ಮಗ ಡ್ರಗ್ಸ್ ನಿಂದ ಸತ್ತರೂ ಸಿದ್ದು ಏನೂ ಮಾಡಲಿಲ್ಲ ಎಂದ್ರು ಮುತಾಲಿಕ್!!
ನಿನ್ನೆ ಪ್ರಮೋದ್ ಮುತಾಲಿಕ್ ಸುದ್ದಿಗೋಷ್ಟಿ ಮಾಡಿದ್ದರು. ಅದರಲ್ಲಿ ಸಿದ್ಧರಾಮಯ್ಯನವರ ಮಗ ರಾಕೇಶ್ ವಿಪರೀತ ಡ್ರಗ್ಸ್ ಸೇವನೆಯಿಂದಲೇ ಮೃತಪಟ್ಟಿದ್ದು ಎಂದು ಜಗಜ್ಜಾಹೀರಾಗಿದೆ. ಅವರ ಮಗ ಸತ್ತಾಗ ಸಿದ್ಧರಾಮಯ್ಯ ಸಿಎಂ ಆಗಿದ್ದರು. ಅವರು ಡ್ರಗ್ಸ್ ಅನ್ನು ರಾಜ್ಯದಲ್ಲಿಯೇ ಬುಡ ಸಮೇತ ಕಿತ್ತು ಬಿಸಾಡಲು ಪ್ರಯತ್ನ ಮಾಡಬೇಕಿತ್ತು ಎನ್ನುವ ಮಾತುಗಳನ್ನು ಆಡಿದ್ದಾರೆ. ಒಂದು ಕಡೆ ಸತ್ತವರ ಬಗ್ಗೆ ಮಾತನಾಡುವುದಿಲ್ಲ ಎಂದು ಚಿರಂಜೀವಿ ಸರ್ಜಾ ವಿಷಯದಲ್ಲಿ ಸ್ಯಾಂಡಲ್ ವುಡ್ ತಾರೆಯರು ಹೇಳುತ್ತಿದ್ದಾರೆ. ಈ ಹೊತ್ತಿನಲ್ಲಿಯೇ ಸಿದ್ಧರಾಮಯ್ಯನವರ ಮೃತ ಮಗನ ಬಗ್ಗೆ ಹಿರಿಯರಾದ ಪ್ರಮೋದ್ ಮುತಾಲಿಕ್ ಅವರು ಹೀಗೆ ಮಾತನಾಡಿದ್ದಾರೆ. ಇಲ್ಲಿ ಮುತಾಲಿಕ್ ಹೇಳಿದ್ದರಲ್ಲಿ ಸತ್ಯ ಇರಲೂಬಹುದು. ಆದರೆ ಒಂದು ರಾಜ್ಯದ ಮುಖ್ಯಮಂತ್ರಿಯ ಮಗನೇ ವಿಪರೀತವಾಗಿ ಡ್ರಗ್ಸ್ ಸೇವಿಸಿ ಮೃತಪಟ್ಟಿದ್ದರೂ ಆ ರಾಜ್ಯದ ಮುಖ್ಯಮಂತ್ರಿಯಾದವನಿಗೆ ತನ್ನ ಮಗನ ಸಾವಿಗೆ ನ್ಯಾಯ ಕೊಡಲು ಆಗುವುದಿಲ್ಲ ಎಂದಾದರೆ ಈ ಡ್ರಗ್ಸ್ ರ್ಯಾಕೆಟ್ ಎಷ್ಟು ಆಳಕ್ಕೆ ಇಳಿದಿದೆ ಎಂದು ನೀವೆ ಯೋಚಿಸಿ. ಇನ್ನು ಈಗಿನ ಬಿಜೆಪಿಯ ರಾಜ್ಯ ಸರಕಾರ ಅಧಿಕಾರಕ್ಕೆ ಬಂದದ್ದೇ ಡ್ರಗ್ಸ್ ನವರ ಹಣದಲ್ಲಿ ಎಂದು ವಿಪಕ್ಷ ಮುಖಂಡರು ಆರೋಪ ಮಾಡುತ್ತಿದ್ದಾರೆ. ಅವರ ಮಾತಿನ ಅರ್ಥ ಕಾಂಗ್ರೆಸ್ಸಿನ ಅತೃಪ್ತ ಆತ್ಮಗಳನ್ನು ಬಿಜೆಪಿಗೆ ಸೆಳೆಯಲು, ಅವರಿಗೆ ರೆಸಾರ್ಟ್ ನಲ್ಲಿ ತಿಂಗಳುಗಟ್ಟಲೆ ಇರಿಸಲು, ಅವರ ಅಗತ್ಯಗಳನ್ನು ಪೂರೈಸಲು, ಲೆಕ್ಕವಿಲ್ಲದಷ್ಟು ಬಾರಿ ಚಾರ್ಟಡ್ ವಿಮಾನ ಓಡಾಡಲು ಇದೇ ಡ್ರಗ್ಸ್ ಜಾಲದ ಹಣ ಬಳಕೆಯಾಗಿತ್ತು ಎನ್ನುವುದು ಈಗಿನ ವಿಪಕ್ಷ ಕಾಂಗ್ರೆಸ್ಸಿಗರ ಮಾತು. ಒಟ್ಟಿನಲ್ಲಿ ನಮ್ಮ ರಾಜ್ಯದ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳಿಗೂ ದೂರದೂರಕ್ಕೆ ಈ ಡ್ರಗ್ಸ್ ಎನ್ನುವ ಅಂಟು ತಮ್ಮ ರಾಜಕೀಯ ಜೀವನದಲ್ಲಿ ಆಗಾಗ ಕಾಡುತ್ತಿದೆ. ಈಗ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸಬೇಕು ಎನ್ನುವ ಮಾತುಗಳನ್ನು ಪ್ರತಿಯೊಬ್ಬರು ಆಡುತ್ತಿದ್ದಾರೆ. ಆದರೆ ಎಷ್ಟು ದಿನ? ಈ ವಿಷಯ ಚಾಲ್ತಿಯಲ್ಲಿ ಇರುವ ತನಕ ಮಾತ್ರ.
ಇನ್ನು ಡ್ರಗ್ಸ್ ಜಾಲಕ್ಕೆ ಸಿಲುಕಿರುವ ನಟಿಮಣಿಗಳ ಆಪ್ತರನ್ನು ಕರೆದು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ರಾಗಿಣಿಯ ಗೆಳೆಯ ಸಮೃದ್ಧ ಮೇಯುವ ತಾಣವಾಗಿರುವ ಆರ್ ಟಿಒದಲ್ಲಿ ಎರಡನೇ ಡಿವಿಜನ್ ಕ್ಲಾರ್ಕ್. ಆತನ ತಂದೆಯ ಸಾವಿನ ಅನುಕಂಪದ ಆಧಾರದಲ್ಲಿ ಕೆಲಸ ಸಿಕ್ಕಿತ್ತು. ತಿಂಗಳಿಗೆ ನಲ್ವತ್ತು ಸಾವಿರ ಸಂಬಳ. ಎಷ್ಟು ಗಿಂಬಳ ಅಂದುಕೊಂಡರೂ ತಿಂಗಳಿಗೆ ಒಂದೆರಡು ಲಕ್ಷಕ್ಕೆ ಮೀರಲ್ಲ. ಆದರೆ ಅವರ ದಿನದ ಖರ್ಚು ಎರಡು ಲಕ್ಷ ಇತ್ತಂತೆ. ಅದರ ಸೆಳೆತಕ್ಕೆ ರಾಗಿಣಿ ಸಿಲುಕಿದ್ದಳು ಎಂದು ಮಾಧ್ಯಮ ಹೇಳುತ್ತಿವೆ. ಇನ್ನು ಸಂಜನಾ, ಶರ್ಮಿಳಾ ಎನ್ನುವ ನಟಿಯರನ್ನು ಕೂಡ ಸಿಸಿಬಿ ವಿಚಾರಿಸುವ ಚಾನ್ಸ್ ಇದೆ ಎಂದು ಹೇಳಲಾಗುತ್ತಿದೆ. ಇವರಿಂದ ಮಾಹಿತಿ ಪಡೆದುಕೊಂಡು ಪೊಲೀಸ್ ಅಧಿಕಾರಿಗಳು ಏನು ತಾನೆ ಮಾಡಿಯಾರು? ಹೆಚ್ಚೆಂದರೆ ಕೆಲವು ಡ್ರಗ್ಸ್ ಪೆಡ್ಲರ್ಸ್ ಬಂಧನವಾಗಬಹುದು. ಇವರೇನೂ ಕಿಂಕ್ ಪಿನ್ ಗಳ ತನಕ ತಲಪುವ ಸಾಧ್ಯತೆ ಇಲ್ಲ. ಯಾಕೆಂದರೆ ಪೊಲೀಸ್ ಅಧಿಕಾರಿಗಳಿಗೆ ರಾಗಿಣಿ, ಸಂಜನಾ, ಶರ್ಮಿಳಾ ಹೇಳಿಯೇ ಕಿಂಗ್ ಪಿನ್ ಯಾರೆಂದು ಗೊತ್ತಾಗಬೇಕಿಲ್ಲ. ಕೇವಲ ಡ್ರಗ್ ಪೆಡ್ಲರ್ಸ್ ಗಳೇ ದಿನಕ್ಕೆ ಒಂದು ಲಕ್ಷ ಮಜಾ ಉಡಾಯಿಸುತ್ತಿರುವಾಗ ಕಿಂಗ್ ಪಿನ್ ಅದೆಷ್ಟು ಕೋಟಿ ಬಾಳಬಲ್ಲ ಎಂದೇ ನೀವೆ ಹೇಳಿ. ಆತ ಎಷ್ಟೇ ಪ್ರಭಾವಿಯಾದರೂ ಬಂಧಿಸ್ತೀವಿ ಎಂದು ಯಾವ ಸರಕಾರ ಕೂಡ ಪ್ರಚಾರಕ್ಕೆ ಹೇಳಬಹುದೇ ವಿನ: ಅಸಲಿಗೆ ಯಾರೂ ಅಂತವರನ್ನು ಮುಟ್ಟುವ ಕೆಲಸ ಮಾಡುವುದೇ ಇಲ್ಲ. ಈ ನಟಿಮಣಿಯರು ಹೇಳುವ ಮಾಹಿತಿಗಳನ್ನು ಪೊಲೀಸ್ ಅಧಿಕಾರಿಗಳು ದಾಖಲಿಸುತ್ತಾರಲ್ಲ, ಅದು ನೇರವಾಗಿ ಗೃಹ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಮಾಹಿತಿ ಹೋಗುತ್ತದೆ. ಅದರ ನಂತರ ಒಂದಿಷ್ಟು ಸಮಯ ಪೊಲೀಸರು ಅದು ಇದು ಮಾಡಿ ಸಣ್ಣ ಮೀನುಗಳನ್ನು ಹಿಡಿಯುತ್ತಾರೆ. ಒಳಗೆ ಹೋದವನ ಖರ್ಚುಗಳನ್ನು ಕಿಂಗ್ ಪಿನ್ ನೋಡಿಕೊಳ್ಳುತ್ತಾನೆ. ಕೆಲವು ದಿನಗಳ ನಂತರ ಟಿವಿಯವರಿಗೆ ಬೇರೆ ವಿಷಯ ಸಿಕ್ಕಿರುತ್ತದೆ. ಪೊಲೀಸರು, ರಾಜಕಾರಣಿಗಳು “ಬೇರೆ” ವಿಷಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಲ್ಲಿಗೆ ಎಲ್ಲವೂ ಖಲಾಸ್.
ಈಗ ಏನು ಆಗಬೇಕು ಎಂದರೆ ಇಂದ್ರಜಿತ್ ಲಂಕೇಶ್ ನಿಂದ ಹಿಡಿದು ರಾಗಿಣಿಯ ಬಾಯ್ ಫ್ರೆಂಡ್ ತನಕ ಪ್ರತಿಯೊಬ್ಬರು ಕೊಡುವ ಮಾಹಿತಿಯನ್ನು ಪೊಲೀಸರು ಹಿಡಿದು ಏನು ಮಾಡಿದ್ದಾರೆ ಎಂದು ಆರು ತಿಂಗಳ ನಂತರ ಯಾರಾದರೂ ಕೆಣಕಬೇಕು. ಆಗ ಪೊಲೀಸರೇ ಈ ಕುರಿತು ತಾವು ಮಾಡಿರುವ ಸಾಧನೆಯ ವಿವರ ನೀಡಬೇಕು. ಈಗ ಕೆಲವು ವಿಷಯಗಳನ್ನು ಹೇಳಲಾಗುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಬಹುದು. ಓಕೆ, ಈಗ ಬೇಡಾ. ಆರು ತಿಂಗಳು ಬಿಟ್ಟು ಹೇಳಿ. ಆಗಲೂ ಇದೇ ಬಿಜೆಪಿ ಸರಕಾರ ಇರುತ್ತದೆ. ಎಷ್ಟು ಡ್ರಗ್ಸ್ ಜಾಲ ಭೇದಿಸಲು ಪೊಲೀಸರಿಗೆ ಇವರು ಸಹಕಾರ ನೀಡಿದ್ದಾರೆ ಎಂದು ಗೊತ್ತಾಗುತ್ತದೆ!!
Leave A Reply