ಹೆದರಿಸುತ್ತಿಲ್ಲ. ಆದರೆ ವಿಶ್ವ ಆರೋಗ್ಯ ಸಂಸ್ಥೆಗೆ ಪರಿಣಿತ ವಿಜ್ಞಾನಿಗಳು ಸಲ್ಲಿಸಿರುವ ವರದಿ ಪ್ರಕಾರ ಅಗಸ್ಟ್ ನಲ್ಲಿ ಇನ್ನಷ್ಟು ಏರುಗತಿಯನ್ನು ಸಾಧಿಸಲಿರುವ ಕೋವಿಡ್ 19 ಎಂಬ ವೈರಾಣು ನಂತರ ಒಂದಷ್ಟು ಕಡಿಮೆಯಾದಂತೆ ಕಂಡು ಬಂದು ನಂತರ ನವೆಂಬರ್ ನಲ್ಲಿ ಮತ್ತೊಮ್ಮೆ ಉತ್ತುಂಗದ ಪರಮಾವಧಿಗೆ ತಲುಪಲಿದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಆ ವರದಿಯಲ್ಲಿ ಒಂದು ವಾಕ್ಯವನ್ನು ವಿಜ್ಞಾನಿಗಳು ಸೇರಿಸಿದ್ದು, ಒಂದು ವೇಳೆ ನಾಗರಿಕರು ಇನ್ನಷ್ಟು ಗಂಭೀರವಾಗಿ ಮುಂಜಾಗ್ರತೆಯನ್ನು ಅನುಸರಿಸಿದರೆ ಮುಂದಾಗಲಿರುವ ಅಪಾಯವು ಒಂದಷ್ಟು ಕಡಿಮೆಯಾಗಬಹುದು ಎಂದು ಹೇಳಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ವಿವಿಧ ಸಂಘಟನೆ, ಒಕ್ಕೂಟಗಳು ಸೇರಿ ಇದೇ ಜುಲೈ 8 ರಿಂದ 25 ರವರೆಗೆ ಮಧ್ಯಾಹ್ನ 1 ಗಂಟೆಯಿಂದ ಸ್ವಯಂಪ್ರೇರಿತವಾಗಿ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಲು ನಿರ್ಧರಿಸಿವೆ. ಇಂತಹ ಒಂದು ಸುದ್ದಿ ಎಲ್ಲರ ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲಿ ಹರಿದಾಡುತ್ತಿವೆ. ಇದು ಎಷ್ಟರಮಟ್ಟಿಗೆ ನಿಜ ಅಥವಾ ಸುಳ್ಳು ಎಂದು ನನಗೆ ಗೊತ್ತಿಲ್ಲ. ಯಾಕೆಂದರೆ ಈ ಸುದ್ದಿಯ ಕೆಳಗೆ ಯಾವ ಸಂಘಟನೆಗಳ ಹೆಸರು ಅಥವಾ ನಂಬರ್ ಇಲ್ಲ. ಆದರೂ ಒಂದು ವಿಷಯ ಹೇಳುತ್ತೇನೆ. ನನಗೆ ಈ ಸುದ್ದಿ ನಿಜವೇ ಆಗಿರಲಿ ಎಂದು ಮನಸ್ಸು ಹೇಳುತ್ತಿದೆ. ಯಾಕೆಂದರೆ ಪ್ರಾರಂಭದಲ್ಲಿ ಸಿಂಗಲ್ ಡಿಜಿಟ್ ಇದ್ದ ಸೊಂಕೀತರ ಸಂಖ್ಯೆ ನಂತರ ಡಬಲ್, ತ್ರಿಬಲ್, ನಂತರ ಫೋರ್ ಡಿಜಿಟ್ ಗೆ ಹೋಗಿ ತಲುಪಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೂನ್ಯದಿಂದ ಒಂದೂವರೆ ಸೆಂಚುರಿಗೆ ಹೋಗಿ ಮುಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಕಾಲು ಸೆಂಚುರಿ ಆಗಲು ತುಂಬಾ ದಿನ ಬೇಕಾಗಿಲ್ಲವೇನೋ ಎಂದು ಅನಿಸುತ್ತಿದೆ. ಮಂಗಳೂರಿನ ಹೃದಯಭಾಗವಾಗಿರುವ ರಥಬೀದಿಯಿಂದ ಹಿಡಿದು ಜಿಲ್ಲೆಯ ಮೂಲೆಮೂಲೆಯ ತನಕ ಕೊರೊನಾಗೆ ಗೊತ್ತಿಲ್ಲದ ವಿಳಾಸವೇ ಇಲ್ಲ ಎಂದು ಗ್ಯಾರಂಟಿಯಾಗಿದೆ. ವಿದ್ಯುತ್, ರಸ್ತೆ ಇಲ್ಲದ ಸ್ಥಳ ನಮ್ಮ ಜಿಲ್ಲೆಯಲ್ಲಿರಬಹುದು. ಆದರೆ ಕೊರೊನಾ ಹೋಗಿ ಬರದ ಸ್ಥಳ ಇಲ್ಲವೇ ಇಲ್ಲ. ಇವತ್ತು ನಾನು ನನ್ನ ಫೇಸ್ ಬುಕ್ಕಿನಲ್ಲಿ ಎರಡು ಫೋಟೋ ಹಾಕಿದ್ದೇನೆ. ಅದು 1918 ರಲ್ಲಿ ನಮ್ಮ ರಾಜ್ಯದ ಪರಿಸ್ಥಿತಿಯ ಬಗ್ಗೆ ಆಗ ಇದ್ದ ಮಾಹಿತಿ. ಬಹುತೇಕ 102 ವರ್ಷಗಳ ನಂತರ ಈಗ ಅದೇ ಪರಿಸ್ಥಿತಿಗೆ ನಾವು ಬಂದು ತಲುಪಿದ್ದೇವೆ.
ಆದ್ದರಿಂದ ಯಾವ ಸಂಘಟನೆಗಳ ಒಕ್ಕೂಟವೋ ಏನೋ, ಅವರು ಹೇಳಿದಂತೆ ಏನು ಕೆಲಸ ಇದ್ದರೂ ಒಂದು ಗಂಟೆಯ ಒಳಗೆ ಮುಗಿಸಿ ನಂತರ ಮನೆಗೆ ಬಂದು ಬೆಚ್ಚಗೆ ಸ್ನಾನ ಮಾಡಿ, ಬಿಸಿ ಬಿಸಿ ಊಟ ಮಾಡಿ ಮನೆಯೊಳಗೆ ಕೆಲಸ ಮಾಡಿ ಇರುವುದು ಒಳ್ಳೆಯದು. ಹೇಗೂ ಈಗಿನ ಕಾಲದಲ್ಲಿ ಲಾಪ್ ಟಾಪ್ ಎಲ್ಲವೂ ಇದೆ. ವರ್ಕ್ ಫ್ರಂ ಹೋಂ ಅದರಲ್ಲಿ ಮಾಡಬಹುದು. ಫೋನ್ ಎಲ್ಲಾ ಇರುವುದರಿಂದ ಆರ್ಡರ್ ಅದರಲ್ಲಿ ತೆಗೆದುಕೊಂಡು ಮರುದಿನ ಬೆಳಿಗ್ಗೆ ಪೂರೈಸಬಹುದು. ಬಸ್ಸಿನವರಿಗೆ ಈಗಲೇ ಪ್ರಯಾಣಿಕರು ಇಲ್ಲ ಎನ್ನುವ ಕೊರಗಿದೆ. ರಿಕ್ಷಾದವರು ಬಾಡಿಗೆ ಇದ್ದಷ್ಟು ಸಮಯ ದುಡಿದು ನಂತರ ಮನೆ ಸೇರಬಹುದು. ಇದು ಸರಕಾರದ ಆದೇಶ ಅಲ್ಲದೇ ಇರುವುದರಿಂದ ಭರ್ತಿ ಒಂದು ಗಂಟೆಗೆನೆ ಎಲ್ಲರೂ ಮನೆ ಸೇರಬೇಕೆಂಬ ನಿಯಮ ಇರುವುದಿಲ್ಲ. ಆದರೆ ಒಂದು ಗಂಟೆ ಎಂದು ಮನಸ್ಸಿನಲ್ಲಿ ಇಟ್ಟುಕೊಂಡರೆ ನಂತರ ಎರಡು ಗಂಟೆಯೊಳಗೆ ಎಲ್ಲವೂ ಸ್ತಬ್ಧ ಆದರೆ ಬಹುಶ: ಮುಂದಿನ ದಿನಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಬಹುದು ಎನ್ನುವ ಅಭಿಪ್ರಾಯ ಇದೆ. ಹೀಗೆ ಸತತ 18 ದಿನ ಮಾಡಿದರೆ ನಂತರ ಪರಿಸ್ಥಿತಿ ಸುಧಾರಿಸಬಹುದು. ಹಾಗಂತ ಇದು ಸರಕಾರದ ಆದೇಶ ಅಲ್ಲ. ಇಂತದ್ದನ್ನು ಸರಕಾರ ಕೈಯಲ್ಲಿ ಕೋಲು ಹಿಡಿದು ಮಾಡಲು ಸಾಧ್ಯವೂ ಇಲ್ಲ. ಯಾಕೆಂದರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೀಗೆ ಆದೇಶ ಮಾಡಬೇಕಾದರೆ ಅವರಿಗೆ ರಾಜ್ಯದಿಂದ ಸೂಚನೆ ಬರಬೇಕು. ಆದರೆ ಈಗ ರಾಜ್ಯ ಸರಕಾರ ಸದ್ಯ ಯಾವುದೇ ಕಠಿಣ ನಿಯಮ ಜಾರಿಗೆ ತರುವ ಹಂತದಲ್ಲಿ ಇಲ್ಲ. ಲಾಕ್ ಡೌನ್ ಮಾಡಲ್ಲ ಎಂದು ಸ್ವಯಂ ಗೃಹಸಚಿವರೇ ಗೋಗರೆದರೂ ಬೆಂಗಳೂರಿನಿಂದ ಈಗಾಗಲೇ ಮೂರು ಲಕ್ಷ ಹೊರ ಜಿಲ್ಲೆಯ, ಹೊರ ರಾಜ್ಯದ ಕಾರ್ಮಿಕರು ಬೆಂಗಳೂರು ಗಡಿಯಿಂದ ಹೊರಗೆ ಹೊರಟು ಹೋಗಿ ಸೆಟಲ್ ಆಗಿ ಆಗಿದೆ. ಇನ್ನು ಆಯಾ ಜಿಲ್ಲೆಗಳ ಎಲ್ಲಾ ಸರಕಾರಿ ಆಸ್ಪತ್ರೆಗಳ ಬೆಡ್ ಫುಲ್ ಆಗಿದೆ. ಉಳ್ಳಾಲದ ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದರೂ ಅವರನ್ನು ಬೆಳಗ್ಗಿನಿಂದ ಸಂಜೆಯ ವರೆಗೆ ಪೊಲೀಸ್ ಠಾಣೆಯ ಹೊರಗೆ ಕಾಯಿಸುವಂತಾಗಿತ್ತು. ಪೊಲೀಸರ ಪರಿಸ್ಥಿತಿಯೇ ಹೀಗಾದರೆ ಜನಸಾಮಾನ್ಯರ ಗೋಳು ಕೇಳುವವರ್ಯಾರು? ಖಾಸಗಿ ಆಸ್ಪತ್ರೆಗಳ ಬೆಡ್ ಗಳಿಗೆ ಚಿನ್ನದ ಬೆಲೆ ಬರುವ ಕಾಲವಿದು. ಖಾಸಗಿ ಆಸ್ಪತ್ರೆಗಳಿಗೆ ಮಾನವೀಯತೆಯ ಶಬ್ದದ ಅರ್ಥ ಎಲ್ಲಿ ಗೊತ್ತಿದೆ. ಆ ಶಬ್ದವೇ ಅವರ ಡಿಕ್ಷನರಿಯಲ್ಲಿಲ್ಲ. ಕೊರೊನಾ ಬರುವುದು ಬಿಡಿ, ಬಂದರೆ ಹಣ ಎಲ್ಲಿಂದ ತರುವುದು ಎನ್ನುವ ಹೆದರಿಕೆಯಿಂದಲೇ ಮಧ್ಯಮ ವರ್ಗದವರು ತಣ್ಣನೆ ನಡುಗುವಂತಾಗಿದೆ!
Leave A Reply