭಾರತೀಯ ಜನತಾ ಪಾರ್ಟಿ ಎಲ್ಲದರಲ್ಲಿಯೂ ಭಿನ್ನ ಎಂದು ಈಗ ನಿಜವಾಗಿಯೂ ತೋರಿಸುವ ಸಮಯ ಇತ್ತು. ಇದು ಸರಿಯಾದ ಅವಧಿ ಆಗಿತ್ತು. ಯಾಕೆಂದರೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಜನರು ಕಾಂಗ್ರೆಸ್ಸಿನ ಭ್ರಷ್ಟಾಚಾರದ ದುರಾಡಳಿತವನ್ನು ಅಂತ್ಯಗೊಳಿಸಿ ಬಿಜೆಪಿಗೆ ಅಧಿಕಾರ ಕೊಟ್ಟಿದ್ದೇ ಇವರು ಭ್ರಷ್ಟರೂ ಆಗಲಿಕ್ಕಿಲ್ಲ ಎನ್ನುವ ಧೈರ್ಯದಲ್ಲಿ. ಆದರೆ ಸದ್ಯ ಪಾಲಿಕೆಯಲ್ಲಿ ಆಗುತ್ತಿರುವುದು ಏನು ಎನ್ನುವುದನ್ನು ನಿಮಗೆ ವಿವರಿಸುತ್ತೇನೆ.

ನಿಮಗೆ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನ ಹಣೆಬರಹ ಗೊತ್ತಿರಬಹುದು. ಅದನ್ನು ನಾನು ಈ ಜಾಗೃತ ಅಂಕಣದಲ್ಲಿ ಹಲವು ಸರಿ ನಿಮಗೆ ವಿವರಿಸಿದ್ದೇನೆ. ಕಳೆದ ವರ್ಷದ ತನಕ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಇದ್ದ ಕಾರಣ ಆಂಟೋನಿ ವೇಸ್ಟ್ ನವರಿಗೆ ನಮ್ಮ ತೆರಿಗೆಹಣ ಎನ್ನುವ ಹುಲ್ಲುಗಾವಲಿನಲ್ಲಿ ಮೇಯಲು ಚೆನ್ನಾಗಿ ಅವಕಾಶಗಳಿದ್ದವು. ಸಿಕ್ಕಿದ್ದೇ ಸೀರುಂಡೆ ಎಂದು ಅವರು ಎರಡೂ ಕೈಯಲ್ಲಿ ತಿಂಗಳಿಗೆ ಎರಡು ಕೋಟಿ ಬಾಚಿ ದುಂಡಗಾಗುತ್ತಾ ಹೋದರು. ನಿಮಗೆ ತಿಳಿದಿರುವಂತೆ ಆ ಗುತ್ತಿಗೆದಾರರಿಗೆ ಕೇವಲ ಕಸ ಸಂಗ್ರಹಣೆ ಮಾಡುವುದು ಮಾತ್ರ ಕೆಲಸವಾಗಿರಲಿಲ್ಲ. ಅವರು ನಮ್ಮ ವಾರ್ಡುಗಳಲ್ಲಿರುವ ಒಂದು ಮೀಟರ್ ಅಗಲದ ತೋಡುಗಳನ್ನು ಕೂಡ ಸ್ವಚ್ಚ ಮಾಡಬೇಕಿತ್ತು. ಅದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹೋಗಲು ಸಹಕಾರಿಯಾಗುತ್ತಿತ್ತು. ಅವರು ಸ್ವಚ್ಚ ಮಾಡದೇ ಇದ್ದ ಕಾರಣ ಹೆಚ್ಚಿನ ವಾರ್ಡುಗಳಲ್ಲಿ ಕೃತಕನೆರೆ ಎನ್ನುವುದು ಪ್ರತಿ ಮಳೆಗಾಲದ ಸಂಪ್ರದಾಯವಾಗಿತ್ತು. ಅಷ್ಟಕ್ಕೂ ಕಾರ್ಪೋರೇಟರ್ ಗಳು ಮನಸ್ಸು ಮಾಡಿದರೆ ಪಾಲಿಕೆಯ ಮೇಯರ್ ಅಥವಾ ಕಮೀಷನರ್ ಅವರಿಗೆ ದೂರು ಕೊಡಬಹುದಿತ್ತು. ತಮ್ಮ ವಾರ್ಡಿನಲ್ಲಿ ಒಂದು ಮೀಟರ್ ಅಗಲದ ತೋಡುಗಳನ್ನು ಆಂಟೋನಿ ವೇಸ್ಟ್ ನವರು ಕ್ಲೀನ್ ಮಾಡುತ್ತಿಲ್ಲ ಎನ್ನಬಹುದಿತ್ತು. ಲಿಖಿತ ದೂರುಗಳನ್ನು ನೀಡಿದರೆ ಅದನ್ನು ಪರಿಗಣಿಸಿ ಎರಡು ಕೋಟಿಯ ಬಿಲ್ ಪಾಸ್ ಮಾಡುವಾಗ ದೂರು ಬಂದದ್ದನ್ನು ಗುತ್ತಿಗೆದಾರರ ಗಮನಕ್ಕೆ ತಂದು ಹಣವನ್ನು ಕಟ್ ಮಾಡುವ ಅವಕಾಶ ಪಾಲಿಕೆಗೆ ಇತ್ತು. ಆದರೆ ಯಾವ ಪಾಲಿಕೆ ಸದಸ್ಯ ಅಥವಾ ಸದಸ್ಯೆ ದೂರನ್ನು ನೀಡಲಿಲ್ಲ. ಇದರ ಅರ್ಥ ಆಂಟೋನಿಯವರು ಎಲ್ಲಾ ವಾರ್ಡುಗಳ ಎಲ್ಲಾ ಒಂದು ಮೀಟರ್ ಅಗಲ ತೋಡುಗಳನ್ನು ಕ್ಲೀನ್ ಮಾಡಿಕೊಟ್ಟಿದ್ದಾರೆ ಎಂದಲ್ಲ. ಅವರು ಕಾಲಕಾಲಕ್ಕೆ ಮನಪಾ ಸದಸ್ಯರಿಗೆ ಕೊಡಬೇಕಾದ “ತ್ಯಾಜ್ಯ”ವನ್ನು ಮನೆಗೆ ಕಳುಹಿಸಿಕೊಡುತ್ತಿದ್ದರು. ಇದರಿಂದ ಯಾರೂ ಕೂಡ ಪಾಲಿಕೆಗೆ ದೂರು ಕೊಡಲು ಹೋಗಲಿಲ್ಲ. ದೂರು ಕೊಟ್ಟರೆ ತಮ್ಮ ಹೇಸಿಗೆಯ ತಟ್ಟೆಗೆ ತಾವೇ ಕಲ್ಲು ಎತ್ತಿ ಹಾಕಿದಂತೆ ಆಗುತ್ತದೆಯಲ್ಲ, ಆ ಕಾರಣಕ್ಕೆ.

ಅದರೊಂದಿಗೆ ಪಾಲಿಕೆಯ ಸದಸ್ಯರಿಗೆ ಇನ್ನೊಂದು ಲಾಭವೂ ಇತ್ತು. ಅದೇನೆಂದರೆ ಸ್ಪೆಶಲ್ ಗ್ಯಾಂಗ್. ಸರಿಯಾಗಿ ನೋಡಿದರೆ ಸ್ಪೆಶಲ್ ಗ್ಯಾಂಗ್ ನ ಅವಶ್ಯಕತೆ ಪಾಲಿಕೆ ಅಂದುಕೊಂಡಷ್ಟು ಬೇಕಾಗಿಯೇ ಇಲ್ಲ. ಯಾವ ಕೆಲಸವನ್ನು ಆಂಟೋನಿ ವೇಸ್ಟ್ ನವರು ಮಾಡಬೇಕಿತ್ತೋ ಅದನ್ನೇ ಕಾಟಾಚಾರಕ್ಕೆ ಸ್ಪೆಶಲ್ ಗ್ಯಾಂಗ್ ನವರು ಮಾಡುತ್ತಾರೆ. ಅದರೊಂದಿಗೆ ಒಂದೊಂದು ವಾರ್ಡಿನಿಂದ ಒಂದೊಂದು ತಿಂಗಳಿಗೆ ಒಂದೂಕಾಲು ಲಕ್ಷ ಬಿಲ್. ಎರಡು ತಿಂಗಳಿಗೆ ಎರಡೂವರೆ ಲಕ್ಷದ ಪ್ರಕಾರ ಅರವತ್ತು ವಾರ್ಡಿನ ಲೆಕ್ಕ ಹಾಕಿ. ಇಷ್ಟು ಯಾರ ತೆರಿಗೆ ಹಣ. ಆಂಟೋನಿ ವೇಸ್ಟ್ ನವರು ಒಂದು ಮೀಟರ್ ಅಗಲದ ತೋಡುಗಳನ್ನು ಕ್ಲೀನ್ ಮಾಡಿಕೊಟ್ಟರೆ ವಾರ್ಡಿಗೊಂದು ಸ್ಪೆಶಲ್ ಗ್ಯಾಂಗ್ ಗಳು ಯಾಕೆ? ಅವರು ಮಾಡುವ ಕೆಲಸ ಅಷ್ಟೇ ಅದೆ. ಸ್ಪೆಶಲ್ ಗ್ಯಾಂಗ್ ಯಾವುದೇ ವಾರ್ಡಿಗೆ ಬೇಡಾ ಎಂದಲ್ಲ. ಆದರೆ ಪ್ರತಿ ವಾರ್ಡಿಗೆ ಬೇಡಾ. ಈಗ ಕೊರೊನಾ ಮಹಾಮಾರಿಯಿಂದ ಪಾಲಿಕೆಗೆ ಸಹಜವಾಗಿ ಆದಾಯ ಕಡಿಮೆ ಬರುತ್ತದೆ. ಆದಾಯ ಕಡಿಮೆ ಆದಾಗ ಖರ್ಚು ಏನೂ ಕಡಿಮೆ ಆಗುವುದಿಲ್ಲ. ಆದರೆ ಹೀಗೆ ಸೋರಿಕೆ ಆಗುವ ಹಣವನ್ನು ಉಳಿಸಬಹುದು. ಅದಕ್ಕಾಗಿ ಏನು ಮಾಡಬೇಕಿತ್ತು ಎಂದರೆ ಪಾಲಿಕೆಯ ವ್ಯಾಪ್ತಿಯ ಇಬ್ಬರೂ ಶಾಸಕರು ತಮ್ಮ ವ್ಯಾಪ್ತಿಯ ಸದಸ್ಯರನ್ನು ಕರೆದು ಆಂಟೋನಿ ವೇಸ್ಟ್ ನವರಿಂದ ಸರಿಯಾಗಿ ಕೆಲಸ ಮಾಡಿಸಿ. ಅವರು ಮಾಡದಿದ್ದರೆ ಪಾಲಿಕೆಯ ಕಮೀಷನರ್ ಅವರಿಗೆ ಲಿಖಿತ ದೂರು ನೀಡಿ. ಇನ್ನು ಸ್ಪೆಶಲ್ ಗ್ಯಾಂಗ್ ಬೇಕಾಬಿಟ್ಟಿ ಕೊಡಲು ಆಗಲ್ಲ ಎಂದು ಖಡಾಖಂಡಿತವಾಗಿ ಹೇಳಬೇಕಿತ್ತು. ಇದರಿಂದ ಉಳಿಯುವ ಹಣದಲ್ಲಿ ಎಷ್ಟೋ ಅಭಿವೃದ್ಧಿ ಕಾರ್ಯಗಳು ಆಗುತ್ತಿತ್ತು.
ಆದರೆ ಬಿಜೆಪಿ ತಾನು ಕಾಂಗ್ರೆಸ್ಸಿಗಿಂತ ಡಿಫರೆಂಟ್ ಅಲ್ಲ ಎಂದು ತೋರಿಸಿಕೊಟ್ಟಿದೆ. ಅದೇ ಹಳೇ ಚಾಳಿಯನ್ನು ಮುಂದುವರೆಸಿದೆ. ಇದರಿಂದ ಜನರಿಗೆ ಕಾಂಗ್ರೆಸ್ ಬಂದರೂ ಒಂದೇ, ಬಿಜೆಪಿ ಬಂದರೂ ಒಂದೇ ಎಂದು ಗ್ಯಾರಂಟಿ ಆಗಿದೆ. ಯುವ ಶಾಸಕರಿಬ್ಬರು, ಅವರಿಗೆ ಸರಿಯಾಗಿ ಯುವ ಕಾರ್ಪೋರೇಟರ್ಸ್, ಭರ್ಜರಿ ಬಹುಮತ, ಯುವ ಬಿಜೆಪಿ ಜಿಲ್ಲಾಧ್ಯಕ್ಷರು. ಬಿಜೆಪಿಗೆ ಪಾಲಿಕೆಯಲ್ಲಿ ಮೊದಲ ಮಳೆಗಾಲ. ಈ ನಡುವೆ ಕೊರೊನಾ. ಹಣ ಉಳಿಸಲೇ ಬೇಕಿತ್ತು!

0
Shares
  • Share On Facebook
  • Tweet It




Trending Now
ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
Hanumantha Kamath July 11, 2025
ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
Hanumantha Kamath July 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
  • Popular Posts

    • 1
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 2
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 3
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • 4
      ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • 5
      ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!

  • Privacy Policy
  • Contact
© Tulunadu Infomedia.

Press enter/return to begin your search