• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕಮೀಷನ್ ಸಿಗಲಿಲ್ಲ ಎಂದು ರಫೇಲ್ ಖರೀದಿಯಾಗಿರಲಿಲ್ಲ!!

Hanumantha Kamath Posted On July 31, 2020
0


0
Shares
  • Share On Facebook
  • Tweet It

ಬರೋಬ್ಬರೀ 23 ವರ್ಷಗಳ ಬಳಿಕ ಭಾರತ ಯುದ್ಧ ವಿಮಾನಗಳನ್ನು ಖರೀದಿಸಿದೆ. ರಷ್ಯಾದಿಂದ 23 ವರ್ಷಗಳ ಮೊದಲು ಸುಖೋಯ್ ಯುದ್ಧ ವಿಮಾನಗಳನ್ನು ಖರೀದಿಸಿದ್ದೇ ಭಾರತೀಯ ವಾಯುಪಡೆಗೆ ಕೊನೆಯ ಯುದ್ಧ ವಿಮಾನಗಳ ಸೇರ್ಪಡೆಯಾಗಿತ್ತು. ಈಗ ಎರಡು ದಶಕಗಳ ಬಳಿಕ ರಫೇಲ್ ಆಗಮನ ಭಾರತೀಯ ವಾಯುಸೇನೆಯ ಬಲವನ್ನು ಹೆಚ್ಚಿಸಿರುವುದು ನೂರಕ್ಕೆ ನೂರು ನಿಜ. ಇದರ ವೇಗ ಎಷ್ಟು ಎಂದು ಗೊತ್ತಾದರೆ ನೀವು ಆಶ್ಚರ್ಯಪಟ್ಟುಕೊಳ್ಳುತ್ತೀರಿ. ಸಾಮಾನ್ಯವಾಗಿ ನೀವು ಒಂದು ಕಾರಿನಲ್ಲಿ ಹೋಗುವಾಗ ಚಾಲಕ ಗಂಟೆಗೆ 80 ಕಿ.ಮೀ ಹೋದರೆ ನಿಮಗೆ ಅದೇ ದೊಡ್ಡ ವಿಷಯವಾಗುತ್ತದೆ. ಆದರೆ ರಫೇಲ್ ಗಂಟೆಗೆ 1389 ಕಿ.ಮೀ ವೇಗದಲ್ಲಿ ಹೋಗುತ್ತದೆ. ಫ್ರಾನ್ಸ್ ನ ರಫೇಲ್ ಯುದ್ಧವಿಮಾನಗಳು ಜಗತ್ತಿನ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಹೊಂದಿದೆ. ಇವುಗಳನ್ನು ಕರಾರುವಕ್ಕಾದ ಕ್ಷಿಪಣಿ ಹಾಗೂ ಬಾಂಬ್ ದಾಳಿ ನಡೆಸಲು ಬಳಸಲಾಗುತ್ತದೆ. ಅತ್ಯಾಧುನಿಕ ರಾಡಾರ್ ಹಾಗೂ ವಿಚಕ್ಷಣಾ ವ್ಯವಸ್ಥೆ ಇವುಗಳಲ್ಲಿದೆ. ಇದರಲ್ಲಿ ಟ್ವಿನ್ ಇಂಜಿನ್ ಇದ್ದು ಒಂದು ಸಲ ಇಂಧನ ತುಂಬಿಸಿದರೆ 3700 ಕಿ.ಮೀ ದೂರ ಕ್ರಮಿಸಬಲ್ಲದು. ಹಲವಾರು ರೀತಿಯ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸುವ ಸಾಮರ್ತ್ಯ ರಫೇಲ್ ಗೆ ಇದೆ.

ಯುಪಿಎ ಸರಕಾರದ ಅವಧಿಯಲ್ಲಿ ಫ್ರಾನ್ಸ್ ನಿಂದ 126 ರಫೇಲ್ ಯುದ್ಧ ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಏಳು ವರ್ಷ ವಿಳಂಬವಾಗಿ ಕೊನೆಗೂ ಅದು ಅಂತಿಮವಾಗಿರಲಿಲ್ಲ. ನಂತರ ನರೇಂದ್ರ ಮೋದಿ ಸರಕಾರ 36 ರಫೇಲ್ ಯುದ್ಧವಿಮಾನ ಖರೀದಿಗೆ 2016ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಯಾವಾಗ ಈ ವಿಷಯದಲ್ಲಿ ಮೋದಿಜಿಯವರಿಗೆ ಜನರು ಶಹಭಾಷ್ ಹೇಳಲು ಶುರು ಮಾಡಿದರೋ ಇದರಿಂದ ಕಾಂಗ್ರೆಸ್ ನಿದ್ದೆಗೆಟ್ಟಿತು. ಯಾರೋ ಮಹಾನುಭವ ಪತ್ರಕರ್ತನನ್ನು ನಂಬಿ ರಾಹುಲ್ ಗಾಂಧಿ ಯಾವುದೋ ಕೆಲಸಕ್ಕೆ ಬರದ ಕಾಗದದ ತುಂಡುಗಳನ್ನು ಹಿಡಿದು ರಣರಂಗಕ್ಕೆ ಇಳಿದುಬಿಟ್ಟರು. ಬಿಜೆಪಿ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ಮಾಡಿದೆ ಎಂದು ಒಂದೇ ವಿಷಯವನ್ನು ಹಿಡಿದು ಚುನಾವಣೆಗೆ ಹೋದರು, ಭೋಪೋರ್ಸ್ ಹಗರಣ ಕಾಂಗ್ರೆಸ್ ನಾಶಕ್ಕೆ ಆವತ್ತು ಮೊದಲ ಮೊಳೆ ಹೊಡೆದು ಕೊನೆಗೆ ಹಂತಹಂತವಾಗಿ ಕಾಂಗ್ರೆಸ್ ಅವನತಿ ಹೊಂದಲು ಕಾರಣವಾದಂತೆ ಇದು ಬಿಜೆಪಿಗೆ ಉರುಳಾಗಬಹುದು. ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂದು ರಾಹುಲ್ ಅಂದುಕೊಂಡುಬಿಟ್ಟಿದ್ದರು. ಅದಕ್ಕೆ ಸರಿಯಾಗಿ ಇವರಿಗೆ ದಾಖಲೆಗಳನ್ನು ನೀಡಿದ ಮನುಷ್ಯರು ಹೇಳಿದ್ದ ಮಾತನ್ನೇ ರಾಹುಲ್ ನಂಬಿದ್ದರೆ ವಿನ: ಲಾಜಿಕ್ ಯೋಚಿಸಿರಲಿಲ್ಲ. ರಾಹುಲ್ ಮುಂದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬೇರೆ ವಿಷಯಗಳು ಇರಲಿಲ್ಲ. ಇದ್ದ ಒಂದೇ ವಿಷಯ ಅವರ ಪಕ್ಷವನ್ನು ಎಷ್ಟು ಅವಮಾನಕ್ಕೆ ದೂಡಿತ್ತು ಎಂದರೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿತು. ಅದರೊಂದಿಗೆ ಜನ ಕೂಡ ಕೈಬಿಟ್ಟರು. ರಫೇಲ್ ಕಾಂಗ್ರೆಸ್ ಕೈ ಹಿಡಿಯಲೇ ಇಲ್ಲ. ರಫೇಲ್ ನಲ್ಲಿ ಅವ್ಯವಹಾರವಾಗಿದೆ ಎನ್ನುವುದನ್ನು ಜನ ನಂಬುವ ಸ್ಥಿತಿಯಲ್ಲಿ ಇರಲೇ ಇಲ್ಲ. ಇವತ್ತಿಗೂ ಇಲ್ಲ.

ಭಾರತದ ವಿರುದ್ಧ ಚೀನಾ ಈಗ ಯುದ್ಧಕ್ಕೆ ಸನ್ನದ್ಧವಾಗಿ ನಿಂತಿರುವಂತೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ರಫೇಲ್ ಯುದ್ಧ ವಿಮಾನಗಳು ಭಾರತದ ಭತ್ತಳಿಕೆಯಲ್ಲಿ ಇರುವುದು ಚೀನಾ ನಿದ್ದೆ ಕೆಡಿಸಿದೆ. ಈಗ ರಫೇಲ್ ಯುದ್ಧ ವಿಮಾನಗಳು ಬೀಡುಬಿಟ್ಟಿರುವ ಅಂಬಾಲಾ ವಾಯುನೆಲೆ ಭಾರತದ ವೈರಿ ಚೀನಾ ಹಾಗೂ ಪಾಕಿಸ್ತಾನದ ಗಡಿಗೆ ಅತ್ಯಂತ ಸನಿಹದಲ್ಲಿದೆ. ಐವತ್ತು ಸಾವಿರ ಅಡಿ ಎತ್ತರದಲ್ಲಿ ಇವು ಹಾರಬಲ್ಲದು. ಒಟ್ಟು 36 ಯುದ್ಧ ವಿಮಾನಗಳಿಗೆ ಭಾರತ ಸರಕಾರ 59 ಸಾವಿರ ಕೋಟಿ ರೂಪಾಯಿಯನ್ನು ನೀಡಲಿದೆ. ಇದೆಲ್ಲವನ್ನು ನಮ್ಮ ನಿಮ್ಮ ತೆರಿಗೆಯ ಹಣದಿಂದಲೇ ನೀಡಬೇಕಾಗುತ್ತದೆ. ಇದು ಚಿಕ್ಕ ಮೊತ್ತವಲ್ಲ. ಇದನ್ನು ಒಟ್ಟು ಮಾಡಲು ಕೇಂದ್ರ ಸರಕಾರ ವಿವಿಧ ಆದಾಯ ಮೂಲಗಳನ್ನು ಹೊಂದಿಸಬೇಕಾಗುತ್ತದೆ. ಹಾಗಂತ ನಮ್ಮ ದೇಶದ ಸೇನೆಯನ್ನು ಬಲಪಡಿಸಲು ಇದು ಕೊನೆಯ ಖರೀದಿ ಕೂಡ ಅಲ್ಲ. ಇಂತಹ ಸಂದರ್ಭದಲ್ಲೆ ಕೇಂದ್ರಕ್ಕೆ ಮುಖ್ಯ ಆದಾಯ ಮೂಲವಾಗಿರುವುದು ಇಂಧನ ತೆರಿಗೆ.

ಜನರಿಂದಲೇ ಸಂಗ್ರಹಿಸಿ ಜನರ ರಕ್ಷಣೆಗೆ ನೀಡುವುದು ಅಪರಾಧವಲ್ಲ. ಆದರೆ ಇದ್ಯಾವುದರ ಅರಿವು ಇಲ್ಲದೇ ಯುದ್ಧ ವಿಮಾನ ಖರೀದಿಯಲ್ಲಿಯೂ ಕಮಿಷನ್ ಹುಡುಕುತ್ತಿದ್ದವರನ್ನು ಸಂಬಂಧಿಯಾಗಿ ಇಟ್ಟುಕೊಂಡಿರುವ ಯುವರಾಜ ಎನಿಸಿಕೊಂಡವರು ಇಂಧನ ದರ ಇಳಿಸಿ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಅವರಿಗೆ ಗೊತ್ತಿರಲಿಕ್ಕಿಲ್ಲ. ಭಾರತದ ಸ್ವಾಭಿಮಾನಿ ಪ್ರಜೆ ದೇಶದ ಸಾರ್ವಭೌಮತೆಯ ವಿಷಯ ಬಂದಾಗ ಅನ್ನಾಹಾರ ಬಿಟ್ಟು ಶತ್ರುವನ್ನು ಬಗ್ಗುಬಡಿಯಿರಿ ಎಂದು ಸರಕಾರದ ಜೊತೆ ನಿಲ್ಲುತ್ತಾನೆ ವಿನ: ಫ್ರಾನ್ಸ್ ಕಮೀಷನ್ ಕೊಡಲಿಲ್ಲ ಎಂದು ವಿಮಾನ ಖರೀದಿಗೆ ಆಸಕ್ತಿ ತೋರದ ಪಕ್ಷದ ನಾಯಕರೊಂದಿಗೆ ನಿಲ್ಲಲ್ಲ!

0
Shares
  • Share On Facebook
  • Tweet It




Trending Now
ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
Hanumantha Kamath July 11, 2025
ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
Hanumantha Kamath July 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
  • Popular Posts

    • 1
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 2
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 3
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • 4
      ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • 5
      ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!

  • Privacy Policy
  • Contact
© Tulunadu Infomedia.

Press enter/return to begin your search