• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕೋಟಾ ಮನಸ್ಸು ಮಾಡಿದರೆ ನಾವು ಖಾದರ್ ತರಹ ಅಲ್ಲ ಎಂದು ನಿರೂಪಿಸಬಹುದು!!

Tulunadu News Posted On August 12, 2020


  • Share On Facebook
  • Tweet It

ನಿನ್ನೆ ಮತ್ತು ಇವತ್ತು ನಮ್ಮ ರಾಜ್ಯದ ಗೃಹ ಸಚಿವರು ಉಡುಪಿ ಮತ್ತು ಮಂಗಳೂರಿನಲ್ಲಿದ್ದರು. ನಿನ್ನೆ ಅವರು ಉಡುಪಿಯಲ್ಲಿ ಸಮುದ್ರದ ಕೊರೆತ ನೋಡಲು ಹೋಗಿದ್ದರು. ಬೀಚ್ ನಲ್ಲಿ ನಿಂತಿದ್ದಾಗ ಕಡಲ ಅಬ್ಬರಕ್ಕೆ ಅವರು ಕಾಲು ಜಾರಿ ಬೀಳುವ ಸಾಧ್ಯತೆ ಇದ್ದಾಗ ಬಿಜೆಪಿಯ ಮುಖಂಡರೊಬ್ಬರು ಹಿಡಿಯುವ ಫೋಟೋವನ್ನು ಮಾಧ್ಯಮಗಳಲ್ಲಿ ಇವತ್ತು ನೋಡಿದ್ದೇನೆ. ಇರಲಿ, ಬೆಂಗಳೂರಿನಿಂದ ವಿಮಾನದಲ್ಲಿ ಬಂದು ಇಲ್ಲಿ ಬೀಚ್ ತಿರುಗಾಡಿ ಅವರು ಹಿಂತಿರುಗಿ ಹೋಗಿದ್ದಾರೆ. ಅದಕ್ಕೆ ನಮ್ಮ ತೆರಿಗೆಯ ಸ್ವಲ್ಪ ಹಣ ಖರ್ಚಾಗಿರುತ್ತದೆ. ಕಡಲ್ಕೊರೆತಕ್ಕೆ ಕೋಟಿ ಕೋಟಿ ಪೋಲಾಗಿರುವಾಗ ಇದೆಲ್ಲ ಯಾವ ಲೆಕ್ಕ. ಮೊನ್ನೆ ಕಂದಾಯ ಸಚಿವ ಆರ್ ಅಶೋಕ್ ನಮ್ಮ ಕಡಲು ನೋಡಿ ಹೋದರು. ಇವತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಬಂದು ಉಡುಪಿಯ ಕಡಲು ನೋಡಿ ಹೋಗಿದ್ದಾರೆ. ಅವರು ಉಡುಪಿಯ ಉಸ್ತುವಾರಿ ಸಚಿವರಾಗಿರುವುದರಿಂದ ಸಂಪ್ರದಾಯದಂತೆ ನೋಡಿ ಹೋಗಬೇಕಾಗಿರುವುದು ಅತ್ಯವಶ್ಯ. ನೋಡದಿದ್ದರೆ ಮೊಗವೀರ ಬಂಧುಗಳು ಬೇಸರಪಟ್ಟುಕೊಳ್ಳಬಹುದು ಎಂದು ಸ್ಥಳೀಯ ಬಿಜೆಪಿ ಮುಖಂಡರು ಸಲಹೆ ಕೊಟ್ಟಿರಬಹುದು. ಯಾವುದೇ ಸರಕಾರ ಬರಲಿ ಸಚಿವರುಗಳು ಕಡಲು ನೋಡುವುದು ಇದ್ದೇ ಇದೆ. ಆದರೆ ನಮ್ಮ ಕಡಲುಗಳು ಯಾವ ಮಂತ್ರಿಗೂ ಕ್ಯಾರೇ ಅಂದಿಲ್ಲ. ಅದು ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ.

ಒಂದು ವೇಳೆ ಇವರಿಗೆಲ್ಲ ಕಡಲ್ಕೊರೆತ ನಿಜವಾಗಿಯೂ ನಿಲ್ಲಬೇಕಾದರೆ ಇವರು ಜಪಾನ್, ಜರ್ಮನಿಗೆ ಹೋಗಬೇಕಾಗಿಲ್ಲ. ನೆಟ್ಟಗೆ ಮುಂಬೈಗೆ ಹೋದರೂ ಸಾಕು. ಅಲ್ಲಿ ನಗರದೊಳಗೆ ಕಡಲು ಬರುತ್ತದೆ. ಮುಂಬೈಗರಿಗೆ ನಮಗಿಂತ ಸವಾಲು ಎಷ್ಟೋ ಪಾಲು ಹೆಚ್ಚಿದೆ. ಅಲ್ಲಿನ ಆಡಳಿತ ಪಕ್ಷದವರು ಬಹಳ ವರ್ಷಗಳ ಮೊದಲೇ ಕಡಲ ಕೊರೆತದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿದಿದ್ದಾರೆ. ಅವರು ಸಮುದ್ರಕ್ಕೆ ಟೆಟ್ರಾಪೋಡ್ ಎನ್ನುವ ಕಲ್ಲುಗಳನ್ನು ಹಾಕಿದ್ದಾರೆ. ಇದು 25 ವರ್ಷಗಳ ಮೊದಲೇ ಹಾಕಿದ್ರೂ ಇವತ್ತಿಗೂ ಏನು ಆಗಿಲ್ಲ. ಅಂತಹ ವ್ಯವಸ್ಥೆಯನ್ನು ನಮ್ಮಲ್ಲಿ ಕೂಡ ಮಾಡಬಹುದಲ್ಲ. ಮನೆಗೋಡೆ ಕಟ್ಟುವ ಕಲ್ಲುಗಳನ್ನು, ಮರಳಿನ ಗೋಣಿಗಳನ್ನು ಹಾಕುವ ಬದಲು ಟೆಟ್ರಾಪೋಡ್ ಹಾಕಿದ್ರೆ ಶಾಶ್ವತ ಪರಿಹಾರ ಸಿಗುತ್ತದೆಯಲ್ಲವೇ? ನಾನು ಹಿಂದೆ ಮುಂಬೈನಲ್ಲಿ ಇದ್ದಾಗಲೇ ಅಲ್ಲಿ ಅಂತಹ ವ್ಯವಸ್ಥೆ ಮಾಡುವುದನ್ನು ನೋಡಿದವನು. ನಾನು ಯಾವಾಗ ಮುಂಬೈಗೆ ಹೋದರೂ ಬೀಚ್ ಗೆ ಹೋದಾಗ ಅದೇ ಟೇಟ್ರಾಪೋಡ್ ಗಳನ್ನು ನೋಡುತ್ತೇನೆ. ಇಲ್ಲಿ ಕೂಡ ಅದರ ಟೆಂಡರ್ ಅನ್ನು ಕರೆದು ಗುತ್ತಿಗೆ ಕೊಟ್ಟರೆ ಮುಗಿಯುವುದಿಲ್ಲವೇ? ಅದು ಬಿಟ್ಟು ನಮ್ಮ ತೆರಿಗೆಯ ಹಣದಲ್ಲಿ ಮಂತ್ರಿಗಳು ಟೂರಿಸಂ, ಗುತ್ತಿಗೆದಾರರ ತಿಜೋರಿ ಭರ್ತಿ ಯಾಕೆ?

ಇನ್ನು ಕಡಲ್ಕೊರೆತದೊಂದಿಗೆ ಬರುವ ಇನ್ನೊಂದು ವಿಷಯ ನಿಮಗೆ ಗೊತ್ತೆ ಇದೆ. ಮಾಧ್ಯಮಗಳಲ್ಲಿ “ಅಷ್ಟು ಮನೆಗಳಿಗೆ ಹಾನಿ, ಇಷ್ಟು ಮನೆಗಳಿಗೆ ನಷ್ಟ” ಆ ಮನೆಯವರಿಗೆ ಪರಿಹಾರಕ್ಕೆ ಪ್ರತಿ ವರ್ಷ ಹಣ ಬಿಡುಗಡೆ. ಇದರ ಬದಲು ಕಡಲಿನ ಹತ್ತಿರ ವಾಸಿಸುವವರಿಗೆ ದೂರದಲ್ಲಿ ಸರಕಾರಿ ಜಾಗ ನೋಡಿ ಅಲ್ಲಿಯೇ ಮನೆಗಳನ್ನು ಕಟ್ಟಿ ಕೊಡಲು ಆಗಲ್ವಾ ಖಾದರ್ ಅವರೇ. ನೀವು ಹೇಗೂ ಮನೆಗಳನ್ನು ಕಟ್ಟಿ ಕೊಡುವುದರಲ್ಲಿ ನಿಷ್ಣಾತರು. ಒಂಭತ್ತುಕೆರೆಯಲ್ಲಿ ನೂರಾರು ಮನೆಗಳನ್ನು ಕಟ್ಟಿ ಶೋಕೆಸಿನಲ್ಲಿ ಇಟ್ಟಿದ್ದಿರಿ. ಅದನ್ನು ನೋಡಿದವರಿಗೆ ಮನೆ ಕಟ್ಟುವುದರಲ್ಲಿ ನಿಮ್ಮ ಅನುಭವ ಗೊತ್ತೆ ಇರುತ್ತದೆ. ಆದ್ದರಿಂದ ಆ ನಿಟ್ಟಿನಲ್ಲಿ ನೀವು ಗಮನ ಹರಿಸಿದರೆ ಉತ್ತಮ. ಅಂದ ಹಾಗೆ ನಮ್ಮ ಸರಕಾರ ಇಲ್ಲವಲ್ಲ. ನಾವು ಮಾಡಲು ಸಾಧ್ಯವಿಲ್ಲ ಎಂದು ಖಾದರ್ ಪೆಟ್ಟು ತಪ್ಪಿಸಬಹುದು. ಆದ್ದರಿಂದ ಈಗ ಬಿಜೆಪಿ ಸರಕಾರಕ್ಕೆ ಉತ್ತಮ ಅವಕಾಶ. ಯಾರೂ ಮಾಡದೇ ಇರುವ ಶಾಶ್ವತ ಕಾಮಗಾರಿಯನ್ನು ಮಾಡಿಬಿಡುವುದು ಉತ್ತಮ. ಹೇಗೂ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಸಜ್ಜನ, ಭ್ರಷ್ಟಾಚಾರರಹಿತ, ಪ್ರಾಮಾಣಿಕ ಎನ್ನುವಂತಹ ವಿಶೇಷಣಗಳಿವೆ. ಅವರನ್ನು ಜನ ನಂಬುತ್ತಾರೆ. ಅವರಿಗೆ ಈ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಶಾಶ್ವತ ಅಲ್ಲ ಎಂದು ಗೊತ್ತಿದೆ. ಆದರೆ ಇದರ ನಡುವೆ ಅವರು ಶಾಶ್ವತವಾಗಿ ಆಗಬೇಕಾದ ಕಾರ್ಯ ಮಾಡಿ ಮುಗಿಸಿದರೆ ಉತ್ತಮ. ಅವರ ಹೆಸರು ಇಲ್ಲಿನ ಕಡಲ ತೀರಗಳು ಶಾಶ್ವತವಾಗಿ ನೆನಪಿನಲ್ಲಿ ಇಡುತ್ತವೆ. ಅವರು ಕೋಟಾ ಮೂಲದವರು ಆಗಿರುವುದರಿಂದ ಸೋಮೇಶ್ವರದಿಂದ ಕೋಟೇಶ್ವರದ ತನಕ ಮಾಡಿ ಬಿಡಲಿ. ಇನ್ನು ಕೋಟಾ ಶ್ರೀನಿವಾಸ ಪೂಜಾರಿಯವರಲ್ಲಿ ಅಧ್ಯಯನದ ಅಭ್ಯಾಸ ಕೂಡ ಇದೆ. ಅವರು ಕೂತು, ಚಿಂತಿಸಿ, ಅಧಿಕಾರಿಗಳನ್ನು ಕರೆಸಿ ಯೋಜನೆ ಕಾರ್ಯಕ್ಕೆ ಮುಂದಾಗಲಿ. ಯಾವ ಸರಕಾರ ಬಂದರೂ ಹಣ ಹೊಡೆಯಲು ಇದೊಂದು ಸುಲಭದ ತಂತ್ರ ಎನ್ನುವುದನ್ನು ಶಾಶ್ವತವಾಗಿ ಅಳಿಸಿ ಹಾಕಲಿ. ಕೋಟಾ ಮಾಡ್ತಾರಾ?!!

  • Share On Facebook
  • Tweet It


- Advertisement -


Trending Now
ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
Tulunadu News July 1, 2022
ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
Tulunadu News June 30, 2022
Leave A Reply

  • Recent Posts

    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
  • Popular Posts

    • 1
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 2
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 3
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • 4
      ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • 5
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search