• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಐವನ್ ಪಲಾಯನವಾದ ಬೇಡಾ, ಸ್ಮಾರ್ಟ್ ಸಿಟಿ ಬಗ್ಗೆ ಲೋಕಾಯುಕ್ತಕ್ಕೆ ದೂರು ಕೊಡಿ!!

Tulunadu News Posted On October 14, 2020


  • Share On Facebook
  • Tweet It

ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಇತ್ತೀಚೆಗೆ ಸುದ್ದಿಗೋಷ್ಟಿ ಮಾಡಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಅನುಷ್ಟಾನದಲ್ಲಿ ಭ್ರಷ್ಟಾಚಾರ ನಡೆದಿದೆ, ಅದನ್ನು ಎಸಿಬಿಗೆ ಕೊಡಬೇಕು, ಲೋಕಾಯುಕ್ತಕ್ಕೆ ಕೊಡಬೇಕು ಎನ್ನುವ ಅರ್ಥದ ಮಾತುಗಳನ್ನು ಆಡಿದ್ದಾರೆ.

ಐವನ್ ಡಿಸೋಜಾ ಅವರು ತನಿಖೆ ಆಗಬೇಕಾಗಿದೆ ಎಂದು ಹೇಳಿರುವುದರಲ್ಲಿ ಯಾವ ತಪ್ಪು ಇಲ್ಲ. ಯಾಕೆಂದರೆ ತನಿಖೆ ಆದರೆ ಕಾಂಗ್ರೆಸ್ ಮಾಡಿದ ಭ್ರಷ್ಟಾಚಾರದ ಹಗರಣಗಳು ಹೊರಗೆ ಬರಬಹುದು. ಬಹುಶ: ಅದು ಗೊತ್ತಿಲ್ಲದೇ ಐವನ್ ಬೇರೆ ಯಾವುದೇ ವಿಷಯಗಳು ಮಾತನಾಡಲು ಇಲ್ಲದೆ ಇದ್ದ ಕಾರಣ ಈ ವಿಷಯ ತೆಗೆದಿರಬಹುದು. ಆದರೆ ಇದರಲ್ಲಿ ತನಿಖೆಯಾದರೆ ನಿಜಕ್ಕೂ ಒಳ್ಳೆಯದು. ಅವರು ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ಜನ ಈ ಭ್ರಷ್ಟಾಚಾರಕ್ಕೆ ಬಿಜೆಪಿ ಕಾರಣ ಎಂದು ಅಂದುಕೊಳ್ಳಲಿ ಎನ್ನುವ ಕಾರಣಕ್ಕೆ ಹೇಳಿರಬಹುದು. ಇಲ್ಲಿ ಆಶ್ಚರ್ಯ ಎಂದರೆ ಸ್ಮಾರ್ಟ್ ಸಿಟಿ ನಮ್ಮ ಮಂಗಳೂರಿಗೆ ಬಂದಾಗ ಇಲ್ಲಿ ಮಹಾನಗರ ಪಾಲಿಕೆಯಲ್ಲಿ ಆಡಳಿತ ಮಾಡುತ್ತಿದ್ದದ್ದು ಕಾಂಗ್ರೆಸ್ ಪಕ್ಷ. ರಾಜ್ಯದಲ್ಲಿ ಇದ್ದದ್ದು ಕೂಡ ಕಾಂಗ್ರೆಸ್ ಪಕ್ಷ. ಇನ್ನು ಐವನ್ ಅವರಿಗೆ ಗೊತ್ತಿರಬಹುದು, ಸ್ಮಾರ್ಟ್ ಸಿಟಿ ಯೋಜನೆಯನ್ನು ಕಾರ್ಯಗತಗೊಳಿಸಲು ಒಂದು ಕಮಿಟಿ ಇರುತ್ತದೆ. ಆ ಕಮಿಟಿಯಲ್ಲಿ ಪಾಲಿಕೆಯ ಮೇಯರ್ ಇರುತ್ತಾರೆ. ಕಾಂಗ್ರೆಸ್ ಅವಧಿಯಲ್ಲಿಯೇ ಕ್ಲಾಕ್ ಟವರ್ ನಿರ್ಮಾಣಕ್ಕೆ ರೂಪುರೇಶೆ ಸಿದ್ಧವಾಗಿತ್ತು. ಅಗತ್ಯ ಇತ್ತಾ? ಯಾರ ತಿಜೋರಿ ತುಂಬಲು ಕ್ಲಾರ್ಕ್ ಟವರ್ ನಿರ್ಮಾಣವಾಗಿದೆ ಎಂದು ಆಗಿನ ಕಾಂಗ್ರೆಸ್ ಮೇಯರ್ ಹೇಳಬಹುದಲ್ಲ. ಮಂಗಳೂರಿನ ಎಷ್ಟೋ ರಸ್ತೆಗಳು ಕಾಂಕ್ರೀಟ್ ಕಾಣದೇ ಒದ್ದಾಡುತ್ತಾ ಇವೆ. ಹೀಗಿರುವಾಗ ಕೋಟಿ ಖರ್ಚು ಮಾಡಿ ಕ್ಲಾರ್ಕ್ ಟವರ್ ಮಾಡಿರುವ ಉದ್ದೇಶವಾದರೂ ಏನು? ಇನ್ನು ಕ್ಲಾರ್ಕ್ ಟವರ್ ನಿಂದ ಆರ್ ಟಿಒ ತನಕ ಚೆನ್ನಾಗಿರುವ ರಸ್ತೆಯನ್ನು ಇವರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಗೆದು ಹಾಕುವ ಅಗತ್ಯ ಏನಿದೆ ಎನ್ನುವುದು ಕೂಡ ನಾಗರಿಕರು ಕೇಳುತ್ತಿದ್ದಾರೆ. ಯಾಕೆಂದರೆ ಕಾಂಗ್ರೆಸ್ ಅವಧಿಯಲ್ಲಿಯೇ ಆ ರಸ್ತೆಯ ಯೋಜನಾ ವರದಿ ಸಿದ್ಧವಾಗಿತ್ತು. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ನಿರ್ಮಾಣವಾಗಿರುವ ಬಸ್ ಸ್ಟಾಪ್ ಗಳಲ್ಲಿ ಕೂಡ ಭ್ರಷ್ಟಾಚಾರ ದ ವಾಸನೆ ಬರುತ್ತಿರುವುದು ಕೂಡ ಸ್ಪಷ್ಟ. ಇನ್ನು ಐವನ್ ಡಿಸೋಜಾ ಹೀಗೆ ಸುದ್ದಿಗೋಷ್ಟಿ ಮಾಡಿದ ನಂತರ ಬಿಜೆಪಿ ಕೂಡ ಸುದ್ದಿಗೋಷ್ಟಿ ಮಾಡಿ ತನಿಖೆಗೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದಿದ್ದಾರೆ. ಇಲ್ಲಿ ನಿಜಕ್ಕೂ ಸುದ್ದಿಗೋಷ್ಟಿ ಮಾಡಿ ತನಿಖೆಗೆ ಆಗ್ರಹಿಸುವುದು ಕೇವಲ ಪ್ರಚಾರಕ್ಕೆ ಎನ್ನುವುದನ್ನು ಯಾರು ಕೂಡ ಹೇಳಬಲ್ಲರು. ಯಾಕೆಂದರೆ ಒಂದು ವೇಳೆ ತನಿಖೆ ಆಗಬೇಕೆಂದು ಐವನ್ ಅವರಿಗೆ ಮನಸ್ಸಿದ್ದರೆ ಅವರೇ ನೇರವಾಗಿ ಎಸಿಬಿಗೋ, ಲೋಕಾಯುಕ್ತಕ್ಕೋ ದೂರು ಕೊಡಬಹುದು. ಅದಕ್ಕೆ ಪಕ್ಷದಿಂದಲೇ ಕೊಡಬೇಕು ಎಂದೇನಿಲ್ಲ. ಅಷ್ಟಕ್ಕೂ ಐವನ್ ವಕೀಲರು. ಅವರಿಗೆ ಇದು ಗೊತ್ತಿಲ್ಲ ಎಂದಲ್ಲ. ನಾನು ಕೂಡ ಅನೇಕ ದೂರುಗಳನ್ನು ಎಸಿಬಿಗೆ ಮತ್ತು ಲೋಕಾಯುಕ್ತಕ್ಕೆ ನೀಡಿದ್ದೇನೆ. ಆ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಜಾರಿಯಾಗಿದೆ. ನಾನು ದೂರು ಕೊಡುವ ಮೊದಲಾಗಲೀ, ನಂತರವಾಗಲೀ ಅಥವಾ ಭ್ರಷ್ಟರಿಗೆ ಶಿಕ್ಷೆಯಾದಾಗಲೂ ಸುದ್ದಿಗೋಷ್ಟಿ ಮಾಡಿ ಮೈಲೇಜ್ ತೆಗೆದುಕೊಳ್ಳಲು ಹೋಗಿಲ್ಲ. ಯಾಕೆಂದರೆ ನಾನು ಪಲಾಯನವಾದ ಮಾಡುವ ಅಭ್ಯಾಸದವನಲ್ಲ. ಇಲ್ಲಿ ಕೂಡ ಭ್ರಷ್ಟರ ಬೆವರು ಇಳಿಸಲೇಬೇಕು ಎನ್ನುವ ಧ್ಯೇಯ ಐವನ್ ಗೆ ಇದ್ದರೆ ಅವರು ಆದಷ್ಟು ಬೇಗ ತನಿಖಾ ಸಂಸ್ಥೆಗೆ ದೂರು ಕೊಡಲಿ. ಇನ್ನು ಬಿಜೆಪಿ ಕೂಡ ನಾವು ತನಿಖೆಗೆ ಸಹಕರಿಸುತ್ತೇವೆ ಎಂದು ಹೇಳುವುದು ಮಾತ್ರವಲ್ಲ, ಕಾಂಗ್ರೆಸ್ ತನ್ನ ಅವಧಿಯಲ್ಲಿ ಮಾಡಿರುವ ಭ್ರಷ್ಟಾಚಾರವನ್ನು ಅಂಕಿಅಂಶಗಳ ಮೂಲಕ ಬಹಿರಂಗಪಡಿಸಬೇಕು. ಅಷ್ಟಕ್ಕೂ ಇದು ಪ್ರಧಾನಿ ಮೋದಿಯವರ ದೂರದೃಷ್ಟಿಯ ಯೋಜನೆ. ನಗರಗಳು ಅಡ್ಡಾದಿಡ್ಡಿ ಬೆಳೆಯುತ್ತಿರುವುದನ್ನು ಸರಿ ಮಾಡಲು ಮೋದಿಯವರು ವೈಜ್ಞಾನಿಕ ರೂಪುರೇಶೆಗಳ ಮೂಲಕ ಈ ಯೋಜನೆ ರೂಪಿಸಿದ್ದಾರೆ. ಅದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರಕಾರ ತಲಾ 500 ಕೋಟಿ ನೀಡುವ ಪ್ರಸ್ತಾಪವಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಈ ಯೋಜನೆ ಮುಂದಕ್ಕೆ ಹೋಗಲಿಲ್ಲ. ಆ ನಿಟ್ಟಿನಲ್ಲಿ ಈ ಹಿಂದೆ 280 ಕೋಟಿ ಹಣ ಯಾವುದಕ್ಕೆ ಬಳಕೆಯಾಗಿದೆ ಎಂದು ಜನರಿಗೆ ಗೊತ್ತಾಗಬೇಕು. ಅಲ್ಲಿ ಬಂದರು ಪ್ರದೇಶದಲ್ಲಿ ರಸ್ತೆಗಳನ್ನು ಅಗೆದು ಹಾಕಿದ್ದಾರೆ. ಕೆಲಸ ಯಾವಾಗ ಮುಗಿಯುತ್ತೆ ಎಂದರೆ ಕೊರೊನಾ, ಮಳೆಗಾಲ ಎಂದು ಹೇಳುತ್ತಿದ್ದಾರೆ. ನಾವು ಅನುದಾನವನ್ನು ಬಳಸದೇ ಇದ್ದರೆ ಅದು ಹಿಂದಕ್ಕೆ ಹೋಗುತ್ತದೆ ಎಂದು ಹೆದರಿ ಇವರು ಏನೇನೋ ಕಾಮಗಾರಿ ಹೇಗೆಗೋ ಮಾಡಿದರೆ ಅದರಿಂದ ಕೊನೆಗೆ ಅನುಭವಿಸಬೇಕಾಗಿರುವುದು ನಮ್ಮಂತಹ ಜನಸಾಮಾನ್ಯ ಅಲ್ಲವೇ ?

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search