• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಮಂಗಳೂರು ಸಿಸಿಬಿಯಿಂದ ಗಣ್ಯರ ಹೆಸರು ಲೀಕ್ ಆಗಿದೆಯಾ ಅಥವಾ ರಕ್ಷಣೆಯ ನಾಟಕವೇ?

Tulunadu News Posted On October 6, 2020
0


0
Shares
  • Share On Facebook
  • Tweet It

ಸ್ವಲ್ಪ ಮಾಧ್ಯಮದವರು ಬದಲಾಗಬೇಕು. ಸ್ವಲ್ಪ ರಾಜಕಾರಣಿಗಳು ಬದಲಾಗಬೇಕು. ಇದರೊಂದಿಗೆ ಮಾಧ್ಯಮಗಳು ನೇರವಾಗಿ ಮಾತನಾಡಲು ಶುರು ಮಾಡಬೇಕು. ಈ ವಿಷಯ ಯಾಕೆ ಬಂದಿದೆ ಎಂದರೆ ಅನುಶ್ರೀ ತಮಗೆ ಸಿಸಿಬಿಯಿಂದ ನೋಟಿಸು ಬಂದ ದಿನ ಮತ್ತು ಮರುದಿನ ಕೆಲವು ಪ್ರಭಾವಿ ಗಣ್ಯರೊಂದಿಗೆ ಮಾತನಾಡಿದ್ದಾರೆ ಎನ್ನುವ ವಿಷಯ ಹರಿದಾಡುತ್ತಿದೆ. ಅದರಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಅವರ ಮಗ ಕೂಡ ಇದ್ದಾರೆ ಎನ್ನುವುದು ನಿನ್ನೆಯ ಹಾಟ್ ನ್ಯೂಸ್. ಇನ್ನು ಕೆಲವು ಮಾಧ್ಯಮಗಳು ಒಂದು ಹೆಜ್ಜೆ ಮುಂದೆ ಹೋಗಿ ಆ ಮಾಜಿ ಮುಖ್ಯಮಂತ್ರಿ ಎರಡು ಸಲ ರಾಜ್ಯದಲ್ಲಿ ಸಿಎಂ ಆಗಿದ್ದಾರೆ ಎಂದು ಕೂಡ ಹೇಳಿವೆ. ಇಷ್ಟಾದ ನಂತರ ಪುನ: ಹೆಸರು ಹೇಳುವ ಅಗತ್ಯವೇ ಇರುವುದಿಲ್ಲ. ಈಗ ಜೀವಂತ ಇರುವ ಸಿಎಂಗಳ ಪೈಕಿ ಒಂದಕ್ಕಿಂತ ಹೆಚ್ಚು ಸಲ ಮುಖ್ಯಮಂತ್ರಿಯಾದವರು ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ. ಯಡಿಯೂರಪ್ಪನವರು ಈಗ ಹಾಲಿ ಸಿಎಂ. ಹಾಗಾದರೆ ಉಳಿದಿರುವುದು ಕುಮಾರಸ್ವಾಮಿ. ಮಾಧ್ಯಮಗಳು ಕರೆಕ್ಟಾಗಿ ಎರಡು ಸಲ ಸಿಎಂ ಆದವರು ಎಂದು ಒತ್ತಿ ಹೇಳಿದ್ದಾವೆ ಎಂದರೆ ಅದು ಕುಮಾರಸ್ವಾಮಿ ಮಾತ್ರ. ಇನ್ನು ಹೆಸರು ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಇಲ್ಲ. ಇನ್ನು ಮಾಜಿ ಸಿಎಂ ಮತ್ತು ಅವರ ಮಗ ಎಂದು ಮಾಧ್ಯಮಗಳು ಹೇಳುವುದಾದರೆ ಉಳಿದಿರುವುದು ಸದಾನಂದ ಗೌಡ ಹಾಗೂ ಸಿದ್ಧರಾಮಯ್ಯ. ಇವರಿಬ್ಬರಿಗೂ ಗಂಡು ಮಗ ಇದ್ದಾರೆ. ಹಾಗಾದರೆ ಅವರಾ?
ಯಾರು ಎಂದು ಕರೆಕ್ಟಾಗಿ ಮಾಧ್ಯಮಗಳು ಕೂಡ ಹೇಳುವುದಿಲ್ಲ. ನಮ್ಮ ಸುದ್ದಿ ಮೂಲವನ್ನು ಕೇಳಬೇಡಿ ಎಂದು ಟಿವಿ ನಿರೂಪಕರ ವಾದ. ನಮಗೆ ಸಿಸಿಬಿಯಿಂದ ಗುಪ್ತವಾಗಿ ಮಾಹಿತಿಗಳು ಬಂದಿವೆ ಎಂದು ಸಬೂಬು. ಸಾಮಾನ್ಯವಾಗಿ ಯಾವುದೇ ಬ್ರೇಕಿಂಗ್ ನ್ಯೂಸ್ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಟಿವಿ, ಪೇಪರ್ ನಲ್ಲಿ ಕಾಣಿಸಿಕೊಂಡರೆ ಅದರ ಅರ್ಥ ಮಾಧ್ಯಮದವರಿಗೆ ಸುದ್ದಿ ಸಿಕ್ಕಿದೆ, ಆದರೆ ಸಾಕ್ಷ್ಯ ಇಲ್ಲ ಎನ್ನುವುದು ಯಾರಿಗೆ ಕೂಡ ಸುಲಭವಾಗಿ ಗೊತ್ತಾಗುತ್ತದೆ. ಇಲ್ಲಿ ಕೂಡ ಸಿಸಿಬಿಯವರು ಗುಟ್ಟಾಗಿ ಸುದ್ದಿ ಕೊಟ್ಟಿದ್ದಾರಾ ಎನ್ನುವುದೇ ಆದರೆ ಸಿಸಿಬಿ ಒಳಗಿರುವ ಅಧಿಕಾರಿಯನ್ನು ಪೊಲೀಸ್ ಕಮೀಷನರ್ ಪತ್ತೆ ಹಚ್ಚಲೇಬೇಕು. ಯಾಕೆಂದರೆ ಇಲ್ಲಿ ಗೌಪ್ಯ ಮಾಹಿತಿ ಲೀಕ್ ಮಾಡುವುದು ಅಕ್ಷಮ್ಯ ಅಪರಾಧ. ಆದರೆ ಮಂಗಳೂರು ಪೊಲೀಸ್ ಕಮೀಷನರ್ ಈ ಬಗ್ಗೆ ಮಾತನಾಡಿ ನಮಗೆ ಯಾವ ರಾಜಕಾರಣಿಯಿಂದಲೂ ಒತ್ತಡ ಇಲ್ಲ ಎಂದಿದ್ದಾರೆ. ಹಾಗಾದರೆ ಟಿವಿ ಪರದೆ ತೆರೆದರೆ ಇಡೀ ದಿನ ಪ್ರಶ್ನಾರ್ತಕ ಚಿಹ್ನೆಯೊಂದಿಗೆ ಕಾಣಿಸುತ್ತಿರುವುದು ಮಾಧ್ಯಮಗಳೇ ಸೃಷ್ಟಿಸಿರುವ ರೋಚಕ ಸುದ್ದಿಯಾ, ಮಾಧ್ಯಮದವರದ್ದೇ ಕಟ್ಟುಕಥೆಯಾ ಎನ್ನುವುದು ಕೂಡ ತನಿಖೆಯಾಗಬೇಕು. ಎಲ್ಲಾ ಕ್ಷೇತ್ರಗಳಲ್ಲಿ ಇರುವ ಹಾಗೆ ಮಾಧ್ಯಮಗಳಲ್ಲಿ ಕೂಡ ಕೆಲವರು ಪೊಲೀಸ್ ಇಲಾಖೆಯ ಹಲವರೊಂದಿಗೆ ಚೆನ್ನಾಗಿ ಇದ್ದಾರೆ. ತಮಗೆ ಬೇಕಾದ ಎಕ್ಸಕ್ಲೂಸಿವ್ ಸುದ್ದಿಗೋಸ್ಕರ ಹೀಗೆ ಚೆನ್ನಾಗಿ ಇರುವುದು ಅನಿವಾರ್ಯವೂ ಇರಬಹುದು. ಹೀಗೆ ಚೆನ್ನಾಗಿ ಇರುವ ಪತ್ರಕರ್ತರಿಗೆ ಪೊಲೀಸ್ ಇಲಾಖೆಯ ಒಳಗಿನ ಕಣ್ಣಿಗೆ ಸಿಗದ ಕೈಗಳು ಮಾಹಿತಿ ಕೊಡುತ್ತಾರೆ. ಇನ್ನು ಕೆಲವೊಮ್ಮೆ ಅದೇ ಕೈಗಳು ಪತ್ರಕರ್ತರನ್ನು ಬಳಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಉಂಟು. ಇದು ಆರೋಗ್ಯಕರವಾಗಿರುವ ತನಕ ಓಕೆ. ಆದರೆ ತಾವು ಲಂಚದ ಕೆಸರಿಗೆ ಕೈ ಹಾಕಿ ಕೆಲವು ಪತ್ರಕರ್ತರ ಅಂಗಿಗೂ ಅದನ್ನು ಒರೆಸಿ ನಂತರ ರಕ್ಷಣೆ ಪಡೆಯಲು ಗಾಳಿಯಲ್ಲಿ ಸುದ್ದಿ ಬಿಡುವ ಪರಿಪಾಠ ಶುರುವಾದರೆ ಅದು ನಿಜಕ್ಕೂ ಸ್ವಸ್ಥ ಸಮಾಜಕ್ಕೆ ಒಳ್ಳೆಯದಲ್ಲ. ಆ ಬಗ್ಗೆ ನಿಜಕ್ಕೂ ತನಿಖೆಯಾಗಬೇಕು. ಕಮೀಷನರ್ ಆಂತರಿಕ ತನಿಖೆ ಮಾಡಿ ನಿಜಕ್ಕೂ ಅನುಶ್ರೀ ಪ್ರಭಾವಿಗಳಿಗೆ ಕರೆ ಮಾಡಿದ್ದಾರೆ ಎನ್ನುವುದೇ ಹೌದಾದರೆ ಆ ವಿಷಯ ಹೇಗೆ ಲೀಕ್ ಆಯಿತು ಎನ್ನುವುದು ಗೊತ್ತಾಗಬೇಕು. ಇನ್ನು ಇದು ತಮ್ಮನ್ನು ಎತ್ತಂಗಡಿ ಆಗದಂತೆ ತಡೆಯಲು ಪರೋಕ್ಷವಾಗಿ ಕೆಲವು ಅಧಿಕಾರಿಗಳು ಹೀಗೆ ಪತ್ರಕರ್ತರನ್ನು ದುರುಪಯೋಗಪಡಿಸಿಕೊಂಡರಾ ಎನ್ನುವುದು ಕೂಡ ಗೊತ್ತಾಗಬೇಕು.
ಇನ್ನು ಪಣಂಬೂರಿನ ಸಿಸಿಬಿ ಕಚೇರಿಗೆ ಬಂದು ಮಾತನಾಡಿದ್ದೇನೆ, ಇನ್ನೊಮ್ಮೆ ಕರೆದರೆ ಬರುತ್ತೇನೆ ಎಂದು ಮಾಧ್ಯಮಗಳ ಮುಂದೆ ವಾರದ ಹಿಂದೆ ಹೇಳಿದ್ದ ಅನುಶ್ರೀ ಮತ್ತೆ ವಿಡಿಯೋ ಮಾಡಿ ಅಳುವಂತದ್ದು ಏನು ಆಗಿತ್ತು ಎನ್ನುವುದೇ ಗೊತ್ತಾಗುತ್ತಿಲ್ಲ. ಅವರ ಫೋನ್ ಅಥವಾ ಸಿಮ್ ಸಿಝ್ ಮಾಡಿದ್ದರೆ ಆಕೆ ಯಾರೊಂದಿಗೆ ಮಾತನಾಡಿದ್ದಾರೆ ಎಂದು ಸಿಸಿಬಿಯವರಿಗೆ ಮತ್ತು ಪೊಲೀಸ್ ಕಮೀಷನರ್ ಅವರಿಗೆ ಮಾತ್ರ ಗೊತ್ತಿರುತ್ತದೆ. ಇತ್ತೀಚೆಗೆ ಬೇರೆ ಡ್ರಗ್ಸ್ ಪ್ರಕರಣದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸ್ ಒಬ್ಬರು ಆರೋಪಿಯೊಬ್ಬರಿಗೆ ರಹಸ್ಯ ಮಾಹಿತಿಯನ್ನು ತಿಳಿಸುತ್ತಿದ್ದರು ಎನ್ನುವುದು ಆಂತರಿಕ ತನಿಖೆಯಿಂದ ಗೊತ್ತಾದಾಗ ಅವರನ್ನು ಬೆಂಗಳೂರು ಪೊಲೀಸ್ ಕಮೀಷನರ್ ಅಮಾನತು ಕೂಡ ಮಾಡಿದ್ದನ್ನು ನಾವು ಗಮನಿಸಬಹುದು. ಹಾಗಿರುವಾಗ ಮಂಗಳೂರು ಸಿಸಿಬಿಯಲ್ಲಿ ಹೀಗೆ ಲೀಕ್ ಮಾಡುವ ಚಾಳಿ ಯಾರು ಶುರು ಮಾಡಿದರು ಎನ್ನುವುದು ಗೊತ್ತಾಗಬೇಕು ಅಥವಾ ಮಾಧ್ಯಮಗಳನ್ನು ಬಳಸಿ ಶಾಸಕರುಗಳ ಮೇಲೆ ಜನ ಗುಮಾನಿ ಬರುವ ಹಾಗೆ ಯಾವುದಾದರೂ ಅಧಿಕಾರಿ ಮಾಡಿದ್ದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು.
0
Shares
  • Share On Facebook
  • Tweet It




Trending Now
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
Tulunadu News September 16, 2025
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
Tulunadu News September 16, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
  • Popular Posts

    • 1
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 2
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 3
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 4
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 5
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search